ಈ 15 ಮೊಬೈಲ್ ಫೋನ್‌ಗಳನ್ನು ಜನ ಯಾವತ್ತೂ ಮರೆಯಲ್ಲ..!

By GizBot Bureau
|

ಇತ್ತೀಚೆಗಿನ ವರ್ಷಗಳಲ್ಲಿ ಮೊಬೈಲ್ ಫೋನ್ ಗಳ ಡಿಸೈನ್ ಮತ್ತು ವೈಶಿಷ್ಟ್ಯತೆಗಳಲ್ಲಿ ಭಾರೀ ಬದಲಾವಣೆಗಳಾಗಿದೆ. ಆದರೂ ಕೂಡ ಸ್ಮಾರ್ಟ್ ಫೋನ್ ತಯಾರಕರಿಗೆ ಅದ್ಯಾಕೋ ಇತಿಹಾಸದ ಮೇಲೆ ಹೆಚ್ಚು ಒಲವು. ನೋಕಿಯಾ ಸಂಸ್ಥೆ ತನ್ನ ಜನಪ್ರಿಯ ಗತಕಾಲದ ಫೋನ್ 8110 ಅನ್ನು ಸ್ವಲ್ಪ ಬದಲಾವಣೆ ಮಾಡಿ ಬಿಡುಗಡೆಗೊಳಿಸಿತು.

ಈ 15 ಮೊಬೈಲ್ ಫೋನ್‌ಗಳನ್ನು ಜನ ಯಾವತ್ತೂ ಮರೆಯಲ್ಲ..!

ಬಾಳೆಹಣ್ಣಿನ ಆಕಾರದ ಈ ಫೋನ್ 4ಜಿ ಅವತಾರದಲ್ಲಿ ಬಿಡುದಡೆಗೊಂಡಿತು. ಇನ್ನು ಮೋಟರೋಲಾ ಕೂಡ ತನ್ನ ಮೋಟೋ ರಾಜ್ ಫೋನನ್ನು ಮರು ಬಿಡುಗಡೆಗೊಳಿಸಲು ಪ್ರಯತ್ನ ನಡೆಸುತ್ತಿದೆ. ಹೀಗೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ಗಮನಿಸೋಣ.

ನೋಕಿಯಾ 8110

ನೋಕಿಯಾ 8110

ಹೊಸ ಅವತಾರದಲ್ಲಿ ನೋಕಿಯಾ 8110 ಹೊರಬಂದಿದ್ದು ಅದರಲ್ಲಿ VoLTE ಕಾಲಿಂಗ್ ವೈಶಿಷ್ಟ್ಯ ಜೊತೆಗೆ 4G ಗೆ ಬೆಂಬಲ ನೀಡುವ ಸವಲತ್ತನ್ನು ಒಳಗೊಂಡಿದೆ. ಇದು ಸ್ಮಾರ್ಟ್ ಫೀಚರ್ ಓಎಸ್ ನಿಂದ ರನ್ ಆಗುತ್ತದೆ ಮತ್ತು ಕ್ವಾಲ್ಕ 205 ಡುಯರ್ ಕೋರ್ ಪ್ರೊಸೆಸರ್ ನ್ನುಒಳಗೊಂಡಿದೆ. ಇದರಲ್ಲಿ 4ಜಿಬಿಸ್ಟೋರಜ್, 512ಎಂಬಿ LPDDR3 ಮೆಮೊರಿ ಮತ್ತು 1500mAh ಬ್ಯಾಟರಿ ಇದೆ. ಇದು 2.4-ಇಂಚಿನ QVGA ಬಾಗಿದ ಡಿಸ್ಪ್ಲೇಯನ್ನು ಹೊಂದಿದ್ದು 2MP ಹಿಂಭಾಗದ ಕ್ಯಾಮರಾವನ್ನು ಒಳಗೊಂಡಿದೆ. ಹೊಸ ನೋಕಿಯಾ 3310 ನಂತೆ ಇದರಲ್ಲೂ ಕೂಡ ಎರಡು ಸಿಮ್ ಗಳು ಬೆಂಬಲ ನೀಡುವಂತ ಇನ್ ಬಿಲ್ಟ್ ಸ್ನೇಕ್ ಗೇಮ್ ಇದೆ.

