Samsungನ ಈ ಮೊಬೈಲ್ ಮೇಲೆ ಶೇ.50ರಷ್ಟು ಭರ್ಜರಿ ಡಿಸ್ಕೌಂಟ್: ಈಗ ಬಿಟ್ಟರೆ ಮತ್ತೆ ಸಿಗಲ್ಲ!
ವಿಶ್ವದ ಪ್ರತಿಷ್ಠಿತ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಸ್ಯಾಮ್‌ಸಂಗ್, ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಹೊಂದಿದೆ. ಇದು ವಿವಿಧ ರೀತಿಯ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಗ್ರಾಹಕರ ಹಾಟ್ ಫೇವರಿಟ್ ಆಗಿವೆ. ಕೆಲವೊಮ್ಮೆ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತದೆ. ಈ ಪೈಕಿ ಇತ್ತೀಚೆಗೆ ಬಿಡುಗಡೆಯಾಗಿರುವ Samsung Galaxy S23 FE ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಬರೋಬ್ಬರಿ ಶೇ.50ರಷ್ಟು ಭಾರೀ ರಿಯಾಯಿತಿ ಸಿಗಲಿದೆ. ಈ Samsung Galaxy S23 FE ಮೊಬೈಲ್ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
Samsung Galaxy S23 FE ಮೊಬೈಲ್ ಸಖತ್ ಸ್ಟೈಲಿಶ್ ಲುಕ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಮೂಲ ಬೆಲೆಗಿಂತಲೂ ಭಾರೀ ಅಗ್ಗದ ಬೆಲೆಗೆ ಸಿಗುತ್ತಿದೆ. ಈ ಮೊಬೈಲ್‌ನ ಖರೀದಿಯ ಮೇಲೆ ಶೇ.50ರಷ್ಟು ಡಿಸ್ಕೌಂಟ್ ದೊರೆಯುತ್ತಿದೆ. ಸ್ಯಾಮ್‌ಸಾಂಗ್‌ನ ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಯ ಮೇಲೆ ಸುಮಾರು 40 ಸಾವಿರ ರೂಪಾಯಿ ಕಡಿತಗೊಂಡು ಕೇವಲ 39,999 ರೂ.ಗೆ ಗ್ರಾಹಕರಿಗೆ ಲಭ್ಯವಿದೆ. ಇನ್ನು, ಫ್ಲಿಪ್‌ಕಾರ್ಟ್ ಎಕ್ಸಿಸ್ ಕಾರ್ಡ್ ಹೊಂದಿದವರಿಗೆ ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತದೆ.

ಸ್ಯಾಮ್‌ಸಾಂಗ್ ಕಂಪನಿಯು ಈ Samsung Galaxy S23 FE ಮೊಬೈಲ್ ಅನ್ನು ಸುಮಾರು 80 ಸಾವಿರ ರೂ.ಗೆ ಬಿಡುಗಡೆ ಮಾಡಿತ್ತು. ಆದರೆ, ಈಗ ಈ ಸ್ಮಾರ್ಟ್‌ಫೋನ್ ಬಿಡುಗಡೆಯ ಬೆಲೆಗಿಂತ ಕಡಿಮೆಯಾಗಿದೆ. ಈ ಫೋನ್‌ನ ಜೊತೆಗೆ ನೀವು ಶಕ್ತಿಯುತ ಪ್ರೊಸೆಸರ್ ಮತ್ತು ಉನ್ನತ ದರ್ಜೆಯ ಪ್ರಮುಖ ಕ್ಯಾಮೆರಾ ಸೆಟಪ್ ಅನ್ನು ಪಡೆಯಬಹುದು. ನೀವೇನಾದರೂ, ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಹೊಂದಿದ್ದರೆ ಇದರ ಮೇಲೆ ಶೇ.10ರಷ್ಟು ಆಫರ್ ನೀಡಲಾಗುತ್ತಿದೆ.
ಬರೋಬ್ಬರಿ 40,000 ರೂ. ಸೇವ್!
Flipkartನಲ್ಲಿ ನೀವು ಅಗ್ಗದ ಬೆಲೆಗೆ Samsung Galaxy S23 FEಯನ್ನು ಖರೀದಿಸಬಹುದು. ನೀವು ಸುಮಾರು 40 ಸಾವಿರ ರೂ.ಗಳ ದೊಡ್ಡ ಉಳಿತಾಯ ಮಾಡಬಹುದು. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ 79,999 ರೂ.ಗೆ ಲಭ್ಯವಿತ್ತು. ಪ್ರಸ್ತುತ ಈ ಫೋನ್ ಖರೀದಿಯ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಈ ಕೊಡುಗೆಯ ನಂತರ ನೀವು ಇದನ್ನು ನೇರವಾಗಿ 39,999 ರೂ.ಗೆ ಖರೀದಿಸಬಹುದು. ಅಂದರೆ, ನೀವು ಬರೋಬ್ಬರಿ 40,000 ರೂ.ಗಳನ್ನು ಸೇವ್ ಮಾಡಬಹುದು.
35,000 ರೂ.ವರೆಗೆ ಎಕ್ಸ್‌ಚೇಂಜ್ ಆಫರ್
ಭಾರೀ ಬೆಲೆ ಕಡಿತದ ಜೊತೆಗೆ ಗ್ರಾಹಕರಿಗೆ ಎಕ್ಸ್‌ಚೇಂಜ್ ಆಫರ್ ಕೂಡ ನೀಡಲಾಗುತ್ತಿದೆ. Samsung Galaxy S23 FE ಖರೀದಿಯ ಮೇಲೆ ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು 35,000 ರೂ.ವರೆಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು. ನೀವು ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಮೌಲ್ಯ ಪಡೆದರೆ, ನೀವು ಈ ಪ್ರೀಮಿಯಂ ಫೋನ್ ಅನ್ನು ಕೇವಲ 4,000 ಅಥವಾ 5,000 ರೂ.ಗೆ ಖರೀದಿಸಬಹುದಾಗಿದೆ. ಎರಡನೇ ಬಾರಿ ಈ ಪ್ರೀಮಿಯಂ ಫೋನ್‌ನಲ್ಲಿ ಇಷ್ಟು ದೊಡ್ಡ ಆಫರ್ ನೀಡಲಾಗುತ್ತಿದೆ.
ಈ ಮೊಬೈಲ್ ಏನೆಲ್ಲಾ ಫೀಚರ್ಸ್ ಹೊಂದಿದೆ?
ಈ ಮೊಬೈಲ್ 6.4 ಇಂಚಿನ ಡೈನಾಮಿಕ್ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1080 x 2340 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 120Hzವರೆಗೆ ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ. ಇದು 83.2% ಸ್ಕ್ರೀನ್-ಟು-ಬಾಡಿ ಅನುಪಾತ, ಡಿಸ್‌ಪ್ಲೇ 19.5:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇದು 4,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದ್ದು, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಹೊಂದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಪ್ರೊಸೆಸರ್ ಏನು?
ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್ ಸಾಮರ್ಥ್ಯ ಹೊಂದಿದ್ದು, ಆಂಡ್ರಾಯ್ಡ್ 14 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಇದು 8GB RAM + 256GB ಇಂಟರ್ನಲ್ ಸ್ಟೋರೇಜ್ ಪಡೆದುಕೊಂಡಿದೆ. ಟ್ರಿಪಲ್ ರಿಯರ್ ಫ್ಲೋಟಿಂಗ್ ಕ್ಯಾಮೆರಾ ಹೊಂದಿದೆ. ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್, ದ್ವಿತೀಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಮತ್ತು ತೃತೀಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಒಳಗೊಂಡಿದೆ. ಜೊತೆಗೆ, 10 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಇರಲಿದೆ.


Click it and Unblock the Notifications








