ಶಯೋಮಿ Mi 3 ಹ್ಯಾಂಡ್‌ಸೆಟ್ ಹಿಂದಿನ ಯಶೋಗಾಥೆ

By Shwetha

  ಮಾರುಕಟ್ಟೆ ಸಂಶೋಧನಾ ಕಂಪೆನಿಯ ಇತ್ತೀಚಿನ ಅಧ್ಯಯನದ ಪ್ರಕಾರ, ಶಯೋಮಿ, ಚೀನಾದ ಹ್ಯಾಂಡ್‌ಸೆಟ್ ಅತ್ಯಂತ ಹೆಚ್ಚು ಖರೀದಿಯ ಫೋನ್ ಆಗಿ ಮಾರುಕಟ್ಟೆಯಲ್ಲಿ ಈಗ ಸ್ಥಾನ ಪಡೆದಿದ್ದು ವರ್ಷದ ಕಾಲುಭಾಗದಲ್ಲೇ ಚೀನಾದ ಆಪಲ್ ಶಯೋಮಿ ತನ್ನ Mi 3 ಹ್ಯಾಂಡ್‌ಸೆಟ್ ಮೂಲಕ ಕಮಾಲನ್ನೇ ಮಾಡುತ್ತಿದೆ.

  ವರ್ಷದ ಕಾಲು ಭಾಗದಲ್ಲೇ ಕಂಪೆನಿಯು 15 ಮಿಲಿಯನ ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಈಗಾಗಲೇ ಮಾರಾಟ ಮಾಡಿದ್ದು, ಚೀನಾದಲ್ಲಿ ತನ್ನ ಕಾರುಬಾರನ್ನು ಉತ್ತಮ ರೀತಿಯಲ್ಲೇ ಮಾಡಿದ್ದ ಸ್ಯಾಮ್‌ಸಂಗ್ ಅನ್ನು Mi 3 ಹಿಮ್ಮೆಟ್ಟಿಸಿದ್ದು ಸುಳ್ಳಲ್ಲ.

  ಇನ್ನು ಭಾರತೀಯ ಮಾರುಕಟ್ಟೆಯಲ್ಲಿ, ಶಯೋಮಿ ಸ್ಮಾರ್ಟ್‌ಫೋನ್ ಜಗತ್ತನ್ನೇ ಆಳಿ ಬಿಡುವ ಸಾಮರ್ಥ್ಯದೊಂದಿಗೆ ಮುಂದೆ ಬರುತ್ತಿದೆ. ಆನ್‌ಲೈನ್ ಪಾಲುದಾರರಾದ ಫ್ಲಿಪ್‌ಕಾರ್ಟ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಕಂಪೆನಿಯು 10,000 ದಷ್ಟು Mi 3 ಹ್ಯಾಂಡ್‌ಸೆಟ್‌ಗಳನ್ನು ಕೇವಲ 40 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮಾರಾಟ ಮಾಡಿ ಮುಗಿಸಿದೆ.

  ಅತ್ಯುತ್ತಮ ಮಾರುಕಟ್ಟೆ ಮೌಲ್ಯವನ್ನು ಪಡೆದುಕೊಂಡಿರುವ ಶಯೋಮಿ Mi 3 ಭಾರತದಲ್ಲಿ ಜಾದೂವನ್ನೇ ಉತ್ಪತ್ತಿ ಮಾಡುತ್ತಿದೆ ಎಂದು ಹೇಳಿದರೆ ತಪ್ಪಿಲ್ಲ. ಹಾಗಿದ್ದರೆ ಈ ಯಶಸ್ಸಿನ ಹಿಂದಿರುವ ರಹಸ್ಯವೇನು ಎಂಬುದನ್ನು ನಿಮಗೆ ತಿಳಿದುಕೊಳ್ಳಬೇಕೆಂಬ ಆಸಕ್ತಿಯಿದ್ದಲ್ಲಿ ಈ ಲೇಖನ ಖಂಡಿತ ನಿಮ್ಮ ಕುತೂಹಲವನ್ನು ತಣಿಸಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  #1

  ಈ ಫೋನ್‌ನ ವಿಶಿಷ್ಟತೆಯನ್ನು ಕುರಿತು ಹೇಳುವುದಾದರೆ, ಶಯೋಮಿ Mi 3 5 ಇಂಚಿನ IPS ಡಿಸ್‌ಪ್ಲೇಯನ್ನು ಹೊಂದಿದ್ದು ಪೂರ್ಣ HD ರೆಸಲ್ಯೂಶನ್ (1920 x 1080 pixels) ಮತ್ತು 441ppi ಪಿಕ್ಸೆಲ್ ಡೆನ್ಸಟಿ ಇದರಲ್ಲಿದೆ. ಫೋನ್ ಗೋರಿಲ್ಲಾ ಗ್ಲಾಸ್ ಸಂರಕ್ಷಣೆಯೊಂದಿಗೆ ಬಂದಿದ್ದು, 2.3 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 800 (MSM 8974AB), 2 ಜಿಬಿ RAM, MIUI, 13MP ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್, Sony Exmor BSI sensor, f/2.2 aperture, 1080p ಪೂರ್ಣ HD ವೀಡಿಯೊ ದಾಖಲಿಸುವಿಕೆ ಸಾಮರ್ಥ್ಯ 2MP ಮುಂಭಾಗ ಕ್ಯಾಮೆರಾ, 16 GB ಆಂತರಿಕ ಮೆಮೊರಿ, 3050mAh ಬ್ಯಾಟರಿ ಫೋನ್‌ನಲ್ಲಿದೆ. ಇದರ ಬೆಲೆ ರೂ 15,000 ಗಳಾಗಿದ್ದು ಬಳಕೆದಾರರಿಗೆ ಖರೀದಿಯ ಅತ್ಯುತ್ತಮ ಫೋನ್ ಎಂದೆನಿಸಿದೆ.

