7,000mAh+ ಬ್ಯಾಟರಿ ಫ್ಲಾಗ್‌ಷಿಪ್ ಯುದ್ಧ: 2025ರ ಯಾವ ಫೋನ್ ಬೆಸ್ಟ್?
ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಸಾಮರ್ಥ್ಯವು ಹೊಸ ಮಟ್ಟಕ್ಕೇರುತ್ತಿದೆ. 2025ರ ಫ್ಲಾಗ್‌ಷಿಪ್ ವರ್ಗದಲ್ಲಿ 7,000mAh ಅಥವಾ ಅದಕ್ಕಿಂತ ಹೆಚ್ಚಿನ ಬ್ಯಾಟರಿಗಳಿರುವ ಹಲವಾರು ಫೋನ್‌ಗಳು ಬಿಡುಗಡೆಯಾಗಿವೆ. ಇವುಗಳಲ್ಲಿ OPPO Find X9 Pro, OnePlus 15, iQOO 15 ಮತ್ತು Realme GT 8 Pro ಈ ನಾಲ್ಕು ಫೋನ್‌ಗಳು ಹೆಚ್ಚಿನ ಜನರ ಗಮನಸೆಳೆದಿವೆ. ಹಾಗಾದರೆ, ಈ ನಾಲ್ಕು ಫ್ಲಾಗ್‌ಶಿಪ್ ಫೋನ್‌ಗಳಲ್ಲಿ ಒಂದೇ ಪರಿಸ್ಥಿತಿಯಲ್ಲಿ ಪರೀಕ್ಷಿಸಿದಾಗ, ನಿಜವಾದ ಬ್ಯಾಕಪ್ ಯಾವ ಫೋನ್ ನೀಡಿದೆ ಎಂಬುದನ್ನು ನೋಡೋಣ.
ದೊಡ್ಡ ಬ್ಯಾಟರಿ ಟ್ರೆಂಡ್‌ಗೆ ಕಾರಣವೇನು?
ಹೊಸ ಪೀಳಿಗೆಯ ಫ್ಲಾಗ್‌ಷಿಪ್‌ಗಳು ಈಗ ಲಿಥಿಯಂ-ಐಯಾನ್‌ನಿಂದ ಸಿಲಿಕಾನ್-ಕಾರ್ಬನ್ ಬ್ಯಾಟರಿಗಳಿಗೆ ಶಿಫ್ಟ್ ಆಗುತ್ತಿವೆ. ಈ ತಂತ್ರಜ್ಞಾನ ಹೆಚ್ಚು ಎನರ್ಜಿ ಹಿಡಿಯುತ್ತದೆ, ಆದರೆ ಗಾತ್ರ ಮತ್ತು ತೂಕ ಹೆಚ್ಚಿಸುವುದಿಲ್ಲ. ಉದಾಹರಣೆಗೆ, 7,500mAh ಹೊಂದಿರುವ OPPO Find X9 Pro ಕೇವಲ 8.3mm ದಪ್ಪ ಮತ್ತು 224 ಗ್ರಾಂ ತೂಕ ಹೊಂದಿದೆ. OnePlus 15 ಫೋನ್ 7,300mAh ಬ್ಯಾಟರಿ ಹೊಂದಿದ್ದು215 ಗ್ರಾಂ ತೂಗುತ್ತದೆ. ಇನ್ನು Realme GT 8 Pro 7,000mAh ಬ್ಯಾಟರಿ & 214 ಗ್ರಾಂ ತೂಕವನ್ನು ಹೊಂದಿದ್ದರೆ, iQOO 15 7,000mAh 8.17mm & 216 ಗ್ರಾಂ ಹೊಂದಿದೆ.
PCMark ಪರೀಕ್ಷೆ: ದೀರ್ಘಾವಧಿಯಲ್ಲಿ ಯಾರು ಮೇಲುಗೈ?
