ಎಚ್ ಟಿಸಿ ರಿಝೌಂಡ್ ಪ್ಲಸ್ ಪಾಯಿಂಟ್ ಎಲ್ಲಿದೆ?

Posted By: Staff

ಎಚ್ ಟಿಸಿ ರಿಝೌಂಡ್ ಪ್ಲಸ್ ಪಾಯಿಂಟ್ ಎಲ್ಲಿದೆ?
ಎಚ್ ಟಿಸಿ ಮೊಬೈಲ್ ಕಂಪನಿ ರಿಝೌಂಡ್ ಎಂಬ ನೂತನ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ತುಂಬಾ ಉತ್ತಮ ಗುಣಮಟ್ಟದ ಬೀಟ್ಸ್ ಆಡಿಯೋ ಹೊಂದಿರುವುದೇ ಇದರ ವಿಶೇಷತೆ. ನವೆಂಬರ್ 14 ರಿಂದ ಅಮೆರಿಕದಲ್ಲಿ ಬಿಡುಗಡೆಗೊಳ್ಳಲಿರುವ ಈ ಮೊಬೈಲ್ 14, 744ರು ಇದ್ದು ಭಾರತದಲ್ಲಿ ಇದರ ಬಿಡುಗಡೆ ಮತ್ತು ಬೆಲೆ ಬಗ್ಗೆ ತಿಳಿದುಬಂದಿಲ್ಲ.

ಗೂಗಲ್ 2.3.4 ಜಿಂಜರ್ ಬರ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಮೊಬೈಲ್ ನಲ್ಲಿ ಐಸ್ ಕ್ರೀಂ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಸಾಮರ್ಥ್ಯವನ್ನೂ ನೀಡಲಾಗಿದೆ. ಕ್ವಾಲ್ಕಂ MSM8660 ಸಿಸ್ಟಮ್ ಚಿಪ್ ಮತ್ತು ಕ್ವಾಲ್ಕಂ ಅಡೆರ್ನೊ 220 ಗ್ರಾಫಿಕ್ ಪ್ರೊಸೆಸರ್ ಇದರ ಪ್ಲಸ್ ಪಾಯಿಂಟ್.

ಎಚ್ ಟಿಸಿ ರಿಝೌಂಡ್ ವಿಶೇಷತೆ:
* 4ಜಿ LTE ಸಂಪರ್ಕ
* 720p, 4.3 ಇಂಚಿನ ಡಿಸ್ಪ್ಲೇ
* ಮಲ್ಟಿ ಟಚ್ ಸ್ಕ್ರೀನ್
* 1.5GHz ಡ್ಯೂಯಲ್ ಕೋರ್ ಪ್ರೊಸೆಸರ್
* ಬೀಟ್ಸ್ ಆಡಿಯೋ ಸಂಪರ್ಕ
* ರೆಮಿನಿಸೆಂಟ್ ಇಯರ್ ಬಡ್
* 8 ಮೆಗಾ ಪಿಕ್ಸಲ್ ಕ್ಯಾಮೆರಾ, 1080p ವಿಡಿಯೋ ರೆಕಾರ್ಡಿಂಗ್
* 2 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ
* 16ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯ
* ಮೆಮೊರಿ ವಿಸ್ತರಣೆಗೆ 16ಜಿಬಿ ಮೈಕ್ರೊ SD ಕಾರ್ಡ್
* 1ಜಿಬಿ RAM
* ಬ್ಲೂಟೂಥ್ 3.0 ಮತ್ತು ವೈ-ಫೈ ಸಂಪರ್ಕ
* 1,620mAh ಬ್ಯಾಟರಿ

Please Wait while comments are loading...
Opinion Poll

Social Counting