ಹೊಸ ವಿಶೇಷತೆ ಮತ್ತು ಹೊಸ ವಿನ್ಯಾಸದಲ್ಲಿ ಬಿಡುಗಡೆಯಾದ ಸ್ಮಾರ್ಟ್‌ಫೋನ್‌ಗಳು

By Ashwath
|

ವಿಶ್ವದಲ್ಲಿ ವಿವಿಧ ಮೊಬೈಲ್‌‌ ತಯಾರಕ ಕಂಪೆನಿಗಳು ಹೊಸ ವಿಶೇಷತೆಗಳೊಂದಿಗೆ ಸೇರಿಸಿ ಸ್ಮಾರ್ಟ್‌ಫೋನ್‌ ಗಳನ್ನು ಬಿಡುಗಡೆ ಮಾಡುತ್ತಿವೆ. ತಿರುಗಿಸಬಲ್ಲ ಕ್ಯಾಮೆರಾವಿರುವ ಸ್ಮಾರ್ಟ್‌ಫೋನ್‌,
41 ಎಂಪಿ ಹೊಂದಿರುವ ಸ್ಮಾರ್ಟ್‌ಫೋನ್‌, ಅತೀ ಹೆಚ್ಚು ರ್‍ಯಾಮ್‌ ಹೊಂದಿರುವ ಫ್ಯಾಬ್ಲೆಟ್‌ಗಳು ಸೇರಿದಂತೆ ಹೊಸ ವಿಶೇಷತೆ ಹೊಂದಿರುವ ಸ್ಮಾರ್ಟ್‌ಫೋನ್‌ ಈಗಾಗಲೇ ಬಿಡುಗಡೆಯಾಗಿವೆ.

ಇಲ್ಲಿಯವರೆಗೆ ಯಾವ ಕಂಪೆನಿಯೂ ನೀಡದ ವಿಶೇಷತೆಯನ್ನು ಕಂಪೆನಿಗಳು ಈ ಸ್ಮಾರ್ಟ್‌‌ಫೋನ್‌‌ಗಳಿಗೆ ನೀಡಿರುವುದರಿಂದ ಈ ಸ್ಮಾರ್ಟ್‌ಫೋನ್‌ಗಳು ವಿಶೇಷ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.ಯಾವೆಲ್ಲ ಸ್ಮಾರ್ಟ್‌ಫೋನ್‌ಗಳು ಈ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ ಎನ್ನುವುದಕ್ಕೆ ಇಲ್ಲಿ ಆ ಸ್ಮಾರ್ಟ್‌ಫೋನ್‌ಗಳ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ವಿವಿಧ ಕಂಪೆನಿಗಳ ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

ವೊಟಾ ಫೋನ್‌

ವೊಟಾ ಫೋನ್‌


ವಿಶ್ವದ ಮೊದಲ ಹಿಂದುಗಡೆ ಮತ್ತು ಮುಂದುಗಡೆ ಸ್ಕ್ರೀನ್‌ ಹೊಂದಿರುವ ಡ್ಯುಯಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನನ್ನು ರಷ್ಯಾದ ವೊಟಾ ಕಂಪೆನಿ ತಯಾರಿಸಿದೆ.ಮುಂದುಗಡೆ 4.3 ಇಂಚಿನ ಎಚ್‌ಡಿ ಎಲ್‌ಸಿಡಿ ಸ್ಕ್ರೀನ್(720x1280 ಪಿಕ್ಸೆಲ್‌) ಹಿಂದುಗಡೆ 4.3 ಇಂಚಿನ ಎಲೆಕ್ಟ್ರಾನಿಕ್‌ ಪೇಪರ್‌ ಸ್ಕ್ರೀನ್‌(360x640 ಪಿಕ್ಸೆಲ್‌) ಹೊಂದಿದ್ದು ಇ ಬುಕ್‌ಗಳನ್ನು ಓದಬಹುದಾಗಿದೆ.

