ಈ 15 ದೇಶಗಳಲ್ಲಿ ಐಫೋನ್ ಎಕ್ಸ್ ಎಸ್ ಭಾರತಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ

|

ಆಪಲ್ ಐಫೋನ್ ಎಕ್ಸ್ಎಸ್ 64ಜಿಬಿ ವೇರಿಯಂಟ್ ನ ಭಾರತೀಯ ಮಾರುಕಟ್ಟೆಯ ಬೆಲೆ 99,900 ರುಪಾಯಿಗಳು. ಅದೇ 256ಜಿಬಿ ಮತ್ತು 512ಬಿಜಿ ವೇರಿಯಂಟ್ ನ ಬೆಲೆ ಕ್ರಮವಾಗಿ ರುಪಾಯಿ 1,14,900 ಮತ್ತು 1, 34,900. ವಿಶ್ವದ ಇತರೆ ದೇಶಗಳಲ್ಲಿ ಆಪಲ್ ಫೋನ್ ಗಳು ತೆರಿಗೆಯೂ ಸೇರಿ ಇನ್ನೂ ಕಡಿಮೆ ಬೆಲೆ ಲಭ್ಯವಾಗುತ್ತದೆ. ಅಂತಹ 15 ದೇಶಗಳ ಪಟ್ಟಿಯನ್ನು ಮತ್ತು ಅಲ್ಲಿ ಎಷ್ಟು ಬೆಲೆಗೆ ಐಫೋನ್ ಸಿಗುತ್ತದೆ. ಇಲ್ಲಿನ ಬೆಲೆಗೂ ಅಲ್ಲಿನ ಬೆಲೆಗೂ ಎಷ್ಟು ರುಪಾಯಿಯ ವ್ಯತ್ಯಾಸವಿದೆ ಎಂಬ ಬಗ್ಗೆ ಸಂಪೂರ್ಣ ವಿವರವನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಯುಎಸ್ಎ

ಯುಎಸ್ಎ

(ಆರಂಭಿಕ ಬೆಲೆ 73,500 ರಿಂದ ಮತ್ತು 80,300; 26,400 ರೂಪಾಯಿ ವರೆಗೆ ಉಳಿತಾಯ ಮಾಡಬಹುದು)

ಯುಎಸ್ಎ ನಲ್ಲಿ ಪ್ರತಿ ರಾಜ್ಯಗಳಲ್ಲಿ ವಿಭಿನ್ನ ತೆರಿಗೆ ಇರುತ್ತದೆ. ಐಫೋನ್ ಎಕ್ಸ್ ಎಸ್(64ಜಿಬಿ) ನೀವು ಯಾವ ರಾಜ್ಯದಲ್ಲಿ ಖರೀದಿಸುತ್ತೀರಿ ಎಂಬುದರ ಆಧಾರದಲ್ಲಿ, ಇಲ್ಲಿ ತೆರಿಗೆಯೂ ಸೇರಿದಂತೆ $999 ರಿಂದ $1,092 ಇರಲಿದೆ. ಒಂದು ವೇಳೆ ನೀವು ನ್ಯೂ ಹ್ಯಾಮ್ಶೈಯರ್ ನಲ್ಲಿ ಖರೀದಿಸುವುದಾದರೆ $999 ಗೆ ಮತ್ತು ಸಾನ್ ಜ್ಯೋಸ್ ನಲ್ಲಿ ಖರೀದಿಸುವುದಾದರೆ $1,091.41 ಬೆಲೆಗೆ ಖರೀದಿಸಬಹುದು.ಒಟ್ಟಾರೆಯಾಗಿ ನೀವು ಭಾರತಕ್ಕೆ ಹೋಲಿಸಿದರೆ ಸುಮಾರು 26,400 ರೂಪಾಯಿಯಿಂದ 19,600 ರುಪಾಯಿವರೆಗೆ ಉಳಿತಾಯ ಮಾಡಬಹುದು.

