ಈ ಅಪರೂಪದ ಮೊಬೈಲ್‌ ಫೋನ್‌ಗಳ ಹೆಸರುಗಳನ್ನು ಖಂಡಿತ ನೀವು ಕೇಳಿರಲ್ಲ..!

  By Avinash
  |

  ಹೆಸರಿನಲ್ಲಿ ಏನಿದೆ? ಎಂದರೆ ಹೌದು ಹೆಸರಿನಲ್ಲಿದೆ.. ನಮ್ಮ ನಿಮ್ಮೆಲ್ಲರನ್ನು ಗುರುತಿಸುವುದು ಹೆಸರಿನಿಂದಲೇ ಎಂಬುದನ್ನು ಮರೆಯುವಂತಿಲ್ಲ. ಯಾವುದೇ ಕ್ಷೇತ್ರದಲ್ಲಾಗಲಿ, ಮನುಷ್ಯ ಆಗಲಿ, ಉತ್ಪನ್ನಗಳಾಗಲಿ ಹೆಸರೇ ಪ್ರಮುಖ. ಜನರನ್ನು ತಲುಪುವ, ಜನರನ್ನು ಆಕರ್ಷಿಸುವ ಹೆಸರುಗಳು ಬೇಕು. ಅದಕ್ಕಾಗಿಯೇ ಟೆಕ್‌ ಲೋಕದಲ್ಲೂ ಕೂಡ ಹೆಸರಿಡುವಾಗ ಅನೇಕ ಪ್ರಯೋಗಗಳು ಆಗಿವೆ.

  ಈ ಅಪರೂಪದ ಮೊಬೈಲ್‌ ಫೋನ್‌ಗಳ ಹೆಸರುಗಳನ್ನು ಖಂಡಿತ ನೀವು ಕೇಳಿರಲ್ಲ..!

  ಹೌದು ಸ್ಮಾರ್ಟ್‌ಫೋನ್‌ ಲೋಕದಲ್ಲಿ ದಿನಕ್ಕೊಂದರಂತೆ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿರುತ್ತಲೆ ಇರುತ್ತವೆ. ಜನ ಅವುಗಳನ್ನು ನೆನಪಿಟ್ಟುಕೊಳ್ಳುವುದು ಹೆಸರಿನಿಂದಲೇ ಎಂಬುದಂತೂ ಸತ್ಯ. ಅದಕ್ಕಾಗಿಯೇ ಸ್ಮಾರ್ಟ್‌ಫೋನ್ ಕಂಪನಿಗಳು ಸಹ ತಮ್ಮ ಮೊಬೈಲ್‌ಗಳಿಗೆ ಜನರು ನೆನಪಿಟ್ಟುಕೊಳ್ಳುವ ಹೆಸರುಗಳನ್ನು ಇಡಲು ಪ್ರಯತ್ನಿಸುತ್ತಾರೆ. ಆದರೆ, ಸ್ಮಾರ್ಟ್‌ಫೋನ್‌ ಕಂಪನಿಗಳು ಅನೇಕ ಸಲ ಅಪರೂಪದ ಹೆಸರುಗಳನ್ನು ತಮ್ಮ ಉತ್ಪನ್ನಗಳಿಗೆ ಇಟ್ಟಿವೆ.

  ಅವುಗಳು ಜನರಿಗೆ ಹತ್ತಿರವಾಗಿದ್ದರೂ ಯಶಸ್ವಿ ಉತ್ಪನ್ನವಂತೂ ಆಗಿಲ್ಲ ಎನ್ನಬಹುದು. ಅಂತಹ 25 ಅಪರೂಪದ ಹೆಸರುಗಳನ್ನು ಹೊಂದಿದ ಮೊಬೈಲ್‌ಗಳನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸೋನಿ ಎರಿಕ್ಸನ್ ಲೈವ್ ವಿತ್ ವಾಕ್‌ಮ್ಯಾನ್‌ Sony Ericsson Live With Walkman

  2011ರಲ್ಲಿ ಬಿಡುಗಡೆಯಾದ ಈ ಫೋನ್‌ ಹೆಸರು ಸ್ಮಾರ್ಟ್‌ಫೋನ್‌ ಎನ್ನುವುದಕ್ಕಿಂತ ಸಂಗೀತ ಕಛೇರಿಯ ಹೆಸರು ಕೇಳಿದಂತೆ ಆಗುತ್ತದೆ.

