Home
ಮೊಬೈಲ್

ಈ ಆಂಡ್ರಾಯ್ಡ್‌ ಸೆಟ್ಟಿಂಗ್‌ಗಳನ್ನು ಈಗ ಸ್ವಯಂಚಾಲಿತಗೊಳಿಸಿ..!

By Gizbot Bureau

ಆಂಡ್ರಾಯ್ಡ್ ಅನ್ನುವುದೊಂದು ಆಪರೇಟಿಂಗಿ ಸಿಸ್ಟಮ್ ಆಗಿದ್ದು ಅದನ್ನು 2003 ರಲ್ಲಿ ಲಿನಕ್ಸ್ ಕೆರ್ನಲ್ ಸಂಸ್ಥೆ ಅಭಿವೃದ್ಧಿ ಪಡಿಸಿತು ನಂತರ 2005 ರಲ್ಲಿ ಅದನ್ನು ಗೂಗಲ್ ಸಂಸ್ಥೆ ಪಡೆದುಕೊಂಡಿತು. ಇದರ ಮೊದಲ ವರ್ಷನ್ 2008 ರಲ್ಲಿ ಬಿಡುಗಡೆಯಾಯಿತು. ಈ ಯೋಜನೆಯು ಕೆಲವೇ ವರ್ಷಗಳಲ್ಲಿ ಕಂಡ ಅಭಿವೃದ್ಧಿ ಮಾತ್ರ ಊಹಿಸಲೂ ಅಸಾಧ್ಯವಾದ ಮಟ್ಟದ್ದಾಗಿದೆ.

ಈ ಆಂಡ್ರಾಯ್ಡ್‌ ಸೆಟ್ಟಿಂಗ್‌ಗಳನ್ನು ಈಗ ಸ್ವಯಂಚಾಲಿತಗೊಳಿಸಿ..!

ಆಪಲ್ ಸಂಸ್ಥೆ ಇದಕ್ಕೆ ಸ್ಪರ್ಧೆಯೊಡ್ಡುತ್ತಿದ್ದರೂ ಕೂಡ ಸ್ಮಾರ್ಟ್ ಫೋನ್ ಮಾರುಕಟ್ಟೆಯ ಶೇಕಡಾ 85 ರಷ್ಟನ್ನು ಇದೇ ಆಳುತ್ತಿದೆ ಎಂದರೆ ಅದರಲ್ಲಿ ಅತಿಶಯೋಕ್ತಿ ಇಲ್ಲ. ಆಂಡ್ರಾಯ್ಡ್ ಫೋನ್ ಗಳಲ್ಲಿ ಕೆಲವನ್ನು ಸ್ವಯಂಚಾಲಿತಗೊಳಿಸಿಕೊಳ್ಳುವ ಅವಕಾಶವಿರುತ್ತದೆ. ಆದರೆ ಹೆಚ್ಚಿನ ಬಳಕೆದಾರರು ಅದರ ಪ್ರಯೋಜನವನ್ನು ಪಡೆಯುವುದೇ ಇಲ್ಲ. ಅಂತಹ ಕೆಲವು ಸ್ವಯಂಚಾಲಿತಗೊಳಿಸಿಕೊಳ್ಳಬಹುದಾದ ಆಂಡ್ರಾಯ್ಡ್ ಸೆಟ್ಟಿಗ್ಸ್ ಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಸ್ವಯಂಚಾಲಿತ ಗೂಗಲ್ ಪ್ಲೇ ಅಪ್ ಡೇಟ್ 

ಸ್ವಯಂಚಾಲಿತ ಗೂಗಲ್ ಪ್ಲೇ ಅಪ್ ಡೇಟ್ 

ಆಪ್ ಡೆವಲಪರ್ ಗಳು ಆಗಾಗ ಅಪ್ ಡೇಟ್ ಮಾಡುತ್ತಲೇ ಇರುತ್ತಾರೆ. ಇದು ಅಪ್ಲಿಕೇಷನ್ನಿನ ಅಭಿವೃದ್ಧಿಯ ಭಾಗವಾಗಿರುತ್ತದೆ. ಇದನ್ನು ಪ್ಲೇ ಸ್ಟೋರ್ ನಲ್ಲಿ ಗಮನಿಸಬಹುದು ಮತ್ತು ಇನ್ಸ್ಟಾಲ್ ಮಾಡಬಹುದು. ಆದರೆ ಪ್ರತಿಬಾರಿ ಪ್ರತಿ ಅಪ್ಲಿಕೇಷನ್ ನ್ನು ಹೀಗೆ ಪ್ಲೇ ಸ್ಟೋರ್ ಗೆ ತೆರಳಿ ಅಪ್ ಡೇಟ್ ಗೆ ಬಂದಿದ್ಯಾ ಎಂದು ಪರೀಕ್ಷೆ ಮಾಡಿ ಮಾಡುವ ಬದಲು ಅದನ್ನು ಸ್ವಯಂಚಾಲಿತವಾಗಿ ಅಪ್ ಡೇಟ್ ಆಗುವಂತೆ ಮಾಡಿಕೊಳ್ಳುವುದು ಒಳಿತು.

ಸ್ವಯಂಚಾಲಿತ ಅಪ್ ಡೇಟ್ ಮೊಬೈಲ್ ಡಾಟಾ ಬಳಸಿ ಅಥವಾ ವೈ-ಫೈ ಬಳಸಿ, ಯಾವುದರಲ್ಲಾದರೂ ಸರಿ ಎಂಬ ಆಯ್ಕೆಗಳಲ್ಲಿ ನೀವು ಯಾವುದನ್ನು ಬಳಸಿ ಅಪ್ ಡೇಟ್ ಮಾಡಲು ಇಚ್ಛಿಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ ಸೆಟ್ ಮಾಡಿದರೆ ಅಪ್ ಡೇಟ್ ಗೆ ಬಂದಾಗ ನೋಟಿಫಿಕೇಷನ್ ಲಭ್ಯವಾಗುತ್ತದೆ ಮತ್ತು ಅಪ್ ಡೇಟ್ ಆಗುತ್ತದೆ.

ಗೂಗಲ್ ಪ್ಲೇ ಪ್ರೊಟೆಕ್ಟ್ ಆಪ್ ಸ್ಕ್ಯಾನಿಂಗ್ 

ಗೂಗಲ್ ಪ್ಲೇ ಪ್ರೊಟೆಕ್ಟ್ ಆಪ್ ಸ್ಕ್ಯಾನಿಂಗ್ 

ಈ ವೈಶಿಷ್ಟ್ಯವು ನಿಮ್ಮ ಫೋನನ್ನು ಸ್ಕ್ಯಾನ್ ಮಾಡುತ್ತದೆ ಮತ್ತು ಯಾವುದೇ ತೊಂದರೆದಾಯಕ ಕಂಟೆಂಟ್ ಗಳು ನಿಮ್ಮ ಫೋನಿನಲ್ಲಿ ಇದಿಯಾ ಎಂದು ಪರೀಕ್ಷಿಸುತ್ತದೆ. ನೀವು ಯಾವುದೇ ಸಂದರ್ಬದಲ್ಲಿ ಬೇಕಿದ್ದರೂ ಸ್ಕ್ಯಾನ್ ನ್ನು ರನ್ ಮಾಡಬಹುದು. ನೀವು ಪ್ಲೇಸ್ಟೋರ್ ಗೆ ತೆರೆದಾದ ನಂತರ ಅಥವಾ ಪ್ಲೇ ಪ್ರೊಟೆಕ್ಟ್ ನ್ನು ಟ್ಯಾಪ್ ಮಾಡಿದ ನಂತರ ಸೆಟ್ಟಿಂಗ್ಸ್ ಗೆ ತೆರಳಿ ಸ್ಕ್ಯಾನಿಂಗ್ ಸ್ಪ್ಲೈಡರ್ ನ್ನು ಟಾಗಲ್ ಮಾಡಿ ಯಾವುದೇ ಭದ್ರತಾ ಬೆದರಿಕೆಗಳ ಬಗ್ಗೆ ಪರೀಕ್ಷೆ ನಡೆಸಬಹುದು.

ಸ್ವಯಂಚಾಲಿತ ಸ್ಕ್ರೀನ್ ಬ್ರೈಟ್ ನೆಸ್ 

ಸ್ವಯಂಚಾಲಿತ ಸ್ಕ್ರೀನ್ ಬ್ರೈಟ್ ನೆಸ್ 

ನೀವು ಇರುವ ಜಾಗಕ್ಕೆ ತಕ್ಕಂತೆ, ಅಲ್ಲಿನ ಬೆಳಕಿನ ಸೌಲಭ್ಯಕ್ಕೆ ತಕ್ಕಂತೆ ಫೋನಿನ ಬ್ರೈಟ್ನೆಸ್ ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದು ಸುಲಭದ ಕೆಲಸವಲ್ಲ. ಸೆಟ್ಟಿಂಗ್ಸ್ ಗೆ ತೆರಳಿ ಹೀಗೆ ಅದನ್ನು ಯಾವಾಗಲೂ ಬದಲಿಸುವ ಬದಲು ಸ್ವಯಂಚಾಲಿತವಾಗಿ ಬ್ರೈಟ್ ನೆಸ್ ಹೆಚ್ಚು ಕಡಿಮೆ ಆಗುವಂತೆ ಮಾಡಬಹುದು.

ಜಾಗವನ್ನು ಫ್ರೀ ಗೊಳಿಸಲು ಸ್ಮಾರ್ಟ್ ಸ್ಟೋರ್ 

ಜಾಗವನ್ನು ಫ್ರೀ ಗೊಳಿಸಲು ಸ್ಮಾರ್ಟ್ ಸ್ಟೋರ್ 

ಸೆಟ್ಟಿಂಗ್ಸ್ ನಲ್ಲಿನ ಸ್ಟೋರೇಜ್ ಆಯ್ಕೆಯಲ್ಲಿರುವ ಸ್ಮಾರ್ಟ್ ಸ್ಟೋರೇಜ್ ನ್ನು ಅನೇಬಲ್ ಮಾಡಿ ಇಡುವುದರಿಂದಾಗಿ ಹಳೆಯ ಫೋಟೋಗಳು ಮತ್ತು ವೀಡಿಯೋಗಳನ್ನು ಕ್ಲೀನ್ ಮಾಡಲು ನೆರವು ನೀಡುತ್ತದೆ.(30,60, ಅಥವಾ 90 ದಿನಗಳ ಹಿಂದಿನ ಪೋಟೋಗಳು ಡಿಲೀಟ್ ಆಗುವಂತೆ ಸೆಟ್ ಮಾಡಬಹುದು). ಗೂಗಲ್ ಫೋಟೋಸ್ ಬಳಕೆಯಿಂದ ನಿಮ್ಮ ಫೋಟೋ ಗಳನ್ನು ಆಫ್ ಲೈನ್ ಆಗಿವೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ ಮತ್ತು ನಿಮ್ಮ ಫೋನಿನ ಜಾಗವನ್ನು ಅನಗತ್ಯ ಫೋಟೋಗಳು ತಿನ್ನದಂತೆ ನೋಡಿಕೊಳ್ಳಿ.