 ಸ್ಯಾಮ್‌ಸಂಗ್‌ ಗೆಲಾಕ್ಸಿ ರೌಂಡ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ರೌಂಡ್‌


ವಿಶ್ವದ ಪ್ರಥಮ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್‌ ಅಭಿವೃದ್ಧಿ ಪಡಿಸಿದೆ. ಗೆಲಾಕ್ಸಿ ರೌಂಡ್‌ ಹೆಸರಿನ ಸ್ಮಾರ್ಟ್‌ಫೋನ್‌ ಕೋರಿಯಾದಲ್ಲಿ ಮಾತ್ರ ಬಿಡುಗಡೆ ಮಾಡಿದೆ.ಆಂಡ್ರಾಯ್ಡ್‌ನ ಜೆಲ್ಲಿ ಬೀನ್‌ 4.3 ಆಪ್‌ಡೇಟ್‌ ಆವೃತ್ತಿ,5.7 ಇಂಚಿನ ಫುಲ್‌ ಎ‌ಚ್‌ಡಿ ಸುಪರ್‌ ಫ್ಲೆಕ್ಸಿಬಲ್‌ AMOLED ಸ್ಕ್ರೀನ್‌,13 ಎಂಪಿ ಹಿಂದುಗಡೆ ಕ್ಯಾಮೆರಾ 2 ಎಂಪಿ ಮುಂದುಗಡೆ ಕ್ಯಾಮೆರಾ, 3 GB ರ್‍ಯಾಮ್‌ನ್ನು ಈ ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

  ಏಸಸ್‌ ಪ್ಯಾಡ್‌ಫೋನ್‌ ಇನ್ಫಿನಿಟಿ:

ಏಸಸ್‌ ಪ್ಯಾಡ್‌ಫೋನ್‌ ಇನ್ಫಿನಿಟಿ:


ಸ್ಮಾರ್ಟ್‌‌ಫೋನ್‌ ಟ್ಯಾಬ್ಲೆಟ್‌ ಲ್ಯಾಪ್‌ಟಾಪ್‌ ಮೂರು ಗ್ಯಾಜೆಟ್‌‌ಗಳಿರುವ ಟ್ಯಾಬ್ಲೆಟ್‌ ಡಕ್‌ನ್ನು ಏಸಸ್‌ ಅಭಿವೃದ್ಧಿ ಪಡಿಸಿದೆ. ಸ್ಮಾರ್ಟ್‌‌ಫೋನ್‌ನ್ನು ಡಕ್‌ನಲ್ಲಿ ಇರಿಸಿದರೆ 10 ಇಂಚಿನ ಟ್ಯಾಬ್ಲೆಟ್‌ನಲ್ಲಿ ಸ್ಮಾರ್ಟ್‌‌‌‌ಫೋನ್‌ ಡೇಟಾಗಳು ಕಾಣುತ್ತದೆ. ಇನ್ನೂ ಕೀ ಬೋರ್ಡ್‌ ಕನೆಕ್ಟ್‌ ಮಾಡುವ ಮೂಲಕ ಆಂಡ್ರಾಯ್ಡ್‌ ಲ್ಯಾಪ್‌ಟಾಪ್‌ ಆಗಿಯೂ ಬಳಕೆ ಮಾಡಬಹುದಾಗಿದೆ.

 ಸ್ಯಾಮ್‌ಸಂಗ್‌ ಗೆಲಾಕ್ಸಿ ಗೋಲ್ಡನ್‌:

ಸ್ಯಾಮ್‌ಸಂಗ್‌ ಗೆಲಾಕ್ಸಿ ಗೋಲ್ಡನ್‌:


ವಿಶ್ವದ ಮೊದಲ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಡ್ಯುಯಲ್‌ ಸ್ಕ್ರೀನ್‌ ಫ್ಲಿಪ್‌ ಫೋನ್‌ನ್ನು ಸ್ಯಾಮ್‌ ಸಂಗ್ ತಯಾರಿಸಿದೆ. ಈ ಸ್ಮಾರ್ಟ್‌‌ಫೋನ್‌ವಿಶೇಷತೆ ಏನೆಂದರೆ ಎರಡು ಸ್ಕ್ರೀನ್ ಹಿಂದೆ ಮತ್ತು ಮುಂದಿನ ಭಾಗದಲ್ಲಿದೆ. ಡ್ಯುಯಲ್‌ ಸಿಮ್‌ನಲ್ಲಿ ಒಂದು ಸಿಮ್‌ ಸ್ಲಾಟ್‌ ಸಿಡಿಎಂಐ ಸಿಮ್‌ಗೆ ಸಪೋರ್ಟ್‌ ಮಾಡಿದ್ರೆ ಇನ್ನೊಂದು ಸಿಮ್‌ನಲ್ಲಿ ಸ್ಲಾಟ್‌‌ನಲ್ಲಿ ಜಿಎಸ್‌ಎಂ ಸಿಮ್‌ ಹಾಕಬಹುದು

