Home
ಮೊಬೈಲ್

ಈ 15 ಸ್ಮಾರ್ಟ್ ಫೋನ್ ಗಳು ನಮ್ಮಂತವರಿಗಲ್ಲ ಬಿಡಿ!

ವರ್ಷಗಳು ಉರುಳಿದಂತೆ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಬರುತ್ತದೆ. ಅದರಲ್ಲಿ ಕೆಲವು ಸ್ಮಾರ್ಟ್ ಫೋನ್ ಗಲು ಸಾಮಾನ್ಯ ಜನರಿಗಾಗಿ ತಯಾರಿಸಿರುವುದಿಲ್ಲ ಬದಲಾಗಿ ಶ್ರೀಮಂತರಿಗೆಂದೇ ತಯಾರಿಸಿರುವ ಕೆಲವು ಫೋನ್ ಗಳಾಗಿರುತ್ತದೆ. ಅಂತಹ ಕೆಲವು ದುಬಾರಿ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ (512 GB) (Rs 1,44,900)

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ (512 GB) (Rs 1,44,900)

ನೂತನ ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ 512GB ಸ್ಟೋರೇಜ್ ವೇರಿಯಂಟ್ ನ ಫೋನ್ ಸದ್ಯ ಭಾರತದಲ್ಲಿ ಲಭ್ಯವಿರುವ ಅತೀ ದುಬಾರಿ ಆಪಲ್ ಫೋನ್ ಆಗಿದೆ ಅಂದರೆ 1,44,900 ರುಪಾಯಿ ಬೆಲೆಬಾಳುವ ಫೋನ್ ಆಗಿದೆ.

ವರ್ತು ಆಸ್ಟರ್ ಪಿ ಗೋಲ್ಡ್(Rs 10.4 ಲಕ್ಷ)

ವರ್ತು ಆಸ್ಟರ್ ಪಿ ಗೋಲ್ಡ್(Rs 10.4 ಲಕ್ಷ)

ವರ್ತು ಇದೀಗ ಆಸ್ಟರ್ ಪಿ ಗೇಮ್ ಜೊತೆಗೆ ಮತ್ತೆ ಬಂದಿದೆ. ಇದ ಆರಂಭಿಕ ಬೆಲೆ $5,000 (ಅಂದಾಜು Rs 3.79 ಲಕ್ಷ) ಮತ್ತು ಯಾರು ಗೋಲ್ಡ್ ಪ್ಲೇಟೆಡ್ ಮಾಡೆಲ್ ನ್ನು ಬಯಸುತ್ತಾರೋ ಅದರ ಬೆಲೆ $14,146 (ಅಂದಾಜು Rs 10.4 ಲಕ್ಷ).

ಆಪಲ್ ಐಫೋನ್ ಎಕ್ಸ್ಎಸ್ (512GB) (Rs 1,34,900)

ಆಪಲ್ ಐಫೋನ್ ಎಕ್ಸ್ಎಸ್ (512GB) (Rs 1,34,900)

ಚಿಕ್ಕ ಐಫೋನ್ ಎಕ್ಸ್ ಎಸ್ 512GB ಸ್ಟೋರೇಜ್ ವೇರಿಯಂಟ್ ನ ಬೆಲೆ ಭಾರತದಲ್ಲಿ ಅಂದಾಜು Rs 1.35 ಲಕ್ಷ ಮತ್ತು ಇದು ಭಾರತದಲ್ಲಿ ಬಿಡುಗಡೆಗೊಂಡಿರುವ ಎರಡನೇ ಅತೀ ದುಬಾರಿ ಐಫೋನ್ ಆಗಿದೆ.

 ಹುವಾಯಿ ಮೇಟ್ 20 RS ಪೋರ್ಷೆ ಡಿಸೈನ್ (Rs 1.77 ಲಕ್ಷ)

ಹುವಾಯಿ ಮೇಟ್ 20 RS ಪೋರ್ಷೆ ಡಿಸೈನ್ (Rs 1.77 ಲಕ್ಷ)

ಹುವಾಯಿ ಇತ್ತೀಚೆಗೆ ಹೊಸ ಮೇಟ್ 20 ಸರಣಿಯನ್ನು ಬಿಡುಗಡೆಗೊಳಿಸಿದೆ ಮತ್ತು ಪೋರ್ಷೆ ಡಿಸೈನ್ ಮೇಟ್ 20RS, ಮೇಟ್ 20 ಪ್ರೋ ನ ದೊಡ್ಡ ಅವತರಣಿಕೆ ಆಗಿದೆ. ಇದು ಖಂಡಿತ ಈ ಬ್ರ್ಯಾಂಡ್ ನ ದೊಡ್ಡ ಅಭಿಮಾನಿಗಳಿಗೆ ಸೀಮಿತವಾಗಲಿರುವ ಫೋನ್. ಇದರ ಬೆಲೆ 2095 ಯುರೋಸ್ ಅಂದರೆ ಅಂದಾಜು Rs 1.77 ಲಕ್ಷ.

ಕ್ಯಾವಿಯರ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ (ಗೋಲ್ಡ್ /ಬ್ಲಾಕ್) (Rs 5.40 ಲಕ್ಷ)

ಕ್ಯಾವಿಯರ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ (ಗೋಲ್ಡ್ /ಬ್ಲಾಕ್) (Rs 5.40 ಲಕ್ಷ)

ಹೊಸ ಕ್ಯಾವಿಯರ್ ಐಫೋನ್ ಎಕ್ಸ್ ಎಸ್ ಸರಣಿಯು ಒಂದು ಕಡೆ ಐಫೋನ್ ನಿಂದ ಮತ್ತು ಇನ್ನೊಂದು ಕಡೆ ಮೆಕಾನಿಕಲ್ ವಾಚ್ ನಿಂದ ಬರುತ್ತದೆ. ದೇಹವು ಚಿನ್ನದ ಅಥವಾ ಟೈಟಾನಿಯಂನಿಂದ ತಯಾರಿಸಲಾಗಿರುತ್ತದೆ. ಟೈಟಾನಿಯಂ ಅಥವಾ ಗೋಲ್ಡ್ ಮತ್ತು ಬ್ಲಾಕ್ ವರ್ಷನ್ ನ ಬೆಲೆ ಕ್ರಮವಾಗಿ $6,320 (ಅಂದಾಜು Rs 4.6 ಲಕ್ಷ) ಮತ್ತು $7,160 (ಅಂದಾಜು Rs 5.26 ಲಕ್ಷ).

ದಿ ಡೈಮಂಡ್ ಕ್ರಿಪ್ಟೋ (Rs 8.97 ಕೋಟಿ)

ದಿ ಡೈಮಂಡ್ ಕ್ರಿಪ್ಟೋ (Rs 8.97 ಕೋಟಿ)

ವಿಶ್ವದ ದುಬಾರಿ ಫೋನ್ ಗಳ ಪಟ್ಟಿಯಲ್ಲಿ ದಿ ಡೈಮಂಡ್ ಕ್ರಿಪ್ಟೋ ಈಗಲೂ ಕೂಡ ಮುಂದುವರಿದಿದೆ. ಸೆಕ್ಯುರಿಟಿ ವಿಚಾರದ ಬಗ್ಗೆ ಹೆಚ್ಚು ಗಮನ ಕೇಂದ್ರಿಕರಿಸುವವರಿಗೆ ಈ ಫೋನ್ ಇನ್ನೂ ಕೂಡ ಔಟ್ ಡೇಟ್ ಆಗಿಲ್ಲ.ಇದು ವಿಂಡೋಸ್ ಸಿಇ ಆಪರೇಟಿಂಗ್ ಸಿಸ್ಟಮ್ ನ್ನು ಆಫರ್ ಮಾಡುತ್ತದೆ ಮತ್ತು ಮೊಟೊರೋಲಾ ಎಂಎಕ್ಸ್21 ಪ್ರೊಸೆಸರ್ ನ್ನು ಹೊಂದಿದೆ ಮತ್ತು ಸಂಪೂರ್ಣ ಡಿವೈಸ್ ಎನ್ಕ್ರಿಪ್ಟ್ ಆಗಿರುತ್ತದೆ.