ಮೋಟರೋಲಾ ಸ್ಟಾರ್ ಟಿಎಸಿ

ಮೋಟರೋಲಾ ಸ್ಟಾರ್ ಟಿಎಸಿ

1996 ರಲ್ಲಿ ಬಿಡುಗಡೆಯಾಗಿದ್ದು ಮೋಟರೋಲಾ ಸ್ಟಾರ್ ಟಿಎಸಿ ಫ್ಲಿಪ್ ಸ್ಟೈಲ್ ನ ಮೊಬೈಲ್ ಆಗಿತ್ತು ಮತ್ತು ಇದು ಈ ರೀತಿ ಬಿಡುಗಡೆಗೊಂಡ ಮೊದಲ ಫೋನ್ ಆಗಿತ್ತು. ಇದು 2ಜಿ ಗೆ ಬೆಂಬಲ ನೀಡುತ್ತಿದ್ದ ಫೋನ್ ಮತ್ತು ಇದರಲ್ಲಿ 4*15 ಕ್ಯಾರೆಕ್ಟರ್ ರೆಸಲ್ಯೂಷನ್ ನ ಗ್ರಾಫಿಕ್ ಡಿಸ್ಪ್ಲೇ ಇತ್ತು. ಜೊತೆಗೆ ಇದು ಮೋನೋ ರಿಂಗ್ ಟೋನ್,ವೈಬ್ರೈಷನ್ ಅಲರ್ಟ್ ಮತ್ತು 500mAh ಬ್ಯಾಟರಿಯನ್ನು ಒಳಗೊಂಡಿತ್ತು.

ನೋಕಿಯಾ 3310

ನೋಕಿಯಾ 3310

ಇತಿಹಾಸದ ಮೊಬೈಲ್ ಫೋನ್ ಗಳು ನೋಕಿಯಾ ಇಲ್ಲದೆ ಸಂಪೂರ್ಣಗೊಳ್ಳುವುದೇ ಇಲ್ಲ. ನೋಕಿಯಾ 3310 ಹೆಚ್ಚಿನವರಿಗೆ ತಿಳಿದಿರುವ ಮೊಬೈಲ್ ಆಗಿದೆ. ಫಿನಿಶ್ ತಯಾರಕರಿಂದಾಗಿ ಇಂತಹ ಹಲವು ಡಿವೈಸ್ ಗಳು ಸಾಂಪ್ರದಯಿಕ ಸಾಧನಗಳು ಎನಿಸಿವೆ. ನೋಕಿಯಾ 3310 ಖಂಡಿತವಾಗಿಯೂ ಹೆಚ್ಚು ಜನಪ್ರಿಯವಾಗಿದ್ದ ಫೋನ್ ಗಳಲ್ಲಿ ಒಂದೆನಿಸಿದೆ. 3310 ವನ್ನು 2000 ನೇ ಇಸವಿಯಲ್ಲ ಪ್ರಾರಂಭಿಸಲಾಯಿತು.ಇದರಲ್ಲಿ ಕಸ್ಟಮೈಸ್ ಮಾಡಬಹುದಾದ ಎಕ್ಸ್ ಪ್ರೆಸ್ ಆನ್ ಕವರ್ ಗಳಿದ್ದವು. ಈ ಫೋನ್ ಸ್ನೇಕ್-2 ಗೇಮ್ ನ್ನು ಕೂಡ ಒಳಗೊಂಡು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ದಿ ಬೆಸ್ಟ್ ಫೋನ್ ಕೂಡ ಹೌದು.

ನೋಕಿಯಾ 1100

ನೋಕಿಯಾ 1100

ಸಾರ್ವಕಾಲಿಕವಾಗಿ ಅತ್ಯಂತ ಹೆಚ್ಚು ಮಾರಾಟವಾದ ಫೋನ್ ಗಳಲ್ಲಿ ನೋಕಿಯಾ 1100 ಕೂಡ ಸೇರಿದೆ. ಯಾವುದೇ ಹೆಚ್ಚುವರಿ ಅಲಂಕಾರಿಕ ಚಿತ್ತಾರಗಳಿಲ್ಲದ ಅತ್ಯುತ್ತಮ ಬ್ಯಾಟರಿ ಲೈಫ್ ಹೊಂದಿದ್ ಫೋನ್ ಇದು. 2003 ರಲ್ಲಿ ನೋಕಿಯಾ 1100 ಬಿಡುಗಡೆಯಾಯಿತು ಮತ್ತು ಇದರಲ್ಲಿ ಬಿಲ್ಟ್ ಇನ್ ಫ್ಲ್ಯಾಶ್ ಲೈಟ್ ಇತ್ತು. ಇದು 50 ಟೆಕ್ಸ್ಟ್ ಮೆಸೇಜ್ ಗಳನ್ನು ಇಟ್ಟುಕೊಳ್ಳುವ ಸಾಮರ್ಥ್ಯ ಹೊಂದಿತ್ತು ಮತ್ತು ಕೆಲವು ರಿಂಗ್ ಟೋನ್ ಗಳ ಸಂಗ್ರಹವನ್ನು ಇದು ಹೊಂದಿತ್ತು.

