ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು
ಈ ತಿಂಗಳ ಆರಂಭದಲ್ಲಿ ಆಂಡ್ರಾಯ್ಡ್ 4.3 ಜೆಲ್ಲಿಬೀನ್ ಆಪರೇಟಿಂಗ್ ಸಿಸ್ಟಂ ಬಿಡುಗಡೆಯಾಗಿದೆ. ಈ ಆಪರೇಟಿಂಗ್ ಸಿಸ್ಟಂ ಬಿಡುಗಡೆಯಾಗದ ಮೇಲೆ ವಿಶ್ವದ ದೊಡ್ಡ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿಗಳು ಮುಂದಿನ ತಿಂಗಳು ಈ ಹೊಸ ಆಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮುಂದಾಗಿವೆ.
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಓಎಸ್ ಆಪಡೇಟ್ ಆದ ಮೇಲೆ ಹೊಸ ಸ್ಮಾರ್ಟ್‌ಫೋನ್ ಬರುತ್ತದೆ ಗೊತ್ತಾಗಿದ್ದೆ ತಡ ಆಪಲ್ ಸಹ ಕಡಿಮೆ ಬಜೆಟ್‌ನ ಐಫೋನ್ ತಯಾರಿಸಲು ಮುಂದಾಗಿದ್ದು, ಐಫೋನ್ 5 ಸಿ ಸಹ ಮುಂದಿನ ತಿಂಗಳು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಆಂಡ್ರಾಯ್ಡ್, ಐಓಎಸ್‌ನಿಂದ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರುತ್ತಿದ್ದಂತೆ ಬ್ಲ್ಯಾಕ್‌ಬೆರಿ ಸಹ ಈಗ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ಸೆಪ್ಟೆಂಬರ್‌ನಲ್ಲಿ ಬ್ಲ್ಯಾಕ್‌ಬೆರಿ ದೊಡ್ಡ ಸ್ಕ್ರೀನ್ ಸ್ಮಾರ್ಟ್‌ಫೋನ್ ಝಡ್ 30 ಬಿಡುಗಡೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ಗಿಝ್‌ಬಾಟ್ ಇಂದು ಮುಂದಿನ ತಿಂಗಳು ಬಿಡಗಡೆಯಾಗಲಿರುವ ಟಾಪ್ ಕಂಪೆನಿಗಳ ಟಾಪ್ ಫೋನ್‌ಗಳು ಯಾವುದು ಮತ್ತು ಅವುಗಳು ಏನೇನು ವಿಶೇಷತೆಗಳನ್ನು ಒಳಗೊಂಡಿರುತ್ತದೆ ಎನ್ನುವುದಕ್ಕೆ ಆ ಮಾಹಿತಿಯನ್ನು ತಂದಿದೆ. ಈ ಸ್ಮಾರ್ಟ್‌ಫೋನ್‌ಗಳ ವಿಶೇಷತೆಗಳನ್ನು ಕಂಪೆನಿಗಳು ಅಧಿಕೃತವಾಗಿ ಇನ್ನೂ ಎಲ್ಲಿಯೂ ಹೇಳಿಲ್ಲ. ಆದರೆ ಮಾಧ್ಯಮಗಳಲ್ಲಿ ಮಾಹಿತಿಗಳು ಸೋರಿಕೆಯಾಗಿರುವುದರಿಂದ ಈ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ವಿಶೇಷತೆ:
ಸೋನಿ ಎಕ್ಸ್‌ಪೀರಿಯಾ ಹೊನಮಿ
5.0 ಇಂಚಿನ ಟಚ್‌ಸ್ಕ್ರೀನ್(1920x1080 ಪಿಕ್ಸೆಲ್)
2 GB RAM
20 ಎಂಪಿ ಹಿಂದುಗಡೆ ಕ್ಯಾಮೆರಾ(ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್)
2.2 ಎಂಪಿ ಮುಂದುಗಡೆ ಕ್ಯಾಮೆರಾ
3000mAh ಬ್ಯಾಟರಿ
ಎಚ್‌ಟಿಸಿ ಒನ್ ಮ್ಯಾಕ್ಸ್
ವಿಶೇಷತೆ:
5.9 ಇಂಚಿನ ಸ್ಕ್ರೀನ್(1920x1080 ಪಿಕ್ಸೆಲ್)
2.3GHz ಸ್ನಾಪ್‌ಡ್ರಾಗನ್ 800 ಪ್ರೊಸೆಸರ್
2GB RAM
32/64GB ಆಂತರಿಕ ಮೆಮೋರಿ
3,200mAh ಬ್ಯಾಟರಿ
ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್ 3
ವಿಶೇಷತೆ:
5.7 ಇಂಚಿನ AMOLED ಸ್ಕ್ರೀನ್
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್
ಅಕ್ಟಾ ಕೋರ್ ಪ್ರೊಸೆಸರ್
3GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
ಐಫೋನ್ 5 ಸಿ
ವಿಶೇಷತೆ:
4.5 ಇಂಚಿನ ಸ್ಕ್ರೀನ್
5ಎಂಪಿ ಕ್ಯಾಮೆರಾ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
1GB RAM
ಬ್ಲ್ಯಾಕ್‌ಬೆರಿ ಝಡ್ 30
ವಿಶೇಷತೆ:
5 ಇಂಚಿನ ಸುಪರ್ AMOLED ಸ್ಕ್ರೀನ್
2GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ಲೆನೊವೋ ಕೆ 910
ವಿಶೇಷತೆ:
2.2GHz ಡ್ಯುಯಲ್ ಕೋರ್ ಪ್ರೊಸೆಸರ್
5 ಇಂಚಿನ ಸ್ಕ್ರೀನ್(1920 x 1280 ಪಿಕ್ಸೆಲ್)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್


Click it and Unblock the Notifications