  #2

  ಹೆಚ್ಚು ವೈಯಕ್ತೀಕರಿಸಿದ ಥೀಮ್‌ಗಳು, ಅನನ್ಯ ಲಾಕ್ ಸ್ಕ್ರೀನ್ ಹೀಗೆ Mi 3 ಒಂದು ಉತ್ತಮ ಫೋನ್ ಎಂದೆನಿಸಿದೆ. ಹೆಚ್ಚು ವೈಯಕ್ತೀಕರಿಸಿದ MIUI ಶಯೋಮಿಯ ಯಶೋಗಾಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.

  #3

  ಶಯೋಮಿ MIUI ನೊಂದಿಗೆ ನೀವು ಅದ್ಭುತವಾದುದನ್ನು ಮಾಡಬಹುದು. ಈ ಹಾರ್ಡ್ - ಕೋಡೆಡ್ ಬಳಕೆದಾರ ಇಂಟರ್ಫೇಸ್ ಆಂಡ್ರಾಯ್ಡ್ ಅಪ್ಲಿಕೇಶನ್ ಆಪ್ ಡ್ರಾವರ್ ಅನ್ನು ಇದು ಹೊರತೆರೆಯಲಿದ್ದು ಇದರ ದೃಶ್ಯಾತ್ಮಕ ಅಂಶವನ್ನು ಆಪಲ್‌ನ iOS ಮತ್ತು ಸ್ಯಾಮ್‌ಸಂಗ್‌ನ ಟಚ್ ವಿಜ್ UI ಹೋಲಿಕೆ ಮಾಡಬಹುದಾಗಿದೆ. ಆಂಡ್ರಾಯ್ಡ್‌ಗೆ ಹೊಸ ನೋಟವನ್ನು ನೀಡಿದ್ದು ಓಎಸ್‌ಗೆ ನಿರಾಳತೆಯನ್ನು ನೀಡಿದೆ.

  #4

  ಭಾರತೀಯ ಫೋನ್ ಗ್ರಾಹಕರು ಫೋನ್ ಖರೀದಿಗೆ ತೊಡಗುವ ಮುನ್ನ ಫೋನ್‌ನ ರಿಪೇರಿಯ ಸೇವಾ ಕೇಂದ್ರಗಳತ್ತ ಕೂಡ ಗಮನಹರಿಸುತ್ತಾರೆ. ಹೊಸ ಹೊಸ ಹ್ಯಾಂಡ್‌ಸೆಟ್‌ಗಳನ್ನು ಮಾರುಕಟ್ಟೆಗೆ ಲಾಂಚ್‌ ಮಾಡುವ ಹೊರತಾಗಿ ಕೂಡ ಶಯೋಮಿ ನಿಖರವಾಗಿ ಸೇವೆಯನ್ನು ನೀಡುತ್ತದೆ ಎಂಬ ಅಂಶವನ್ನು ಗ್ರಾಹಕರ ಮನದಲ್ಲಿ ಮೂಡಿಸುತ್ತದೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಸೇವಾ ಸಂಸ್ಥೆಗಳನ್ನು ನಿಮಗೆ ಕಾಣಬಹುದಾಗಿದೆ.

  #5

  ಗೂಗಲ್‌ನ ಮುಖ್ಯ ವ್ಯಕ್ತಿಯಾದ ಹುಗೋ ಬಾರ್ರ ಸೇವೆಯನ್ನು ಶಯೋಮಿ ಬಳಸಿದ್ದು ತನ್ನ ಹ್ಯಾಂಡ್‌ಸೆಟ್ ಮಾರಾಟದಲ್ಲಿ ಇವರ ಮಾತುಗಳ ಪ್ರಭಾವವನ್ನು ಬಳಸಿಕೊಂಡಿದೆ ಎಂದೇ ಹೇಳಬಹುದು. ಗೂಗಲ್‌ನ ಆಂಡ್ರಾಯ್ಡ್ ವಿಭಾಗದ ಉಪಾಧ್ಯಕ್ಷರಾಗಿರುವ ಶ್ರೀಮಾನ್ ಬಾರ್ರ ತಮ್ಮ ಸಂಸ್ಥೆಯ ಕೆಲವೊಂದು ಸಲಹೆಗಳನ್ನು ಶಯೋಮಿ ಮೇಲೆ ಪ್ರಯೋಗಿಸಿದ್ದು ಮಾರುಕಟ್ಟೆಯಲ್ಲಿ ಹೆಚ್ಚಿನ ಪರಿಣಾಮವನ್ನು ಬೀರುವಲ್ಲಿ ಈ ಅಂಶ ನೆರವಾಗಿದೆ. ಕಂಪೆನಿಯು ಭಾರತವಲ್ಲದೆ, ಇಂಡೋನೇಷ್ಯಾ, ಮಲೇಷ್ಯಾ, ಪಿಲಿಫೈನ್ಸ್ ಬ್ರೆಜಿಲ್ ಮತ್ತು ಟರ್ಕಿಯಲ್ಲಿ ತನ್ನ ವ್ಯಾಪಾರವನ್ನು ವೃದ್ಧಿಸುವ ನಿಟ್ಟಿನಲ್ಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  This article tells about 5 Reasons Why Xiaomi Mi 3 Is a Smash Hit in India.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more