ಆಪಲ್ 6 ನಲ್ಲಿ ನಿರೀಕ್ಷಿಸಬಹುದಾದ ಅಂಶಗಳ ಪಕ್ಷಿನೋಟ

Written By:

ಆಪಲ್‌ನ ಒಂದು ಹವ್ಯಾಸ ಮತ್ತು ವಿಶಿಷ್ಟತೆ ಅಂದರೆ ಯಾವಾಗಲೂ ಸುದ್ದಿಯಲ್ಲಿ ಇರುವುದಾಗಿದೆ. ಇದು ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಗೂಗಲ್ ಹುಡುಕಾಟವನ್ನು ಹೊಂದಿದೆ. ಇನ್ನು ಆಪಲ್ ಹೆಚ್ಚು ಸುದ್ದಿಯಲ್ಲಿರುವುದು ಐಫೋನ್ 6 ನಿಂದ ಆಗಿದೆ.

ಆಪಲ್‌ನ ಐಫೋನ್ 6 ಹೆಚ್ಚು ವದಂತಿಗಳಿಂದ ಪ್ರಸಿದ್ಧಿಯಲ್ಲಿತ್ತು ಇನ್ನು ಮನರಂಜನಾತ್ಮಕ ವ್ಯವಹಾರಗಳಲ್ಲಿ ಇದು ಪ್ರಸಿದ್ಧಿಯನ್ನು ಪಡದುಕೊಂಡಿತ್ತು ಎಂದೇ ಹೇಳಬಹುದು. ಈ ವರ್ಷದಲ್ಲೇ ಆಪಲ್ ಐಫೋನ್ ಆಪಲ್‌ನ ಪಟ್ಟಿಯಿಂದ ಬಂದಿದ್ದು ಮುಂಬರಲಿರುವ ಆಪಲ್ 6 ಹೆಚ್ಚಿನ ಆಕರ್ಷಣೆಯನ್ನು ಆಪಲ್ ಬಳಕೆದಾರರಲ್ಲಿ ಉಂಟು ಮಾಡಿದೆ ಎಂದೇ ಹೇಳಬಹುದು.

ಆದರೆ ಐಫೋನ್ 5 ನಲ್ಲಿ ಇಲ್ಲದಿರುವಂತಹ ಕೆಲ ಅಂಶಗಳನ್ನು ಐಫೋನ್ 6 ನಲ್ಲಿ ನಿರೀಕ್ಷಿಸಲಾಗಿದೆ ಎಂಬುದು ಹೆಚ್ಚು ಪ್ರಚಲಿತದಲ್ಲಿರುವ ಸುದ್ದಿಯಾಗಿದೆ ಇಂದಿನ ಲೇಖನದಲ್ಲಿ ಈ ವಿವರವಾದ ಮಾಹಿತಿಯನ್ನು ನಾವು ನೀಡುತ್ತಿದ್ದು ನಿಮಗೆ ಇದು ಐಫೋನ್ 6 ನ ಒಂದು ಸಣ್ಣ ನೋಟವನ್ನು ನೀಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ 6 ನಿರೀಕ್ಷೆಗಳು: ಸುಧಾರಿತ ಕೀಬೋರ್ಡ್

#1

ಕೆಲವು ವರಷಗಳಿಂದೀಚೆಗೆ ಆಂಡ್ರಾಯ್ಡ್ ತನ್ನದೇ ಆದ ಹೆಸರನ್ನು ಮಾರುಕಟ್ಟೆಯಲ್ಲಿ ಸೃಷ್ಟಿಸಿದೆ. ಇನ್ನು ಓಎಸ್ ಆಧಾರಿತ ಹ್ಯಾಂಡ್‌ಸೆಟ್‌ಗಳಲ್ಲಿ ಮೂರನೇ ವ್ಯಕ್ತಿ ಕೀಬೋರ್ಡ್‌ಗಳನ್ನು ನಾವು ನೋಡಬಹುದಾಗಿದ್ದು ಐಫೋನ್ 6 ನಲ್ಲಿ ಕೊಂಚ ವೇಗವಾಗಿರುವ ಪಠ್ಯ ಉತ್ಪಾದಿಸಲು ಹೆಚ್ಚು ಆರಾಮದಾಯಕವಾಗಿರುವ ಕೀಬೋರ್ಡ್ ಅನ್ನು ನಾವು ನಿರೀಕ್ಷಿಸುತ್ತಿದ್ದೇವೆ.

ಐಫೋನ್ 6 ನಿರೀಕ್ಷೆಗಳು: ಮೈಕ್ರೋ HDMI ಪೋರ್ಟ್

#2

ಮೈಕ್ರೋ HDMI ಪೋರ್ಟ್ ನಿಮ್ಮ ಫೋನ್‌ನಲ್ಲಿ ವೀಡಿಯೋಗಳನ್ನು ಆಡಲು ಹೆಚ್ಚು ಸಹಕಾರಿಯಾಗಿದೆ. ಹೆಚ್ಚಿನ ಆಂಡ್ರಾಯ್ಡ್ ಡಿವೈಸ್‌ಗಳು ಇದೇ ಅಂಶಕ್ಕೆ ಹೆಚ್ಚು ಒತ್ತನ್ನು ನೀಡುತ್ತಿದೆ ಆದರೆ ನೆಕ್ಸ್ಟ್ iPhone ಈ ಅಂಶವನ್ನು ನೀಡಿಲ್ಲವೆಂಬುದೇ ಆಶ್ಚರ್ಯಕರ ಸಂಗತಿಯಾಗಿದೆ.

ಐಫೋನ್ 6 ನಿರೀಕ್ಷೆಗಳು: ರಿಮೂವೇಬಲ್ ಬ್ಯಾಟರಿ

#3

ಹೆಚ್ಚಿನ ಐಫೋನ್‌ಗಳು ರಿಮೂವೇಬಲ್ ಬ್ಯಾಟರಿಗಳನ್ನು ಹೊಂದಿಲ್ಲ ಮತ್ತು ಇದೇ ಅಂಶವನ್ನು ಪ್ರಮುಖವಾಗಿಸಿಕೊಂಡು ಮುಂದಿನ ಉತ್ಪನ್ನಗಳಲ್ಲಿ ರಿಮೂವೇಬಲ್ ಬ್ಯಾಟರಿಗಳನ್ನು ನೀಡುವುದಾಗಿ ಕಂಪೆನಿ ತಿಳಿಸುತ್ತಿದೆ . ಇನ್ನು ಐಫೋನ್ 6 ನಲ್ಲಿ ಈ ಅಂಶವನ್ನು ಗಮನಿಸಬಹುದೆಂಬುದು ನಮ್ ಸದಾಶಯವಾಗಿದೆ.

ಐಫೋನ್ 6 ನಿರೀಕ್ಷೆಗಳು: ಮೈಕ್ರೋಎಸ್‌ಡಿ ಕಾರ್ಡ್

#4

ಇನ್ನು ಈ ಐಫೋನ್ ಮೈಕ್ರೋ ಎಸ್‌ಡಿ ಕಾರ್ಡ್ ಅನ್ನು ಬೆಂಬಲಿಸಲಿ ಎಂಬುದು ನಮ್ಮ ಸದಾಶಯವಾಗಿದೆ. ಈ ಫೋನ್ ತನ್ನದೇ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿಕೊಂಡು ಬರುವುದು ನಿಜವಾಗಿದೆ ಆದರೂ ಐಫೋನ್‌ನಲ್ಲಿ ನಾವು ಹೆಚ್ಚುವರಿ ಸ್ಥಳಾವಕಾಶವನ್ನು ಬಯಸುತ್ತೇವೆ.

ಐಫೋನ್ 6 ನಿರೀಕ್ಷೆಗಳು: 128GB ವಿಸ್ತರಣಾ ಸಾಮರ್ಥ್ಯ

#5

ಎಲ್ಲಿಯಾದರೂ ಮೈಕ್ರೋ ಎಸ್‌ಡಿ ಕಾರ್ಡ್ ಅನ್ನು ಆಪಲ್ ನೀಡುತ್ತದೆ ಎಂದಾದಲ್ಲಿ ಇದು 128GB ಗಳ ವಿಸ್ತರಣಾ ಸಾಮರ್ಥ್ಯವನ್ನು ನೀಡಬಹುದೆಂಬುದು ನಮ್ಮ ಸದಾಶಯವಾಗಿದೆ. ಐಪ್ಯಾಡ್ ಕ್ಲಾಸಿಕ್ ಒಂದೊಮ್ಮೆ 160 ಜಿಬಿಯ ವಿಸ್ತರಣಾ ಸಾಮರ್ಥ್ಯವನ್ನು ನೀಡಿತ್ತು ಎಂಬುದು ದಾಖಲೆಯಾಗಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about 5 Things iPhone 5 Can't Do Which We Expect to See in iPhone 6.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot