ಆಂಡ್ರಾಯ್ಡ್ ಗೆ ಜೊತೆಯಾಗಿದೆ ಅಲ್ಕಾಟೆಲ್ ಒನ್ ಟಚ್

Posted By: Staff

ಆಂಡ್ರಾಯ್ಡ್ ಗೆ ಜೊತೆಯಾಗಿದೆ ಅಲ್ಕಾಟೆಲ್ ಒನ್ ಟಚ್
ಆಂಡ್ರಾಯ್ಡ್ ಬೆಂಬಲಿತವಾಗಿರುವ ಅತ್ಯುನ್ನತ ಸ್ಮಾರ್ಟ್ ಫೋನೊಂದು ಸದ್ಯದಲ್ಲಿಯೇ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಲ್ಕಾಟೆಲ್ ಒನ್ ಟಚ್ 995 ಎಂಬ ನೂತನ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 4.0 ಐಸ್ ಕ್ರೀಂ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ.

ಆದರೆ ಈ ಮೊಬೈಲ್ ಬಿಡುಗಡೆ ದಿನಾಂಕ ಇನ್ನೂ ತಿಳಿದುಬಂದಿಲ್ಲ. ದೊರೆತಿರುವ ಕೆಲ ಮಾಹಿತಿ ಪ್ರಕಾರ, 4.3 ಇಂಚಿನ ಡಿಸ್ಪ್ಲೇ ಹೊಂದಿರುವ ಈ ಮೊಬೈಲ್ 1.4 GHz ಪ್ರೊಸೆಸರ್ ಪಡೆದುಕೊಂಡಿದೆ. ವಿಶೇಷ ಟಚ್ ಸೌಲಭ್ಯವೂ ಇದರಲ್ಲಿದೆ.

ಮೂಲಗಳ ಪ್ರಕಾರ, ಈ ಮೊಬೈಲ್ 5 ಮೆಗಾ ಪಿಕ್ಸಲ್ ಕ್ಯಾಮೆರಾದೊಂದಿಗೆ ಫ್ರಂಟ್ ಕ್ಯಾಮೆರಾ ಕೂಡ ಹೊಂದಿದೆ. ಇದರಿಂದ ಉತ್ತಮ ಗುಣಮಟ್ಟದ ಫೋಟೊಗ್ರಫಿ ಮತ್ತು ವಿಡಿಯೋಗ್ರಫಿ ಸಾಧ್ಯವೆನಿಸಿದೆ.

ಬಳಕೆದಾರರ ಅನುಕೂಲಕ್ಕೆಂದು ವಿಶೇಷವಾಗಿ 3ಡಿ carousel ಯೂಸರ್ ಇಂಟರ್ ಫೇಸ್ ನೀಡಲಾಗಿದೆ. ಉತ್ತಮ ಸಂಪರ್ಕ ಮತ್ತು ಮನರಂಜನೆಗೆಂದು ಸ್ಮಾರ್ಟ್ ಫೋನ್ ಗೆ ಅಗತ್ಯವೆನಿಸಿದ ಎಲ್ಲಾ ಆಯ್ಕೆಗಳೂ ಇದರಲ್ಲಿದೆ. ಮೆಮೊರಿ ಶೇಖರಣಾ ಸಾಮರ್ಥ್ಯವು ಉತ್ತಮವಾಗಿದ್ದು, ಬ್ಯಾಟರಿ ಅತಿ ಹೆಚ್ಚು ಬಾಳಿಕೆಬರುತ್ತದೆ.

ಅಷ್ಟೇ ಅಲ್ಲ, ಸಾಮಾಜಿಕ ತಾಣಗಳೊಂದಿಗೆ, ಅಪ್ಲಿಕೇಶನ್ ಡೌನ್ ಲೋಡ್ ಗೆ ಒಳ್ಳೆ ಆಯ್ಕೆ ಇದರಲ್ಲಿದೆ. ನವಂಬರ್ ಒಳಗೆ ಬಿಡುಗಡೆಗೊಳ್ಳುವ ಸೂಚನೆ ಇದ್ದು, ಇದರ ಬೆಲೆಯನ್ನು ನಂತರವಷ್ಟೇ ತಿಳಿಯಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot