ಹೊಸ ಐಫೋನ್‌ನಲ್ಲಿ ಬರಲಿದೆ ವೇಗದ ವೈರ್‌ಲೆಸ್‌ ಚಾರ್ಜರ್‌..!

By GizBot Bureau
|

ಪ್ರತಿ ಬಾರಿಯೂ ಯಾವುದಾರರು ಹೊಸ ಆಯ್ಕೆಗಳನ್ನು ಬಳಕೆದಾರರಿಗೆ ನೀಡುವ ಆಪಲ್ ಈ ಬಾರಿ 2018ರಲ್ಲಿ ಹೊಸದಾಗಿ ಕಾಣಿಸಿಕೊಳ್ಳಲಿರುವ ಐಫೋನಿನಲ್ಲಿಯೂ ಹೊಸ ಮಾದರಿಯ ಹಲವು ಆಯ್ಕೆಗಳನ್ನು ನೀಡಲಿದೆ ಎನ್ನುವ ಮಾಹಿತಿಯೂ ಲೀಕ್ ಆಗಿದೆ. ಪ್ರತಿ ಬಾರಿಯೂ ಹೊಸ ಮಾದರಿಯ ಯಾವುದಾದರು ಒಂದು ಆಯ್ಕೆಯನ್ನು ನೀಡುವ ಆಪಲ್, ಈ ಬಾರಿ ಫಾಸ್ಟ್ ವೈರ್ ಲೈಸ್ ಚಾರ್ಜಿಂಗ್ ಟೆಕ್ನಾಲಜಿಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಇದು ಬಳಕೆದಾರರಿಗೆ ದೊಡ್ಡ ಮಾದರಿಯಲ್ಲಿ ಸಹಾಯವನ್ನು ಮಾಡಲಿದೆ. ಐಫೋನ್ ಚಾರ್ಜ್ ಮಾಡುವ ವಿಧಾನವನ್ನು ಇದು ಬದಲಾಯಿಸಲಿದೆ.

ಹೊಸ ಐಫೋನ್‌ನಲ್ಲಿ ಬರಲಿದೆ ವೇಗದ ವೈರ್‌ಲೆಸ್‌ ಚಾರ್ಜರ್‌..!

ಈಗಾಗಲೇ ಮಾರುಕಟ್ಟೆಯಲ್ಲಿ ಆಪಲ್ ವೈರ್ ಲೈಸ್ ಚಾರ್ಜರ್ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದೆ. ಐಫೋನ್ X ಸೇರಿದಂತೆ ಹಲವು ಐಫೋನ್ ಗಳು ಇದಕ್ಕೆ ಸಪೋರ್ಟ್ ಮಾಡಲಿದೆ. ಅದೇ ಮಾದರಿಯಲ್ಲಿ ಈ ಬಾರಿ ಆಪಲ್ ಫಾಸ್ಟ್ ವೈರ್ ಲೈಸ್ ಚಾರ್ಜರ್ ಅನ್ನು ಅಭಿವೃದ್ಧಿಯನ್ನು ಪಡಿಸಿದೆ ಎನ್ನಲಾಗಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲಿದೆ. ಇದರಿಂದಾಗಿ ಇನ್ನು ಮುಂದೆ ಐಫೋನ್ ಅನ್ನು ವೈರ್ ನಿಂದ ಚಾರ್ಜ್ ಮಾಡುವ ಕಾಲವು ಬದಲಾಗಲಿದೆ.

ಮೊದಲ ಬಾರಿಗೆ ವೈರ್ ಲೈಸ್ ಚಾರ್ಜರ್ ಅನ್ನು ಅಭಿವೃದ್ಧಿ ಪಡಿಸಿದ ಆಪಲ್, ಈ ಬಾರಿ ಹೊಸದಾಗಿ ಫಾಸ್ಟ್ ವೈರ್ ಲೈಸ್ ಚಾರ್ಜರ್ ಅನ್ನು ಅಭಿವೃದ್ಧಿ ಪಡಿಸಿದೆ. ಇದು ಹೊಸ ಐಫೋನ್ ಮಾಡಲ್ ನೊಂದಿಗೆ ಮಾರಾಟವಾಗಲಿದೆ. ಈ ಹೊಸ ಮಾದರಿಯ ಟೆಕ್ನಾಲಜಿಯಿಂದಾಗಿ ಐಫೋನ್ ಇನ್ನು ವೇಗವಾಗಿ ಚಾರ್ಜ್ ಆಗಲಿದೆ ಎನ್ನಲಾಗಿದೆ.

ಹೊಸ ಐಫೋನ್‌ನಲ್ಲಿ ಬರಲಿದೆ ವೇಗದ ವೈರ್‌ಲೆಸ್‌ ಚಾರ್ಜರ್‌..!

FPC ತಂತ್ರಜ್ಞಾನವನ್ನು ಇದರಲ್ಲಿ ನೀಡಲಾಗಿದೆ. ಇದರ ಸಹಾಯದಿಂದಾಗಿ ಐಫೋನ್ ಮತ್ತು ಚಾರ್ಜರ್ ನಡುವೆ ಹೆಚ್ಚಿನ ಪ್ರಮಾಣದಲ್ಲಿ ಸಂಪರ್ಕವೂ ಸಾದ್ಯವಾಗಲಿದೆ. ಇದರಿಂದಾಗಿ ವೇಗವಾಗಿ ಐಫೋನ್ ಚಾರ್ಜ್ ಆಗಲಿದೆ. ಇದಕ್ಕಾಗಿಯೇ Qi ಚಾರ್ಜರ್ ಅನ್ನು ನೀಡಿದೆ. ಇದು ಕಾಪರ್ ವೈರ್ ಮತ್ತು ಕಾಯಿಯಲ್ ಅನ್ನು ತೋರಿಸಿಕೊಡಲಿದೆ.

ಮುಂದಿನ ತಿಂಗಳುಗಳಲ್ಲಿ ಕಾಣಿಸಿಕೊಳ್ಳಲಿರುವ ಐಪೋನ್ X ಪ್ಲಸ್ ಹೊಸ ಮಾದರಿಯಲ್ಲಿ ವಿನ್ಯಾಸವನ್ನು ಹೊಂದಿದೆ. ಈ ಬಾರಿ ವೇಗವಾಗಿ ಚಾರ್ಜ್ ಮಾಡಿದರೂ ಫೋನ್ ಬಿಸಿಯಾಗದಂತೆ ಮಾಡಲಿದೆ. ಇದು ಬಾರಿಯ ಐಫೋನಿನ USPಯಾದರು ವಿಶೇಷತೆ ಎನ್ನಲಾಗಿದೆ. ಇದು ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಲಿದೆ.

Best Mobiles in India

English summary
2018 iPhones Will Come With This New Faster Wireless Charging Tech. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X