ನೋಕಿಯಾ 6600

ನೋಕಿಯಾ 6600

2003 ರಲ್ಲಿ ಇದನ್ನು ಬಿಡುಗಡೆಗೊಳಿಸಲಾಯಿತು. ಚಮತ್ಕಾರಿಯಾಗಿ ಕಾಣುತ್ತಿದ್ದ ಈ ನೋಕಿಯಾ 6600 ನೋಕಿಯಾ ಸ್ಮಾರ್ಟ್ ಗಳ ಪೈಕಿ ಅತ್ಯಂತ ಮೊದಲು ಬಿಡುಗಡೆಯಾಗಿದ್ದು. ಇದು ಸಿಂಬಿಯಾನ್ ಓಎಸ್ ಮತ್ತು ವಿಜಿಎ(0.3ಎಂಪಿ) ರೆಸಲ್ಯೂಷನ್ನಿನ ಹಿಂಭಾಗದ ಕ್ಯಾಮರಾ ಜೊತೆಗೆ ವೀಡಿಯೋ ಕಾಲ್ ವೈಶಿಷ್ಟ್ಯತೆನ್ನು ಹೊಂದಿತ್ತು. 6ಎಂಪಿ ಇಂಟರ್ನಲ್ ಸ್ಟೋರೇಜ್ ನ್ನು ಇದು ಒಳಗೊಂಡಿತ್ತು. ( ಹಿಗ್ಗಿಸಿಕೊಳ್ಳಲು ಅವಕಾಶವಿತ್ತು) .2.16 ಇಂಟಿನ ಟಿಎಫ್ ಟಿ ಡಿಸ್ಪ್ಲೇಯನ್ನು ಕೂಡ ಇದು ಹೊಂದಿತ್ತು.

ನೋಕಿಯಾ 9210 ಕಮ್ಯುನಿಕೇಟರ್

ನೋಕಿಯಾ 9210 ಕಮ್ಯುನಿಕೇಟರ್

ಇದು ನೋಕಿಯಾದ ನಿಜವಾದ ಚಿಹ್ನೆಯಾಗಿತ್ತು ಮತ್ತು ನೋಕಿಯಾ ಇಂಜಿನಿಯರ್ ಗಳ ಪರಾಕ್ರಮದ ಪ್ರತೀಕ ಆಗಿತ್ತು. ನೋಕಿಯಾ 9210 ಕಮ್ಯುನಿಕೇಟರ್ ಬ್ಯುಸಿನೆಸ್ ಕ್ಲಾಸ್ ಸ್ಮಾರ್ಟ್ ಫೋನನ್ ಆಗಿತ್ತು ಮತ್ತು ಲ್ಯಾಪ್ ಟಾಪ್ ನಂತ ಮಿನಿ ಕೀಬೋರ್ಡ್ ನ್ನು ಒಳಗೊಂಡು ಬಿಡುಗಡೆಗೊಂಡಿತು. 2000 ನೇ ಇಸವಿಯಲ್ಲಿ ಇದು ಬಿಡುಗಡೆಗೊಂಡಿತು ಮತ್ತು ಕಲರ್ ಸ್ಕ್ರೀನ್ ನ್ನು ಹೊಂದಿತ್ತು. ಫ್ಯಾಕ್ಸ್ ನ್ನು ಕಳುಹಿಸುವ ಮತ್ತು ಪಡೆದುಕೊಳ್ಳುವ ಸಾಮರ್ಥ್ಯವಿದ್ದ ಕೆಲವೇ ಕೆಲವು ಫೋನ್ ಗಳ ಪೈಕಿ ಇದು ಕೂಡ ಒಂದೆನಿಸಿದೆ. ಇದರಲ್ಲಿ ಇಂಟರ್ನೆಟ್ ಆಕ್ಸಿಸ್ ನಿಂದ ಹಿಡಿದು ಈಮೇಲ್ ಸೌಲಭ್ಯ ಮತ್ತು ಯುನಿಟ್ ಪರಿವರ್ತಕಗಳಿಂದ ಹಿಡಿದು ಮಡಚುವ ಆಂಟೆನಾದ ವರೆಗಿನ ಸೌಲಭ್ಯಗಳು ಇದರಲ್ಲಿ ಇತ್ತು.

