ಭಾರತದಲ್ಲಿ ಖರೀದಿಸಲು ಉತ್ತಮವಾಗಿರುವ 5 ಕ್ವಾರ್ಟಿ ಸೆಟ್‌ಗಳು

By Shwetha
|

ಗೌರವಯುತ ಹ್ಯಾಂಡ್ ಸೆಟ್ ತಯಾರಿಕಾ ಕಂಪೆನಿಯೊಂದು ಕ್ವಾರ್ಟಿ ಹ್ಯಾಂಡ್ ಸೆಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ತನ್ನ ಕೀರ್ತಿಯನ್ನು ಗ್ರಾಹಕರ ಬೇಡಿಕೆಯನ್ನು ಹೆಚ್ಚಿಸಿದೆ ಅದುವೇ ಬ್ಲಾಕ್ ಬೆರ್ರಿ ಕಂಪೆನಿ. ಕೆನಡಾದ ಕಂಪೆನಿ ಈ ಮಾದರಿಯ ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಾಗ ಹೆಚ್ಚಿನ ತೊಂದರೆಗಳನ್ನು ಎದುರಿಸಿದೆ. ಆದರೂ ಮಾರುಕಟ್ಟೆಯಲ್ಲಿ ಧೀಮಂತವಾಗಿ ಈಗ ನೆಲೆನಿಂತಿದ್ದು ಅದರ ಪ್ರತಿಯೊಂದು ಅಪ್ಲಿಕೇಶನ್ ನಲ್ಲೂ ಮಾದರಿಯಾಗಿದೆ.

ಬ್ಲಾಕ್ ಬೆರ್ರಿಯ ಬಿಬಿಎಮ್ ಮೆಸೇಜ್ ಅಪ್ಲಿಕೇಶನ್‌ಗೆ ಎಷ್ಟು ಧನ್ಯವಾದಗಳನ್ನು ತಿಳಿಸಿದರೂ ಕಡಿಮೆಯೇ ಇದು ತನ್ನ ಕಂಪೆನಿಯ ಬ್ರಾಂಡ್ ಹೆಸರನ್ನು ಮಾರುಕಟ್ಟೆಯಲ್ಲಿ ಅಜರಾಮರವಾಗಿಸಿದೆ ಎಂದೇ ಹೇಳಬಹುದು.

ಗ್ರಾಹಕರು ಟಚ್ ಪೋನ್ ಗಿಂತಲೂ ಕ್ವಾರ್ಟಿ ಫೋನ್ ಗೆ ಹೆಚ್ಚು ಆದ್ಯತೆಯನ್ನು ನೀಡುತ್ತಾರೆ. ಟಚ್ ಗಿಂತ ಕ್ವಾರ್ಟಿಯಲ್ಲಿ ಮೊಬೈಲ್ ಆಪರೇಟಿಂಗ್ ವ್ಯವಸ್ಥೆ ಸುಲಭವಾಗಿರುವುದು ಇದಕ್ಕೆ ಕಾರಣವಾಗಿದೆ. ಇಂದು ಮಾರುಕಟ್ಟೆಯಲ್ಲಿ ನಿಮ್ಮ ಕೈಗಟಕುವ ಬೆಲೆಯಲ್ಲಿ ಕ್ವಾರ್ಟಿ ಫೋನ್ ಗಳು ಲಭ್ಯವಿದ್ದು ಅವುಗಳನ್ನು ನೀವು ಸಲುಭವಾಗಿ ಖರೀದಿಸಬಹುದಾಗಿದೆ ಇಂದಿನ ಲೇಖನದಲ್ಲಿ ನಾವು ನಿಮಗಾಗಿ ನೀಡುತ್ತಿರುವ ವಿಷಯವೂ ಇದೇ ಆಗಿದ್ದು ಕ್ವಾರ್ಟಿಯನ್ನು ಖರೀದಿಸುವ ಮುನ್ನ ಕೊಂಚ ಇತ್ತ ಗಮನಹರಿಸಿ.

