ಬಜೆಟ್ ಫೋನ್ ಲಾವಾ V5 ನಿಂದ ಭರ್ಜರಿ ಪೈಪೋಟಿ

By Shwetha
|

ಭಾರತೀಯ ಸ್ಮಾರ್ಟ್‌ಫೋನ್ ಕಂಪೆನಿ ಲಾವಾ ಇತ್ತೀಚೆಗೆ ತನ್ನ ಹೊಸ ಫ್ಲ್ಯಾಗ್‌ಶಿಪ್ ಫೋನ್ ಅನ್ನು ಸೇರಿಸಿಕೊಂಡಿದ್ದು ಇದಕ್ಕೆ ಲಾವಾ V5 ಎಂಬುದಾಗಿ ನಾಮಕರಣ ಮಾಡಿದೆ.

ತನ್ನ ಫೀಚರ್‌ಗಳಲ್ಲಿ ಅಷ್ಟೊಂದು ಗಮನಾರ್ಹವಾಗಿ ಇಲ್ಲದಿದ್ದರೂ ಲಾವಾ V5 ಗ್ರಾಹಕರ ಬಯಕೆಗೆ ತಕ್ಕಂತೆ ರೂಪುಗೊಂಡಿದೆ. ಮಾರುಕಟ್ಟೆಯಲ್ಲಿ ಸದ್ಯಕ್ಕೆ ಹೆಸರು ಮಾಡುತ್ತಿರುವ ಇತರ ಡಿವೈಸ್‌ಗಳೊಂದಿಗೆ ಲಾವಾ V5 ಭರ್ಜರಿ ಪೈಪೋಟಿಯನ್ನು ಎದುರುಗೊಳ್ಳಲಿದೆ. ಲಾವಾ V5 ವಿಶೇಷತೆಗಳನ್ನು ತಿಳಿದುಕೊಳ್ಳೋಣ.

ಲಾವಾ V5 ಅನ್ನು ರೂ 11,499 ಕ್ಕೆ ಲಾಂಚ್ ಮಾಡಿದ್ದು, ಲಭ್ಯ ಬೆಲೆ ರೂ 11,299 ಆಗಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ರೀಟೈಲ್ ಚಾನಲ್‌ಗಳಲ್ಲಿ ಕೂಡ ಈ ಡಿವೈಸ್ ದೊರೆಯುತ್ತಿದೆ. ಆಕರ್ಷಕ ಫೀಚರ್‌ಗಳನ್ನು ಡಿವೈಸ್ ಒಳಗೊಂಡಿದ್ದು ನಿಜಕ್ಕೂ ಇದೊಂದು ಅತ್ಯುತ್ತಮ ಫೋನ್ ಎಂಬುದರಲ್ಲಿ ಎರಡು ಮಾತಿಲ್ಲ.

#1

#1

ಸ್ಮಾರ್ಟ್‌ಫೋನ್‌ನಲ್ಲಿ ಕ್ಯಾಮೆರಾ ಅತಿಮುಖ್ಯ ಫೀಚರ್ ಎಂದೆನಿಸಿದ್ದು, ಲಾವಾ ಫೋಟೋಗ್ರಫಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ ಎಂಬುದಾಗಿ ಹೇಳಬಹುದಾಗಿದೆ. ಡಿವೈಸ್ 13 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು ಮುಂಭಾಗ ಕ್ಯಾಮೆರಾ 8 ಎಮ್‌ಪಿಯಾಗಿದೆ. ಲಾವಾ ತನ್ನ ಮ್ಯಾಜಿಕ್ ಪಿಕ್ಸ್ ಸಾಫ್ಟ್‌ವೇರ್ ಅನ್ನು ಇದರಲ್ಲಿ ಸೇರಿಸಿದ್ದು ಪನೋರಮಿಕ್ ಸೆಲ್ಫಿ ಮೋಡ್, ನೈಟ್ ಪ್ರೊ, ಜಿಫ್ ಮೇಕರ್, ಮಲ್ಟಿ ಏಂಗಲ್ ವ್ಯೂ ಮತ್ತು ಇನ್ನಷ್ಟನ್ನು ಕಾಣಬಹುದಾಗಿದೆ.

#2

#2

ಲಾವಾ V5, 5.5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಯಾವುದೇ ಬ್ರೇಕೇಜ್‌ಗಳಿಂದ ಡಿವೈಸ್ ಅನ್ನು ಸಂರಕ್ಷಿಸಲಿದೆ. ಪ್ರಖರ ಸೂರ್ಯನ ಬೆಳಕಿನಲ್ಲೂ ಡಿವೈಸ್ ತಟಸ್ಥವಾಗಿದ್ದು ಮಜಬೂತಾಗಿದೆ. ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ಲಾವಾ V5 ಅನ್ನು ಈ ಅಂಶಗಳು ಪ್ರತ್ಯೇಕವಾಗಿಸಲಿವೆ.