ಮೋಟೋ RAZR V3

ಮೋಟೋ RAZR V3

ಒಂದು ಮೊಬೈಲ್ ಇದೆ, ಇದು ಸ್ಟೈಲ್ ನ ಪ್ರತೀಕವಾಗಿತ್ತು ಮತ್ತು ನಂತರದಲ್ಲಿ ಸಂವಹನಕ್ಕೆ ಹೆಚ್ಚು ಆದ್ಯತೆ ನೀಡುತ್ತಿತ್ತು. ಅದುವೇ ಮೋಟೋ RAZR V3. ಮೋಟರೋಲಾ ಸಂಸ್ಥೆ ಇದನ್ನು 2003 ರಲ್ಲಿ ಜಗತ್ತಿಗೆ ಪರಿಚಯಿಸಿತು. ಹೆಸರಿಗೆ ತಕ್ಕಂತೆ ಇದು ಸ್ಲೀಕ್ ಡಿಸೈನ್ ನ್ನು ಒಳಗೊಂಡಿತ್ತು. ಅಲ್ಯುಮಿನಿಯಂ ಹೊರಮೈ ಮತ್ತು ಗ್ಲಾಸ್ ಸ್ಕ್ರೀನ್ ನ್ನು ಇದು ಒಳಗೊಂಡಿತ್ತು

ಎರಿಕ್ಸನ್ ಟಿ28

ಎರಿಕ್ಸನ್ ಟಿ28

1999 ರಲ್ಲಿ ಬಿಡುಗಡೆಗೊಂಡ ಎರಿಕ್ಸನ್ ಟಿ28 ಫೋನ್ ಅತ್ಯಂತ ತೆಳುವಾಗಿರುವ ಫೋನ್ ಎಂಬ ಖ್ಯಾತಿಯನ್ನು ಆ ಕಾಲಕ್ಕೆ ಪಡೆದುಕೊಂಡಿತ್ತು. ಇದು 83 ಗ್ರಾಂ ತೂಕವಿತ್ತು. ಫೋನ್ ಎರಡು ಬ್ಯಾಂಡ್ ಜಿಎಸ್ಎಮ್ ಕಂಪ್ಯಾಟಿಬಲ್ ಆಗಿದೆ ಮತ್ತು ಸುಮಾರು 250 ಕಾಂಟ್ಯಾಕ್ಟ್ ಗಳನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿತ್ತು. ಕ್ಲಾಸಿಕ್ ಆಟ ಗಳಾಗಿದ್ದ ಟೆಟ್ರೀಸ್ ಮತ್ತು ಸೋಲಿಟಯರ್ ಗಳು ಆನ್ ಬೋರ್ಡ್ ನಲ್ಲಿದ್ದವು. ತನ್ನದೇ ಸಂಗ್ರಹದ ರಿಂಗ್ ಟೋನ್ ಗಳನ್ನು ಹೊರತು ಪಡಿಸಿ, ಬಳಕೆದಾರರು ತಮ್ಮದೇ ಸ್ವಂತ ರಿಂಗ್ ಟೋನ್ ಸೃಷ್ಟಿಸಲು ಇದು ಅವಕಾಶ ಕೊಟ್ಟ ಫೋನ್ ಆಗಿದೆ.