ಮಿತ ಬೆಲೆ ಹಾಗೂ ಉತ್ತಮ ಗುಣಮಟ್ಟವನ್ನು ನಿರ್ವಹಿಸಿರುವ ಬೇಡಿಕೆಯ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನೀಡಿದ್ದು ಅವುಗಳ ವೈಶಿಷ್ಟ್ಯಗಳನ್ನು ಅರಿತುಕೊಂಡು ಅವುಗಳನ್ನು ಅಭ್ಯಸಿಸಿ ಅವುಗಳನ್ನು ಖರೀದಿಸಿ. ಕ್ವಾರ್ಟಿಯಲ್ಲೂ ಟಚ್‌ನಂತೆ ಹಲವಾರು ತಾಂತ್ರಿಕ ವಿಧಾನಗಳು ಲಭ್ಯವಿದ್ದು ನೀವು ಅವುಗಳನ್ನು ಖರೀದಿಸಬಹುದು.

#1

#1

ಆಶಾ 210 2.4 ಇಂಚಿನ ಟಿಎಫ್ ಟಿ ಡಿಸ್ ಪ್ಲೇ ಯೊಂದಿಗೆ 320x240 ಪಿಕ್ಸೆಲ್ ಗಳ ರೆಸಲ್ಯೂಶನ್ ನೊಂದಿಗೆ ನಿಮಗೆ ಲಭ್ಯವಾಗಲಿದೆ. 2 mp ಕ್ಯಾಮೆರಾ ಇದರಲ್ಲಿದ್ದು 64 ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯ ಇದರ ವಿಶೇಷತೆಯಾಗಿದೆ. 32 ಜಿಬಿ ವರೆಗೆ ಹೆಚ್ಚುವರಿ ಸಂಗ್ರಹಣೆಯನ್ನು ನೀಡುವ ಮೈಕ್ರೋ ಎಸ್ ಡಿ ಸ್ಲಾಟ್ ಇದರಲ್ಲಿ ನಿಮಗೆ ಲಭ್ಯ. ಅಲ್ಲದೆ ಬ್ಲೂಟೂತ್, ವೈಫೈ, ಮೈಕ್ರೋ ಯುಎಸ್ ಬಿ 2.0, 12 ಗಂಟೆಗಳ ಟಾಕ್ ಟೈಮ್ ಅವಧಿ ಇದರ ಹೆಚ್ಚುಗಾರಿಕೆ. ಆಶಾ 210 ನಲ್ಲಿ ನೀವು ಬ್ಲೂಟೂತ್ ಪೇರಿಂಗ್ ಮಾಡದೆಯೇ ಹಾಡು ಮತ್ತು ಚಿತ್ರಗಳನ್ನು ಹಂಚಿಕೊಳ್ಳಬಹುದಾಗಿದೆ. ಡ್ಯುಯೆಲ್ ಸಿಮ್, ಫೇಸ್ ಬುಕ್, ಟ್ವಿಟ್ಟರ್, ಜಿಮೇಲ್ ಸಾಮಾಜಿಕ ಜಾಲತಾಣಗಳಿಂದ ಇದು ಅಭಿವೃದ್ಧಿಗೊಳಪಟ್ಟಿದೆ.