ನಿಷ್ಪಕ್ಷಪಾತ ಸಿಂಥೆಟಿಕ್ ಪರೀಕ್ಷೆಯಲ್ಲಿ, ಎಲ್ಲ ಫೋನ್‌ಗಳನ್ನು ಒಂದೇ ಸೆಟ್ಟಿಂಗ್‌ನಲ್ಲಿ ಬಳಸಲಾಯಿತು ಎಂದು 91mobiles ಹೇಳಿಕೊಂಡಿದೆ. ಇದರಲ್ಲಿ OnePlus 15 ಇಲ್ಲಿ ಸ್ಪಷ್ಟ ಮುನ್ನಡೆ ಸಾಧಿಸಿ 17.1 ಗಂಟೆಗಳ ರನ್‌ಟೈಮ್ ನೀಡಿದೆ. OPPO Find X9 Pro 16 ಗಂಟೆಗಳೊಂದಿಗೆ ಎರಡನೇ ಸ್ಥಾನಕ್ಕೆ ತಲುಪಿದೆ. iQOO 15 ಮತ್ತು Realme GT 8 Pro ಕ್ರಮವಾಗಿ 13.1 ಮತ್ತು 12.8 ಗಂಟೆಗಳು ಕಾರ್ಯಾಚರಣೆ ಮಾಡಿವೆ. ಇಲ್ಲಿ ದೊಡ್ಡ ಬ್ಯಾಟರಿ ಇದ್ದರೂ ಪರಿಣಾಮಕಾರಿ ಆಪ್ಟಿಮೈಸೇಶನ್ ಇಲ್ಲದಿದ್ದರೆ ಫಲಿತಾಂಶ ಬದಲಾಗುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗುತ್ತದೆ.
YouTube ಸ್ಟ್ರೀಮಿಂಗ್: ಮಲ್ಟಿಮೀಡಿಯಾ ಬಳಕೆದಾರರಿಗೆ ಯಾರು ಸೂಕ್ತ?
ಇದೇ ವರದಿಯು YouTube ಸ್ಟ್ರೀಮಿಂಗ್ ಮೇಲೆ ಪರೀಕ್ಷೆ ನಡೆಸಿದೆ. 30-ನಿಮಿಷಗಳ HDR ವೀಡಿಯೋ ಸ್ಟ್ರೀಮಿಂಗ್ ವೇಳೆ OnePlus 15 ಅತ್ಯಲ್ಪವಾದ 2% ಬ್ಯಾಟರಿ ಬಳಕೆ ಮಾಡಿದೆ. OPPO Find X9 Pro, Realme GT 8 Pro ಮತ್ತು iQOO 15 ಮೂರು ಫೋನ್‌ಗಳೂ 3% ಬ್ಯಾಟರಿ ಕುಸಿತ ತೋರಿಸಿವೆ. ಈ ಅಂಕಿ ಅಂಶಗಳಿಂದ ದಿನವಿಡೀ ವೀಡಿಯೋ ಕಂಟೆಂಟ್ ನೋಡುವವರಿಗಾಗಿ OnePlus 15 ಒಂದು ಉತ್ತಮ ಆಯ್ಕೆಯಾಗುತ್ತದೆ.

ಗೇಮಿಂಗ್ ಬ್ಯಾಟರಿ ಬಳಕೆ: ತಾಪಮಾನದ ವೇಳೆ ಸಮತೋಲನ ಸಾಧಿಸಿದ್ದು ಯಾರು?
BGMI, COD Mobile ಮತ್ತು Real Racing 3-ಈ ಮೂರು ಗೇಮ್‌ಗಳಲ್ಲಿ 30-30 ನಿಮಿಷದ ಟೆಸ್ಟ್ ನಡೆಸಲಾಗಿದೆ. ಗೇಮಿಂಗ್ ಸೆಷನ್‌ಗಳಲ್ಲಿ OPPO Find X9 Pro ಅತ್ಯಂತ ಪರಿಣಾಮಕಾರಿಯಾಗಿ 4% ಮಾತ್ರ ಬ್ಯಾಟರಿ ಬಳಸಿದೆ. Realme GT 8 Pro 4.6%, iQOO 15 5% ಬಳಸಿದರೆ, OnePlus 15 ಗೇಮಿಂಗ್ ವೇಳೆ ಸರಾಸರಿ 5.3% ಬ್ಯಾಟರಿ ಬಳಕೆಯೊಂದಿಗೆ ಸ್ವಲ್ಪ ಹಿಂದುಳಿದಿದೆ. ಹೀಗಾಗಿ ಗೇಮಿಂಗ್ ಪ್ರಿಯರಿಗೆ OPPO Find X9 Pro ಉತ್ತಮ ವ್ಯಾಲ್ಯು ನೀಡುತ್ತದೆ.
ನಿಜ ಜೀವನ ಬಳಕೆ: ದಿನನಿತ್ಯದಲ್ಲಿ ಯಾರು ಹೆಚ್ಚು ವಿಶ್ವಾಸಾರ್ಹ?
