Home
ಮೊಬೈಲ್

ಎಲ್ಲಾ ಬಿಟ್ಟು ರಿಯಲ್ ಮಿ 2 ಪ್ರೋ ಖರೀದಿಸುವುದಕ್ಕೆ ಕಾರಣಗಳು ಒಂದಾ ಎರಡಾ..?

ನೆನ್ನೆ ಲಾಂಚ್ ಆದ ರಿಯಲ್ ಮಿ 2 ಪ್ರೋ ಸ್ಮಾರ್ಟ್‌ಫೋನ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲಿದೆ ಎನ್ನುವ ಮಾತು ಈಗಾಗಲೇ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ನೀವು ಹೊಸ ಮಾದರಿಯ ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡುವ ಪ್ಲಾನ್ ಮಾಡುತ್ತಿದ್ದರೇ ಈ ಫೋನ್ ಉತ್ತಮ ಆಯ್ಕೆಯಾಗಲಿದೆ. ನೀವು ಯಾವ ಕಾರಣಕ್ಕಾಗಿ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡಬಹುದು ಎನ್ನುವುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಎಲ್ಲಾ ಬಿಟ್ಟು ರಿಯಲ್ ಮಿ 2 ಪ್ರೋ ಖರೀದಿಸುವುದಕ್ಕೆ ಕಾರಣಗಳು ಒಂದಾ ಎರಡಾ..?

ರಿಯಲ್ ಮಿ ಸ್ಮಾರ್ಟ್‌ಫೋನ್ ಗಳನ್ನು ನೀವು ನಂಬಬಹುದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ರಿಯಲ್ ಮಿ 1 ಮತ್ತು ರಿಯಲ್ ಮಿ 2 ಸ್ಮಾರ್ಟ್‌ಫೋನ್‌ಗಳು ಬಳಕೆದಾರರಿಗೆ ಸಂತೃಪ್ತಿಗೊಳಿಸಿವೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಮಂದಿ ರಿಯಲ್ ಮಿ 2 ಪ್ರೋ ಸ್ಮಾರ್ಟ್‌ಫೋನ್ ಲಾಂಚ್ ಆಗುವುದನ್ನೇ ಕಾಯುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಶಿಯೊಮಿ, ಒಪ್ಪೋ ಮತ್ತು ವಿವೋ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಸ್ಯಾಮ್ ಸಂಗ್ ಲಾಂಚ್ ಮಾಡಿರುವ ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳಿಗೆ ಇದು ದೊಡ್ಡ ಮಟ್ಟದಲ್ಲಿ ಸೆಡ್ಡು ಹೊಡೆಯಲಿದೆ.

ವಾಟರ್ ಡ್ರಾಪ್ ನೋಚ್:

ವಾಟರ್ ಡ್ರಾಪ್ ನೋಚ್:

ಮಾರುಕಟ್ಟೆಯಲ್ಲಿ ಸದ್ಯದ ಟ್ರೆಂಡ್ ಆಗಿರುವ ವಿನ್ಯಾಸ ಇದಾಗಿದೆ. 6.3 ಇಂಚಿನ ಡಿಸ್‌ಪ್ಲೇಯನ್ನು ಇದರಲ್ಲಿ ಕಾಣಬಹುದಾಗಿದೆ. ಅಲ್ಲದೇ ಟಾಪ್ ಎಂಡ್ ಫೋನ್‌ಗಳಾದ ಒಪ್ಪೋ F9 ಮತ್ತು ವಿವೋ V11 ಪ್ರೋ ಸ್ಮಾರ್ಟ್‌ಫೋನ್‌ಗಳು ಮಾತ್ರವೇ ಈ ಮಾದರಿಯ ವಿನ್ಯಾಸವನ್ನು ಹೊಂದಿವೆ. ಈ ಸ್ಮಾರ್ಟ್‌ಪೋನ್‌ಗಳ ಬೆಲೆಯೂ ರೂ.20000ದ ಮೇಲಿದೆ ಎನ್ನಲಾಗಿದೆ. ರಿಯಲ್ ಮಿ 2 ಪ್ರೋ ಬೆಲೆಯಲ್ಲಿ ಬೇರೆ ಯಾವುದು ದೊರೆಯುವುದಿಲ್ಲ.

8 GB RAM + 128 GB ಆವೃತ್ತಿ:

8 GB RAM + 128 GB ಆವೃತ್ತಿ:

ರಿಯಲ್ ಮಿ 2 ಪ್ರೋ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಅತೀ ಕಡಿಮೆ ಬೆಲೆ 8 GB RAM + 128 GB ಆವೃತ್ತಿಯ ಸ್ಮಾರ್ಟ್‌ಫೋನ್ ಎನ್ನಲಾಗಿದೆ. ರೂ.17999ಕ್ಕೆ ಮಾರಾಟವಾಗುತ್ತಿದೆ. ಬೇರೆ ಸ್ಮಾರ್ಟ್‌ಫೋನ್‌ಗಳು ರೂ.26000ಕ್ಕಿಂತ ಕಡಿಮೆಗೆ ಇಷ್ಟು ಪ್ರಮಾಣದ ಸ್ಟೋರೆಜ್ ಅವಕಾಶವನ್ನು ನಿಮಗೆ ಮಾಡಿಕೊಡುತ್ತಿಲ್ಲ.

ಸ್ನಾಪ್‌ಡ್ರಾಗನ್ 660:

ಸ್ನಾಪ್‌ಡ್ರಾಗನ್ 660:

ಮಧ್ಯಮ ಸರಣಿಯ ಸ್ನಾಪ್‌ಡ್ರಾಗನ್ 660 ಚಿಪ್ ಸೆಟ್ ಅನ್ನು ರಿಯಲ್ ಮಿ 2 ಪ್ರೋ ಸ್ಮಾರ್ಟ್‌ಫೋನ್ ನಲ್ಲಿ ಕಾಣಹುದಾಗಿದೆ. ಇದು ಕೃತಕ ಬುದ್ದಿ ಮತ್ತೆಯೊಂದಿಗೆ ಕಾರ್ಯನಿರ್ವಹಿಸುವ ಪ್ರೋಸೆಸರ್ ಆಗಿದ್ದು, ಬಳಕೆದಾರರಿಗೆ ದೊಡ್ಡ ಮಟ್ಟದ ಕಾರ್ಯಚರಣೆಗೆ ಸಹಾಯವನ್ನು ಮಾಡಲಿದೆ. ಇದರಿಂದಾಗಿ ಮಲ್ಟಿ ಟಾಸ್ಕಿಕಿಂಗ್ ಉತ್ತಮವಾಗಲಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ರಿಯಲ್ ಮಿ 2 ಪ್ರೋ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 16 MP + 2 MP ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಸಹಾಯವಾಗಲಿದೆ. ಇದಲ್ಲದೇ ಸ್ನಾಪ್‌ಡ್ರಾಗನ್ 660 ಚಿಪ್ ಸೆಟ್ ನಲ್ಲಿರುವ ಕೃತಕ ಬುದ್ದಿಮತ್ತೆಯೂ ಇದರಲ್ಲಿ ಪೋಟೋಗಳನ್ನು ಉತ್ತಮವಾಗಿ ಸೆರೆಹಿಡಿಯಲು ಸಹಾಯವನ್ನು ಮಾಡಲಿದೆ. ಅಲ್ಲದೆ ಮುಂಭಾಗದಲ್ಲಿ 16 MP ಕ್ಯಾಮೆರಾವನ್ನು ನೋಡಬಹುದು.

ವಿವಿಧ ಬಣ್ಣ:

ವಿವಿಧ ಬಣ್ಣ:

ಮಾರುಕಟ್ಟೆಯಲ್ಲಿ ರಿಯಲ್ ಮಿ 2 ಪ್ರೋ ಸ್ಮಾರ್ಟ್‌ಫೋನ್ ವಿವಿಧ ಬಣ್ಣಗಳಲ್ಲಿ ದೊರೆಯುತ್ತಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಬಣ್ಣಗಳನ್ನು ರಿಯಲ್ ಮಿ ಪರಿಚಯ ಮಾಡಿದೆ. ಮೂರು ಬಣ್ಣಗಳಲ್ಲಿ ನೀವು ಇದನ್ನು ಖರೀದಿ ಮಾಡಬಹುದಾಗಿದೆ.

ಬೆಲೆಗಳು:

ಬೆಲೆಗಳು:

ರಿಯಲ್ ಮಿ 2 ಪ್ರೋ ಸ್ಮಾರ್ಟ್‌ಫೋನ್ ಮೂರು ಆವೃತ್ತಿಯಲ್ಲಿ ದೊರೆಯುತ್ತಿದೆ. ನಿಮಗೆ ಅಗತ್ಯವಿರುವ ಆವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ. 4 GB RAM - 64 GB ಆವೃತ್ತಿ ರೂ.13,999ಕ್ಕೆ 6 GB RAM - 64 GB ಆವೃತ್ತಿ ರೂ.15,990ಕ್ಕೆ ಹಾಗೂ 8 GB RAM - 128 GB ಆವೃತ್ತಿ ರೂ.17,999ಕ್ಕೆ ಮಾರಾಟವಾಗಲಿದೆ.

Best Mobiles in India

English summary
5 Reasons Why the Realme 2 Pro Will Be the Next Mid-Range Champion, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+