VIPN ಬ್ಲಾಕ್ ಡೈಮಂಡ್ (Rs 2.07 ಕೋಟಿ)

VIPN ಬ್ಲಾಕ್ ಡೈಮಂಡ್ (Rs 2.07 ಕೋಟಿ)

VIPN ಬ್ಲಾಕ್ ಡೈಮಂಡ್ ನ ಬೆಲೆ $300,000 ಅಂದರೆ ಭಾರತದ ಅಂದಾಜು ಬೆಲೆ Rs 2,07,15,990 ಅಥವಾ Rs 2.07 ಕೋಟಿ. ಇದರ ಕೇವಲ ಐದು ಯುನಿಟ್ ಗಳನ್ನು ಮಾತ್ರ ತಯಾರಿಸಲಾಗಿದ್ದು , ಅದನ್ನು ಯಾರು ಖರೀದಿಸಿದರು ಎಂಬ ಬಗ್ಗೆ ಇದುವರೆಗೂ ಯಾರಿಗೂ ಮಾಹಿತಿ ಇಲ್ಲ. ಇದರ ಬೆಲೆ ಖಂಡಿತವಾಗಲೂ ಇದರಲ್ಲಿ ಅಳವಡಿಸಲಾಗಿರುವ ವಜ್ರಕ್ಕೆ ಆಗಿರುತ್ತದೆ.

ಸ್ಯಾವೆಲ್ಲಿ ಶ್ಯಾಂಪೇನ್ ಡೈಮಂಡ್(Rs 39.36 ಲಕ್ಷ)

ಸ್ಯಾವೆಲ್ಲಿ ಶ್ಯಾಂಪೇನ್ ಡೈಮಂಡ್(Rs 39.36 ಲಕ್ಷ)

ಈ ಮೊಬೈಲ್ ಕೂಡ ಅದರ ಮೆಟಿರಿಯಲ್ ನಿಂದಾಗಿಯೇ ದುಬಾರಿಯಾಗಿರುತ್ತದೆ. ಇದರ ಬೆಲೆ $57,000 ಅಂದಾಜು ರುಪಾಯಿ 39,36,038, ಇದರಲ್ಲಿ 18 ಕ್ಯಾರೆಟ್ ರೋಸ್ ಗೋಲ್ಡ್ ಶೆಲ್ ಇರುತದೆ ಮತ್ತು 395 ಬಿಳಿ ಮತ್ತು ಕಾಗ್ನ್ಯಾಕ್ ಡೈಮಂಡ್ ಗಳಿರುತ್ತದೆ. ಇದು ಆಂಡ್ರಾಯ್ಡ್ ನಲ್ಲಿ ರನ್ ಆಗುತ್ತದೆ ಮತ್ತು ಕಸ್ಟಮೈಜ್ಡ್ ಸೇವೆಗಳನ್ನು ಆಫರ್ ಮಾಡುತ್ತದೆ.

ಗೋಲ್ಡ್ ವಿಷ್ ಎಕ್ಲಿಪ್ಸ್ (Rs 5.27 ಲಕ್ಷ)

ಗೋಲ್ಡ್ ವಿಷ್ ಎಕ್ಲಿಪ್ಸ್ (Rs 5.27 ಲಕ್ಷ)

ನೀವು ಸರಿಯಾಗಿಯೇ ಓದಿದ್ದೀರಿ. ಇದರ ಬೆಲೆ $7668 ಅಂದರೆ ಭಾರತೀಯ ರುಪಾಯಿಗಳಲ್ಲಿ ಅಂದಾಜು Rs 5.27 ಲಕ್ಷ. ಇದನ್ನು ಲೆದರ್ ನಿಂದ ತಯಾರಿಸಲಾಗಿರುತ್ತದೆ ಮತ್ತು ಬೆಲೆಬಾಳುವ ಮೆಟಲ್ ನ್ನು ಬಳಸಲಾಗುತ್ತದೆ. 5.5 ಇಂಚಿನ ಕೆಪಾಸಿಟೀವ್ ಟಚ್ ಸ್ಕ್ರೀನ್ ಇರುವ ಇದು ಸ್ಕ್ರ್ಯಾಚ್ ರೆಸಿಸ್ಟೆಂಟ್ ಆಗಿದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ ಪ್ರೊಸೆಸರ್ ಮತ್ತು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನಿಂದ ರನ್ ಆಗುತ್ತದೆ.

