ಐಫೋನ್ Xನಲ್ಲೂ ಇಲ್ಲದ ಆಯ್ಕೆಗಳು ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8ನಲ್ಲಿದೆ.!
ಐಫೋನ್ X ನಲ್ಲಿ ಇಲ್ಲದ, ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8ನಲ್ಲಿರುವ ವಿಭಿನ್ನ ಆಯ್ಕೆಗಳು ಯಾವುದು ಎನ್ನುವ ವಿಷಯವನ್ನು ತಿಳಿಸುವ ಪ್ರಯತ್ನ ಇದಾಗಿದೆ. ಐಫೋನ್ ಗಿಂತಲೂ ಸ್ಯಾಮ್ ಸಂಗ್ ಬೆಸ್ಟ್ ಅನ್ನುವುದೇ ಇದರ ಉದ್ದೇಶ.
ಆಪಲ್ ನೂತನವಾಗಿ ಬಿಡುಗಡೆ ಮಾಡಿರುವ ಐಫೋನ್ X ಸಾಕಷ್ಟು ಸುದ್ದಿಯನ್ನು ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಆಂಡ್ರಾಯ್ಡ್ ಟಾಪ್ ಎಂಡ್ ಆಗಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8 ಹಾಗೂ ಐಫೋನ್ X ನೊಂದಿಗೆ ಹೊಂಣಿಕೆ ಮಾಡಿಕೊಂಡರೆ ಐಫೋನ್ ನಲ್ಲಿ ಹಲವು ಆಯ್ಕೆಗಳು ಇಲ್ಲವೇ ಇಲ್ಲ ಎನ್ನಬಹುದು.

ಐಫೋನ್ X ನಲ್ಲಿ ಇಲ್ಲದ, ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8ನಲ್ಲಿರುವ ವಿಭಿನ್ನ ಆಯ್ಕೆಗಳು ಯಾವುದು ಎನ್ನುವ ವಿಷಯವನ್ನು ತಿಳಿಸುವ ಪ್ರಯತ್ನ ಇದಾಗಿದೆ. ಐಫೋನ್ ಗಿಂತಲೂ ಸ್ಯಾಮ್ ಸಂಗ್ ಬೆಸ್ಟ್ ಅನ್ನುವುದೇ ಇದರ ಉದ್ದೇಶ.

ಫಿಂಗರ್ ಪ್ರಿಂಟ್ ಸ್ಕ್ಯಾನರ್:
ಐಫೋನ್ X ನಲ್ಲಿ ಆಪಲ್ ಫೇಸ್ ಐಡಿಯನ್ನು ಪರಿಚಯಿಸಿದೆ ಆದರೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡುವುದಲ್ಲಿ ಹಿಂದುಳಿದಿದೆ. ಆದರೆ ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8ನಲ್ಲಿ ನೀವು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಕಾಣಬಹುದಾಗಿದೆ.

ಸ್ಕ್ರಿನ್ ಆಫ್ ಮೆಮೊ ಆಯ್ಕೆ:
ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8ನಲ್ಲಿ ಎಸ್ ಪೆನ್ ನೀಡಲಾಗಿದ್ದು, ಇದು ಈ ಫೋನಿನ ವಿಶೇಷತೆಗಳಲ್ಲಿ ಒಂದಾಗಿದ್ದು, ಇದರ ಮೂಲಕ ನೀವು ಸ್ಕ್ರಿನ್ ಆಫ್ ಆಗಿದ್ದರೂ ಮೆಮೊಗಳನ್ನು ಬರೆದು ಇಟ್ಟುಕೊಳ್ಳಬಹುದಾಗಿದೆ. ಆದರೆ ಈ ಆಯ್ಕೆ ಐಫೋನ್ ನಲ್ಲಿ ಇಲ್ಲ.

ಟ್ರಾನ್ಸ್ ಲೆಷನ್:
ಇದಲ್ಲದೇ ನೀವು ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8ನಲ್ಲಿ ಎಸ್ ಪೆನ್ ಬಳಕೆ ಮಾಡಿಕೊಂಡು ಟೆಕ್ಸ್ ಗಳನ್ನು ಟ್ರಾನ್ಸ್ ಲೆಟ್ ಮಾಡಿಕೊಳ್ಳಬಹುದಾಗಿದೆ. ಇದು ಗೂಗಲ್ ಟ್ರಾನ್ಸ್ ಲೆಷನ್ ಮೂಲಕ ಕಾರ್ಯನಿರ್ವಹಿಸಲಿದೆ. ಅಲ್ಲದೇ ವೇಗವಾಗಿ ಟ್ರಾನ್ಸ್ ಲೆಟ್ ಮಾಡಲಿದೆ.

ಡ್ಯುಯಲ್ ಕ್ಯಾಮೆರಾ:
ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8ನಲ್ಲಿ ಐಫೋನ್ ಗಿಂತಲೂ ಉತ್ತಮ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. ಐಫೋನ್ ನಲ್ಲಿ ಈಗ ಇದನ್ನು ಕಾಣಬಹುದಾಗಿದೆ. ಸ್ಯಾಮ್ ಸಂಗ್ ಡ್ಯುಯಲ್ ಕ್ಯಾಮೆರಾ ಹಲವು ಆಯ್ಕೆಗಳನ್ನು ಹೊಂದಿದೆ ಎನ್ನಲಾಗಿದೆ.
ಹ್ಯಾಂಡ್ ರೈಟಿಂಗ್ :
ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8ನಲ್ಲಿರುವ ಎಸ್ ಫೋನ್ ಕೇವಲ ಬರೆಯಲು ಅವಕಾಶ ಮಾಡಿಕೊಡುವುದಲ್ಲದೇ ಹ್ಯಾಂಡ್ ರೈಟಿಂಗ್ ಅನ್ನು ಟೆಕ್ಸ್ ಆಗಿ ಬದಲಾಯಿಸುವ ಫಿಚರ್ ಅನ್ನು ಸಹ ಒಳಗೊಂಡಿದೆ ಎನ್ನಲಾಗಿದೆ. ಅದುವೇ ವೇಗವಾಗಿ ಮಾಡಲು ಶಕ್ತವಾಗಿದೆ.


Click it and Unblock the Notifications








