Home
ಮೊಬೈಲ್

ಬಜೆಟ್ ಐಫೋನ್: ಆಪಲ್‌ ಎಸ್‌ಇ ಖರೀದಿಗೆ ಏಕೆ ಯೋಗ್ಯವಲ್ಲ?

By Shwetha

ಆಪಲ್‌ನ ಅತ್ಯಾಧುನಿಕ ಐಫೋನ್ ಪೋರ್ಟ್‌ಫೋಲಿಯೊ ಐಫೋನ್ ಎಸ್ಇ ಭಾರತದಲ್ಲಿ ಲಾಂಚ್ ಆಗಿದೆ. ಕ್ಯುಪರ್ಟಿನೊ ದೈತ್ಯ ಹೇಳುವಂತೆ ಇದು ವಿಶ್ವದ ಹೆಚ್ಚು ಶಕ್ತಿಯುತ 4 ಇಂಚಿನ ಐಫೋನ್ ಆಗಿದೆ. ಆದರೆ ಈ ಫೋನ್ ಅನ್ನು ಖರೀದಿಸುವ ಮುನ್ನ ಇದು ಏಕೆ ಅಷ್ಟೊಂದು ಅತ್ಯುತ್ತಮವಲ್ಲ ಎಂಬ ಅಂಶವನ್ನು ನಾವು ಇಂದಿನ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ.

ಕೆಲವೊಂದು ಋಣಾತ್ಮಕ ಅಂಶಗಳನ್ನು ಐಫೋನ್ ಎಸ್ಇ ಒಳಗೊಂಡಿದ್ದು ಇದರಿಂದ ಖರೀದಿಗೆ ಇದು ಅಷ್ಟೊಂದು ಯೋಗ್ಯನಲ್ಲ ಎಂಬುದಾಗಿ ಹಣೆಪಟ್ಟಿಯನ್ನಿರಿಸಿಕೊಂಡಿದೆ. ಬನ್ನಿ ಅದೇನು ಎಂಬುದನ್ನು ಇಂದು ನೋಡೋಣ.

#1

#1

ಐಫೋನ್ ಎಸ್‌ಇ ಯ ಬೆಲೆ ಹೆಚ್ಚು ತೊಂದರೆಯನ್ನುಂಟು ಮಾಡುತ್ತಿದೆ. ಸಣ್ಣ ಪರದೆಯ ಐಫೋನ್ ರೂ 33,000 ದ ಒಳಗಿನ ಬೆಲೆಯಲ್ಲಿ ಬರಲಿದೆ ಎಂಬುದಾಗಿ ನಾವು ಗ್ರಹಿಸಿದ್ದರೆ ಇದು ರೂ 39,000 ದ ಬೆಲೆಯಲ್ಲಿದೆ. ಈ ಬೆಲೆ ಭಾರತದ ಬಳಕೆದಾರರಿಗೆ ಕೈಗೆಟಕದಂತಿದ್ದು ಮಾರುಕಟ್ಟೆಯಲ್ಲಿರುವ ಇತರೆ ಸ್ಪರ್ಧಿಗಳಿಗೆ ಉತ್ತಮ ಅವಕಾಶವನ್ನು ನೀಡಿದಂತಿದೆ.

#2

#2

ಐಫೋನ್ ಎಸ್ಇ, 4 ಇಂಚಿನ ಸ್ಕ್ರೀನ್‌ನೊಂದಿಗೆ ಬಂದಿದ್ದು ಭಾರತೀಯ ಬಳಕೆದಾರರಿಗೆ ಹೆಚ್ಚು ಸಣ್ಣದೆನಿಸಲಿದೆ. ಭಾರತದಲ್ಲಿ ಫ್ಯಾಬ್ಲೆಟ್‌ಗಳದ್ದೇ ಆಡಳಿತ ಹೆಚ್ಚಿರುವಾಗ ಇದು ಸಣ್ಣ ಸ್ಕ್ರೀನ್ ಆಯಿತು. ಇದೇ ಬೆಲೆಗೆ ಇತರ ಫೋನ್‌ಗಳು ದೊಡ್ಡ ಸ್ಕ್ರೀನ್ ಗಾತ್ರದಲ್ಲಿ ಬರುತ್ತಿವೆ.

#3

#3

ಐಫೋನ್ ಎಸ್ಇ, ಆಪಲ್‌ನ ಸರತಿಯಲ್ಲಿ ಹೊಚ್ಚಹೊಸ ಫೋನ್ ಎಂದೆನಿಸಿದೆ. ಆದರೆ ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್‌ನಂತಹ ಗುಣಗಳು ಇದರಲ್ಲಿಲ್ಲ. 3 ಡಿ ಟಚ್ ಕೊರತೆಯು ಈ ಐಫೋನ್‌ನಲ್ಲಿ ಎದ್ದುಗಾಣುತ್ತಿದ್ದು ಆಪಲ್‌ನ ಹೊಸ ಆಪ್ ನ್ಯಾವಿಗೇಶನ್ ಅನ್ನು ಬಳಸಲು ಬಳಕೆದಾರರಿಗೆ ಇದು ಅನುಮತಿಯನ್ನು ನೀಡುತ್ತಿಲ್ಲ. ರೂ 40,000 ಕ್ಕೆ ಲಭ್ಯವಾಗುತ್ತಿರುವ ಐಫೋನ್ 6ಎಸ್‌ನಲ್ಲಿ 3ಡಿ ಟಚ್ ಲಭ್ಯತೆ ಇದೆ.

