ಚೀನಾ ಮೊಬೈಲ್ ಕಂಪನಿಗಳಿಂದ ಭಾರತದ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಭಾರೀ ಪೆಟ್ಟು..!
ಹೊಸದೊಂದು ಮಾದರಿಯ ವರದಿಯೊಂದು ಹೊರ ಬಂದಿದ್ದು, ಮಾರುಕಟ್ಟೆಯಲ್ಲಿ ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಭಾರತೀಯ ಸ್ಮಾರ್ಟ್ ಫೋನ್ ಬ್ರಾಂಡ್ ಗಳನ್ನು ಬಿಟ್ಟು ಚೀನಾ ಕಂಪನಿಗಳು ಲಾಂಚ್ ಮಾಡುತ್ತಿರುವ ಸ್ಮಾರ್ಟ್ ಫೋನ್ ಕಡೆಗೆ ಆಕರ್ಷಿತರಾಗುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಚೀನಾ ಸ್ಮಾರ್ಟ್ ಫೋನ್ ಗಳ ಹಾವಳಿಯೂ ಅಧಿಕವಾಗುತ್ತಿದೆ. ಭಾರತೀಯ ಸ್ಮಾರ್ಟ್ ಫೋನ್ ಬ್ರಾಂಡ್ ಗಳು ಬೇಡಿಕೆಯನ್ನು ಕಳೆದುಕೊಳ್ಳುತ್ತಿವೆ.
ಈ ವರದಿಯ ಅಂಕಿ-ಅಂಶಗಳು ಸ್ಪಷ್ಟವಾಗಿ ಹೇಳುವಂತೆ ಚೀನಾ ಸ್ಮಾರ್ಟ್ ಪೋನ್ ಕಂಪನಿಗಳ ಆರ್ಭಟದಿಂದಾಗಿ ಭಾರತೀಯ ಸ್ಮಾರ್ಟ್ ಫೋನ್ ಕಂಪನಿಗಳು ನಷ್ಟದ ಹಾದಿಯನ್ನು ತುಳಿಯುತ್ತಿವೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಭಾರತೀಯ ಸ್ಮಾರ್ಟ್ ಫೋನ್ ಕಂಪನಿಗಳು ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ನಷ್ಟವನ್ನು ಅನುಭವಿಸುತ್ತಿವೆ.

ಸೈಬರ್ ಮೀಡಿಯಾ ನಡೆಸಿರುವ ಸಂಶೋಧನಾ ವರದಿಯಲ್ಲಿ ಈ ಅಂಶಗಳನ್ನು ಕಾಣಬಹುದಾಗಿದೆ. ಸ್ಮಾರ್ಟ್ ಫೋನ್ ಖರೀದಿಯ ಸಂದರ್ಭದಲ್ಲಿ ಭಾರತೀಯರು ತಮ್ಮ ದೇಶ ಪ್ರೇಮವನ್ನು ಮರೆತು ಚೀನಾ ಸ್ಮಾರ್ಟ್ ಫೋನ್ ಕಡೆಗೆ ಒಲವು ತೋರಿಸಿದ್ದಾರೆ ಎನ್ನಲಾಗಿದೆ. ಕಾರಣ ಚೀನಾ ಸ್ಮಾರ್ಟ್ ಫೋನ್ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುದು.
2018ರ ಎರಡನೇ ತ್ರೈಮಾಸಿಕದಲ್ಲಿ 72% ಭಾರತೀಯರು ತಮ್ಮ ಭಾರತೀಯ ಮೂಲದ ಸ್ಮಾರ್ಟ್ ಫೋನ್ ಗಳನ್ನು ಚೀನಾ ಕಂಪನಿಯ ಸ್ಮಾರ್ಟ್ ಫೋನ್ ಗಳಿಗೆ ಬದಲಾಯಿಸಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಚೀನಾ ಮೂಲದ ಸ್ಮಾರ್ಟ್ ಫೊನ್ ತಯಾರಕ ಕಂಫನಿಗಳು ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆಗಳನ್ನು ಬಳಕೆದಾರರಿಗೆ ನೀಡುತ್ತಿರುವುದೇ ಇದಕ್ಕೇ ಕಾರಣ.
ಈ ವರ್ಷದಲ್ಲಿ ಮಾರಾಟವಾಗಿರುವ ಸುಮಾರು 59% ಸ್ಮಾರ್ಟ್ ಫೋನ್ ಗಳು ಬಳಕೆದಾರರು ಆಪ್ ಗ್ರೇಡ್ ಆಗಿರುವುದಾಗಿದ್ದು, ಇವುಗಳು ಬಳಕೆದಾರರ ಭಾರತೀಯ ಸ್ಮಾರ್ಟ್ ಫೋನ್ ಗಳನ್ನು ಬಿಟ್ಟು ಚೀನಾ ಸ್ಮಾರ್ಟ್ ಫೋನ್ ಕಡೆಗೆ ಒಲವು ತೋರಿಸಿದ್ದಾರೆ. ಇದರಲ್ಲಿ ಶೇ.36% ಮಂದಿ ಶಿಯೋಮಿ ಬ್ರಾಂಡ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನು ಬಿಟ್ಟರೆ ಶೇ.17% ಮಂದಿ ಒಪ್ಪೋ ಬ್ರಾಂಡ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನು ಬಿಟ್ಟರೆ ಭಾರತೀಯ ಸ್ಮಾರ್ಟ್ ಫೋನ್ ಕಂಪನಿಗಳನ್ನು ಆಯ್ಕೆ ಮಾಡಿಕೊಂಡಿರುವ ಸಂಖ್ಯೆಯೂ ತೀರಾ ಕಡಿಮೆ ಎನ್ನಲಾಗಿದೆ. ಅಲ್ಲದೇ ಹೆಚ್ಚಿನ ಸ್ಮಾರ್ಟ್ ಫೋನ್ ಗಳ್ನು ಭಾರತೀಯ ಕಂಪನಿಗಳು ಲಾಂಚ್ ಮಾಡದೆ ಇರುವುದು ಇದಕ್ಕೆ ಪ್ರಮುಖ ಕಾರಣ ನ್ನಲಾಗಿದೆ.


Click it and Unblock the Notifications




