7000 ರಿಯಾಯಿತಿ! ಹೊಸ iPhone 16e ಅಗ್ಗವಾಗಿ ಲಭ್ಯ.. ಬೆಲೆ ಎಷ್ಟು, ವಿಶೇಷತೆಗಳೇನು?
ಆಪಲ್ ಕಂಪನಿಯು ಇತ್ತೀಚೆಗೆ ಬಹುನಿರೀಕ್ಷಿತ ಐಫೋನ್ 16e ( iPhone 16e) ಅನ್ನು ಲೋಕಾರ್ಪಣೆ ಮಾಡಿದೆ. ಈ ಮೂಲಕ ತನ್ನ ಐಫೋನ್ 16 ಸರಣಿಯನ್ನು ವಿಸ್ತರಿಸಿದೆ. ಈಗಾಗಲೇ ಹೊಸ ಐಫೋನ್ 16e ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಂಪನಿಯು ಇದನ್ನು ಕೈಗೆಟುಕುವ ಐಫೋನ್ ಆಗಿ ಪರಿಚಯಿಸಿದೆ. ಅಂದಹಾಗೆ, ಇದೇ ಫೆಬ್ರವರಿ 28 ರಿಂದ ಐಫೋನ್ 16e ಭಾರತದಲ್ಲಿ ಖರೀದಿಗೆ ಲಭ್ಯವಿರುತ್ತದೆ. ನೀವು ಕೂಡ ಈ ಅಗ್ಗದ ಆಪಲ್ ಫೋನನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಕಂಪನಿಯು ಮೊದಲ ಮಾರಾಟ ಪ್ರಯುಕ್ತ 7 ಸಾವಿರ ರೂ.ಗಳ ರಿಯಾಯಿತಿ ಘೋಷಿಸಿದೆ. ಈ ಐಫೋನ್ ಅನ್ನು 52,990 ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು.
ಹೊಸದಾಗಿ ಬಿಡುಗಡೆಯಾದ ಐಫೋನ್ 16e (iPhone 16e) ಸ್ಮಾರ್ಟ್‌ಫೋನ್ ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಇದು ಅತ್ಯಂತ ಕೈಗೆಟುಕುವ ಐಫೋನ್ ಮಾದರಿಯಾಗಿದೆ. ಇದಲ್ಲದೆ, ಐಫೋನ್ 16e ಅನೇಕ ಪ್ರಮುಖ ಅಪ್‌ಗ್ರೇಡ್‌ಗಳನ್ನು ಒಳಗೊಂಡಿದೆ. ಇದರಲ್ಲಿ ವರ್ಧಿತ ಡಿಸೈನ್ ಲಾಂಗ್ವೇಜ್, ಪವರ್ಫುಲ್ ಚಿಪ್‌ಸೆಟ್, ದೊಡ್ಡ ಡಿಸ್ಪ್ಲೇ ಮತ್ತು ಸುಧಾರಿತ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದು. ಬನ್ನಿ, ಈ ಹೊಸ ಐಫೋನ್ 16e ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

7 ಸಾವಿರ ರೂ.ಗಳ ರಿಯಾಯಿತಿ
ಕಂಪನಿಯು ಐಫೋನ್ 16E ಫೋನನ್ನು 59,990 ರೂ.ಗಳ ಆರಂಭಿಕ ಬೆಲೆಯಲ್ಲಿ ಪರಿಚಯಿಸಿದೆ. ಇದು ಹೊಸ ಐಫೋನಿನ 128GB ಸ್ಟೋರೇಜ್ ರೂಪಾಂತರದ ಬೆಲೆಯಾಗಿದೆ. ಮೊದಲ ಮಾರಾಟದಲ್ಲಿ, ಕಂಪನಿಯು ಈ ಐಫೋನ್ ಖರೀದಿ ಮೇಲೆ 4,000 ರೂ.ಗಳ ರಿಯಾಯಿತಿ ನೀಡುತ್ತಿದೆ. ಎಲ್ಲಾ ಐಸಿಐಸಿಐ ಬ್ಯಾಂಕ್ ಗ್ರಾಹಕರು ಈ ರಿಯಾಯಿತಿಯ ಲಾಭ ಪಡೆಯಬಹುದು. ಯಾವುದೇ ICICI ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಐಫೋನ್ 16e ಕೊಂಡರೆ 4,000 ರಷ್ಟು ಫ್ಲಾಟ್ ರಿಯಾಯಿತಿ ಸಹ ಲಭ್ಯವಿದೆ.
ಮತ್ತೊಂದೆಡೆ, ಹೊಸ ಐಫೋನ್ 16e ಖರೀದಿಸುವಾಗ ಹಳೆಯ ಮೊಬೈಲ್ ಎಕ್ಸ್ಚೇಂಜ್ ಮಾಡಿಕೊಂಡರೆ, ಅದರ ಮೇಲೆ 3,000 ರೂ.ಗಳ ಎಕ್ಸ್‌ಚೇಂಜ್ ಬೋನಸ್ ಸಹ ಲಭ್ಯವಿರುತ್ತದೆ. ಈ 3000 ರೂ. ರಿಯಾಯಿತಿ ಫೋನಿನ ಎಕ್ಸ್‌ಚೇಂಜ್ ಮೌಲ್ಯದಿಂದ ಪ್ರತ್ಯೇಕವಾಗಿ ಸಿಗುತ್ತದೆ. ಅಂದರೆ, ಹಳೆಯ ಫೋನಿನ ಬೆಲೆ 17,000 ರೂ.ಗಳಾಗಿದ್ದರೆ, ನಿಮಗೆ 3000 ರೂ. ಹೆಚ್ಚುವರಿಯಾಗಿ ಸಿಗುತ್ತದೆ. ಕೋಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಈ ಮೊಬೈಲ್ ಖರೀದಿಸಿದರೆ, ಕಂಪನಿಯು 4,000 ರೂ.ಗಳ ಡಿಸ್ಕೌಂಟ್ ಕೂಡ ನೀಡುತ್ತದೆ.
ಐಫೋನ್ 16eಗಾಗಿ ಸಿಲಿಕೋನ್ ಕೇಸ್
ಆಪಲ್ ಈ ಹೊಸ ಐಫೋನ್ 16e ಗಾಗಿ ಸಿಲಿಕೋನ್ ಕೇಸ್‌ಗಳನ್ನು ಬಿಡುಗಡೆ ಮಾಡಿದೆ. ನೀವು 3,900 ರೂ.ಗೆ ಇಷ್ಟವಾದ ಕೇಸ್‌ಗಳನ್ನು ಪಡೆಯಬಹುದು. ಇದು ಐದು ಬಣ್ಣಗಳಲ್ಲಿ ಬರುತ್ತದೆ. ವಿಂಟರ್ ಬ್ಲೂ, ಫ್ಯೂಷಿಯಾ, ಲೇಕ್ ಗ್ರೀನ್, ಬ್ಲ್ಯಾಕ್ ಆ್ಯಂಡ್ ವೈಟ್ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಈಗಾಗಲೇ (ಫೆಬ್ರವರಿ 21 ರಿಂದ) ಐಫೋನ್ 16e ಫೋನಿನ ಪ್ರಿ-ಬುಕಿಂಗ್ ಪ್ರಾರಂಭವಾಗಿದೆ. ಇದೇ ಫೆಬ್ರವರಿ 28 ರಿಂದ ಮೊದಲ ಮಾರಾಟ ಶುರುವಾಗಲಿದೆ. ಇದು ಭಾರತ, ಅಮೆರಿಕ, ಯುಕೆ, ಜಪಾನ್, ಯುಎಇ, ಮಲೇಷ್ಯಾ, ಚೀನಾ, ಕೆನಡಾ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಒಟ್ಟು 59 ದೇಶಗಳಲ್ಲಿ ಲಭ್ಯವಿರುತ್ತದೆ.
ಐಫೋನ್ 16e ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಐಫೋನ್ 16e ಸ್ಮಾರ್ಟ್‌ಫೋನ್ 6.1-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯನ್ನು OLED ಪ್ಯಾನೆಲ್‌ನಲ್ಲಿ ನಿರ್ಮಿಸಲಾಗಿದೆ. ಇದು 800 ನಿಟ್‌ಗಳ ಗರಿಷ್ಠ ಮತ್ತು 1200 ನಿಟ್‌ಗಳ HDR ಹೊಳಪನ್ನು ನೀಡುತ್ತದೆ. ಈ ಐಫೋನಿನ ಡಿಸ್ಪ್ಲೇಯು 460ppi ಅನ್ನು ಸಪೋರ್ಟ್ ಮಾಡುತ್ತದೆ.
ಪ್ರೊಸೆಸರ್ ಸಾಮರ್ಥ್ಯ
ಐಫೋನ್ 16e ಮೊಬೈಲ್ ಪವರ್ ಫುಲ್ ಆಪಲ್ A18 ಪ್ರೊಸೆಸರ್ ಹೊಂದಿದೆ. ಇದು 6 ಕೋರ್ ಸಿಪಿಯು ಆಗಿದೆ. ಎರಡು ಕಾರ್ಯಕ್ಷಮತೆಯ ಕೋರ್‌ಗಳು ಮತ್ತು ನಾಲ್ಕು ದಕ್ಷತೆಯ ಕೋರ್‌ಗಳನ್ನು ಒಳಗೊಂಡಿದೆ. ಐಫೋನ್ 16 ನಲ್ಲಿಯೂ ಅದೇ ಪ್ರೊಸೆಸರ್ ಲಭ್ಯವಿದೆ. ಇದು ಸುಗಮ ಮತ್ತು ವೇಗದ ಬಹುಕಾರ್ಯಕಗಳಿಗೆ ಉತ್ತಮವಾಗಿದೆ.
ಕ್ಯಾಮೆರಾ ಸೆಟಪ್
ಹೊಸ ಐಫೋನ್ 16e ಫೋನ್ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ವಿಶೇಷವೆಂದರೆ, ಈ ಲೆನ್ಸ್ ಆಪಲ್ ಇಮೇಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಇದು 2x ಟೆಲಿಫೋಟೋ ಲೆನ್ಸ್. ಹಾಗೆಯೇ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಐಫೋನ್ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಆಪಲ್ ತನ್ನ ಯಾವುದೇ ಐಫೋನಿನ ಬ್ಯಾಟರಿ ಸಾಮರ್ಥ್ಯವನ್ನು ಸುಲಭವಾಗಿ ಬಹಿರಂಗಪಡಿಸುವುದಿಲ್ಲ. ಹೊಸ ಐಫೋನ್ 16e ವಿಷಯದಲ್ಲೂ ಅದೇ ನಿರ್ಧಾರ ತೆಗೆದುಕೊಂಡಿದೆ. ಈ ಐಫೋನ್ ಸಂಪೂರ್ಣ ಚಾರ್ಜ್ ಮಾಡಿದ ನಂತರ, ಈ ಬ್ಯಾಟರಿ 26 ಗಂಟೆಗಳವರೆಗೆ ಇರುತ್ತದೆ. ಈ ಫೋನಿನಲ್ಲಿ ವೈರ್‌ಲೆಸ್ ಕ್ವಿ ಚಾರ್ಜಿಂಗ್ ಸಹ ಲಭ್ಯವಿದೆ. ಆಪಲ್ ಐಫೋನ್ 16e ಆಪಲ್ ಇಂಟೆಲಿಜೆನ್ಸ್ ಹೊಂದಿದೆ. ಈ ಮೊಬೈಲ್‌ನಲ್ಲಿಯೇ ಎಐ(AI) ಸಾಮರ್ಥ್ಯವನ್ನು ಹೊಂದಿದೆ.


Click it and Unblock the Notifications