  ಹೆಚ್‌ಟಿಸಿ ಚಾಚಾ HTC ChaCha

  ಚಾಚಾ ಎನ್ನುವುದು ನೃತ್ಯರೂಪಕದ ಒಂದು ವಿಧವಾಗಿದೆ. 2011ರಲ್ಲಿ ಹೆಚ್‌ಟಿಸಿ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್‌ ನೃತ್ಯದ ಹೆಸರು ಪಡೆದುಕೊಂಡಿತು. ಯಾಕಂದ್ರೇ ನಿಜ ಗೊತ್ತಿಲ್ಲ.

  ಹೆಚ್‌ಟಿಸಿ HTC Salsa

  ಸ್ಮಾರ್ಟ್‌ಫೋನ್‌ಗೆ ಚಾಚಾ ನೃತ್ಯ ರೂಪಕದ ಹೆಸರಿಟ್ಟ ಹೆಚ್‌ಟಿಸಿ ಮತ್ತೊಂದು ಫೋನ್‌ಗೆ ಸಾಲ್ಸಾ ಎಂಬ ನೃತ್ಯದ ಹೆಸರಿಟ್ಟು ಸರಣಿಯನ್ನು ಮುಂದುವರೆಸಿತು. ಇದು ಸಹ 2011ರಲ್ಲಿ ಬಿಡುಗಡೆಯಾಗಿದೆ. ಅಂದಿನ ಸಮಯದಲ್ಲಿ ಹೆಚ್‌ಟಿಸಿ ಕಂಪನಿಯಲ್ಲಿ ಯಾರೋ ಡ್ಯಾನ್ಸ್‌ ಪ್ರೇಮಿ ಈ ಹೆಸರುಗಳನ್ನು ಇಟ್ಟಿರಬಹುದು.

  ಸ್ಯಾಮ್‌ಸಂಗ್ ಮೆಸೆಜರ್ Samsung Messager

  2010ರಲ್ಲಿ ಸ್ಯಾಮ್‌ಸಂಗ್‌ ಕಂಪನಿ ಬಿಡುಗಡೆ ಮಾಡಿದ ಫೋನ್‌ ಹೆಸರು ಮೆಸೆಜರ್. ಅಂದರೆ ಈ ಮೊಬೈಲ್ ಕರೆ ಮಾಡುವುದುಕ್ಕೆ ಉಪಯೋಗಿಸಲು ಆಗುವುದಿಲ್ವಾ ಅಂತ ಪ್ರಶ್ನೆ ಹುಟ್ಟಬಹುದು. ಆದರೆ, ಸ್ಯಾಮ್‌ಸಂಗ್‌ ತಲೆಯಲ್ಲಿ ಏನು ಒಡುತ್ತಿತ್ತೋ ಅವತ್ತು.

  ಎಲ್‌ಜಿ ಚಾಕೋಲೆಟ್ LG Chocolate

  ಚಾಕೋಲೆಟ್‌ ಎಂದರೆ ಯಾರಿಗ್ ತಾನೇ ಇಷ್ಟವಿಲ್ಲ ಹೇಳಿ ಅದಕ್ಕಾಗಿಯೇ ಎಲ್‌ಜಿ ಕಂಪನಿ ತಾನು 2009ರಲ್ಲಿ ಬಿಡುಗಡೆ ಮಾಡಿದ ಮೊಬೈಲ್‌ಗೆ ಚಾಕೋಲೆಟ್‌ ಹೆಸರಿಟ್ಟಿದ್ದು.

  ಮೊಟೋರೋಲಾ ಸಿಟ್ರಸ್ Motorola Citrus

  ಮೊಟೋರೋಲಾದಲ್ಲಿ ಯಾರೋ ಕಿತ್ತಳೆ ಹಣ್ಣಿನ ಪ್ರೇಮಿ ಇದ್ದರೇನೋ. ಅದಕ್ಕೆ 2010ರಲ್ಲಿ ಮೊಟೋರೋಲಾ ಬಿಡುಗಡೆ ಮಾಡಿದ ಮೊಬೈಲ್‌ಗೆ ಸಿಟ್ರಸ್‌ ಎಂದು ಹೆಸರಿಟ್ಟರು.

  ಎಲ್‌ಜಿ ಫ್ಯೂಸಿಕ್ LG Fusic

  ಎಲ್‌ಜಿ 2006ರಲ್ಲಿ ಬಿಡುಗಡೆ ಮಾಡಿದ ಮೊಬೈಲ್‌ಗೆ ಸಂಗೀತದ ವಿಧವಾದ ಫ್ಯೂಸಿನ್‌ ರೂಪದ ಫ್ಯೂಸಿಕ್‌ ಎಂಬ ಹೆಸರಿಟ್ಟಿತು.