ಬ್ಲಾಕ್ ಬೆರ್ರಿ ಪರ್ಲ್ 8100

ಬ್ಲಾಕ್ ಬೆರ್ರಿ ಪರ್ಲ್ 8100

ಬ್ಲಾಕ್ ಬೆರ್ರಿ ಫೋನ್ ಗಳ ವೈಭವದ ದಿನಗಳು ಈಗ ಇಲ್ಲದೇ ಇದ್ದರೂ ಕೂಡ , ಒಂದು ಕಾಲದಲ್ಲಿ ಬ್ಲಾಕ್ ಬೆರ್ರಿ ಹ್ಯಾಂಡ್ ಸೆಟ್ ಗಳು ವ್ಯಾಪಾರಿ ವರ್ಗದ ಸಂವಹನ ಸಾಧನ ಯಾವುದು ಎಂಬುದನ್ನು ವ್ಯಾಖ್ಯಾನಿಸುವ ಬಹುದೊಡ್ಡ ಸಾಧನವಾಗಿತ್ತು ಅರ್ಥಾತ್ ಲೆವೆಲ್ ನ್ನು ವರ್ಗೀಕರಿಸಲು ಇದು ನೆರವಾಗಿತ್ತು.2006 ರಲ್ಲಿ ಬ್ಲಾಕ್ ಬೆರ್ರಿ ಪರ್ಲ್ 8100 ಬಿಡುಗಡೆಗೊಂಡಿತ್ತು. ಲ್ಯಾಟಾಪ್ ನ ಕೀರ್ಬೋಡ್ ನಂತಹ ಕೀಬೋರ್ಡ್, ಸಂಚರಣೆಗಾಗಿ ಒಂದು ಟ್ರ್ಯಾಕ್ ಬಾಲ್ ಇದರಲ್ಲಿತ್ತು. ಇದು 1.3 ಎಂಪಿ ಕ್ಯಾಮರಾ ಹೊಂದಿದ್ದ ಮೊದಲ ಬ್ಲಾಕ್ ಬೆರ್ರಿ ಫೋನ್ ಆಗಿದೆ. ಅಷ್ಟೇ ಅಲ್ಲ ಕಲರ್ ಸ್ಕ್ರೀನ್ ಮತ್ತು ಹಲವಾರು ಭದ್ರತಾ ವೈಶಿಷ್ಟ್ಯತೆಗಳಿದ್ದವು.

ನೋಕಿಯಾ ಎನ್-ಗೇಜ್

ನೋಕಿಯಾ ಎನ್-ಗೇಜ್

ಫಿನಿಶ್ ತಯಾರಕರ ಮತ್ತೊಂದು ಕ್ಲಾಸಿಕ್ ಫೋನ್ ಎಂದರೆ ಅದು ನೋಕಿಯಾ ಎನ್-ಗೇಜ್. ಪೋರ್ಟೇಬಲ್ ಗೇಮಿಂಗ್ ಇದ್ದ ವಿಶ್ವದ ಮೊದಲ ಫೋನ್ ಇದು.ಇದರಲ್ಲಿ ಕಿವಿಯ ಸಾಧನಗಳು ಇತ್ತು ಮತ್ತು ಮೈಕ್ರೋಫೋನ್ ನ್ನು ಫೋನಿನ ಬದಿಯಲ್ಲಿ ಅಳವಡಿಸಲಾಗಿತ್ತು(ಅದುವರಿಗೆ ಕೆಳಗೆ ಅಥವಾ ಮೇಲೆ ಅಳವಡಿಸಲಾಗುತ್ತಿತ್ತು). ಹೆಸರೇ ಸೂಚಿಸುವಂತೆ ಈ ಫೋನ್ ಗ್ರಾಹಕರನ್ನು ಅತೀ ಹೆಚ್ಚು ಸಮಯದವರೆಗೆ ಎಂಗೇಜ್ ಆಗಿ ಇಡುತ್ತಿತ್ತು.

ನೋಕಿಯಾ ಎನ್95

ನೋಕಿಯಾ ಎನ್95

2007 ರಲ್ಲಿ ಇದು ಬಿಡುಗಡೆಗೊಂಡಿದೆ. ಎನ್95 ನೋಕಿಯಾ ಫೋನ್ ಗಳಲ್ಲೇ ಅತ್ಯದ್ಭುತ ಎನಿಸಿದೆ. ಇದು Symbian S60 ಮತ್ತು ಅನನ್ಯವಾದ ಎರಡು ವೇ ಸ್ಲೈಡಿಂಗ್ ತಂತ್ರಗಾರಿಕೆಯನ್ನು ಇದು ಒಳಗೊಂಡಿತ್ತು ಮತ್ತು ಇದು ಸಂಖ್ಯೆಯ ಕೀ ಬೋರ್ಡ್ ಅಥವಾ ಪ್ಲೇಬ್ಯಾಕ್ ಬಟನ್ ಆಗಿ ಕೂಡ ವರ್ತಿಸಲು ನೆರವು ನೀಡುತ್ತಿತ್ತು.

