ಈ ಮೊಬೈಲ್ ಜೊತೆಗಿದ್ದರೆ ದಾರಿ ಹುಡುಕೋದು ಸುಲಭ

By Super
|
ಈ ಮೊಬೈಲ್ ಜೊತೆಗಿದ್ದರೆ ದಾರಿ ಹುಡುಕೋದು ಸುಲಭ

ಬ್ಲಾಕ್ ಬೆರಿ ಕಂಪನಿ ಇದೀಗ ಹೊಸ 4ಜಿ ಫೋನ್ ಗಳನ್ನು ಹೊರತರುತ್ತಿದೆ. ಟಿ ಮೊಬೈಲ್ ಮತ್ತು ಎಟಿ ಅಂಡ್ ಟಿ ಕಂಪನಿ ನವೆಂಬರ್ 9, 2011ಕ್ಕೆ ಅಮೆರಿಕದಲ್ಲಿ ಈ ಮೊಬೈಲ್ ಗಳನ್ನು ಬಿಡುಗಡೆಮಾಡಲಿದ್ದು, ಶೀಘ್ರವೇ ಭಾರತವನ್ನೂ ಮುಟ್ಟಲಿದೆ.

ಬ್ಲಾಕ್ ಬೆರಿ ಟಾರ್ಚ್ 9810 ಮತ್ತು 9860 ಎಂಬ ಮೊಬೈಲ್ ಗಳು ಬ್ಲಾಕ್ ಬೆರಿ OS 7 ಆಪರೇಟಿಂಗ್ ಸಿಸ್ಟಮ್ ಮತ್ತು 1.2 GHz ಸಿಂಗಲ್ ಕೋರ್ ಪ್ರೊಸೆಸರ್ ಹೊಂದಿದೆ.

ಇದರಲ್ಲಿ ಬಳಕೆದಾರರಿಗೆ ಅನುಕೂಲವಾಗಲೆಂದು ಅವರ ಸುತ್ತಮುತ್ತಲಿನ ಸ್ಥಳದ ಬಗ್ಗೆ ಮಾಹಿತಿ ನೀಡುವ Wikitude World Browser ಕೂಡ ವಿಶೇಷವಾಗಿ ಅಳವಡಿಸಲಾಗಿದೆ. ಹೊಸ ಸ್ಥಳಗಳಿಗೆ ಭೇಟಿ ನೀಡುವವರಿಗೆ ಇದು ಹೆಚ್ಚು ಉಪಯುಕ್ತವೆನಿಸುತ್ತೆ. ಜೊತೆಗೆ 'ಸ್ಪೀಚ್ ಟು ಟೆಕ್ಸ್ಟ್ ಟ್ರಾನ್ಸ್ ಲೇಶನ್' ಎಂಬ ತಂತ್ರಜ್ಞಾನ ಹೊಸ ಅನುಭವ ನೀಡಲಿದೆ.

ಬ್ಲಾಕ್ ಬೆರಿ 9810 ಟಾರ್ಚ್ ಮೊಬೈಲ್:

* ಕ್ವೆರ್ಟಿ ಕೀಬೋರ್ಡ್

* 3.2 ಇಂಚು ಟಚ್ ಸ್ಕ್ರೀನ್, 480x640 ಪಿಕ್ಸಲ್ ರೆಸೊಲ್ಯೂಷನ್

* 8 ಜಿಬಿ ಮೆಮೊರಿ ಸಾಮರ್ಥ್ಯ ಮತ್ತು 768 ಎಂಬಿ RAM

* 720p ಹೈಡೆಫನಿಶನ್ ವಿಡಿಯೋ ರೆಕಾರ್ಡಿಂಗ್

ಬ್ಲಾಕ್ ಬೆರಿ ಟಾರ್ಚ್ 9860:

* ಟಚ್ ಸ್ಕ್ರೀನ್

* 480x840 ಪಿಕ್ಸಲ್ WVGA 3.7 ಇಂಚಿನ ಸ್ಕ್ರೀನ್

* 8 ಜಿಬಿ ಮೆಮೊರಿ ಸಾಮರ್ಥ್ಯ ಮತ್ತು 768 MB RAM

ಎರಡೂ ಮೊಬೈಲ್ ಗಳಲ್ಲಿ ಮೆಮೊರಿ ವಿಸ್ತರಣೆಗೆಂದು ಮೈಕ್ರೊ SD ಕಾರ್ಡ್ ನೀಡಲಾಗಿದ್ದು, 5 ಮೆಗಾ ಪಿಕ್ಸಲ್ ಕ್ಯಾಮೆರಾ ಜೊತೆ LED ಫ್ಲಾಶ್ ಸೌಲಭ್ಯವಿದೆ. HSPA+ ನೆಟ್ ವರ್ಕ್ ಸಹಾಯದಿಂದ 4ಜಿ ಸಂಪರ್ಕವೂ ನೀಡಲಾಗಿದೆ.

ಲಿಕ್ವಿಡ್ ಗ್ರಾಫಿಕ್ ತಂತ್ರಜ್ಞಾನ, ಬ್ಲಾಕ್ ಬೆರಿ ಬ್ರೌಸರ್ ಹೊಂದಿದ್ದು, HTML ಕೂಡ ನೀಡಲಾಗಿದೆ. ಭಾರತದಲ್ಲಿ ಬ್ಲಾಕ್ ಬೆರಿ ಟಾರ್ಚ್ 9860 ಮತ್ತು 9810 ಮೊಬೈಲ್ ಗಳು ಸುಮಾರು 30,000ರುಗೆ ದೊರೆಯುವ ಅಂದಾಜಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X