ಕಾರ್ಬನ್‌ನಿಂದ ಬರಲಿದೆ ಫುಲ್ ಎಚ್‌ಡಿ ಸ್ಕ್ರೀನ್ ಸ್ಮಾರ್ಟ್‌ಫೋನ್
ದೇಶೀಯ ಮಾರುಕಟ್ಟೆಯಲ್ಲಿ ಮೈಕ್ರೋಮ್ಯಾಕ್ಸ್ ಕಂಪೆನಿಗೆ ಪ್ರಭಲ ಸ್ಪರ್ಧೆ ನೀಡುತ್ತಿರುವ ಕಾರ್ಬನ್ ಈಗ ಮೈಕ್ರೋಮ್ಯಾಕ್ಸ್ ಟರ್ಬೋ ಫುಲ್‌ಎಚ್‌ಡಿ ಸ್ಕ್ರೀನ್ ಸ್ಮಾರ್ಟ್‌ಫೋನ್‌ಗೆ ಪ್ರತಿಯಾಗಿ ತನ್ನ ಹೊಸ ಫುಲ್ ಎಚ್‌ಡಿ ಸ್ಕ್ರೀನ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮುಂದಾಗುತ್ತಿದೆ.
ಕಾರ್ಬನ್ ಟೈಟಾನಿಯಂ ಎಸ್7 ಹೆಸರಿನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮುಂದಾಗಿದ್ದು ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ನಲ್ಲಿ ಈ ಫೋನ್ ಲಿಸ್ಟ್ ಆಗಿದ್ದು14999 ಬೆಲೆ ನಿಗದಿಯಾಗಿದೆ. 72x143.5x9.3 ಮಿ.ಮೀ ಗಾತ್ರವಿರುವ ಈ ಸ್ಮಾರ್ಟ್‌ಫೋನ್ 1920x1080 ಪಿಕ್ಸೆಲ್ ರೆಸೂಲೂಷನ್ ಹೊಂದಿರುವ ಐದು ಇಂಚಿನ ಓಜಿಎಸ್ ಸ್ಕ್ರೀನ್ ಹೊಂದಿದ್ದು,13 ಎಂಪಿ ಹಿಂದುಗಡೆ ಕ್ಯಾಮೆರಾ,16 GB ಆಂತರಿಕ ಮೆಮೊರಿಯನ್ನು ಒಳಗೊಂಡಿದೆ. ಆದರೆ ಈ ಸ್ಮಾರ್ಟ್‌ಫೋನಿನ ಬ್ಯಾಟರಿ ಮತ್ತು ರ್‍ಯಾಮ್ ಬಗ್ಗೆ ಫ್ಲಿಪ್‌ಕಾರ್ಟ್ ಯಾವುದೇ ಮಾಹಿತಿ ಪ್ರಕಟಿಸಿಲ್ಲ. ಮುಂದಿನ ತಿಂಗಳು ಈ
ಸ್ಮಾರ್ಟ್‌ಫೋನನ್ನು ಕಾರ್ಬನ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಾಧ್ಯತೆಯಿದೆ.
ಕಾರ್ಬನ್ ಕಂಪೆನಿಯ ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಕಾರ್ಬನ್ ಟೈಟಾನಿಯಂ ಎಸ್7
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1920x1080 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.5 GHz ಕ್ವಾಡ್ ಕೋರ್ ಪ್ರೊಸೆಸರ್
2 ಎಂಪಿ ಮುಂದುಗಡೆ ಕ್ಯಾಮೆರಾ
13 ಎಂಪಿ ಹಿಂದುಗಡೆ ಕ್ಯಾಮೆರಾ
16 GB ಆಂತರಿಕ ಮೆಮೊರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ


Click it and Unblock the Notifications








