ಕೇವಲ 3,799 ರೂಗಳಿಗೆ 4G ಸಪೋರ್ಟ್ ಮಾಡುವ ಸ್ಮಾರ್ಟ್‌ಪೋನು
ಸ್ಪೈಪ್ ಮೊಬೈಲ್ ತಯಾರಕ ಕಂಪನಿ ಕೇವಲ 3,799 ರೂಗಳಿಗೆ 4G ಸಪೋರ್ಟ್ ಮಾಡುವ ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಿದೆ.

ಈ ಕಾರಣಕ್ಕೆ ಮೊಬೈಲ್ ಮಾರುಕಟ್ಟೆಯಲ್ಲಿ 4G ಸಪೋರ್ಟ್ ಮಾಡುವ ಪೋನುಗಳ ಬೇಡಿಕೆ ಅಧಿಕವಾಗಿರುವ ಕಾರಣ ಎಲ್ಲಾ ಮೊಬೈಲ್ ತಯಾರಕ ಕಂಪನಿಗಳು 4G ಮೊಬೈಲ್‌ಗಳನ್ನೇ ಬಿಡುಗಡೆ ಮಾಡುತ್ತಿವೆ ಈ ಹಿನ್ನಲೆಯಲ್ಲಿ ಮಧ್ಯಮವರ್ಗದವರನ್ನು ಗಮನದಲ್ಲಿಟ್ಟುಕೊಂಡ ಸ್ಪೈಪ್ ಮೊಬೈಲ್ ತಯಾರಕ ಕಂಪನಿ ಕೇವಲ 3,799 ರೂಗಳಿಗೆ 4G ಸಪೋರ್ಟ್ ಮಾಡುವ ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಿದೆ.

ಸ್ವೈಪ್ ಕನೆಕ್ಟ್ ಸ್ಟಾರ್:
ಸ್ಪೈಪ್ ಮೊಬೈಲ್ ತಯಾರಕ ಕಂಪನಿ ತನ್ನ ಹೊಸ ಪೋನಿಗೆ ಸಸ್ವೈಪ್ ಕನೆಕ್ಟ್ ಸ್ಟಾರ್ ಎಂದು ನಾಮಕರಣ ಮಾಡಿದ್ದು, ಸಿಲ್ವರ್, ಗೋಲ್ಡನ್ ಮತ್ತು ಗ್ರೇ ಬಣ್ಣದಲ್ಲಿ ಈ ಪೋನನ್ನು ಹೊರ ತಂದಿದೆ. ಆದರೆ ಈ ಪೋನು ಕೇವಲ ಆನ್‌ಲೈನ್ ನಲ್ಲಿ ಮಾತ್ರ ಲಭ್ಯವಿದ್ದು, ಅದರಲ್ಲಿಯೂ ಸ್ನಾಪ್‌ಕ್ಲೂಸ್ ನಲ್ಲಿ ಮಾತ್ರ ಸೇಲಿಗಿದೆ.

ಪೋನಿನ ವಿಶೇಷತೆಗಳು:
ಕಡಿಮೆ ಬೆಲೆ ಎನ್ನುವ ಕಾರಣಕ್ಕೆ ಪೋನಿನ ವಿಶೇಷತೆಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ, 4 ಇಂಚಿನ ಪರದೆ ಈ ಪೋನಿನಲ್ಲಿದ್ದು, 1 GHz ವೇಗದ ಕ್ವಾಡ್‌ಕೋರ್ ಪ್ರೋಸೆಸರ್ ಜೊತೆಗೆ 1GB RAM ಈ ಪೋನಿನಲ್ಲಿದೆ. ಆಂಡ್ರಾಯ್ಡ್ 6 ನಲ್ಲಿ ಕಾರ್ಯನಿರ್ವಹಿಸಲಿದೆ.

5 MP ಕ್ಯಾಮೆರಾ:
ಈ ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ LED ಫ್ಲಾಷ್ ಸಮೇತ 5MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಮುಂಭಾದಲ್ಲಿ 1.3MP ಕ್ಯಾಮೆರಾ ನೀಡಲಾಗಿದೆ. 1800mAh ಬ್ಯಾಟರಿಯನ್ನು ಈ ಪೋನಿನಲ್ಲಿ ಅಳವಡಿಸಲಾಗಿದೆ. ಈ ಪೋನ್ 4G ಸಪೋರ್ಟ್ ಮಾಡಲಿದೆ. ಡುಯಲ್ ಸಿಮ್ ಹಾಕಬಹುದಾಗಿದೆ.


Click it and Unblock the Notifications