ಗೋಲ್ಡ್ ವಿಷ್ ಎಕ್ಲಿಪ್ಸ್ – ಮ್ಯಾಜಿಕ್ ಓನಿಕ್ಸ್ ಅಲಿಗೇಟರ್ ಸ್ಮಾರ್ಟ್ ಫೋನ್ Rs 5.5 ಲಕ್ಷ

ಗೋಲ್ಡ್ ವಿಷ್ ಎಕ್ಲಿಪ್ಸ್ – ಮ್ಯಾಜಿಕ್ ಓನಿಕ್ಸ್ ಅಲಿಗೇಟರ್ ಸ್ಮಾರ್ಟ್ ಫೋನ್ Rs 5.5 ಲಕ್ಷ

ಗೋಲ್ಡ್ ವಿಷ್ ನ ಕೈಗೆಟುಕುವ ಬೆಲೆಯ ಫೋನ್ ಇದು. ಇದರ ಬೆಲೆ ಅಂದಾಜು $7,965 ಅಂದಾಜು Rs 5.5 ಲಕ್ಷ. ಆಂಡ್ರಾಯ್ಡ್ ನಲ್ಲಿ ರನ್ ಆಗುವ ಇದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ ಪ್ರೊಸೆಸರ್ ನ್ನು ಹೊಂದಿದೆ. ಇದಕ್ಕೆ ಇಷ್ಟು ಬೆಲೆ ಇರಲು ಕಾರಣ ಇದರಲ್ಲಿ ಬ್ಲಾಕ್ ಕಲರ್ ನ ಲೆದರ್ ನ್ನು ಬಳಸಲಾಗಿದೆ.

 Rs 9 ಲಕ್ಷದ ಸಿರಿನ್ ಸೋಲರಿನ್

Rs 9 ಲಕ್ಷದ ಸಿರಿನ್ ಸೋಲರಿನ್

ಇದು ಪ್ರೈವೆಸಿ ಬಗ್ಗೆ ಹೆಚ್ಚು ಗಮನ ನೀಡಿರುವ ಫೋನ್ ಆಗಿದೆ. ಇದರ ಬೆಲೆ 9 ಲಕ್ಷ ರುಪಾಯಿ. ವೈಶಿಷ್ಟ್ಯತೆಗಳು ಖಂಡಿತ ನಿಮಗೆ ಬೇಸರ ತರಿಸುತ್ತದೆ. ಮತ್ತು ಇದು ಹಳೆಯ ಆಂಡ್ರಾಯ್ಡ್ ಲಾಲಿಪಾಪ್ ಓಎಸ್ ನಿಂದ ರನ್ ಆಗುತ್ತದೆ.

ಪೋರ್ಚ್ ಡಿಸೈನ್ ಹುವಾಯಿ ಮೇಟ್ RS (Rs 1,79,318)

ಪೋರ್ಚ್ ಡಿಸೈನ್ ಹುವಾಯಿ ಮೇಟ್ RS (Rs 1,79,318)

ಹುವಾಯಿ ಇತ್ತೀಚೆಗೆ ಬಹಳ ದುಬಾರಿ ಫೋನ್ ನ್ನು ಬಿಡುಗಡೆಗೊಳಿಸಿದ್ದು ಅದರ ಹೆಸರು ಪೋರ್ಷೆ ಡಿಸೈನ್ ಮೇಟ್ 10. ಇದು ಡೈಮಂಡ್ ಬ್ಲಾಕ್ ಕಲರ್ ಆಯ್ಕೆಯನ್ನು ಹೊಂದಿದ್ದು ಬೆಲೆ $2,599 (512GB ವರ್ಷನ್) ಅಂದರೆ ಅಂದಾಜು 1,79,318. ಹುವಾಯಿ ಮೇಟ್ 10 ನಲ್ಲಿರುವ ಎಲ್ಲಾ ಫೀಚರ್ ಗಳು ಇದರಲ್ಲಿದೆ. ಲೆದರ್ ಕೇಸ್ ಹೊಂದಿರುವುದರಿಂದಾಗಿ ಇದರ ಬೆಲೆ ದುಬಾರಿಯಾಗಿರುತ್ತದೆ.

