ಭಾರತದಲ್ಲಿ ಖರೀದಿಸಬಹುದಾದ ಸೆಲ್ಫೀ ಫೋನ್

Written By:

ಇನ್ನೊಬ್ಬ ವ್ಯಕ್ತಿಯ ಅಗತ್ಯವಿಲ್ಲದೆ ತಮ್ಮ ಫೋಟೋವನ್ನು ತಾವೇ ತೆಗೆಯಬಹುದಾದ ಅವಕಾಶವನ್ನು ಒದಗಿಸಿಕೊಟ್ಟಿರುವ ಸೆಲ್ಫೀ ಫೋನ್‌ಗಳು ಈಗಂತೂ ಫೋನ್‌ ಪ್ರಿಯರ ಅಚ್ಚುಮೆಚ್ಚಿನ ಫೀಚರ್ ಆಗಿದೆ.

ಈ ಸೆಲ್ಫೀಗಳು ಫೋನ್‌ನ ಕ್ಯಾಮೆರಾ ತಂತ್ರಜ್ಞಾನದಲ್ಲೂ ವೈಶಿಷ್ಟ್ಯಪೂರ್ಣ ಅನ್ವೇಷಣೆಗಳನ್ನು ಜಾರಿಗೆ ತರಲು ಕಾರಣವಾಗಿದೆ ಎಂದು ಕೂಡ ಹೇಳಬಹುದು. ಇದೀಗ ಸೆಲ್ಫೀಯಲ್ಲೂ ದೀರ್ಘ ಏಂಗಲ್‌ಗಳನ್ನು ಬಳಸಲಾಗಿದ್ದು ಬಳಕೆದಾರರು ತಮ್ಮ ಅತ್ಯುತ್ತಮ ಸೆಲ್ಫೀ ಫೋಟೋಗಳನ್ನು ಇದರ ಮೂಲಕ ತೆಗೆಯಬಹುದಾಗಿದೆ. ಒಂದು ಚಿತ್ರ ಸಾವಿರ ಪದರಗಳಿಗೆ ಸಮನಾದುದು ಎಂಬ ಮಾತೇ ಇದೆ ಇದಕ್ಕನುಗುಣವಾಗಿ ಜಗತ್ತಿನ ದಿಗ್ಗಜರೂ ಕೂಡ ಉತ್ತಮ ಸೆಲ್ಫೀ ಫೋಟೋವನ್ನು ತೆಗೆಯುವ ಉತ್ಸಾಹದಲ್ಲಿದ್ದಾರೆ.

ಹಾಗಿದ್ದರೆ ನಿಮಗೂ ನಿಮ್ಮ ಸೆಲ್ಫೀ ಫೋಟೋವನ್ನು ಉತ್ತಮವಾಗಿ ತೆಗೆಯುವ ಫೋನ್ ಅನ್ನು ಹೊಂದುವ ಆಸೆ ಇದ್ದಲ್ಲಿ ಇಲ್ಲಿ ನಾವು ಕೊಟ್ಟಿರುವ ಅತ್ಯುತ್ತಮ ಸೆಲ್ಫೀ ಫೋನ್‌ಗಳತ್ತ ನಿಮ್ಮ ಗಮನವನ್ನು ಹರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹುವಾಯಿ ಅಸ್ಕೆಂಡ್ G6

ಹುವಾಯಿ ಅಸ್ಕೆಂಡ್ G6

#1

ಹುವಾಯಿ ಅಸ್ಕೆಂಡ್ G6 ಹೆಚ್ಚು ವರ್ಧಿತ ಸ್ಮಾರ್ಟ್‌ಫೋನ್ ಕ್ಯಾಮೆರಾ ಅನುಭವವನ್ನು ನೀಡುತ್ತಿದ್ದು ಹುವಾಯಿ ಸೆಲ್ಫೀ ಫೋಕಸ್ ಟಿಪ್ಸ್ ಮತ್ತು ಪೂರ್ವಯೋಜಿತ ಪರದೆಗಳೊಂದಿಗೆ ಇದು ಬರುತ್ತಿದೆ. ಇದರ ಫ್ರಂಟ್ ಕ್ಯಾಮೆರಾ ಸಾಮರ್ಥ್ಯ 5 ಮೆಗಾಪಿಕ್ಸೆಲ್‌ಗಳಾಗಿದ್ದು ಇದು 88 ಡಿಗ್ರಿ ವೈಡ್ ಆಂಗಲ್ ಶೂಟಿಂಗ್ ಅನ್ನು ಒದಗಿಸಿದ್ದು, ಬಳಕೆದಾರರು 'ವಾಯ್ಸ್ ಫೋಟೋ' ಫಂಕ್ಷನ್ ಅನ್ನು ಈ ಡಿವೈಸ್‌ನಲ್ಲಿ ಹೊಂದಬಹುದು ಅಂದರೆ ಇದು ಹತ್ತು ಸೆಕೆಂಡುಗಳ ಆಡಿಯೋ ಕ್ಲಿಪ್‌ಗಳ ಮೂಲಕ ಸಂಯೋಜಿತಗೊಂಡಿರುವ ಫೋಟೋಗಳನ್ನು ಕೂಡ ತೆಗೆಯುವ ವೈಶಿಷ್ಟ್ಯವನ್ನು ಹೊಂದಿದೆ.