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ಝೂಮ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ಝೂಮ್‌


ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಡಿಜಿಟಲ್‌ ಝೂಮ್‌ ಇದ್ದರೆ ಸ್ಯಾಮ್‌ಸಂಗ್‌ ತನ್ನ ಗೆಲಾಕ್ಸಿ ಎಸ್‌ 4 ಝೂಮ್‌ಗ ಸ್ಮಾರ್ಟ್‌‌‌ಫೋನಿಗೆ 10x ಅಪ್ಟಿಕಲ್‌ ಝೂಮ್‌ ನೀಡಿದೆ. ಹಿಂದೆ 16ಎಂಪಿ ಸಿಮೊಸ್‌ ಬಿಎಸ್‌ಐ ಸೆನ್ಸರ್‌ ಕ್ಯಾಮೆರಾ,ಮುಂದುಗಡೆ 1.9 ಎಂಪಿ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದೆ.

 ಎಲ್‌ಜಿ ಜಿ2

ಎಲ್‌ಜಿ ಜಿ2

ಸ್ಮಾರ್ಟ್‌‌ಫೋನ್‌ಗಳಲ್ಲಿ ಬಲ ಅಥವಾ ಎಡ ಭಾಗದಲ್ಲಿ ವಾಲ್ಯೂಮ್‌ ಕೀ ಪವರ್‌ ಲಾಕ್‌ ಇರುವುದು ಸಾಮಾನ್ಯ. ಆದರೆ ಕೋರಿಯಾದ ಎಲ್‌ಜಿ ಕಂಪೆನಿ ಈ ಎಲ್ಲಾ ಹಾರ್ಡ್‌ವೇರ್‌ ಕೀಗಳನ್ನು ಹಿಂದುಗಡೆ ನೀಡಿದ್ದಾರೆ. ಬಲ ಕೈ ಅಥವಾ ಎಡ ಕೈಯನ್ನು ಬಳಸುವ ಗ್ರಾಹಕರಿಗೆ ಸುಲಭವಾಗಿ ಫೋನ್‌ ಆಪರೇಟ್‌ ಮಾಡಲು ಹೊಸ ವಿನ್ಯಾಸದ ಸ್ಮಾರ್ಟ್‌ಫೋನ್‌ ಅಭಿವೃದ್ಧಿ ಪಡಿಸಿದ್ದೇವೆ ಎಂದು ಎಲ್‌ಜಿ ಹೇಳಿದೆ.

 ಜಿಯೋನಿ ಇಲೈಫ್‌ ಇ7:

ಜಿಯೋನಿ ಇಲೈಫ್‌ ಇ7:


ವಿಶ್ವದ ಪ್ರಥಮ 16 ಎಂಪಿ ಹಿಂದುಗಡೆ ಕ್ಯಾಮೆರಾ,8 ಎಂಪಿ ಮುಂದುಗಡೆ ಕ್ಯಾಮೆರಾವಿರುವ ಸಿಂಗಲ್‌ ಸಿಮ್‌ಫ್ಯಾಬ್ಲೆಟ್‌ನ್ನು ಚೀನಾದ ಜಿಯೋನೀ ಕಂಪೆನಿ ಬಿಡುಗಡೆ ಮಾಡಿದೆ. 5.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1920 x 1080 ಪಿಕ್ಸೆಲ್‌) ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌ 2.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌ನ್ನು ಸ್ಮಾರ್ಟ್‌ಫೋನ್‌ ಹೊಂದಿದೆ.