ಹಾನರ್ ನೋಟ್ 10 ರೋಲ್ಸ್ ರಾಯ್ಸ್ (Rs 1,02,393)

ಹಾನರ್ ನೋಟ್ 10 ರೋಲ್ಸ್ ರಾಯ್ಸ್ (Rs 1,02,393)

ಹುವಾಯಿ ಸಬ್ ಬ್ರ್ಯಾಂಡ್ ಆಗಿರುವ ಹಾನರ್ ಸದ್ಯದಲ್ಲೇ ನೋಟ್ 10 ರೋಲ್ಡ್ ರಾಯ್ ಎಡಿಷನ್ ಸ್ಮಾರ್ಟ್ ಫೋನ್ ನ್ನು ಜುಲೈ 26 ಕ್ಕೆ ಬಿಡುಗಡೆಗೊಳಿಸಲಿದೆ. ಇದುವರೆಗೂ ಹಾನರ್ ನೋಟ್ 10 ರೋಲ್ಸ್ ರಾಯ್ಸ್ ಎಡಿಷನ್ ನ ಬೆಲೆ RMB 9,998 (ಅಂದಾಜು Rs 1,02,393).

ಓಪ್ಪೋ ಫೈಂಡ್ ಎಕ್ಸ್ ಲಂಬೋರ್ಘಿನಿ ಎಡಿಷನ್ (Rs 1.52 ಲಕ್ಷ)

ಓಪ್ಪೋ ಫೈಂಡ್ ಎಕ್ಸ್ ಲಂಬೋರ್ಘಿನಿ ಎಡಿಷನ್ (Rs 1.52 ಲಕ್ಷ)

ಒಪ್ಪೋ ತನ್ನ ಫ್ಲ್ಯಾಗ್ ಶಿಪ್ ಫೈಂಡ್ ಎಕ್ಸ್ ಸ್ಮಾರ್ಟ್ ಫೋನಿನ ಲಂಬೋರ್ಘಿನಿ ಎಡಿಷನ್ ನ್ನು ಬಿಡುಗಡೆಗೊಳಿಸಿದೆ.ಭಾರತಕ್ಕೂ ಈ ಫೋನ್ ಬರಲಿದ್ದು ಬೆಲೆ ಅಂದಾಜು 1.52 ಲಕ್ಷ ರುಪಾಯಿಗಳಾಗಿರುವ ಸಾಧ್ಯತೆ ಇದೆ. ಇದರ ಮೊಟೋರೈಸ್ಡ್ ಕ್ಯಾಮರಾವಿರಲಿದ್ದು, ಫ್ಲ್ಯಾಗ್ ಶಿಪ್ ಫೋನಿನ ಎಲ್ಲಾ ವೈಶಿಷ್ಟ್ಯತೆಗಳೂ ಇರಲಿದೆ.

ಟೊನಿನೋ ಲಂಬೋರ್ಘಿನಿ ಆಲ್ಫಾ ಒನ್ (Rs 169,099)

ಟೊನಿನೋ ಲಂಬೋರ್ಘಿನಿ ಆಲ್ಫಾ ಒನ್ (Rs 169,099)

ಬೆಲೆ $2,450 ಅಥವಾ ಅಂದಾಜು Rs 169,099, ಇದು ಒಂದು ಲಕ್ಸುರಿ ಸ್ಮಾರ್ಟ್ ಫೋನ್ ಆಗಿದ್ದು ಇಟಾಲಿಯನ್ ಬ್ಲಾಕ್ ಲೆದರ್ ನ್ನು ಹೊಂದಿದ್ದು ಕ್ಲಾಸ್ ಮತ್ತು ಸ್ಟೈಲ್ ಗೆ ಹೆಸರುವಾಸಿಯಾಗಿದೆ. ಆದರೆ ಹಾರ್ಡ್ ವೇರ್ ಗಳನ್ನು ಗಮನಿಸಿದಾಗ ಅಷ್ಟೇನು ಆಕರ್ಷಕವಾಗಿಲ್ಲ. ಕಳೆಯ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 820 ಪ್ರೊಸೆಸರ್ ಜೊತೆಗೆ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಇದು ಹೊಂದಿದೆ ಮತ್ತು ಆಂಡ್ರಾಯ್ಡ್ Nougatಓಸ್ ನಲ್ಲಿ ರನ್ ಆಗುತ್ತದೆ.

Best Mobiles in India

English summary
15 most expensive smartphones that would cost you up to Rs 9 crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+