Home
ಮೊಬೈಲ್

ದುಬಾರಿ ಬೆಲೆಯ ಚಿನ್ನದ ಐಫೋನ್‌ ಬೆಲೆ ಎಷ್ಟು?

ಬಳಕೆದಾರರ ಪ್ರಯೋಜನಕ್ಕಾಗಿ ಕಸ್ಟಮೈಸ್ ವಿಧಾನದಲ್ಲಿ ಫೋನ್ ಬಂದಿದ್ದು ಗೋಲ್ಡ್‌ಜೆನಿ ಈಗಾಗಲೇ ಐಫೋನ್‌ಗಾಗಿ ಪ್ರಿಆರ್ಡರ್‌ಗಳನ್ನು ಸ್ವೀಕರಿಸುತ್ತಿದೆ.

By Shwetha Ps

ಸಪ್ಟೆಂಬರ್ 12 ರಂದು ಈ ಆಪಲ್ ಮೂರು ಫೋನ್ ಗಳನ್ನು ಲಾಂಚ್ ಮಾಡಿದ್ದು, ಬಳಕೆದಾರರ ಪ್ರಯೋಜನಕ್ಕಾಗಿ ಕಸ್ಟಮೈಸ್ ವಿಧಾನದಲ್ಲಿ ಫೋನ್ ಬಂದಿದ್ದು ಗೋಲ್ಡ್‌ಜೆನಿ ಈಗಾಗಲೇ ಐಫೋನ್‌ಗಾಗಿ ಪ್ರಿಆರ್ಡರ್‌ಗಳನ್ನು ಸ್ವೀಕರಿಸುತ್ತಿದೆ. ನೀವು ಈ ಮೂಲಕ 24 ಕೆ ಗೋಲ್ಡ್, ಪ್ಲಾಟಿನಂ, ರೋಸ್ ಗೋಲ್ಡ್ ಮತ್ತು ಡೈಮಂಡ್ ಆವೃತ್ತಿಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ.

ದುಬಾರಿ ಬೆಲೆಯ ಚಿನ್ನದ ಐಫೋನ್‌ ಬೆಲೆ ಎಷ್ಟು?

ಈ ಐಫೋನ್‌ನ ಬೆಲೆ ಇನ್ನೂ ತಿಳಿದು ಬಂದಿಲ್ಲ ಆದರೆ ಹಿಂದಿನ ಐಫೋನ್ ಬೆಲೆ $20,000 ಆಗಿತ್ತು. ಅಂತೆಯೇ ನಾವು ಐಫೋನ್ 8 ನ ಕಸ್ಟಮೈಸ್‌ಡ್ ಆವೃತ್ತಿಯನ್ನು ಕಂಡುಕೊಳ್ಳಬಹುದಾಗಿದೆ. ಈ ದುಬಾರಿ ಐಫೋನ್ ಅನ್ನು ಪ್ರಿ ಆರ್ಡರ್ ಮಾಡಿಕೊಳ್ಳುವವರು 50%ಡಿಪಾಸಿಟ್ ಮಾಡಿ ಫೋನ್‌ ಭದ್ರತೆಯನ್ನು ಮಾಡಿಕೊಳ್ಳಬೇಕಿದೆ.

ಗೋಲ್ಡ್‌ಜಿನಿ ಐಫೋನ್ 8 ಗಾಗಿ ದುಬಾರಿ ಪರಿಕರಗಳನ್ನು ಬೇರೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು ಸ್ವರೋಸ್ಕಿ ಕ್ರಿಸ್ಟಲ್ ಅನ್ನು ಬಳಸಿದೆ. ಆಪಲ್ ಲೋಗೋಗಳಲ್ಲಿ ಈ ಬಗೆಯ ಸಾಮಾಗ್ರಿಗಳನ್ನು ಬಳಸಲಾಗುತ್ತದೆ. ನಿಮಗೆ ಈ ಮಾದರಿಯ ಪ್ಲೇಟಿಂಗ್ ಬೇಡ ಎಂದಾದಲ್ಲಿ ಗೋಲ್ಡ್‌ಜಿನಿ ಫೋನ್‌ನಿಂದ ಇದನ್ನು ಮಾರ್ಪಡಿಸಿ 18 ಕೆ ಗೋಲ್ಡ್ ಪ್ಲೇಟಿಂಗ್ ಅನ್ನು ಮಾಡುತ್ತದೆ.

ಗೋಲ್ಡ್‌ಜಿನಿ ದುಬಾರಿ ಕಸ್ಟಮೈಸೇಶನ್ ವ್ಯಾಪಾರಕ್ಕೆ ಹೊಸತಾಗಿದೆ. ಈ ಹಿಂದೆ ಲಾಂಚ್ ಆದ ಬೇರೆ ಬೇರೆ ಬಣ್ಣದ ಐಫೋನ್‌ಗಳನ್ನು ಕಂಪನಿ ವೆಬ್‌ಸೈಟ್ ಪಟ್ಟಿ ಮಾಡಿದೆ. ಇದು ಐಫೋನ್ 8, ಐಫೋನ್ 7ಎಸ್ ಮತ್ತು ಐಫೋನ್ 7 ಎಸ್ ಪ್ಲಸ್ ಅನ್ನು ಕಸ್ಟಮೈಸ್ ಮಾಡಲಿದ್ದು ಪ್ರಿಆರ್ಡರ್ ಸಪ್ಟೆಂಬರ್ 15 ರಿಂದ ಆರಂಭಗೊಳ್ಳಲಿದೆ ಮತ್ತು ಮಾರಾಟ ಸಪ್ಟೆಂಬರ್ 22 ರಿಂದ ಆರಂಭವಾಗಲಿದೆ.

Best Mobiles in India

English summary
The expensive variants of iPhone 8 customized by Goldgenie are already up for pre-order on the company’s website.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+