ಸ್ವಯಂಚಾಲಿತವಾಗಿ ವೈ-ಫೈ ನೆಟ್ ವರ್ಕ್ ಗಳಿಗೆ ಸೇರುವುದು

ಸ್ವಯಂಚಾಲಿತವಾಗಿ ವೈ-ಫೈ ನೆಟ್ ವರ್ಕ್ ಗಳಿಗೆ ಸೇರುವುದು

ನೀವು ನಿಮ್ಮ ಫೋನನ್ನು ಸ್ವಯಂಚಾಲಿತವಾಗಿ ವೈ-ಫೈ ನೆಟ್ ವರ್ಕ್ ನ ಲಭ್ಯತೆ ಇದ್ದಾಗ ಕನೆಕ್ಟ್ ಆಗುವಂತೆ ಮಾಡಬಹುದು. ಅದಕ್ಕಾಗಿ ಸೆಟ್ಟಿಂಗ್ಸ್ > ನೆಟ್ ವರ್ಕ್ ಎಂಡ್ ಇಂಟರ್ ನೆಟ್ ಸೆಟ್ಟಿಂಗ್ಸ್ ಗೆ ತೆರಳಿ ವೈ-ಫೈ ಯನ್ನು ಆಯ್ಕೆ ಮಾಡಿ. ಇದರೊಳಕೆ ನೀವು ಫೈ-ಫೈ ಪ್ರಿಫರೆನ್ಸ್ ಗಮನಿಸಬಹುದು ಮತ್ತು ಅದನ್ನು ಟರ್ನ್ ಆನ್ ಅಟೋಮ್ಯಾಟಿಕಲಿ ಎಂದು ಮಾಡಿ ಇಡಿ. ಆಗ ನೀವು ನಿಮ್ಮ ಹೋಮ್ ನೆಟ್ ವರ್ಕ್ ಗೆ ಹತ್ತಿರವಿದ್ದಾಗ ಸ್ವಯಂಚಾಲಿತವಾಗಿ ವೈ-ಫೈ ನೆಟ್ ವರ್ಕ್ ಗೆ ಕನೆಕ್ಟ್ ಆಗುತ್ತೀರಿ.

VPN ಯಾವಾಗಲೂ ಆನ್

VPN ಯಾವಾಗಲೂ ಆನ್

ವಿಪಿಎನ್ ನಿಮ್ಮ ಕನೆಕ್ಷನ್ ನ್ನು ಯಾವಾಗಲೂ ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಇದನ್ನು ಅನೇಬಲ್ ಮಾಡಲು ಸೆಟ್ಟಿಂಗ್ಸ್ > ನೆಟ್ ವರ್ಕ್ ಎಂಡ್ ಇಂಟರ್ನೆಟ್ > ವಿಪಿಎನ್ ಗೆ ತೆರಳಿ. ವಿಪಿಎನ್ ಸ್ಲೈಡರ್ ಯಾವಾಗಲೂ ಆನ್ ಆಗಿರುವಂತೆ ನೋಡಿಕೊಳ್ಳಿ.

ವೇಳಾಪಟ್ಟಿಗೆ ಅಡಚಣೆ ಮಾಡಬೇಡಿ 

ವೇಳಾಪಟ್ಟಿಗೆ ಅಡಚಣೆ ಮಾಡಬೇಡಿ 

ಆಂಡ್ರಾಯ್ಡ್ ನ ಡುನಾಟ್ ಡಿಸ್ಟರ್ಬ್ ಮೋಡ್ ಆನ್ ಮಾಡಿ ಇಡುವುದರಿಂದ ನಿಮಗೆ ನೋಟಿಫಿಕೇಷನ್ ಗಳಿಂದ ಆಗುವ ಕಿರಿಕಿರಿಯನ್ನು ತಪ್ಪಿಸುತ್ತೆ. ಇದು ಇನ್ ಕಮ್ಮಿಂಗ್ ಅಲರ್ಟ್ ಗಳನ್ನು ನಿಶ್ಯಬ್ಧಗೊಳಿಸುತ್ತದೆ. ನಿಮಗೆ ಅಗತ್ಯವಿದ್ದಾಗ ಇದನ್ನು ಆನ್ ಮಾಡಬಹುದು ಅಥವಾ ಅದಕ್ಕೆ ಟೈಮರ್ ಆಗಿ ಈ ಸಮಯಕ್ಕೆ ಆನ್ ಆಗಬೇಕು, ಈ ಸಮಯಕ್ಕೆ ಆಫ್ ಆಗಬೇಕು ಎಂದು ಸೆಟ್ ಮಾಡಿ ಇಡಬಹುದು.

Best Mobiles in India

English summary
7 Android settings you should automate right now. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+