#4

#4

ರೂ 39,000 ಕ್ಕೆ 16 ಜಿಬಿ ಸಂಗ್ರಹಣೆ ನಿಜಕ್ಕೂ ಹೆಚ್ಚು ವಿನೋದವೆನಿಸಿದೆ. ಆದರೆ ಆಪಲ್ ತನ್ನ ಐಫೋನ್ ಎಸ್‌ಇ ಯ ಮೂಲಕ ಇದೇ ಕೊಡುಗೆಯನ್ನೇ ನೀಡುತ್ತಿದೆ. ಬಳಕೆದಾರರಿಗೆ 11-12 ಜಿಬಿ ಡೇಟಾ ಮಾತ್ರವೇ ಲಭ್ಯವಾಗಲಿದ್ದು, ಔಟ್ ಆಫ್ ಸ್ಟೋರೇಜ್ ಸಂದೇಶ ಸ್ಕ್ರೀನ್‌ನಲ್ಲಿ ಬರುವುದನ್ನು ನಿಮಗೆ ಕಾಣಬಹುದಾಗಿದೆ. ಲೈವ್ ಫೋಟೋಗಳು ಮತ್ತು 4 ಕೆ ವೀಡಿಯೊಗಳು ಹೆಚ್ಚಿನ ಸ್ಥಳವನ್ನು ಕಬಳಿಸುತ್ತವೆ ಅಂದರೆ ಫೋಟೋ ತೆಗೆಯುವಾಗ ಬಳಕೆದಾರರು ಹೆಚ್ಚು ಸಂಪ್ರದಾಯಬದ್ಧರಾಗಿರಬೇಕು.

#5

#5

ಐಫೋನ್ 5 ಎಸ್‌ನಂತೆ ಐಫೋನ್ ಎಸ್ಇ ಅದೇ ಮಾದರಿಯ ಬ್ಯಾಟರಿ ಗುಣಮಟ್ಟವನ್ನು ನೀಡುವಂತೆ ನಿರೀಕ್ಷಿಸಲಾಗಿದೆ. ಆದರೆ ಇದನ್ನು ಎರಡು ಬಾರಿ ಚಾರ್ಜ್ ಮಾಡಬೇಕಾಗಿದೆ. ಆದರೆ ಹೆಚ್ಚು ಸಮಯದವರೆಗೆ ಬ್ಯಾಟರಿ ಅವಶ್ಯಕತೆ ಇರುವ ಬಳಕೆದಾರರಿಗೆ ಇದು ತೀವ್ರ ನಿರಾಸೆಯನ್ನುಂಟು ಮಾಡಲಿದೆ.

#6

#6

ಐಫೋನ್ 5 ಮತ್ತು 5 ಎಸ್‌ನಂತೆಯೇ ಐಫೋನ್ ಎಸ್ಇ ಒಂದೇ ವಿನ್ಯಾಸವನ್ನೊಳಗೊಂಡು ಬಂದಿದೆ.ಹೊಸ ಎಸ್‌ಇ ವಿನ್ಯಾಸ ಅಷ್ಟೊಂದು ಆಕರ್ಷಕವಾಗಿಲ್ಲ ಮತ್ತು ಮನಸ್ಸನ್ನು ಹಿಡಿದಿಡುವಂತಿಲ್ಲ.

#7

#7

ಬೇರೆ ಐಫೋನ್‌ಗಿಂತ ಕೊಂಚ ಪ್ರತ್ಯೇಕವಾದ ಫೀಚರ್ ಅನ್ನು ಹೊಸ ಎಸ್ಇ ಹೊಂದಿಲ್ಲ. ಹಿಂದಿನ ಐಫೋನ್ ಮಾಡೆಲ್‌ಗಳಲ್ಲಿರುವಂತೆಯೇ ಅದೇ ಮಾದರಿಯ ಹಾರ್ಡ್‌ವೇರ್ ಅನ್ನು ಐಫೋನ್ ಎಸ್‌ಇ ಯಲ್ಲಿ ಕಾಣಬಹುದಾಗಿದೆ. ಪ್ರೊಸೆಸರ್ ಮತ್ತು ಕ್ಯಾಮೆರಾವು ಐಫೋನ್ 5 ಎಸ್‌ನಲ್ಲಿರುವಂತೆಯೇ ಐಫೋನ್ 6ಎಸ್‌ನಲ್ಲಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
The brand new iPhone may not be the best iPhone to buy for some people. Here's we take a look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+