2018ರ ಮೊಸ್ಟ್ ಸ್ಟೈಲಿಶ್ ಸ್ಮಾರ್ಟ್‌ಫೋನ್ ಕೊಳ್ಳಲೇಬೇಕು ಎನ್ನುವುದಕ್ಕೆ ಕಾರಣ ಬೇಕಾ..?
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ಲಾಂಚ್ ಆಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಸ್ಪರ್ಧೆಯನ್ನು ಕಾಣಬಹುದಾಗಿದೆ. ಹಲವು ಟಾಪ್ ಕಂಪನಿಗಳು ಈ ವಿಭಾಗದಲ್ಲಿ ತಮ್ಮ ಇರುವಿಕೆಯನ್ನು ಸಾಬೀತು ಪಡಿಸಿಕೊಳ್ಳಲು ಮತ್ತು ಮಾರುಕಟ್ಟೆಯಲ್ಲಿ ತಮ್ಮ ಹಿಡಿತವನ್ನು ಸಾಧಿಸಲು ಪ್ರಯತ್ನಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಬಜೆಟ್ ಬೆಲೆ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಉಳಿಸಿಕೊಂಡಿರುವುದು ಇದಕ್ಕೆ ಪ್ರಮುಖ ಕಾರಣ ಎಂದರೆ ತಪ್ಪಾಗುವುದಿಲ್ಲ. ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಎಲ್ಲಾ ಮಾದರಿಯ ಸ್ಮಾರ್ಟ್ಪೋನ್‌ಗಳನ್ನು ಲಾಂಚ್ ಮಾಡುವ ಹಾನರ್ ಸಹ ವಿಶೇಷ ಸ್ಮಾರ್ಟ್‌ಫೋನ್ ಅನ್ನು ಇದೇ ವಿಭಾಗದಲ್ಲಿ ಲಾಂಚ್ ಮಾಡಿದೆ.

ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನುವ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿರುವ ಹಾನರ್, ಹಾನರ್ 9N ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ರೂ11,999ಕ್ಕೆ ದೊರೆಯುವ ಈ ಸ್ಮಾರ್ಟ್‌ಫೋನಿನಲ್ಲಿ ಬಳಕೆದಾರರಿಗೆ 3 GB RAM ಮತ್ತು 32 GB ಇಂಟರ್ನಲ್ ಮೆಮೊರಿಯೂ ಲಭ್ಯವಾಗಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನ್ ಬೆಲೆಗಿಂತಲೂ ಹೆಚ್ಚಿನ ಆಯ್ಕೆಗಳನ್ನು ಹೊಂದಿದೆ. ಇದರಿಂದಾಗಿ 2018ರ ಮೊಸ್ಟ್ ಸ್ಟೈಲಿಶ್ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಉತ್ತಮ ಆಯ್ಕೆ ಯಾವ ಕಾರಣಕ್ಕೆ ಎನ್ನುವುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಕೊಡುವ ಬೆಲೆಗೆ ಬೆಸ್ಟ್ ಫೋನ್:
ನೋಡಲು ಸುಂದರವಾಗಿರುವ ಹಾನರ್ 9N ಸ್ಮಾರ್ಟ್‌ಫೋನ್, ಬಳಕೆದಾರರಿಗೆ ಉತ್ತಮ ಬಳಕೆಯ ಅನುಭವನ್ನು ನೀಡಲಿದೆ. ನೀಡುವ ಬೆಲೆಗೆ ಈ ಸ್ಮಾರ್ಟ್‌ಫೋನಿನಲ್ಲಿ ಹೆಚ್ಚಿನ ಆಯ್ಕೆಗಳನ್ನು ಕಾಣಬಹುದಾಗಿದೆ. ಬ್ರೌಸಿಂಗ್, ಗೇಮೀಂಗ್, ಸೇರಿದಂತೆ ಎಲ್ಲಾ ಕಾರ್ಯಗಳಿಗೂ ಇದು ಹೇಳಿ ಮಾಡಿಸಿದಂತಿದೆ. ಅಲ್ಲದೇ ವಿಡಿಯೋ ನೋಡಲು ಮತ್ತು ಫೋನಿನಲ್ಲಿಯೇ ಪುಸ್ತಕಗಳನ್ನು ಓದಲು ಸಹ ಡಿಸ್‌ಪ್ಲೇ ಸಹಾಯ ಮಾಡಲಿದೆ. ಇದಕ್ಕದಾಗಿಯೇ ದೊಡ್ಡ ಮಾದರಿಯ ಸ್ಕ್ರಿನ್ ಅನ್ನು ನೀಡಲಾಗಿದೆ. ಎಲ್ಲಾ ಮಾದರಿಯ ಟಾಸ್ಕ್‌ಗಳನ್ನು ಉತ್ತಮವಾಗಿ ನಿರ್ವಹಿಸುತ್ತದೆ.

ಡಿಸೈನ್‌ಗೆ ಕಾಸು:
ಹಾನರ್ 9N ಸ್ಮಾರ್ಟ್‌ಫೋನ್ ಲಾಂಚ್ ಆಗಿರುವ ಬಣ್ಣಗಳು ಹಾಗೂ ವಿನ್ಯಾಸವು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಸದ್ದು ಮಾಡುತ್ತಿದೆ. ಹೆಚ್ಚಿನ ಬಣ್ಣಗಳ ಆಯ್ಕೆಗಳು ಬಳಕೆದಾರರಿಗೆ ಲಭ್ಯವಿದೆ. ಇದರ ವಿನ್ಯಾಸವು ಪ್ರೀಮಿಯಮ್ ನಿಂದ ಕೂಡಿದೆ. ಇದಕ್ಕಾದಾಗಿಯೇ ಮೆಟಲ್ ಮತ್ತು ಗ್ಲಾಸ್ ಫಿನಿಷಿಂಗ್ ಅನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಕಾಣಬಹುದಾಗಿದೆ. ಬೇರೆ ಯಾವುದೇ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳು ಈ ಮಾದರಿಯ ಪ್ರಿಮಿಯಮ್ ವಿನ್ಯಾಸವನ್ನು ಹೊಂದಿಲ್ಲ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಯೂನಿಕ್ ಬಣ್ಣಗಳಲ್ಲಿ ದೊರೆಯುತ್ತಿದ್ದು, ಹೊಸ ಮಾದರಿಯಿಂದ ಕೂಡಿದೆ. ಇದಕ್ಕದಾಗಿಯೇ ಸ್ಟೈಲಿಶ್ ಎನ್ನುವ ಪಟ್ಟ ಪಡೆದುಕೊಂಡಿದೆ.

ಫುಲ್‌ವ್ಯೂವ್ ಡಿಸ್‌ಪ್ಲೇಯೊಂದಿಗೆ ನೋಚ್:
ಹಾನರ್ 9N ಸ್ಮಾರ್ಟ್‌ಫೋನ್ ಡಿಸೈನ್ ಈಗಾಗಲೇ ಬಳಕೆದಾರರಿಗೆ ಮೆಚ್ಚುಗೆಯಾಗಿದ್ದು, ಇದರಿಂದಲೇ ಬೇಡಿಕೆ ಹೆಚ್ಚಾಗಿದೆ. 5.84 ಇಂಚಿನ FHD+ ಗುಣಮಟ್ಟದ ಫುಲ್‌ವ್ಯೂ ಡಿಸ್‌ಪ್ಲೇಯೊಂದಿಗೆ ನೋಚ್ ಅನ್ನು ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಅಲ್ಲದೇ ಇದು 19:9 ಅನುಪಾತದಿಂದ ಕೂಡಿದೆ. ಮಾರುಕಟ್ಟೆಯಲ್ಲಿ ಈ ಬೆಲೆಗೆ ದೊರೆಯುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಮಾದರಿಯ ಡಿಸ್‌ಪ್ಲೇಯನ್ನು ಕಾಣಲು ಸಾಧ್ಯವೇ ಇಲ್ಲ ಎನ್ನಲಾಗಿದೆ. ಇದು ಈ ಸ್ಮಾರ್ಟ್‌ಫೋನ್ ಗೆ ಒಂದು ಮಾದರಿಯಲ್ಲಿ ಸ್ಟಾಂಡೆರ್ಡ್ ಅನ್ನು ತಂದು ಕೊಟ್ಟಿದೆ.

