ಸ್ಮಾರ್ಟ್‌ಫೋನ್‌ಗಳ ಅದ್ಭುತ ಫೀಚರ್‌ಗಳು

Written By:

ಫೀಚರ್ ಫೋನ್‌ಗಳಿಂದ ಈಗ ಸ್ಮಾರ್ಟ್‌ಫೋನ್‌ಗಳು ಯಶಸ್ವಿಯಾಗಿ ಲಾಂಚ್ ಆಗುತ್ತಿರುವ ಫೋನ್‌ಗಳಾಗಿದ್ದು ಇದರ ಕಣ್ಸೆಳೆಯುವ ವೈಶಿಷ್ಟ್ಯತೆಗಳು ಮನವನ್ನು ಹಿಡಿದಿಟ್ಟುಬಿಡುತ್ತವೆ. ತಂತ್ರಜ್ಞಾನದಲ್ಲಿ ಹೆಚ್ಚುವರಿ ಸಾಧನೆಯನ್ನು ಮಾಡಿರುವ ಈ ಫೋನ್‌ಗಳು ಗ್ರಾಹಕರ ಮನವನ್ನು ಸೆಳೆಯುತ್ತಿವೆ.

ಕರೆಗಳನ್ನು ಸ್ವೀಕರಿಸಲು ಸಂದೇಶಗಳನ್ನು ಕಳುಹಿಸಲು ಬಳಸುವುದಕ್ಕಿಂತಲೂ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ನಿಮ್ಮ ಫೋನ್ ಅನ್ನು ಬಳಸಿ ಕೆಲವೊಂದು ಅಪ್ಲಿಕೇಶನ್‌ಗಳ ಮೂಲಕ ನಿಮ್ಮ ಧ್ವನಿಯನ್ನು ಬಳಸಿ ಅಲರಾಮ್ ಇಡಬಹುದು ಅಥವಾ ನೀವು ಇರುವಲ್ಲಿಗೆ ಪಿಜ್ಜಾವನ್ನು ಆರ್ಡರ್ ಕೂಡ ಮಾಡಬಹುದು.

ನಿಮ್ಮ ಸ್ಮಾರ್ಟ್‌ಫೋನ್ ಈ ದಿನಗಳಲ್ಲಿ ಎಷ್ಟೆಲ್ಲಾ ಕಮಾಲುಗಳನ್ನು ಕಾರ್ಯಗಳನ್ನು ಮಾಡಬಹುದೆಂಬುದನ್ನು ನೀವು ಅರಿತಿದ್ದೀರಾ? ದೈನಂದಿನ ಬಳಸುವಿಕೆಗಳಾದ ಫೇಸ್‌ಬುಕ್, ಯೂಟ್ಯೂಬ್ ಇದಲ್ಲದೆ ಹ್ಯಾಂಡ್‌ಸೆಟ್ ಹೆಚ್ಚಿನದನ್ನು ಮಾಡಬಹುದು ಅವುಗಳು ಏನೇನು ಎಂಬುದನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನಾವು ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

#1

ಇಲ್ಲಿ ನಾವು ನೀಡಿರುವ ವೀಡಿಯೊವನ್ನು ನೀವು ಪರಿಶೀಲಿಸಿದಲ್ಲಿ, ಬ್ಲ್ಯೂಟೂತ್ ಹೆಡ್‌ಸೆಟ್ ಅನ್ನು ಸ್ಮಾರ್ಟ್‌ಫೋನ್ ಕ್ಯಾಮೆರಾಗಾಗಿ ರಿಮೋಟ್ ಶಟ್ಟರ್‌ನಂತೆ ಬಳಸಬಹುದಾಗಿದೆ.

#2

ಸ್ಯಾಮ್‌ಸಂಗ್ ಪವರ್ ಸ್ಲೀಪ್ ಎನ್ನುವ ಒಂದು ಉಚಿತ ಅಪ್ಲಿಕೇಶನ್ ಇದ್ದು, ಇದು ಸಂಶೋಧಕರಿಗೆ ಸಹಾಯ ಮಾಡುತ್ತಿದೆ. ಇದು ಲಭ್ಯವಿರುವ ಡೇಟಾವನ್ನು ಪರಿಶೀಲಿಸಿ ಫಲಿತಾಂಶಗಳನ್ನು ಅಪ್‌ಲೋಡ್ ಮಾಡುತ್ತದೆ.

ಯುಎಸ್‌ಬಿ ಸ್ಟಿಕ್ ಸಂಪರ್ಕಪಡಿಸುವುದು

#3

ಯುಎಸ್‌ಬಿ OTG ಯ ಪ್ರಧಾನತೆ ಇಲ್ಲಿ ತಿಳಿದುಬರುತ್ತದೆ. ಇದನ್ನು ಬಳಸಿ ಸಾಮಾನ್ಯ ಯುಎಸ್‌ಬಿ ಹೊಸದಾದ ಆಂಡ್ರಾಯ್ಡ್ -ಆಧಾರಿತ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೇಟ್‌ಗಳನ್ನು ಸಂಪರ್ಕಪಡಿಸಬಹುದು.

ಮೊಬೈಲ್ ಲೈಟ್

#4

ನಿಮ್ಮ ಫೋನ್‌ನ ಕ್ಯಾಮೆರಾ ಅನನ್ಯ ಫೀಚರ್ ಅನ್ನು ಹೊಂದಿದೆ. ನಮ್ಮ ಕಣ್ಣು ಕಾಣದೇ ಇರುವ ಅಂಶವನ್ನು ನಿಮ್ಮ ಫೋನ್ ಕ್ಯಾಮೆರಾ ಕಾಣುತ್ತದೆ. ಈ ಕ್ಯಾಮೆರಾದಲ್ಲಿರುವ ಸೆನ್ಸಾರ್ ಐಆರ್ ರೇಡಿಯೇಶನ್ ಅನ್ನು ಕಂಡುಹಿಡಿಯುತ್ತದೆ. ಕ್ಯಾಮೆರಾದ ಕೆಳಗೆ ನಿಮ್ಮ ಟಿವಿ ರಿಮೋಟ್ ಅನ್ನು ಕಂಡುಹಿಡಿಯಿರಿ ನೀವು ಇದುವರೆಗೆ ಕಾಣದೇ ಇರುವ ಬೆಳಕನ್ನು ಇಲ್ಲಿ ಕಾಣಬಹುದು.

ಕ್ಯಾಮೆರಾ ಮೈಕ್ರೋಸ್ಕೋಪ್ ಆದಾಗ

#5

ನಿಮ್ಮ ಕ್ಯಾಮೆರಾದಲ್ಲಿ ಒಂದು ಹನಿಯಷ್ಟು ಶುದ್ಧ ನೀರನ್ನು ಹಾಕಿ. ನಿಮ್ಮ ಕ್ಯಾಮೆರಾವನ್ನು ಮೈಕ್ರೋಸ್ಕೋಪ್‌ನ್ನಾಗಿಸಲು ಇದಿಷ್ಟು ಸಾಕು. ಈ ನೀರಿನ ಹನಿ ಕ್ಯಾಮೆರಾದ ಬೇರೆಯದೇ ಲೆನ್ಸ್ ಆಗಿ ಕಾರ್ಯನಿರ್ವಹಿಸಿ ನಿಮಗೆ ಹೊಸದಾದ ಅದ್ಭುತವನ್ನು ಸೃಷ್ಟಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about 5-brilliant-things-your-smartphone-can-do-but-you-never-knew-about.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot