4GB RAM, ಫಿಂಗರ್‌ಪ್ರಿಂಟ್, 5000mAh ಬ್ಯಾಟರಿ ಫೋನ್ ಈಗ ಕೇವಲ 7,999 ರೂ!..ಯಾವುದು?
ಇದೇ ಮೊದಲ ಭಾರಿಗೆ ZTE ಇಷ್ಟು ಕಡಿಮೆ ಬೆಲೆಯಲ್ಲಿ ಈ ಫೋನ್ ಅನ್ನು ಫ್ಲಿಪ್‌ಕಾರ್ಟ್ ಮೂಲಕ ಮಾರಾಟಕ್ಕಿಟ್ಟಿದೆ.!!
ಕೇವಲ 7,999 ರೂಪಾಯಿಗಳಿಗೆ 4GB RAM, 5000mAh ಬ್ಯಾಟರಿ ಹಾಗೂ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಸಲು ಸಿಕ್ಕರೆ ಹೇಗಿರುತ್ತದೆ.? ಹೌದು, ಇಷ್ಟೆಲ್ಲ ಫೀಚರ್ಸ್ ಹೊಂದಿರುವ ZTE ಕಂಪೆನಿಯ ZTE ಬ್ಲೇಡ್ ಎ2 ಪ್ಲಸ್ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕಿದೆ.!!
ZTE ನುಬಿಯಾ ಸ್ಮಾರ್ಟ್‌ಫೋನ್‌ಗಳು ಬಿಸಿತುಪ್ಪದಂತೆ ಖರ್ಚಾದ ನಂತರ ZTE ಬ್ಲೇಡ್ ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆಯಾಗಿದ್ದು, ಇದೇ ಮೊದಲ ಭಾರಿಗೆ ZTE ಇಷ್ಟು ಕಡಿಮೆ ಬೆಲೆಯಲ್ಲಿ ಈ ಫೋನ್ ಅನ್ನು ಫ್ಲಿಪ್‌ಕಾರ್ಟ್ ಮೂಲಕ ಮಾರಾಟಕ್ಕಿಟ್ಟಿದೆ.!! ಹಾಗಾದರೆ ZTE ಬ್ಲೇಡ್ ಎ2 ಪ್ಲಸ್ ಏನೆಲ್ಲಾ ಫೀಚರ್ಸ್ ಹೊಂದಿದೆ ಮತ್ತು ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.!!

ಡಿಸ್‌ಪ್ಲೇ ಮತ್ತು ಪ್ರೊಸೆಸರ್!!
ZTE ಬ್ಲೇಡ್ ಎ2 ಪ್ಲಸ್ 5.5 ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಮಲ್ಟಿಮೀಡಿಯಾಗೆ ಹೆಚ್ಚು ಸಪೋರ್ಟ್ ನೀಡುವ ಹಾಗೆ ರೂಪಿತವಾಗಿದೆ. ARM MTK MT6750T ಕಾರ್ಟೆಕ್ಸ್ A53 ಆಕ್ಟಕೋರ್ 1.5GHz ಪ್ರೊಸೆಸರ್ ಮೊಬೈಲ್‌ನಲ್ಲಿದೆ.

RAM ಮತ್ತು ಮೆಮೊರಿ!!
ಈ ಮೊದಲು ಹೇಳಿದಂತೆ ZTE ಬ್ಲೇಡ್ ಎ2 ಪ್ಲಸ್ ಫೋನ್ 4GB RAM ಹೊಂದಿದ್ದು, ಜೊತೆಗೆ 32GB ಆಂತರಿಕ ಮೆಮೊರಿಯನ್ನು ಹೊಂದಿದೆ. ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಮೆಮೊರಿಯನ್ನು 128GB ವರೆಗೂ ವಿಸ್ತರಿಸಿಕೊಳ್ಳಬಹುದಾದ ಆಯ್ಕೆ ಫೋನ್‌ನಲ್ಲಿದೆ.!!

ಕ್ಯಾಮೆರಾ ಹೇಗಿದೆ?
ಬಜೆಟ್ ಬೆಲೆಯಲ್ಲಿ ಸಿಗುತ್ತಿರುವ ZTE ಬ್ಲೇಡ್ ಎ2 ಪ್ಲಸ್ ಫೋನ್ ಅತ್ಯಾಧುನಿಕ ಕ್ಯಾಮೆರಾ ಮತ್ತು ಕ್ಯಾಮೆರಾ ತಂತ್ರಜ್ಞಾನವನ್ನು ಹೊಂದಿದ್ದು, ಹಿಂಬಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದ್ದು, 5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.!!

5000mAh ಬ್ಯಾಟರಿ.!!
ಕೇವಲ 7,999 ರೂಪಾಯಿಗಳಿಗೆ 5000mAh ಬ್ಯಾಟರಿ ಹೊತ್ತು ಬರುತ್ತಿರುವ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ. ಕಂಪೆನಿ ಹೇಳುವಂತೆ, ಪೂರ್ಣವಾಗಿ ಎರಡು ದಿನಗಳ ಬಳಕೆ ನಂತರ ಕೂಡ ZTE ಬ್ಲೇಡ್ ಎ2 ಪ್ಲಸ್ ಚಾರ್ಜ್ ಹಿಡಿದಿಟ್ಟಿರಲಿದೆ.

ಬೇರೆ ಏನೆಲ್ಲಾ ಫೀಚರ್ಸ್!!
ಡ್ಯುಯಲ್ ಸಿಮ್, 4G ವೋಲ್ಟ್ ಹಾಗೂ ಫಿಂಗರ್‌ಪ್ರಿಂಟ್ ಫೀಚರ್ ಅಂತಹ ಬಹುತೇಕ ಎಲ್ಲಾ ಫೀಚರ್‌ಗಳನ್ನು ZTE ಬ್ಲೇಡ್ ಎ2 ಪ್ಲಸ್ ಫೋನ್ ಹೊಂದಿದ್ದು, ಪ್ರಸ್ತುತ ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್ ಇದು ಎನ್ನಬಹುದು.!!


Click it and Unblock the Notifications