Home
ಮೊಬೈಲ್

ಈ ಆಫರ್‌ ಬಿಡಬೇಡಿ! 15 ಸಾವಿರ ಅಗ್ಗ.. iPhone 16 ಬೆಲೆ ದೊಡ್ಡ ಕುಸಿತ.. ಖರೀದಿ ಎಲ್ಲಿ?

Discount on iPhone 16: ನೀವು ಐಫೋನ್ ಖರೀದಿಸಲು ಬಯಸಿದ್ದೀರಾ? ಹಾಗಿದ್ರೆ, ಈ ಹೊಸ ಐಫೋನ್ ಅನ್ನು ಅತ್ಯಂತ ಕಡಿಮೆ ದರದಲ್ಲಿ ಕೊಳ್ಳಬಹುದು. ಹೌದು, 65 ಸಾವಿರಕ್ಕಿಂತ ಕಡಿಮೆ ಬೆಲೆಗೆ ಐಫೋನ್ 16 (iPhone 16) ಮಾರಾಟವಾಗುತ್ತಿದೆ. ಇದನ್ನು 79,900 ರೂ.ಗೆ ಬಿಡುಗಡೆ ಮಾಡಲಾಗಿತ್ತು. ನೀವು ಈ ಮೊಬೈಲ್ ಖರೀದಿ ಮೇಲೆ 15 ಸಾವಿರ ರೂ. ಉಳಿತಾಯ ಮಾಡಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಮಾರಾಟದಲ್ಲಿ ಐಫೋನ್ 16 ಕಡಿಮೆ ಬೆಲೆಗೆ ಲಭ್ಯವಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಐಫೋನ್ 16 ಫೋನ್ 48 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದರಲ್ಲಿ 6.1 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಇದು ಆಪಲ್‌ನ A18 ಬಯೋನಿಕ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಜೊತೆಗೆ 512GB ಸ್ಟೋರೇಜ್‌, 3561mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಐಫೋನ್ ಕಳೆದ ವರ್ಷ ಬಿಡುಗಡೆಯಾಗಿತ್ತು. ಪ್ರಸ್ತುತ, ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ 2025 (Flipkart Republic Sale 2025) ನಡೆಯುತ್ತಿದೆ. ಈ ಸೇಲ್‌ನಲ್ಲಿ ಭರ್ಜರಿ ಡಿಸ್ಕೌಂಟ್ ಲಭ್ಯವಿದೆ.

15 ಸಾವಿರ ಅಗ್ಗ! iPhone 16 ಬೆಲೆ ದೊಡ್ಡ ಕುಸಿತ.. ಈ ಆಫರ್‌ ಬಿಡಬೇಡಿ!

ಐಫೋನ್ 16 ಹೊಸ ಬೆಲೆ ಮತ್ತು ಆಫರ್‌

ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 16 ಅನ್ನು ರಿಯಾಯಿತಿಯೊಂದಿಗೆ 63,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಕಂಪನಿಯು 2,000 ರೂ.ಗಳ ಕೂಪನ್ ನೀಡುತ್ತಿದೆ. ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮೇಲೆ 3,000 ರಿಯಾಯಿತಿ ಲಭ್ಯವಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಇಎಂಐ ಮಾಡಿದರೆ, 3500 ರೂ. ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ಯುಪಿಐ ಪಾವತಿ ಮಾಡಿದರೆ 1,000 ರೂ. ರಿಯಾಯಿತಿ ಸಹ ನೀಡಲಾಗುತ್ತದೆ. ಈ ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ ಸ್ಮಾರಕ ಜನವರಿ 19 ರವರೆಗೆ ನಡೆಯಲಿದೆ.

ಐಫೋನ್ 16 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಐಫೋನ್ 16 ಮೊಬೈಲ್ 6.1 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು ಡೈನಾಮಿಕ್ ಐಲ್ಯಾಂಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್, HDR10 ಮತ್ತು ಡಾಲ್ಬಿ ವಿಷನ್ ಬೆಂಬಲ ಪಡೆದಿದೆ. ಇದು ಸೂಪರ್ ರೆಟಿನಾ XDR ಓಎಲ್‌ಇಡಿ ಪ್ಯಾನಲ್ ಹೊಂದಿದೆ. ಈ ಫೋನಿನ ಡಿಸ್ಪ್ಲೇ ಸೆರಾಮಿಕ್ ಶೀಲ್ಡ್ ಗಾಜಿನ ರಕ್ಷಣೆ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ಐಫೋನ್ 16 ಸ್ಮಾರ್ಟ್‌ಫೋನ್ ಆಪಲ್‌ನ A18 ಬಯೋನಿಕ್ ಪ್ರೊಸೆಸರ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ iOS 18 ನೊಂದಿಗೆ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಈ ಫೋನಿನ ಮೂಲ ರೂಪಾಂತರವು 128GB ಮತ್ತು ಟಾಪ್ ವೇರಿಯಂಟ್ ರೂಪಾಂತರವು 512GB ಸ್ಟೋರೇಜ್‌ ಹೊಂದಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್

ಐಫೋನ್ 16 ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಟ್ರೂ ಟೋನ್ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಈ ಫೋನಿನಲ್ಲಿ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 12 ಮೆಗಾಪಿಕ್ಸೆಲ್ 2X ಟೆಲಿಫೋಟೋ ಲೆನ್ಸ್ ಹೊಂದಿದೆ. ಈ ಮೊಬೈಲ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ. ಐಫೋನ್ 16 ಹೊಸ ಕ್ಯಾಮೆರಾ ನಿಯಂತ್ರಣ ಬಟನ್ ಸಹ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಐಫೋನ್ 16 ಮೊಬೈಲ್ 3561mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು ಯುಎಸ್‌ಬಿ ಟೈಪ್ ಸಿ ಪೋರ್ಟ್ ಇದೆ. 25W ವೈರ್‌ಲೆಸ್ ಚಾರ್ಜಿಂಗ್ ಮತ್ತು 15W Qi ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಸಹ ಒದಗಿಸಲಾಗಿದೆ.

Best Mobiles in India

English summary
15000 discount on iPhone 16 price in flipkart sale: know offer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+