ರೂ 4,714 ಕ್ಕೆ ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

#2

#2

ಬ್ಲಾಕ್ ಬೆರ್ರಿ ಕರ್ವ್ 9220 2.44 ಇಂಚಿನ TFT LCD ಡಿಸ್‌ಪ್ಲೇಯನ್ನು ಹೊಂದಿದ್ದು 320 x 240 ಪಿಕ್ಸೆಲ್‌ಗಳ ರೆಸಲ್ಯೂಶನ್ ಇದೆ. ಬೇಕ್‌ಲಿಟ್ ಕ್ವಾರ್ಟಿ ಕೀಬೊರ್ಡ್ ಅನ್ನು ಡಿವೈಸ್ ಹೊಂದಿದೆ. ಬ್ಲಾಕ್‌ ಬೆರ್ರಿಯ 7.1 ಓಎಸ್ ಆವತ್ತಿಯಲ್ಲಿ ಈ ಹ್ಯಾಂಡ್‌ಸೆಟ್ ರನ್ ಆಗಲಿದೆ. ಪೂರ್ವ ನಿಯೋಜಿತ ಅಪ್ಲಿಕೇಶನ್‌ಗಳು ಮತ್ತು 512 MB ರ್‌ಯಾಮ್ ಡಿವೈಸ್ ಒಳಗೊಂಡಿದೆ. 2 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹ್ಯಾಂಡ್‌ಸೆಟ್ ಹೊಂದಿದ್ದು 5x ಝೂಮ್ ಇದರ ಸಾಮರ್ಥ್ಯವಾಗಿದೆ. ಇದರ ರ್‌ಯಾಮ್ ಸಾಮರ್ಥ್ಯವನ್ನು microSD ಯನ್ನು ಬಳಸಿಕೊಡು 32 ಜಿಬಿವರೆಗೆ ವಿಸ್ತರಿಸಬಹುದಾಗಿದೆ. ವೈಫೈ, ಜಿಪಿಆರ್‌ಎಸ್ ಹಾಗೂ ಎಡ್ಜ್ ಪ್ಲಾಟ್‌ಫಾರ್ಮ್ ಇದರ ವಿಶೇಷತೆ. ಬ್ಲಟೂತ್ ಹಾಗೂ ಯುಎಸ್‌ಬಿ ಯನ್ನು ಕೂಡ ಡಿವೈಸ್‌ನಲ್ಲಿ ಅಳವಡಿಸಲಾಗಿದೆ. ಕರ್ವ್ 9220 Lithium-ion 1450 mAh ಬ್ಯಾಟರಿಯಲ್ಲಿ ನಡೆಯಲಿದ್ದು 7 ಗಂಟೆಗಳವರೆಗಿನ ಸುದೀರ್ಘ ಟಾಕ್ ಟೈಮ್ ಅನ್ನು ನೀಡುತ್ತದೆ.

ರೂ 8,599 ಕ್ಕೆ ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

#3

#3

ಈ ಫೋನ್ ಅನ್ನು ಪೂರ್ಣ ಕ್ವಾರ್ಟಿ ಕೀಪ್ಯಾಡ್‌ನಲ್ಲಿ ರೂಪಿಸಲಾಗಿದೆ. 119.5x59.7x12.9mm ಅಳತೆಯ ಡಿವೈಸ್ ಇದಾಗಿದ್ದು ತೂಕ 128 ಗ್ರಾಮ್‌ಗಳಾಗಿದೆ. 2.8 ಇಂಚಿನ QVGA, 240x320 TFT ಸಾಮರ್ಥ್ಯವುಳ್ಳ ಟಚ್ ಡಿಸ್‌ಪ್ಲೇ 262k ಬಣ್ಣದ ರೆಸಲ್ಯೂಶನ್ ಮೊದಲಾದ ವೈಶಿಷ್ಟ್ಯಗಳು ಇದರ ಹೆಗ್ಗಳಿಕೆಯಾಗಿದೆ. LG ಆಪ್ಟಿಮಸ್ Pro C660 ಶಕ್ತಿಯುತ 800 MHz ಪ್ರೊಸೆಸರ್ ಅನ್ನು ಒಳಗೊಂಡಿದ್ದು ಆಂಡ್ರಾಯ್ಡ್ 2.3 ನಲ್ಲಿ ಇದು ರನ್ ಆಗುತ್ತದೆ. Li-ion 1500mAh ಬ್ಯಾಟರಿ ಇದಕ್ಕೆ ಅಗತ್ಯವಿದೆ. 852 ಗಂಟೆಗಳ ಸ್ಟ್ಯಾಂಡ್ ಬೈ ಮತ್ತು 13.5 ಗಂಟೆಗಳ ಟಾಕ್ ಟೈಮ್ ಅನ್ನು ಈ ಬ್ಯಾಟರಿ ನೀಡುತ್ತದೆ. 2G GSM ರೇಂಜ್ ಅನ್ನು ಫೋನ್ ಬೆಂಬಲಿಸುತ್ತದೆ. 3G ವೈಫೈ ಆಯ್ಕೆಗಳನ್ನು ಇದು ಒಳಗೊಂಡಿದೆ.