  ಒನ್‌ಪ್ಲಸ್ ಒನ್ OnePlus One

  ಪ್ರಸ್ತುತ ದೊಡ್ಡ ಬ್ರಾಂಡ್ ಆಗಿರುವ ಒನ್‌ಪ್ಲಸ್ 2014ರಲ್ಲಿ ತನ್ನ ಸ್ಮಾರ್ಟ್‌ಫೋನ್‌ಗೆ ಒನ್‌ಪ್ಲಸ್‌ ಒನ್ ಎಂದು ಹೆಸರಿಟ್ಟಿತ್ತು.

  ಸ್ಯಾಮ್‌ಸಂಗ್‌ ಮಿಥೀಕ್ Samsung Mythic

  2009ರಲ್ಲಿ ಬಿಡುಗಡೆಯಾದ ಈ ಮೊಬೈಲ್‌ ಹೆಸರೇ ಮಿಥೀಕ್ ಅಂದರೆ ಪುರಾಣ, ಅದಕ್ಕೆ ಬಹಳಷ್ಟು ಜನ ಈ ಸ್ಮಾರ್ಟ್‌ಫೋನ್‌ ನಿಜವಾಗಲೂ ಇತ್ತಾ? ಎಂಬ ಪ್ರಶ್ನೆಯನ್ನು ಸ್ಯಾಮ್‌ಸಂಗ್‌ಗೆ ಕೇಳುತ್ತಾರೆ.

  ಮೊಟೋರೊಲಾ ಕರ್ಮ ಕ್ಯೂಎ1 Motorola Karma QA1

  2009ರಲ್ಲಿ ಮೊಟೋರೋಲಾ ಬಿಡುಗಡೆ ಮಾಡಿದ ಫೋನ್‌ಗೆ ಕರ್ಮ ಎಂದು ಹೆಸರಟ್ಟಿತ್ತು. ಕರ್ಮ ಎಂದರೆ ಏನೆಂಬುದನ್ನು ನಾವೇನೂ ಹೇಳಬೇಕಾಗಿಲ್ಲ ಆಲ್ವಾ. ಮೊಟೋರೋಲಾ ಈ ಹೆಸರನ್ನು ಆಯ್ಕೆ ಮಾಡಿದ್ದಾದರೂ ಏಕೆ?

  ಹೆಚ್‌ಪಿ ವೀರ್ 4G HP Veer 4G

  ಹೆಚ್‌ಪಿ ಕಂಪನಿಯು 2011ರಲ್ಲಿ ಬಿಡುಗಡೆ ಮಾಡಿದ ತನ್ನ ಸ್ಮಾರ್ಟ್‌ಫೋನ್‌ಗೆ ವೀರ್‌ ಎಂದು ಹೆಸರಿಟ್ಟಿತ್ತು. ವೀರ್ ಅರ್ಥ ನಿಮಗೆ ಗೊತ್ತೆ ಇದೆ. ಆದರೆ, ಈ ಫೋನ್ ಹೆಸರು ಇಂದಿಗೂ ಕೇಳದವರೇ ಹೆಚ್ಚು.

  ಸ್ಯಾಮ್‌ಸಂಗ್ ಬ್ರೈಟ್‌ಸೈಡ್‌ Samsung Brightside

  2011ರಲ್ಲಿ ಸ್ಯಾಮ್‌ಸಂಗ್‌ ಕಂಪನಿ ಬಿಡುಗಡೆ ಮಾಡಿದ ತನ್ನ ಸ್ಮಾರ್ಟ್‌ಫೋನ್‌ಗೆ ಬ್ರೈಟ್‌ಸೈಡ್ ಎಂದು ಹೆಸರಿಟ್ಟಿತ್ತು. ಅಂದು ಸ್ಯಾಮ್‌ಸಂಗ್ ಆಶಾವಾದಿ ಮನಸ್ಥಿತಿಯಲ್ಲಿ ಇತ್ತು ಎಂದು ಕಾಣುತ್ತದೆ.

  ಮೈಕ್ರೋಸಾಫ್ಟ್‌ ಕಿನ್ ಒನ್ Microsoft Kin One

  ಮೈಕ್ರೋಸಾಫ್ಟ್‌ 2010ರಲ್ಲಿ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್‌ಗೆ ಕಿನ್ ಒನ್ ಎಂದು ಕರೆದಿತ್ತು. ಇದರ ಜತೆ ಕಿನ್ ಟೂ ಎಂಬ ಹೆಸರಿನ ಮತ್ತೊಂದು ಸ್ಮಾರ್ಟ್‌ಫೋನ್‌ನ್ನು ಸಹ ಮೈಕ್ರೋಸಾಫ್ಟ್‌ ಬಿಡುಗಡೆ ಮಾಡಿತ್ತು.