5ಎಂಪಿ ಕ್ಯಾಮರಾ ಮಚ್ಚು ಬ್ಲೂಟೂತ್, ವೈ-ಫೈ ಇತ್ತು. ಈ ಫೋನ್ ನ್ನು ಮೊದಲ ಐಫೋನಿನ ಪ್ರತಿಸ್ಪರ್ಧಿ ಎಂದು ಕೂಡ ಪರಿಗಣಿಸಲಾಗಿತ್ತು.

ಸೋನಿ ಎರ್ರಿಕ್ಸನ್ ಕೆ750

ಸೋನಿ ಎರ್ರಿಕ್ಸನ್ ಕೆ750

ಹಿಂದನ ಜಮಾನದ ನೆನಪು ಮರುಕಳಿಸಿಕೊಳ್ಳುವುದಾದರೆ, ಸೋನಿ ಎರ್ರಿಕ್ಸನ್ ಅತ್ಯದ್ಭುತ ಕ್ಯಾಮರಾ ಮತ್ತು ಉತ್ತಮ ಆಡಿಯೋ ಕ್ವಾಲಿಟಿಯನ್ನು ಇಟ್ಟುಕೊಂಡು ಹೊರ ಬರುತ್ತಿದ್ದ ಫೋನ್ ಗಳು ಎನಿಸಿವೆ,

2005 ರಲ್ಲಿ ಕೆ750 ಬಿಡುಗಡೆಗೊಂಡಿತು, ಇದರಲ್ಲಿ ಕ್ಯಾಂಡಿಬಾರ್ ಸ್ಟೈಲಿನ ಫೋನ್ ಇದಾಗಿದ್ದು, ಕಂಪೆನಿಯು ನೇವಿಗೇಷನ್ ಗಾಗಿ ಜಾಯ್ ಸ್ಟಿಕ್ ನ್ನು ಬಳಸಲಾಯಿತು. ಫೋನಿನ ಬದಿಯಲ್ಲಿ ವಾಲ್ಯೂಮ್ ಕಂಟ್ರೋಲ್ ಬಟನ್ ಹೊಂದಿದ ಫೋನ್ ಗಳಿವು. ಕ್ಯಾಮರಾಕ್ಕೆ ಝೂಮ್ ಇನ್ ಮತ್ತು ಝೂಮ್ ಔಟ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬಂದ ಫೋನ್ ಗಳಿವು.

ಆಪಲ್ ಐಫೋನ್ 

ಆಪಲ್ ಐಫೋನ್ 

ಇದನ್ನು 2007 ರಲ್ಲಿ ಬಿಡುಗಡೆಗೊಳಿಸಿದ್ದು ಮತ್ತ್ಯಾರೂ ಅಲ್ಲ ಇಂದಿನ ಅತ್ಯಂತ ಪ್ರಸಿದ್ಧ ವ್ಯಕ್ತಿಯಾಗಿರುವ ಸ್ಟೀವ್ ಜಾಬ್ಸ್. ಆಫಲ್ ಐಫೋನ್ ಗಳು ಫೋನ್ ಗಳ ದುನಿಯಾದಲ್ಲಿ ಹೊಸ ಕ್ರಾಂತಿಗೆ ಕಾರಣವಾಯಿತು.ವಿಶ್ವದ ಎಲ್ಲಾ ಟಚ್ ಡಿವೈಸ್ ಗಳು ಆ ಕಾಲಕ್ಕೆ ಭವಿಷ್ಯದ ವೈಶಿಷ್ಟ್ಯತೆಗಳು ಎನಿಸಿದ್ದ ಆನ್-ಸ್ಕ್ರೀನ್ ಕೀಬೋರ್ಡ್, ಕ್ವಾಡ್-ಬ್ಯಾಂಡ್ ಜಿಎಸ್ಎಮ್ ಬೆಂಬಲ ಮತ್ತು ಅಕ್ಸೆಲೆರೊಮೀಟರ್, ಸಾಮೀಪ್ಯ ಸಂವೇದಕ ಮತ್ತು ಸುತ್ತುವರಿದ ಬೆಳಕಿನ ಸಂವೇದಕ ಇತ್ಯಾದಿ ಹಲವನ್ನು ಇದು ಒಳಗೊಂಡಿತ್ತು. ಲಕ್ಷಗಟ್ಟಲೆ ಆಪ್ ಸ್ಟೋರ್ ,ಐಫೋನ್ ಆ ಕಾಲಕ್ಕೆ ಫೋನ್ ದುನಿಯಾ ಹೊಸ ಅಧ್ಯಾಯಕ್ಕೆ ಕಾರಣವಾಯ್ತು. ಮತ್ತು ಅದು ಈಗ ಇತಿಹಾಸವಾಗಿದೆ.