ಫೇಸ್‌ಲಾಕ್ ಇದರಲ್ಲಿದೆ:
ಈಗ ಲಾಂಚ್ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಿಸಿಕೊಳ್ಳಲು ಫೇಸ್‌ಲಾಕ್ ಆಯ್ಕೆಯೂ ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ. ಇದಲ್ಲದೇ ಫಿಂಗರ್ ಪ್ರಿಂಟ್ ಸ್ಕ್ಯಾನರ್, ಪಿನ್, ಪ್ಯಾಟರ್ನ್ ಲಾಕ್‌ಗಳನ್ನು ಕಾಣಬಹುದಾಗಿದೆ. ಆದರೆ ಇದರಲ್ಲಿ ವಿಶೇಷ ಮಾದರಿಯ ಫೇಸ್‌ಲಾಕ್ ಅಭಿವೃದ್ಧಿ ಪಡಿಸಲಾಗಿದೆ. ನಿಮ್ಮ ಕಣ್ಣನ್ನು ಮಿಟುಕಿಸಿದರೆ ಸಾಕು ಸ್ಮಾರ್ಟ್‌ಫೋನ್ ಓಪನ್ ಆಗಲಿದೆ ಎನ್ನಲಾಗಿದೆ. ಇದು ಬೇರೆ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗಿಂತ ಇದು ಬಿನ್ನವಾಗಿದೆ.

ಉತ್ತಮ ಸೆಲ್ಫಿ- ಡ್ಯುಯಲ್ ಕ್ಯಾಮೆರಾ:
ಹಾನರ್ 9N ಸ್ಮಾರ್ಟ್‌ಫೋನ್ ಕ್ಯಾಮೆರಾ ಪ್ರೀಮಿಯಮ್ ಮಾದರಿಯ ಕ್ಯಾಮೆರಾವನ್ನು ಹೊಂದಿದೆ. ಹಿಂಭಾಗದಲ್ಲಿ 13 MP + 2 MP ಕ್ಯಾಮೆರಾ ಸೆಟಪ್ ಹೊಂದಿದ್ದು, ಉತ್ತಮ ಮಾದರಿಯ ಚಿತ್ರಗಳನ್ನು ಸೆರೆಹಿಡಿಯಲು ಇದು ಸಹಾಯಕಾರಿಯಾಗಿದೆ ಎನ್ನಲಾಗಿದೆ. DSLR ಮಾದರಿಯ ಫೋಟೋಗಳನ್ನು ಇದರಲ್ಲಿ ಸೆರೆಹಿಡಿಯ ಬಹುದಾಗಿದೆ. ಉತ್ತಮ ಚಿತ್ರಗಳನ್ನು ಹಿಡಿಯುವ ಸಲುವಾಗಿ ಹಲವು ಮಾದರಿಯ ಆಯ್ಕೆಗಳನ್ನು ಇದರಲ್ಲಿ ಕಾಣಬಹುದಾಗಿದೆ. ಹೈ ಎಂಡ್ ಟೆಕ್ನಾಲಜಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಮುಂಭಾಗದಲ್ಲಿ 16 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದು ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲಿದೆ. ಇದರಿಂದ ಬಳಕೆದಾರರಿಗೆ ಉತ್ತಮ ಸೇವೆಯೂ ಲಭ್ಯವಾಗಲಿದೆ.


Click it and Unblock the Notifications