ಎಚ್‌ಟಿಸಿ ಒನ್ M8

ಎಚ್‌ಟಿಸಿ ಒನ್ M8

#2

ಫೋನ್‌ನ ಅಲ್ಟ್ರಾ ಪಿಕ್ಸೆಲ್ ಸೆನ್ಸಾರ್ ಬೆಳಕಿಲ್ಲದ ಪ್ರದೇಶದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಯಾವುದೇ ಸ್ಥಿತಿಯಲ್ಲೂ ಉಪಯೋಗಕಾರಿಯಾದ ಚಿತ್ರವನ್ನು ತೆಗೆಯಲು ಯೋಗ್ಯವಾಗಿದೆ. ಇದರ ಮುಂಭಾಗ ಕ್ಯಾಮೆರಾ ಸಾಮರ್ಥ್ಯ 5 ಮೆಗಾಪಿಕ್ಸೆಲ್‌ಗಳಾಗಿದ್ದು ಇದರಲ್ಲಿರುವ ಸೆಲ್ಫೀ ಮೆಶಿನ್ ಹೆಚ್ಚಿನ ಸ್ಥಿತಿಗಳಲ್ಲಿ ಉತ್ತಮವಾಗಿದೆ. ಇದು ರಿಯರ್ ಕ್ಯಾಮೆರಾಗಿಂತಲೂ ಹೆಚ್ಚಿನ ರೆಸಲ್ಯೂಶನ್ ಅನ್ನು ಹೊಂದಿರುವುದರಿಂದ ಇದನ್ನೊಂದು ಉತ್ತಮ ಸೆಲ್ಫೀ ಫೋನ್ ಆಗಿ ಮಾರ್ಪಡಿಸಿದೆ.

ಸೋನಿ ಎಕ್ಸ್‌ಪೀರಿಯಾ Z2

ಸೋನಿ ಎಕ್ಸ್‌ಪೀರಿಯಾ Z2

#3

ಅದಾಗ್ಯೂ ಸೋನಿ ಎಕ್ಸ್‌ಪೀರಿಯಾ 2.2 ಎಮ್‌ಪಿ ಕ್ಯಾಮೆರಾವನ್ನು ಹೊಂದಿದ್ದು, ಪೋನ್‌ನಲ್ಲಿರುವ ಬಯೋಂಜ್ ಇಮೇಜ್ ಪ್ರೊಸೆಸಿಂಗ್ ಎಂಜಿನ್ ಕಡಿಮೆ ಬೆಳಕು ಇರುವಲ್ಲಿ ಕೂಡ ಒಳ್ಳೆಯ ಚಿತ್ರಗಳನ್ನು ತೆಗೆಯಲು ಸಹಕಾರಿಯಾಗಿದೆ. ಇದು ಜಲಪ್ರತಿರೋಧಕ ಗುಣವನ್ನು ಹೊಂದಿರುವುದರಿಂದ ಈಜುಕೊಳದ ಒಳಭಾಗದ ದೃಶ್ಯಗಳನ್ನು ಕೂಡ ನಿಮಗೆ ಭಯವಿಲ್ಲದೆ ತೆಗೆಯಬಹುದಾಗಿದೆ.

ಜಿಯೋನಿ E7 ಮಿನಿ

ಜಿಯೋನಿ E7 ಮಿನಿ

#4

13.0 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಬಂದಿರುವ ಜಿಯೋನಿ ಡಿವೈಸ್, 12 ಲೆವೆಲ್‌ಗಳ ಆಟೋ ಬ್ಯೂಟಿ ಮೋಡ್‌ಗಳು ಮತ್ತು ಫೋನ್ ಬೂತ್ ಮೋಡ್‌ನೊಂದಿಗೆ ಬಂದಿದ್ದು ನಿಮ್ಮ ಸೆಲ್ಫೀಗೆ ಬ್ಯಾಕ್‌ಗ್ರೌಂಡ್ ಅನ್ನು ಸೇರಿಸುತ್ತದೆ.

ಎಲ್‌ಜಿ ಜಿ ಪ್ರೊ 2

ಎಲ್‌ಜಿ ಜಿ ಪ್ರೊ 2

#5

ಈ ಫೋನ್ 2.1 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದ್ದು ಇದರಲ್ಲಿರುವ ಸ್ಟ್ರೀಟ್ ಸ್ಮಾರ್ಟ್ ವ್ಯವಸ್ಥೆಯು ನಿಮ್ಮ ಸೆಲ್ಫೀ ಫೋಟೋದ ಲೈಟಿಂಗ್ ಮತ್ತು ಸ್ಥಿತಿಯನ್ನು ಗಮನಿಸುತ್ತದೆ. ಇದು ನಿಮ್ಮ ಸೆಲ್ಫೀಗೆ ಹೆಚ್ಚು ಪ್ರಖರತೆಯ ಬೆಳಕನ್ನು ಕೂಡ ಒದಗಿಸುತ್ತಿದ್ದು, ಮುಂಭಾಗದ ಬೆಳಕಿಲ್ಲದ ಪರಿಸರವನ್ನು ಕೂಡ ನಿಮ್ಮ ಫೋಟೋಗೆ ತಕ್ಕಂತೆ ಅನ್ವಯಿಸಿ ನಿಮ್ಮ ಸೆಲ್ಫೀ ಫೋಟೋವನ್ನು ಉತ್ತಮಗೊಳಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot