Home
ಮೊಬೈಲ್

2019ರಲ್ಲಿ ಬೆಲೆ ಕಳೆದುಕೊಂಡ ಪ್ರಮುಖ ಬಜೆಟ್ ಸ್ಮಾರ್ಟ್‌ಫೋನ್‌ಗಳ ಲೀಸ್ಟ್!

ಶಿಯೋಮಿ, ಸ್ಯಾಮ್ಸಂಗ್, ಹಾನರ್ ಮತ್ತು ಆಸಸ್ ಸೇರಿದಂತೆ ಬಹುತೇಕ ಎಲ್ಲಾ ಮೊಬೈಲ್ ಕಂಪೆನಿಗಳು ಮೊಬೈಲ್ ಮಾರಾಟದ ಅಂಕಿ ಅಂಶಗಳನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ತಮ್ಮ ಸ್ಮಾರ್ಟ್‌ಪೋನ್‌ಗಳ ಬೆಲೆಯನ್ನು ಇಳಿಸಿ ಹೊಸವರ್ಷಕ್ಕೆ ಗಿಫ್ಟ್ ನೀಡಿವೆ. ಮೊಬೈಲ್ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾದಂತೆ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿಯೂ ಇಳಿಕೆ ಕಂಡುಬಂದಿದೆ.

2019ರಲ್ಲಿ ಬೆಲೆ ಕಳೆದುಕೊಂಡ ಪ್ರಮುಖ ಬಜೆಟ್ ಸ್ಮಾರ್ಟ್‌ಫೋನ್‌ಗಳ ಲೀಸ್ಟ್!

ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ, ವಿವೊ ನೆಕ್ಸ್, ಶಿಯೋಮಿ ಪೊಕೊ ಎಫ್1, ಆಸುಸ್ ಝೆನ್‌ಫೋನ್ ಎಂ1 ಸೇರಿದಂತೆ ಬಹುತೇಕ ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆ ಕಂಡಿದ್ದು, ಈಗ ಮೊಬೈಲ್ ಪ್ರಿಯರ ಕೈಗೆಟುಕ್ಕುತ್ತಿವೆ. ಹಾಗಾದರೆ, ಭಾರತದಲ್ಲಿ ಇತ್ತೀಚಿಗೆ ಬೆಲೆ ಕಳೆದುಕೊಂಡಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಯಾವುದು ಎಂಬುದನ್ನು ಮುಂದಿನ ಸ್ಲೈಡರ್‌ಗಲ್ಲಿ ತಿಳಿಯಿರಿ.

ರೆಡ್‌ಮಿ ನೋಟ್ 5 ಪ್ರೊ

ರೆಡ್‌ಮಿ ನೋಟ್ 5 ಪ್ರೊ

ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನಿನ 4GB RAM ಮತ್ತು 6GB RAM ಆವೃತ್ತಿಗಳು ಎರಡೂ ಬೆಲೆ ಕಡಿತಗೊಂಡಿವೆ. ರೆಡ್‌ಮಿ ನೋಟ್ 5 ಪ್ರೊ 4GB RAM ಮಾದರಿಯ ಸ್ಮಾರ್ಟ್‌ಫೋನ್ ಬೆಲೆ ಈಗ ಕೇವಲ 12,999 ರೂ.ಗಳಾದರೆ, 6GB RAM ಆವೃತ್ತಿಯ ಸ್ಮಾರ್ಟ್‌ಫೋನ್ ಬೆಲೆ ಕೇವಲ 14,999 ರೂಪಾಯಿಗಳಾಗಿವೆ.

ವಿವೊ ನೆಕ್ಸ್

ವಿವೊ ನೆಕ್ಸ್

ವಿವೊ ಕಂಪೆನಿಯ ಬಹುನಿರೀಕ್ಷಿತ ಹೈ ಎಂಡ್ ಸ್ಮಾರ್ಟ್‌ಫೋನ್ ಎಂದೇ ಹೆಸರಾಗಿರುವ 'ವಿವೊ ನೆಕ್ಸ್' ಸ್ಮಾರ್ಟ್‌ಫೋನಿನ ಬೆಲೆ ಭಾರೀ ಕಡಿತಗೊಂಡಿದೆ. ಹೊಸ ವರ್ಷದಲ್ಲಿ ಭಾರತದಲ್ಲಿ 5,000 ರೂ.ಗಳಷ್ಟು ಭಾರೀ ಬೆಲೆಯನ್ನು ಕಳೆದುಕೊಂಡಿರುವ 'ವಿವೊ ನೆಕ್ಸ್' ಸ್ಮಾರ್ಟ್‌ಫೋನಿನ ಪ್ರಸ್ತುತ ಬೆಲೆ 39,990 ರೂಪಾಯಿಗಳಾಗಿವೆ.

ಪೊಕೊ ಎಫ್1

ಪೊಕೊ ಎಫ್1

ಬಜೆಟ್ ಗೇಮಿಂಗ್ ಸ್ಮಾರ್ಟ್‌ಫೋನ್ ಎಂದೇ ಹೆಸರಾಗಿರುವ ಶಿಯೋಮಿಯ ಪೊಕೊ ಎಫ್ 1 ಸ್ಮಾರ್ಟ್‌ಫೋನಿನ ಬೆಲೆ 1000 ರೂ. ಕಡಿತವಾಗಿದೆ. 6 ಜಿಬಿ RAM + 64ಜಿಬಿ ಶೇಖರಣಾ ಮೆಮೊರಿಯ ಪೊಕೊ ಎಫ್ 1 ಫೋನಿನ ಬೆಲೆ ಈಗ 19,999 ರೂ.ಗಳಾಗಿದ್ದರೆ, 8ಜಿಬಿ RAM + 256 ಜಿಬಿ ಮಾದರಿ ಪೋನ್ ಬೆಲೆ 27,999 ರೂಪಾಯಿಗಳಾಗಿದೆ.

ಮ್ಯಾಕ್ಸ್ ಪ್ರೊ ಎಂ1

ಮ್ಯಾಕ್ಸ್ ಪ್ರೊ ಎಂ1

ಆಸುಸ್ ಕಂಪೆನಿಯ ಝೆನ್ಫೋನ್ ಮ್ಯಾಕ್ಸ್ ಪ್ರೊ ಎಂ2 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ನಂತರ ತನ್ನ ಝೆನ್ಫೋನ್ ಮ್ಯಾಕ್ಸ್ ಪ್ರೊ ಎಂ1 ತನ್ನ ಬೆಲೆಯನ್ನು ಕಳೆದುಕೊಂಡಿದೆ. ಮೊಬೈಲ್ ಪ್ರಿಯರ ನೆಚ್ಚಿನ ಬಜೆಟ್ ಸ್ಮಾರ್ಟ್‌ಫೋನ್ ಆಗಿರುವ ಮ್ಯಾಕ್ಸ್ ಪ್ರೊ ಎಂ1 ಪೋನ್ ಬೆಲೆ ಇದೀಗ 1,000ರೂ. ಇಳಿಕೆಯಾಗಿ ಪ್ರಸ್ತುತ ಕೇವಲ 9,999 ರೂಪಾಯಿಗಳಿಗೆ ಲಭ್ಯವಿದೆ.

ರೆಡ್‌ಮಿ ವೈ2

ರೆಡ್‌ಮಿ ವೈ2

ಶಿಯೋಮಿ ಕಂಪೆನಿಯ ಮತ್ತೊಂದು ಜನಪ್ರಿಯ ಸ್ಮಾರ್ಟ್‌ಪೋನ್ ಶಿಯೋಮಿ ರೆಡ್‌ಮಿ ವೈ2 ಕೂಡ ಬೆಲೆ ಕಳೆದುಕೊಂಡಿದೆ. 4RAM ಮತ್ತು 64GB ಆಂತರಿಕ ಸಂಗ್ರಹ ಮಾದರಿಯ ಈ ಸ್ಮಾರ್ಟ್‌ಫೋನ್ ಬೆಲೆ 1,000 ರೂಪಾಯಿಗಳಷ್ಟು ಇಳಿಕೆಯಾಗಿದ್ದು, ಪ್ರಸ್ತುತ 11,999 ರೂಪಾಯಿಗಳಿಗೆ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದೆ.

ಒಪ್ಪೊ ಎಫ್9 ಪ್ರೊ

ಒಪ್ಪೊ ಎಫ್9 ಪ್ರೊ

ಸೆಲ್ಫಿ ಮಾಸ್ಟರ್ ಎಂದೇ ಹೆಸರಾಗಿರುವ ಒಪ್ಪೊ ಕಂಪೆನಿಯ ಒಪ್ಪೊ ಎಫ್9 ಪ್ರೊ ಸ್ಮಾರ್ಟ್‌ಫೋನಿನ ಬೆಲೆ ಕೂಡ ಭಾರೀ ಕಡಿತಗೊಂಡಿದೆ. 64GB ಸಂಗ್ರಹದ ಒಪ್ಪೊ ಎಫ್9 ಪ್ರೊ ಸ್ಮಾರ್ಟ್‌ಫೋನಿನ ಮೌಲ್ಯ 2,000 ಕಡಿತಗೊಂಡಿದ್ದು, ಪ್ರಸ್ತುತ 21,990 ರೂಪಾಯಿಗಳಿಗೆ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದೆ.

Best Mobiles in India

English summary
Redmi Note 5 Pro, Vivo Nex, Poco F1, Zenfone Max Pro M1: 7 smartphones that have received price cut in India. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+