  ಎಲ್‌ಜಿಎಲಿ.ಜೆಪಿಜಿ LGAlly.jpg

  ಇದು ಯಾವುದೋ ಪೋಟೋ ಫೈಲ್‌ ನೇಮ್ ಅಲ್ಲ. ಬದಲಾಗಿ 2010ರಲ್ಲಿ ಎಲ್‌ಜಿ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್‌.

  ಸ್ಯಾಮ್‌ಸಂಗ್‌ ರ್ಯಾಂಟ್ Samsung Rant

  ಸ್ಯಾಮ್‌ಸಂಗ್ ಕಂಪನಿಯು 2008ರಲ್ಲಿ ಬಿಡುಗಡೆ ಮಾಡಿದ ಸ್ಲೈಡರ್‌ ಫೋನ್‌ಗೆ ರ್ಯಾಂಟ್ ಎಂದು ಹೆಸರಿಟ್ಟಿದ್ದು ಗೊತ್ತೆ ಇಲ್ಲ.

  ಮೈಕ್ರೋಸಾಫ್ಟ್‌ ಯೆಜ್‌ ಬಿಲ್ಲಿ 4.7 Microsoft Yezz Billy 4.7

  ಯೆಜ್‌ ಬಿಲ್ಲಿ ನಿಜಕ್ಕೂ ಯಾರಿಗೂ ಗೊತ್ತಿರದ ಅಪರೂಪದ ಹೆಸರೇ. ಇದನ್ನು ಮೈಕ್ರೋಸಾಫ್ಟ್‌ 2014ರಲ್ಲಿ ಬಿಡುಗಡೆ ಮಾಡಿದ ವಿಂಡೋಸ್‌ ಫೋನ್‌ಗೆ ಈ ಹೆಸರಿಟ್ಟಿತ್ತು.

  ಐಬಾಲ್‌ ಆಂಡಿ 5ಎನ್ ಡ್ಯೂಡ್ iBall Andi 5N Dude

  2016ರಲ್ಲಿ ಐಬಾಲ್ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್‌ ಕೂಲ್‌ ಫ್ಯಾಕ್ಟರ್‌ಗೆ ಗಮನ ಸೆಳೆದಿತ್ತು. ಆದರೆ, ಇಂದು ಆ ಹೆಸರು ಯಾರಿಗೂ ನೆನಪಿಲ್ಲ. ಆ ಹೆಸರೇ ಐಬಾಲ್ ಆಂಡಿ 5N ಡ್ಯೂಡ್.

  ಕ್ರಿಕೆಟ್ ಟಿಎಕ್ಸ್‌ಟಿಎಂ8 Cricket TxtM8

  ಅಮೇರಿಕಾ ಮೂಲದ ಕ್ರಿಕೆಟ್ ವೈರ್‌ಲೆಸ್‌ ಕಂಪನಿ ಈ ಸ್ಮಾರ್ಟ್‌ಫೋನ್‌ನ್ನು 2009ರಲ್ಲಿ ಬಿಡುಗಡೆ ಮಾಡಿತು. ಕ್ರಿಕೆಟ್ ಎನ್ನುವ ಮೊಬೈಲ್ ಫೋನ್ ಇದೆ ಎಂಬುದು ಖಂಡಿತ ಗೊತ್ತಿದ್ದಿಲ್ಲ ಅಲ್ವಾ..!

  ಲಾವಾ ಐರಿಸ್ ಎಫ್‌1 ಫ್ಯುಯಲ್ ಮಿನಿ Lava Iris F1 Fuel Mini

  ಇದ್ಯಾವುದೋ ಫಾರ್ಮುಲಾ ರೇಸ್‌ನ ಕಾರ್ ಅಲ್ಲ ಅಥವಾ ಯಾವುದೋ ಬಿಎಂಡಬ್ಲ್ಯೂ ಕಾರ್ ಅಲ್ಲ ಬದಲಾಗಿ ಲಾವಾ 2015ರಲ್ಲಿ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್‌ಗೆ ಐರಿಸ್‌ ಎಫ್‌1 ಫ್ಯುಯಲ್ ಮಿನಿ ಎಂದು ಹೆಸರಿಟ್ಟಿತು.