ಕೆನಡಾ (ಆರಂಭಿಕ ಬೆಲೆ 77,400 ಮತ್ತು ಅಂದಾಜು 22,500 ರುಪಾಯಿ ಕಡಿಮೆ ಬೆಲೆ ಇದೆ)

ಕೆನಡಾದಲ್ಲಿ ಆಪಲ್ ಐಫೋನ್ ಎಕ್ಸ್ಎಸ್ (64ಜಿಬಿ)ಯನ್ನು 1,379 ಕೆನಡಿಯನ್ ಡಾಲರ್ ನಲ್ಲಿ ಮಾರಲಾಗುತ್ತದೆ. ತೆರಿಗೆಯೂ ಸೇರಿದಂತೆ ಇದರ ಬೆಲೆ ಅಂದಾಜು 77,400 ರುಪಾಯಿ ಆಗಲಿದೆ. ಭಾರತದಲ್ಲಿ ಇದರ ಬೆಲೆ 99,900 ರುಪಾಯಿ ಆಗಿದೆ.

ಜಪಾನ್ (ಆರಂಭಿಕ ಬೆಲೆ ರುಪಾಯಿ 80,000 ಮತ್ತು 19,900 ರುಪಾಯಿ ಕಡಿಮೆ ಬೆಲೆ ಇದೆ)

ಜಪಾನಿಲ್ಲಿ ಐಫೋನ್ ಎಕ್ಸ್ಎಸ್ (64GB)ಯ ಬೆಲೆ 1,21,824ಯೆನ್ ಗಳು. ಅಂದರೆ ಭಾರತೀಯ ಕರೆನ್ಸಿಯಲ್ಲಿ ಅಂದಾಜು 80,000 ರುಪಾಯಿಗಳು.

ಹಾಂಗ್ ಕಾಂಗ್

ಹಾಂಗ್ ಕಾಂಗ್

(ಆರಂಭಿಕ ಬೆಲೆ ರೂಪಾಯಿ 80,700 ಮತ್ತು 19,200 ರೂಪಾಯಿಯಷ್ಟು ಕಡಿಮೆ ಬೆಲೆ)

ಹಾಂಗ್ ಕಾಂಗ್ ನಲ್ಲಿ ಆಪಲ್ ಐಫೋನ್ ಎಕ್ಸ್ಎಸ್ (64ಜಿಬಿ)ಯನ್ನು ಎಲ್ಲಾ ತೆರಿಗೆಯೂ ಸೇರಿ 8,599 HK ಡಾಲರ್ ಬೆಲೆಯಲ್ಲಿ ಮಾರಲಾಗುತ್ತದೆ. ಇದನ್ನು ಭಾರತೀಯ ಕರೆನ್ಸಿಯಲ್ಲಿ ಹೇಳುವುದಾದರೆ ಸುಮಾರು 80,700 ರುಪಾಯಿ.

ದುಬೈ ಮತ್ತು ಯುಎಇ ( ಆರಂಭಿಕ ಬೆಲೆ ರುಪಾಯಿ 84,700 ಮತ್ತು 15,200 ರುಪಾಯಿ ಬೆಲೆ ಕಡಿಮೆ)

ದುಬೈ ಮತ್ತು ಯುಎಇ ನಲ್ಲಿ ಆಪಲ್ ಐಫೋನ್ ಎಕ್ಸ್ ಎಸ್ (6ಜಿಬಿ) ಯನ್ನು ಎಲ್ಲಾ ತೆರಿಗೆಯೂ ಸೇರಿ 4,229 Dirham ಗೆ ಮಾರಲಾಗುತ್ತದೆ ಭಾರತೀಯ ಬೆಲೆಯಲ್ಲಿ ಹೇಳುವುದಾದರೆ ಇದು ಅಂದಾಜು 84,700 ರುಪಾಯಿ.

ಸಿಂಗಾಪುರ (ಆರಂಭಿಕ ಬೆಲೆ ರೂಪಾಯಿ 88,100 ಮತ್ತು ರುಪಾಯಿ11,800 ಉಳಿಸಬಹುದು)

ಸಿಂಗಾಪುರದಲ್ಲಿ ಆಪಲ್ ಐಫೋನ್ ಎಕ್ಸ್ಎಸ್(64ಜಿಬಿ) ಯ ಬೆಲೆ ತೆರಿಗೆಯೂ ಸೇರಿ 1,649 ಸಿಂಗಾಪುರ ಡಾಲರ್. ಭಾರತೀಯ ಕರೆನ್ಸಿಯಲ್ಲಿ ಅಂದಾಜು 88,100 ರುಪಾಯಿ.