 ನೋಕಿಯಾ ಲೂಮಿಯಾ 1020:

ನೋಕಿಯಾ ಲೂಮಿಯಾ 1020:


ವಿಶ್ವದ ಮೊದಲ 41 ಮೆಗಾಪಿಕ್ಸೆಲ್‌ ಹೊಂದಿರುವ ವಿಂಡೋಸ್‌ ಓಎಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ನ್ನು ನೋಕಿಯಾ ಬಿಡುಗಡೆ ಮಾಡಿದೆ. 4.5 ಇಂಚಿನ AMOLED WXGA ಸ್ಕ್ರೀನ್‌(1280x768 ಪಿಕ್ಸೆಲ್‌) 1.5 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍,2GB ರ್‍ಯಾಮ್‌ ವಿಶೇಷತೆಯನ್ನು ಈ ಸ್ಮಾರ್ಟ್‌‌ಫೋನ್‌ ಒಳಗೊಂಡಿದೆ

 ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌3:

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌3:


ವಿಶ್ವದ ಮೊದಲ 3GB ರ್‍ಯಾಮ್‌ ಹೊಂದಿರುವ ಫ್ಯಾಬ್ಲೆಟ್‌ ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿದೆ.ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌, 1.9GHz ಅಕ್ಟಾ ಕೋರ್‌ ಪ್ರೊಸೆಸರ್‌, 13 ಎಂಪಿ ಹಿಂದುಗಡೆ ಕ್ಯಾಮೆರಾ,2 ಎಂಪಿ ಮುಂದುಗಡೆ ಕ್ಯಾಮೆರಾ ವಿಶೇಷತೆಯನ್ನು ಈ ಫ್ಯಾಬ್ಲೆಟ್‌ ಒಳಗೊಂಡಿದೆ.

 ಲೆನೊವೊ ಪಿ780

ಲೆನೊವೊ ಪಿ780


ವಿಶ್ವದ ಮೊದಲ ಶಕ್ತಿಶಾಲಿ 4,000 mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್‌ವನ್ನು ಲೆನೊವೊ ತಯಾರಿಸಿದೆ.

ಮೋಟೋ ಆಟ್ರಿಕ್ಸ್‌

ಮೋಟೋ ಆಟ್ರಿಕ್ಸ್‌


ವಿಶ್ವದ ಮೊದಲ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಹೊಂದಿರುವ ಸ್ಮಾರ್ಟ್‌‌ಫೋನ್‌ನ್ನುಮೋಟರೋಲಾ 2011ರ ಜನವರಿಯಲ್ಲಿ ಬಿಡುಗಡೆ ಮಾಡಿತ್ತು.ಆಪಲ್‌ ಐಫೋನ್ 5ಎಸ್‌ನಲ್ಲಿ ಮುಂದುಗಡೆ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ ಇದ್ದರೆ ಈ ಫೋನಿನಲ್ಲಿ ಹಿಂದುಗಡೆ ಇತ್ತು.ಆಂಡ್ರಾಯ್ಡ್‌ 2.2 ಫ್ರೋ ಓಎಸ್‌,1 GB ರ್‍ಯಾಮ್‌,5 ಎಂಪಿ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್‌ ಒಳಗೊಂಡಿತ್ತು.

ಒಪ್ಪೋ ಎನ್‌1

ಒಪ್ಪೋ ಎನ್‌1


ವಿಶ್ವದ ಮೊದಲ ತಿರುಗುವ ಕ್ಯಾಮೆರಾವಿರುವ ಸ್ಮಾರ್ಟ್‌ಫೋನ್‌ನ್ನು ಒಪ್ಪೋ ಕಂಪೆನಿ ತಯಾರಿಸಿದೆ. ಒಪ್ಪೋ ಎನ್‌1 ಸ್ಮಾರ್ಟ್‌ಫೋನಿಗೆ ಒಂದೇ ಕ್ಯಾಮೆರಾವಿದ್ದು ಈ ಕ್ಯಾಮೆರಾವನ್ನು206 ಡಿಗ್ರಿಯವರೆಗೆ ತಿರುಗಿಸಬಹುದಾಗಿದೆ.

 ಮೋಟೋ ಎಕ್ಸ್‌‌

ಮೋಟೋ ಎಕ್ಸ್‌‌

ಗ್ರಾಹಕರಿಗೆ ಬೇಕಾದ ಬಣ್ಣದಲ್ಲಿ ಹೊರಗಿನ ಭಾಗಗಳನ್ನು ಹಾಕಿ ಸೆಟ್‌ ಮಾಡಬಹುದಾದ ವಿಶ್ವದ ಮೊದಲ ಸ್ಮಾರ್ಟ್‌ಫೋನ್‌ ಫೋನ್‌ನ್ನು(Customize smartphones) ಮೋಟರೋಲಾ ಬಿಡುಗಡೆ ಮಾಡಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X