  ನೋಕಿಯಾ ಎಕ್ಸ್‌3-02 ಟಚ್ ಅಂಡ್ ಟೈಪ್‌ Nokia X3-02 Touch And Type

  2010ರಲ್ಲಿ ನೋಕಿಯಾ ತನ್ನ ಫೋನ್‌ಗೆ ಟಚ್‌ ಅಂಡ್‌ ಟೈಪ್‌ ಎಂದು ಹೆಸರಿಟ್ಟಿತು. ಟಚ್ ಮಾಡದೇ ಟೈಪ್ ಹೇಗೆ ಮಾಡೋದು ಅಲ್ವಾ..! ಈ ಹೆಸರಿಟ್ಟಾಗ ನೋಕಿಯಾ ತಲೆಯಲ್ಲಿ ಏನಿತ್ತೋ ಏನೋ?

  ಸ್ಯಾಮ್‌ಸಂಗ್ :) Samsung :)

  ಸ್ಯಾಮ್‌ಸಂಗ್ 2010ರಲ್ಲಿ ಬಿಡುಗಡೆ ಮಾಡಿದ ತನ್ನ ಪೋನ್‌ಗೆ ಏನು ಹೆಸರು ಕೊಡದೇ ಕೇವಲ :) ಈ ರೀತಿ ಹೆಸರು ಕೊಟ್ಟಿತ್ತು.

  ಕ್ಯಾಸಿಯೋ ಜಿಜೋನ್ ಕಮಾಂಡೋ Casio G'zOne Commando

  ಎನ್‌ಇಸಿ ಕ್ಯಾಸಿಯೋ ಮೊಬೈಲ್ ಕಮ್ಯುನಿಕೇಷನ್ ಕಂಪನಿ 2013ರಲ್ಲಿ ಬಿಡುಗಡೆ ಮಾಡಿದ ಈ ಫೋನ್ ಹೆಸರು ಬಹಳಷ್ಟು ಜನಕ್ಕೆ ಗೊತ್ತಿರಲಿಕ್ಕಿಲ್ಲ. ಆದರೂ ಕ್ಯಾಸಿಯೋ ಜಿಜೋನ್ ಕಮಾಂಡೋ ಎಂಬ ಸ್ಮಾರ್ಟ್‌ಫೋನ್ ಇರುವುದಂತೂ ಸತ್ಯ.

  ಸ್ಯಾಮ್‌ಸಂಗ್‌ ಗ್ಯಾಲಾಕ್ಷಿ ಎಸ್‌ II ಎಪಿಕ್ 4G ಟಚ್ Samsung Galaxy S II Epic 4G Touch

  ಸ್ಯಾಮ್‌ಸಂಗ್ 2011ರಲ್ಲಿ ಬಿಡುಗಡೆ ಮಾಡಿದ ತನ್ನ ಸ್ಮಾರ್ಟ್‌ಫೋನ್‌ನಲ್ಲಿ 3 ರೀತಿಯ ಹೆಸರನ್ನು ನೀಡಿತ್ತು. ಟಚ್, 4G, ಎಪಿಕ್‌ ಯಾಕಂತ್ ಗೊತ್ತಿಲ್ಲ.

  ಹೆಚ್‌ಪಿ ಪ್ರೇ 3 HP Pre 3

  ಇದು ಖಂಡಿತ ರೈಮ್‌ ಅಲ್ಲ. ಹೆಚ್‌ಪಿ 2011ರಲ್ಲಿ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್ ಪ್ರೇ 3 ಎಂಬ ಹೆಸರಿಟ್ಟುಕೊಂಡಿತು. ಹೆಸರಿನ ಕಾರಣಕ್ಕೋ ಅಥವಾ ಬೇರೆ ಯಾವುದೋ ಕಾರಣಕ್ಕೋ ಈ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಉಳಿಯಲಿಲ್ಲ.

  ಹೆಚ್‌ಟಿಸಿ ಒನ್‌ಎಂ9+ ಸುಪ್ರಿಂ ಕ್ಯಾಮೆರಾ HTC One M9+ Supreme Camera

  2015ರಲ್ಲಿ ಹೆಚ್‌ಟಿಸಿ ತನ್ನ ಸ್ಮಾರ್ಟ್‌ಫೋನ್‌ಗೆ ಇಷ್ಟುದ್ದ ಹೆಸರಿಟ್ಟಿತ್ತು. ಯಾರ್ ನೆನಪಿಟ್ಕೋತಾರೆ ಇಷ್ಟು ದೊಡ್ಡ ಹೆಸರನ್ನು ಅಲ್ವಾ..!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  25 phones with the ‘worst’ names ever. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more