ಆಸ್ಟ್ರೇಲಿಯಾ(ಆರಂಭಿಕ ಬೆಲೆ ರೂಪಾಯಿ 84,900 ಮತ್ತು 15,000 ರುಪಾಯಿಯಷ್ಟು ಕಡಿಮೆ ಬೆಲೆ)

ಆಸ್ಟ್ರೇಲಿಯಾದಲ್ಲಿ ಆಪಲ್ ಐಫೋನ್ ಎಕ್ಸ್ಎಸ್(64ಜಿಬಿ) ತೆರೆಗೆಯೂ ಸೇರಿ 1,629 ಆಸ್ಟ್ರೇಲಿಯನ್ ಡಾಲರ್ ಗೆ ಮಾರಲಾಗುತ್ತದೆ. ಭಾರತೀಯ ಕರೆನ್ಸಿಯಲ್ಲಿ ಅಂದಾಜು 84,900 ರುಪಾಯಿ.

ಚೀನಾ (ಆರಂಭಿಕ ಬೆಲೆ ರೂಪಾಯಿ 92,250 ಮತ್ತು 7,650 ರೂಪಾಯಿ ಕಡಿಮೆ ಬೆಲೆ)

ಚೀನಾದಲ್ಲಿ ಆಪಲ್ ಐಫೋನ್ ಎಕ್ಸ್ಎಸ್(64ಜಿಬಿ) ಯನ್ನು ತೆರಿಗೆಯೂ ಸೇರಿದಂತೆ 8,699 ಯುವನ್ ಗೆ ಮಾರಲಾಗುತ್ತದೆ ಅಂದರೆ ಅಂದಾಜು 92,250 ರುಪಾಯಿಗಳು.

ಥೈಲ್ಯಾಂಡ್

ಥೈಲ್ಯಾಂಡ್

(ಆರಂಭಿಕ ಬೆಲೆ ರುಪಾಯಿ 89,250 ಮತ್ತು 10,650 ರುಪಾಯಿ ಕಡಿಮೆ ಬೆಲೆ)

ಥೈಲ್ಯಾಂಡ್ ನಲ್ಲಿ ಆಪಲ್ ಐಫೋನ್ ಎಕ್ಸ್ ಎಸ್ (64ಜಿಬಿ)ಯನ್ನು 39,900 ಥೈ ಭಾಟ್ ಗೆ ಮಾರಲಾಗುತ್ತದೆ. ಇದರಲ್ಲಿ ತೆರಿಗೆಯೂ ಸೇರಿದೆ. ಇದನ್ನು ಭಾರತೀಯ ಕರೆನ್ಸಿಗೆ ಬದಲಾಯಿಸಿದರೆ 89,250 ರುಪಾಯಿ ಆಗಲಿದೆ.

ಮಲೇಷಿಯಾ( ಆರಂಭಿಕ ಬೆಲೆ ರೂಪಾಯಿ 88,400 ಮತ್ತು 11,500 ಕಡಿಮೆ ಬೆಲೆ)

ಮಲೇಷಿಯಾದಲ್ಲಿ ಆಪಲ್ ಐಫೋನ್ ಎಕ್ಸ್ಎಸ್ (64ಜಿಬಿ) 4,999 ಮಲೇಷಿಯನ್ ರಿಂಗ್ಗಿಟ್ ಗೆ ಮಾರಲಾಗುತ್ತದೆ. ಭಾರತೀಯ ಕರೆನ್ಸಿಯಲ್ಲಿ ಇದು 88,400 ರುಪಾಯಿ ಆಗಲಿದೆ.

ಲಂಡನ್ ಮತ್ತು ಯುಕೆ (ಆರಂಭಿಕ ಬೆಲೆ ರೂಪಾಯಿ 95,500 ಮತ್ತು ಅಂದಾಜು 4,400 ಕಡಿಮೆ ಬೆಲೆ ಆಗುತ್ತೆ)

ಲಂಡನ್ ನಲ್ಲಿ ಆಪಲ್ ಐಫೋನ್ ಎಕ್ಸ್ಎಸ್(64ಜಿಬಿ)ಯನ್ನು 999 ಪೌಂಡ್ ಗೆ ಮಾರಲಾಗುತ್ತದೆ. ಅಂದರೆ ಅಂದಾಜು 95,500 ರುಪಾಯಿ.

ಫ್ರಾನ್ಸ್ (ಆರಂಭಿಕ ಬೆಲೆ ರೂಪಾಯಿ 97,550 ಮತ್ತು 2,350 ರುಪಾಯಿ ಕಡಿಮೆ ಬೆಲೆ)

ಫ್ರಾನ್ಸ್ ನಲ್ಲಿ ಐಫೋನ್ ಎಕ್ಸ್ಎಸ್ ನ್ನು ಎಲ್ಲಾ ತೆರಿಗೆಯೂ ಸೇರಿ1,155.28 ಯ್ಯೂರೋಗೆ ಮಾರಲಾಗುತ್ತದೆ ಅಂದರೆ ಭಾರತೀಯ ಬೆಲೆ ಅಂದಾಜು 97,550 ರುಪಾಯಿಗಳು.

ನ್ಯೂಝಿಲ್ಯಾಂಡ್ (ಆರಂಭಿಕ ಬೆಲೆ ರೂಪಾಯಿ 90,540 ಮತ್ತು 9,360 ಕಡಿಮೆ ಬೆಲೆ)

ನ್ಯೂಝಿಲ್ಯಾಂಡ್ ನಲ್ಲಿ ಆಪಲ್ ಐಫೋನ್ ಎಕ್ಸ್ಎಸ್(64ಜಿಬಿ)ಯನ್ನು 1,899 ನ್ಯೂಝಿಲ್ಯಾಂಡ್ ಡಾಲರ್ ನಲ್ಲಿ ಮಾರಲಾಗುತ್ತದೆ. ಇದರಲ್ಲಿ ಎಲ್ಲಾ ಟ್ಯಾಕ್ಸ್ ಗಳು ಸೇರಿದೆ. ಭಾರತೀಯ ಕರೆನ್ಸಿಯಲ್ಲಿ ಹೇಳುವುದಾದರೆ ಅಂದಾಜು 90,540 ಆಗಲಿದೆ.

ಮೆಕ್ಸಿಕೋ (ಆರಂಭಿಕ ಬೆಲೆ ರೂಪಾಯಿ 92,035 ಮತ್ತು ಅಂದಾಜು 7,865 ರುಪಾಯಿ ಕಡಿಮೆ)

ಮೆಕ್ಸಿಕೋದಲ್ಲಿ ಆಪಲ್ ಐಫೋನ್ ಎಕ್ಸ್ಎಸ್ (64ಬಿಜಿ) ಯನ್ನು 24,499 ಮೆಕ್ಸಿಕನ್ ಪೇಸೋಗೆ ಮಾರಲಾಗುತ್ತದೆ. ಇದನ್ನು ಭಾರತೀಯ ಕರೆನ್ಸಿಯಲ್ಲಿ ಅಂದಾಜಿಸುವುದಾದರೆ 92,035 ರುಪಾಯಿಗಳು.

ಜರ್ಮನಿ (ಆರಂಭಿಕ ಬೆಲೆ ರೂಪಾಯಿ 97,950 ಮತ್ತು ಅಂದಾಜು 1,950 ರೂಪಾಯಿ ಕಡಿಮೆ)

ಜರ್ಮನಿಯಲ್ಲಿ ಆಪಲ್ ಐಫೋನ್ ಎಕ್ಸ್ಎಸ್(64ಜಿಬಿ) ಬೆಲೆ 1,149 ಯ್ಯೂರೋ. ಭಾರತೀಯ ಕರೆನ್ಸಿಯಲ್ಲಿ ಅಂದಾಜು 97,950 ರುಪಾಯಿಗಳು.

Best Mobiles in India

Read more about:
English summary
15 countries where apple iphone xs is cheaper than India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X