Subscribe to Gizbot

ಈ ಹೊಸ ಕಾರ್ಬನ್ ಮೊಬೈಲ್ ಸೂಪರ್!

Posted By: Super

ಈ ಹೊಸ ಕಾರ್ಬನ್ ಮೊಬೈಲ್ ಸೂಪರ್!
ಈಗ ಮಾರುಕಟ್ಟೆಯಲ್ಲಿ ಡ್ಯುಯಲ್ ಸಿಮ್ ಮೊಬೈಲ್ ಗಳು ಹೊಸದೇನಲ್ಲ, ಸಾಕಷ್ಟಿವೆ. ಇದಕ್ಕೆ ಬೇಡಿಕೆಯೂ ಸಾಕಷ್ಟಿದೆ. ಈಗ ಹೊಸ ವಿಷಯ ಏನಂದ್ರೆ ಡ್ಯುಯಲ್ ಸಿಮ್ ಜೊತೆ ಸ್ಲೈಡರ್ ಹಾಗೂ ಆಧುನಿಕತೆ ಹೊಂದಿರುವ ಫೊನ್. ಇಂತಹ ಫೋನಿಗಾಗಿ ಕಾದು ಕುಳಿತಿದ್ದವರಿಗೆ ಇಲ್ಲಿದೆ ಸಂತೋಷದ ಸುದ್ದಿ. ಇದೀಗ ಬರುತ್ತಿದೆ, ಕಾರ್ಬನ್ K33 ಎಂಬ ಹೊಸ ಫೊನ್.

ಈ ಹೊಸ ಫೋನಿನಲ್ಲಿ 2.4 ಇಂಚುಗಳ ಸ್ಕ್ರೀನ್, WVGA TFT ತಂತ್ರಜ್ಞಾನ, ುತ್ತಮ ಸ್ಕ್ರೀನ್ ರೆಸೊಲ್ಯೂಷನ್ ಎಲ್ಲವೂ ಇದೆ.
2 ಮೆಗಾ ಪಿಕ್ಸೆಲ್ ಕ್ಯಾಮೆರಾ, ಇಮೇಜ್ ಕ್ಯಾಪ್ಚರಿಂಗ್ ಮತ್ತು ಡಿಜಿಟಲ್ ಝೂಮ್ ಸೌಲಭ್ಯ ಇದೆ. 3.5 mm ಆಡಿಯೋ ಜ್ಯಾಕ್, 8 GB ಮೆಮೊರಿ, 1000 mAh ಲೈನ್ ಬ್ಯಾಟರಿ, 4 ತಾಸುಗಳ ಟಾಕ್ ಟೈಮ್ ಮತ್ತು 300 ತಾಸುಗಳ ಸ್ಟ್ಯಾಂಡ್ ಬೈ ಲಭ್ಯವಿದೆ.

ಆಧುನಿಕ ಬ್ಲೂಟೂಥ್ ಮತ್ತು USB ಪೋರ್ಟ್ ಮಲ್ಟಿಮೀಡಿಯಾ ಕಡೆ ಸಮರ್ಥವಾಗಿ ಕಾರ್ಯನಿರ್ವಹಿಸಲಿವೆ. ಇದು ಸಾಕಷ್ಟು ಕಡಿಮೆ ಬೆಲೆಯ ಫೋನಾಗಿದ್ದರೂ ಫಿಚರ್ಸ್ ನಲ್ಲಿ ವಿಶೇಷವಾಗಿಯೇ ಇದೆ. ಈ ತಿಂಗಳ ಕೊನೆಗೆ ಭಾರತದ ಮಾರುಕಟ್ಟೆಗೆ ಕಾಲಿಡಲಿರುವ ಇದರ ಬೆಲೆ ರು. 4,000.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot