ಇದಪ್ಪಾ ಚಾನ್ಸ್! ಹೊಸ OnePlus 13R ಬೆಲೆ ಕಡಿತ.. 3000 ರಿಯಾಯಿತಿ.. ಜಬರ್ದಸ್ತ್ ಫೀಚರ್ಸ್
ಅಮೆಜಾನ್ ಒನ್‌ಪ್ಲಸ್ ಪ್ರಿಯರಿಗೆ ಖುಷಿ ಸುದ್ದಿ ನೀಡಿದೆ. ಇತ್ತೀಚೆಗೆ ಬಿಡುಗಡೆಯಾದ ಹೊಸ ಒನ್‌ಪ್ಲಸ್ ಫೋನಿನ ಖರೀದಿ ಮೇಲೆ ಸಖತ್ ಆಫರ್ ಘೋಷಿಸಿದೆ. ಹೌದು, ಒನ್‌ಪ್ಲಸ್ 13R (OnePlus 13R) ಮೊಬೈಲ್ ಅಮೆಜಾನ್‌ನಲ್ಲಿ 3,000 ರೂ.ಗಳ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಜೊತೆಗೆ ಇಎಂಐ ಸೌಲಭ್ಯ ಮತ್ತು ಆಕರ್ಷಕ ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ಬನ್ನಿ, ಈ ಒನ್‌ಪ್ಲಸ್ 13R ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಒನ್‌ಪ್ಲಸ್ 13R ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನ್ ಎರಡು 50 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಹೊಂದಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 6.78 ಇಂಚಿನ ಡಿಸ್ಪ್ಲೇ ಇದೆ. ಹಾಗೆಯೇ 12GB RAM + 256GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಒಳಗೊಂಡಿದೆ. ಈ ಫೋನಿಗೆ ಯಾವೆಲ್ಲಾ ಆಫರ್‌ಗಳಿವೆ ತಿಳಿಯಲು ಮುಂದೆ ಓದಿ.

ಒನ್‌ಪ್ಲಸ್ 13R ಹೊಸ ಬೆಲೆ ಮತ್ತು ರಿಯಾಯಿತಿ
ಒನ್‌ಪ್ಲಸ್ 13R ಫೋನಿನ 12GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 42,998 ರೂ. ಆಗಿದೆ. 16GB RAM + 512GB ಸ್ಟೋರೇಜ್ ಆಯ್ಕೆಯ ಬೆಲೆ 49,998 ರೂ. ಇದೆ. ಪ್ರಸ್ತುತ, ಅಮೆಜಾನ್ ಸೇಲ್‌ನಲ್ಲಿ ಈ ಫೋನ್ ಖರೀದಿಸಿದರೆ 3,000 ರೂ. ತ್ವರಿತ ರಿಯಾಯಿತಿ ಪಡೆಯಬಹುದು. ಡಿಸ್ಕೌಂಟ್‌ನೊಂದಿಗೆ ಈ ಮೊಬೈಲ್ 39,998 ರೂ.ಗೆ ಲಭ್ಯವಿದೆ.
ನೀವು ಐಸಿಐಸಿಐ ಕ್ರೆಡಿಟ್ ಕಾರ್ಡ್ ಮೂಲಕ ಈ ಸ್ಮಾರ್ಟ್‌ಫೋನ್ ಖರೀದಿಸಿದರೆ, ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಇಎಂಐ ಮೂಲಕ ಈ ಫೋನ್ ಕೊಂಡರೆ, ನಿಮಗೆ 3000 ರೂ.ಗಳ ಡಿಸ್ಕೌಂಟ್ ಸಿಗುತ್ತದೆ. ಈ ರಿಯಾಯಿತಿಯೊಂದಿಗೆ ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ನೀವು 40,848 ರೂ.ಗಳ ಎಕ್ಸ್ ಚೇಂಜ್ ಆಫರ್‌ನ ಲಾಭ ಪಡೆಯಬಹುದು.
ಒನ್‌ಪ್ಲಸ್ 13R ಫೀಚರ್ಸ್
ಡಿಸ್‌ಪ್ಲೇ ಮತ್ತು ಪ್ರೊಸೆಸರ್ ವಿವರ
ಒನ್‌ಪ್ಲಸ್ 13R ಸ್ಮಾರ್ಟ್‌ಫೋನ್ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 2780 × 1264 ಪಿಕ್ಸೆಲ್ ರೆಸಲ್ಯೂಶನ್ ಮತ್ತು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಈ ಡಿಸ್ಪ್ಲೇಯು ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಪಡೆದಿದೆ. ಈ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 750 ಜಿಪಿಯು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ಆಕ್ಸಿಜನ್ ಓಎಸ್ 15.0 ಜೊತೆಗೆ ಕೆಲಸ ಮಾಡುತ್ತದೆ.

ಕ್ಯಾಮೆರಾ ಮತ್ತು ಸ್ಟೋರೇಜ್ ಆಯ್ಕೆ
ಒನ್‌ಪ್ಲಸ್ 13R ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್ಇಡಿ ಫ್ಲಾಶ್‌ನೊಂದಿಗೆ ಬರುತ್ತದೆ. ಹಾಗೆಯೇ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಇದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ 12GB RAM ಮತ್ತು16GB RAM ಹೊಂದಿದೆ. ಜೊತೆಗೆ 256GB ಮತ್ತು 512GB ಸ್ಟೋರೇಜ್ ಆಯ್ಕೆ ಲಭ್ಯವಿದೆ.
ಬ್ಯಾಟರಿ ಮತ್ತು ಇತರೆ ವೈಶಿಷ್ಟ್ಯಗಳು
ಒನ್‌ಪ್ಲಸ್ 13R ಮೊಬೈಲ್ 6000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಇನ್ ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಇನ್‌ಫ್ರಾರೆಡ್ ಸಂವೇದಕ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಯುಎಸ್‌ಬಿ ಟೈಪ್ ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, 5G, ಡ್ಯುಯಲ್ 4G VoLTE, ವೈ-ಫೈ 7, ಬ್ಲೂಟೂತ್ 5.4 ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








