ಆಪಲ್‌ನ ಹೊಸ ಐಓಎಸ್‌ 7ನಲ್ಲಿ ಅಂಥ ವಿಶೇಷತೆ ಏನಿದೆ?

By Ashwath
|

ಆಪಲ್‌ನ ಐಓಎಸ್‌7 ಆಪರೇಟಿಂಗ್‌ ಸಿಸ್ಟಂ ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹೊಸ ವಿಶೇಷತೆಗಳೊಂದಿಗೆ ಬಿಡುಗಡೆಯಾದ ಐಓಎಸ್‌ 7 ಆಪಲ್‌ ಅಭಿಮಾನಿಗಳಿಗೆ ಇಷ್ಟವಾಗಿದೆ. ಅಪ್ಲಿಕೇಶನ್‌,ಸಿರಿ, ಸರ್ಚ್‌ ನೆಟ್‌ ಬ್ರೌಸಿಂಗ್‌ ವಿಶೇಷತೆಗಳು ಈಗ ಸುದ್ದಿಯಾಗುತ್ತಿದೆ.

ಹೀಗಾಗಿ ಇಲ್ಲಿ ಆಪಲ್‌ ಐಓಎಸ್‌7ನಲ್ಲಿರುವ ಕೆಲವು ವಿಶೇಷತೆಗಳನ್ನು ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

 ಶೇಕ್‌ ಟು undo(Shake to undo)

ಶೇಕ್‌ ಟು undo(Shake to undo)


ಯಾವುದೋ ಅಲೋಚನೆಯಲ್ಲಿ ಅಪ್ಪಿ ತಪ್ಪಿ ಇಮೇಲ್‌ ಡಿಲೀಟ್‌ ಆದ್ರೂ ಕೂಡಲೇ ಐಫೋನ್‌ ಶೇಕ್‌ ಮಾಡುವ ಮೂಲಕ ಪುನಃ ಆ ಇಮೇಲ್‌ನ್ನು ಪಡೆಯಬಹುದು. ಜೊತೆಗೆ ಮೇಸೆಜ್‌ ಡಿಲೀಟ್‌ ಆದ್ರೂ ಶೇಕ್‌ ಮಾಡಿ ಪುನಃ ಓದಬಹುದು. ಶೇಕ್‌ ಟು undo ಕಾಲ್‌‌ ಲಾಗ್‌,ಕಾಂಟಕ್ಟ್‌‌ನಲ್ಲಿ ಹೆಸರು ಡಿಲೀಟ್‌ ಅದ್ರೂ ಶೇಕ್‌ ಮಾಡುವ ಮೂಲಕ ಪುನಃ ಪಡೆಯಬಹುದು.

 ಫೋಲ್ಡರ್

ಫೋಲ್ಡರ್


ಇಲ್ಲಿವರೆಗೆ ಐಓಎಸ್‌ನಲ್ಲಿ ಒಂದು ಫೋಲ್ಡರ್‌ ಒಳಗಡೆ 16 ಆಪ್‌ಗಳನ್ನು ಮಾತ್ರ ಇಡಬಹುದಿತ್ತು.ಹೊಸ ಐಓಎಸ್‌ 7ನಲ್ಲಿ ಒಂದು ಫೋಲ್ಡರ್‌‌ ಒಳಗಡೆ ಎಷ್ಟು ಬೇಕಾದ್ರೂ ಆಪ್‌ಗಳನ್ನುಇಡಬಹುದು.

 ಸಿಗ್ನಲ್‌

ಸಿಗ್ನಲ್‌


ಮೊಬೈಲ್‌ ಇಂಟರ್‌ನೆಟ್‌ನಲ್ಲಿ ಸಿಗ್ನಲ್‌ ಬಹಳ ಮುಖ್ಯ. ಹೀಗಾಗಿ ಐಓಎಸ್‌ನಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಿಗ್ನಲ್‌ ಎಷ್ಟಿದೆ ಎನ್ನುವುದಕ್ಕೆ ಈ ಹಿಂದಿನವರೆಗೆ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿರುವ ಬಾರ್‌ಗಳಂತೆ ಕಾಣುವ ಸಿಗ್ನಲ್‌ಗಳನ್ನು ನೋಡಬಹುದಿತ್ತು ,ಆದರೆ ಹೊಸ ಐಓಎಸ್‌ನಲ್ಲಿ ಬಾರ್‌ಗಳ ಬದಲಾಗಿ ಐದು ಡಾಟ್‌ಗಳನ್ನು ನೀಡಿದ್ದಾರೆ. ಸಿಗ್ನಲ್‌‌ ಕಡಿಮೆಯಾದ ಹಾಗೇ ಡಾಟ್‌ಗಳ ಸಂಖ್ಯೆ ಕಡಿಮೆಯಾಗುತ್ತದೆ.