ಹೆಚ್ ಟಿಸಿ ಡ್ರೀಮ್ 

ಹೆಚ್ ಟಿಸಿ ಡ್ರೀಮ್ 

ಹೆಚ್ ಟಿಸಿ ಫೋನ್ ಗಳು ಈಗ ಸಮಸ್ಯೆಯನ್ನು ಎದುರಿಸುತ್ತಿರಬಹುದು. ಆದರೆ ಒಂದಾನೊಂದು ಕಾಲದಲ್ಲಿ ಇದಕ್ಕೆ ಬಹಳ ಬೇಡಿಕೆ ಇತ್ತು. ಆಂಡ್ರಾಯ್ಡ್ ರನ್ ಆಗುವ ಮೊದಲ ಸ್ಮಾರ್ಟ್ ಫೋನ್ ವಾಣಿಜ್ಯಿಕವಾಗಿ ಬಿಡುಗಡೆಗೊಳಿಸಿದ್ದು ಹೆಚ್ ಟಿಸಿ.

ಇದರಲ್ಲಿ 192ಎಂಬಿ ಮೆಮೊರಿ ಮತ್ತು 256 ಎಂಪಿ ಇಂಟರ್ನಲ್ ಮೆಮೊರಿ ಇದೆ. ಆಂಡ್ರಾಯ್ಡ್ 1.6 ಡೊನಟ್ ಮುಖಾಂತರ ಇದು ರನ್ ಆಗುತ್ತದೆ ಮತ್ತು 1,150 mAh ನ ಬ್ಯಾಟರಿಯನ್ನು ಇದು ಒಳಗೊಂಡಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 

ಸ್ಯಾಮ್ ಸಂಗ್ ಅನ್ನೋ ಹೆಸರು ಪ್ರಸಿದ್ಧಿ ಗಳಿಸಿದ್ದೆ ಆಂಡ್ರಾಯ್ಡ್ ಫೋನ್ ಗಳ ಬಳಕೆಯಿಂದಾಗಿ. ಇತ್ತೀಚೆಗೆ ಬಿಡುಗಡೆಗೊಂಡ ನೋಟ್ 7ವರೆಗೂ ಕೂಡ ಇದು ಬೆಸ್ಟ್ ಡಿವೈಸ್ ಆಗಿದೆ. 2011 ರಲ್ಲಿ ಮೊದಲ ಬಾರಿಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ ಬಿಡುಗಡೆಗೊಂಡಿತು.

ಫ್ಯಾಬ್ಲೆಟ್ ಅನ್ನೋ ಪದ ಬಳಕೆಗೆ ಕಾರಣವಾಗಿದ್ದೇ ಈ ಫೋನ್. 5.3 ಇಂಚಿನ ಟಚ್ ಸ್ಕ್ರೀನ್ ಮತ್ತು ಸ್ಟೈಲಿಶ್ ಲುಕ್ ನ್ನು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ ಹೊಂದಿತ್ತು. ನೋಟ್ ಮುಖಾಂತರ ಸ್ಯಾಮ್ ಸಂಗ್ ದೊಡ್ಡ ಪರದೆಯ ಫೋನ್ ನ್ನು ಮಾರುಕಟ್ಟೆಗೆ ಪರಿಚಯಿಸಿತು. ಖಂಡಿತವಾಗಿಯೂ ಇದು ಬೆಲೆಗೆ ತಕ್ಕ ಫೋನ್ ಆಗಿತ್ತು. ಇವತ್ತಿನ ಸ್ಮಾರ್ಟ್ ಫೋನ್ ಗಳ ಗಾತ್ರವು ಇದೇ ಫೋನ್ ಗಳಿಂದ ಹುಟ್ಟಿದ್ದು ಎಂದರೆ ಅತಿಶಯೋಕ್ತಿ ಆಗಲಾರದು.

Best Mobiles in India

English summary
15 most popular mobile phones of all time. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X