ರೂ 6,099 ಕ್ಕೆ ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#4

#4

ನೋಕಿಯಾ ಆಶಾ 205 2.4 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದ್ದು 320 x 240 ಪಿಕ್ಸೆಲ್ ರೆಸಲ್ಯೂಶನ್ ಇದರ ಸಾಮರ್ಥ್ಯವಾಗಿದೆ. VGA ರಿಯರ್ ಕ್ಯಾಮೆರಾ 10MB ಉಚಿತ ಬಳಕೆದಾರ ಮೆಮೊರಿ microSD ಕಾರ್ಡ್ ಅನ್ನು ಇದು ಒಳಗೊಂಡಿದ್ದು 32ಜಿಬಿ ವರೆಗೆ ಸಂಗ್ರಹಣೆಯನ್ನು ಇದು ಬೆಂಬಲಿಸುತ್ತದೆ. GPRS/EDGE, ಬ್ಲೂಟೂತ್ ಆವೃತ್ತಿ 2.1, 3.5mm ಆಡಿಯೋ ಜಾಕ್ ಕನೆಕ್ಟರ್ ಹಾಗೂ 1,020 mAh BL-5C ಬ್ಯಾಟರಿಯು 11 ಗಂಟೆಗಳ ಟಾಕ್ ಟೈಮ್ ಹಾಗೂ 608 ಗಂಟೆಗಳ ಸ್ಟ್ಯಾಂಡ್ ಬೈ 608 ಗಂಟೆಗಳನ್ನು ಇದು ನೀಡುತ್ತದೆ.

ರೂ 4,490 ಕ್ಕೆ ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#5

#5

ಗ್ಯಾಲಕ್ಸಿ ಚಾಟ್ B5330 3 ಇಂಚುಗಳ TFT ಸಾಮರ್ಥ್ಯವುಳ್ಳ ಡಿಸ್‌ಪ್ಲೇಯನ್ನು ಮತ್ತು ಕ್ವಾರ್ಟಿ ಕೀಪ್ಯಾಟ್ ಅನ್ನು ಒದಗಿಸುತ್ತದೆ. 850 MHz ನಿಂದ ಇದು ರೂಪಿತವಾಗಿದ್ದು ಆಂಡ್ರಾಯ್ಡ್ OS, ಆವೃತ್ತಿ 4.0 (ಐಸ್‌ಕ್ರೀಂ ಸ್ಯಾಂಡ್‌ವಿಚ್), ಆವೃತ್ತಿ 4.1.2 (ಜೆಲ್ಲಿ ಬೀನ್) ಓಎಸ್ ನಲ್ಲಿ ಇದು ರನ್ ಆಗುತ್ತದೆ. 2MP ರಿಯರ್ ಕ್ಯಾಮೆರಾ ಇದರಲ್ಲಿದ್ದು 4ಜಿಬಿ ಆಂತರಿಕ ಸಂಗ್ರಹಣೆ ಸಾಮರ್ಥ್ಯ ಈ ಡಿವೈಸ್‌ಗಿದೆ. ಇದನ್ನು ನೀವು microSD ಕಾರ್ಡ್ ಮೂಲಕ 32ಜಿಬಿವರೆಗೆ ವಿಸ್ತರಿಸಬಹುದು. Li-Ion 1200 mAh ಬ್ಯಾಟರಿಯೊಂದಿಗೆ ಇದನ್ನು ನಿರ್ಮಿಸಲಾಗಿದೆ.

ರೂ 7,643 ಕ್ಕೆ ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X