#3

#3

1.3GHZ ಮೀಡಿಯಾಟೆಕ್ 6753 ಅನ್ನು ಫೋನ್ ಒಳಗೊಂಡಿದ್ದು ಕ್ವಾಡ್ ಕೋರ್ 64 ಬಿಟ್ ಪ್ರೊಸೆಸಿಂಗ್ ಸಾಮರ್ಥ್ಯ ಇದರಲ್ಲಿದೆ. 3 ಜಿಬಿ RAM ಅನ್ನು ಫೋನ್ ಪಡೆದುಕೊಂಡಿದ್ದು ಉತ್ತಮ ಕಾರ್ಯಕ್ಷಮತೆಯನ್ನು ಡಿವೈಸ್ ಪ್ರದರ್ಶಿಸಲಿದೆ. ನಿಮ್ಮ ಡೇಟಾವನ್ನು ಸಂಗ್ರಹಿಸಲು ಹೆಚ್ಚಿನ ಮೆಮೊರಿ ಸ್ಥಳವನ್ನು ಡಿವೈಸ್ ಒದಗಿಸಲಿದ್ದು, 16 ಜಿಬಿ ಆಂತರಿಕ ಸಂಗ್ರಹಣೆಯೊಂದಿಗೆ ಎಸ್‌ಡಿ ಕಾರ್ಡ್ ಬಳಸಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು.

#4

#4

ಲಾವಾ V5 ಆಂಡ್ರಾಯ್ಡ್‌ನ ಲಾಲಿಪಪ್ 5.0 ಆವೃತ್ತಿಯೊಂದಿಗೆ ಬಂದಿದ್ದು ಕಂಪೆನಿಯ ನೇಟೀವ್ ಯುಐ ಅನ್ನು ಪಡೆದುಕೊಂಡಿದೆ. ಅಪ್‌ಡೇಟ್‌ಗಳನ್ನು ಪಡೆದುಕೊಳ್ಳಲು ಲಾವಾ ಮಾರ್ಷ್ ಮಲ್ಲೊ ಅಪ್‌ಡೇಟ್ ಅನ್ನು ಒದಗಿಸಿದೆ. ಹೆಚ್ಚಿನ ಅಪ್ಲಿಕೇಶನ್‌ಗಳೊಂದಿಗೆ ಸ್ಮಾರ್ಟ್‌ಫೋನ್ ಬಂದಿದೆ.

#5

#5

ಫೋನ್ ರೂ 11,299 ಕ್ಕೆ ಲಭ್ಯವಿದ್ದು ಆನ್‌ಲೈನ್‌ನಲ್ಲಿ ಮಾತ್ರವಲ್ಲದೆ ರೀಟೈಲ್ ತಾಣಗಳಲ್ಲಿ ಕೂಡ ಡಿವೈಸ್ ಲಭ್ಯವಿದೆ. ಫೋನ್ ಎಲ್ಲಾ ಗ್ರಾಹಕರಿಗೂ ಲಭ್ಯವಾಗಬೇಕು ಎಂಬ ನಿಟ್ಟಿನಲ್ಲಿ ಆನ್‌ಲೈನ್‌ನಲ್ಲಿ ಮಾತ್ರವಲ್ಲದೆ ಎಲ್ಲೆಡೆಯೂ ಲಭ್ಯವಾಗುವಂತೆ ಕಂಪೆನಿ ಸೇವೆ ಒದಗಿಸಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಚಂದ್ರನ ಮೇಲೆ ಯಾರೋ ಇದ್ದಾರೆ: ನಾಸಾ ವಿಜ್ಞಾನಿಗಳು</a><br /><a href=ಕಾಲೇಜು ವಿದ್ಯಾರ್ಥಿಗಳಿಗಾಗಿ ಟಾಪ್ 10 ಬಜೆಟ್ ಫೋನ್ಸ್
ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?
ಮೊಬೈಲ್‌ ಬಳಕೆಯಿಂದ ಪುರಷತ್ವ ಕುಂಠಿತ: ವಿಜ್ಞಾನಿಗಳ ಹೇಳಿಕೆ" title="ಚಂದ್ರನ ಮೇಲೆ ಯಾರೋ ಇದ್ದಾರೆ: ನಾಸಾ ವಿಜ್ಞಾನಿಗಳು
ಕಾಲೇಜು ವಿದ್ಯಾರ್ಥಿಗಳಿಗಾಗಿ ಟಾಪ್ 10 ಬಜೆಟ್ ಫೋನ್ಸ್
ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?
ಮೊಬೈಲ್‌ ಬಳಕೆಯಿಂದ ಪುರಷತ್ವ ಕುಂಠಿತ: ವಿಜ್ಞಾನಿಗಳ ಹೇಳಿಕೆ" loading="lazy" width="100" height="56" />ಚಂದ್ರನ ಮೇಲೆ ಯಾರೋ ಇದ್ದಾರೆ: ನಾಸಾ ವಿಜ್ಞಾನಿಗಳು
ಕಾಲೇಜು ವಿದ್ಯಾರ್ಥಿಗಳಿಗಾಗಿ ಟಾಪ್ 10 ಬಜೆಟ್ ಫೋನ್ಸ್
ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?
ಮೊಬೈಲ್‌ ಬಳಕೆಯಿಂದ ಪುರಷತ್ವ ಕುಂಠಿತ: ವಿಜ್ಞಾನಿಗಳ ಹೇಳಿಕೆ

Best Mobiles in India

English summary
Here we take you through 5 best features and specifications of the phone that help it in offering an extraordinarily great experience.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X