 ಡೇಟಾ ವಿಂಗಡನೆ:

ಡೇಟಾ ವಿಂಗಡನೆ:


ವಿವಿಧ ಸಾಧನಗಳಿಂದ ಐಫೋನ್‌ಗೆ ‌ಡೇಟಾಗಳನ್ನು ಕಳುಹಿಸಿದ್ದರೆ ಅದು ಐಫೋನ್‌‌ಲ್ಲಿ ಈಗ ಸುಲಭವಾಗಿ ಹುಡುಕಬಹುದು. ಐಓಎಸ್‌ 7 ಎಲ್ಲಾ ಡೇಟಾಗಳನ್ನು ವಿಂಗಡಿಸಿ, ಫೋಟೋಗಳನ್ನು ಆಲ್ಬಂಗೆ ಕಳುಹಿಸಿದ್ದರೆ, ಡಾಕ್ಯುಮೆಂಟ್‌ಗಳನ್ನು iWorkಗೆ ಕಳುಹಿಸಿತ್ತದೆ.

 ಸಿರಿ ಸುಧಾರಿಸಿತು:

ಸಿರಿ ಸುಧಾರಿಸಿತು:


ತನ್ನ ಸ್ಪೀಚ್ ರೆಕಗ್ನಿಷನ್ ಸಾಫ್ಟ್‌ವೇರ್‌ ಸಿರಿಯನ್ನು ಆಪಲ್‌ ಮತ್ತಷ್ಟು ಸುಧಾರಿಸಿದೆ. ಮೈಕ್ರೋಸಾಫ್ಟ್‌ನ ಬಿಂಗ್‌ ಸರ್ಚ್‌ ಇಂಜಿನ್‌ನಲ್ಲಿ ಸರ್ಚ್‌ ಮಾಡಬಹುದು. ಜೊತೆಗೆ ವಿಕಿಪೀಡಿಯ ಮತ್ತು ಟ್ವೀಟರ್‌‌ಗೆ ಸಿರಿ ಮೂಲಕ ಆದೇಶ ನೀಡಬಹುದು.

 ಅಪ್‌ಡೇಟ್‌ ಫಾಸ್ಟ್‌:

ಅಪ್‌ಡೇಟ್‌ ಫಾಸ್ಟ್‌:


ಆಪ್‌ಗಳು ಆಗಾಗ ಆಪ್‌ಡೇಟ್ ಆಗುತ್ತಲೇ ಇರುತ್ತದೆ. ಹೀಗಾಗಿ ಹೊಸದಾಗಿ ಯಾವ ಆಪ್‌ ಅಪ್‌ಡೇಟ್‌ ಆಗಿದೆ ತಿಳಿಯುವುದು ಕಷ್ಟ. ಆದರೆ ಐಓಎಸ್‌ನಲ್ಲಿ ಹೊಸದಾಗಿ ಅಟೋಮ್ಯಾಟಿಕ್‌‌ ಅಪ್‌ಡೇಟ್‌ನ್ನು ಸೇರಿಸಿದ್ದಾರೆ. ಇದನ್ನು ನೀವು ಸೆಟ್‌ ಮಾಡಿದ್ದಲ್ಲಿ ಡೌನ್‌ಲೋಡ್‌ ಮಾಡಿರುವ ಆಪ್‌ ಅಪ್‌ಡೇಟ್‌ ಆಗಿದ್ದಲ್ಲಿ ತನಾಗಿಯೇ ಆಪ್‌ ಅಪ್‌ಡೇಟ್‌ ಆಗುತ್ತಿರುತ್ತದೆ.

ವೆಬ್‌ಸೈಟ್‌ ವೀಕ್ಷಣೆ ಸುಲಭ

ವೆಬ್‌ಸೈಟ್‌ ವೀಕ್ಷಣೆ ಸುಲಭ


ಟ್ವೀಟರ್‌ ಇನ್ನೀತರ ಮೈಕ್ರೋಬ್ಲಾಗಿಂಗ್‌ ಮಾಡುವ ವ್ಯಕ್ತಿಗಳಿಗೆ ಆಪಲ್‌ ಸಫಾರಿ ಬ್ರೌಸರ್‌ನಲ್ಲಿ ಕೆಲಸ ಸುಲಭವಾಗಲಿದೆ.ವೆಬ್‌ ಪೇಜ್‌ ಟ್ಯಾಬ್‌ನೋಡುವ ವಿನ್ಯಾಸವನ್ನು ಬದಲಾಯಿಸದ್ದರಿಂದ ಬೇಕಾದ ವೆಬ್‌ಸೈಟ್‌ಗೆ ಸುಲಭವಾಗಿ ಭೇಟಿ ನೀಡಬಹುದು.

 ಯಾವೆಲ್ಲ ಸಾಧನಗಳಿಗೆ ಸಪೋರ್ಟ್‌ ಮಾಡುತ್ತದೆ?

ಯಾವೆಲ್ಲ ಸಾಧನಗಳಿಗೆ ಸಪೋರ್ಟ್‌ ಮಾಡುತ್ತದೆ?

ಐಫೋನ್‌ 5ಎಸ್‌,ಐಫೋನ್‌ 5ಸಿ,ಐಫೋನ್‌ 5,ಐಫೋನ್‌ 4ಎಸ್‌,ಐಫೋನ್‌ 4, ನಾಲ್ಕನೇಯ ತಲೆಮಾರಿನ ಮತ್ತು ಮೂರನೇ ತಲೆಮಾರಿನ ಐಪ್ಯಾಡ್‌, ಐಪ್ಯಾಡ್‌ ಮಿನಿಗೆ ಹೊಸ ಐಓಎಸ್‌ 7 ಸಪೋರ್ಟ್‌ ಮಾಡುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X