ವಿಮರ್ಶಕರ ಪ್ರಕಾರ, OnePlus 15 ದಿನನಿತ್ಯದ ಬಳಕೆಯಲ್ಲಿ 40-50% ಬ್ಯಾಟರಿ ಉಳಿಸಿಕೊಂಡಿದೆ. ಹೇವಿ ಯೂಸ್‌ನಲ್ಲೂ ಒಂದು ದಿನ ಮೀರಿಸುವ ಸಾಮರ್ಥ್ಯ ಹೊಂದಿತ್ತು ಎಂದು ಹೇಳಿದ್ದಾರೆ. iQOO 15 ಮಿಶ್ರ ಬಳಕೆಯಲ್ಲಿ ಒಂದು ದಿನದ ಬ್ಯಾಕಪ್ ನೀಡಿದೆ. Realme GT 8 Pro 5G ಮತ್ತು ಹೆಚ್ಚುವರಿ ಕ್ಯಾಮೆರಾ ಬಳಕೆ ಮೂಲಕ ದಿನಾಂತ್ಯಕ್ಕೆ 10-12% ಮಾತ್ರ ಉಳಿದು ಕೆಲವೆಡೆ ನಿರಾಶೆ ಮಾಡಿತು. OPPO Find X9 Pro ಸರಾಸರಿ ಬಳಕೆಯಲ್ಲಿ ಒಂದು ದಿನ ಮತ್ತು ಲಘು ಬಳಕೆಯಲ್ಲಿ ಎರಡು ದಿನಗಳವರೆಗೆ ಹೋಗಬಲ್ಲದು ಎಂದು ವರದಿಯು ಹೇಳಿದೆ.
ಫಾಸ್ಟ್ ಚಾರ್ಜಿಂಗ್: ತ್ವರಿತ ಚಾರ್ಜ್ ಯಾರು?
ಈ ಪರೀಕ್ಷೆಯಲ್ಲಿ, 120W ಚಾರ್ಜಿಂಗ್ ಹೊಂದಿರುವ OnePlus 15 ಕೇವಲ 30 ನಿಮಿಷಗಳಲ್ಲಿ 20-100% ಚಾರ್ಜ್ ಆಗಿದೆ. Realme GT 8 Pro 39 ನಿಮಿಷ ತೆಗೆದುಕೊಂಡರೆ, iQOO 15 45 ನಿಮಿಷಗಳಲ್ಲಿ ಚಾರ್ಜ್ ಆಗಿದೆ. ದೊಡ್ಡ ಬ್ಯಾಟರಿ ಹೊಂದಿದ್ದರೂ OPPO Find X9 Pro 80W ಚಾರ್ಜರ್‌ನಿಂದ 73 ನಿಮಿಷ ತೆಗೆದುಕೊಂಡಿತು, ಇದು ನಾಲ್ಕರಲ್ಲಿ ನಿಧಾನವಾದದ್ದು ಎಂದು ವರದಿಯು ತಿಳಿಸಿದೆ
ಅಂತಿಮ ತೀರ್ಮಾನ: ಯಾವ ಫೋನ್ ಅತ್ಯುತ್ತಮ ಬ್ಯಾಟರಿ ಪ್ಯಾಕೇಜ್ ಹೊಂದಿದೆ.?
2025ರಲ್ಲಿ 7,000mAh+ ಬ್ಯಾಟರಿ ವಿಭಾಗದಲ್ಲಿ OnePlus 15 ಸ್ಪಷ್ಟವಾಗಿ ವಿಜಯಿಯಾಗಿದೆ. ಇದು ಲ್ಯಾಬ್ ಟೆಸ್ಟ್, ನಿಖರ ಬಳಕೆ, ವೀಡಿಯೋ ಸ್ಟ್ರೀಮಿಂಗ್ ಮತ್ತು ದಿನನಿತ್ಯ ಕಾರ್ಯಗಳಲ್ಲಿ ಅಚ್ಚರಿಯ ಮಟ್ಟದಲ್ಲಿ ಸ್ಥಿರ ಬ್ಯಾಟರಿ ಕಾರ್ಯಕ್ಷಮತೆಯನ್ನು ತೋರಿಸಿದೆ ಎಂದು ವರದಿಯು ಅಭಿಪ್ರಾಯಪಟ್ಟಿದೆ. OPPO Find X9 Pro ಗೇಮಿಂಗ್ ಮತ್ತು ಸ್ಥಿರತೆ ಬಯಸುವವರಿಗೆ ಉತ್ತಮ, ಆದರೆ ಚಾರ್ಜಿಂಗ್ ನಿಧಾನ. iQOO 15 ನಿರಂತರ ದಿನಪೂರ್ತಿ ಬ್ಯಾಕಪ್ ಬಯಸುವವರಿಗಾಗಿ ವಿಶ್ವಾಸಾರ್ಹ ಆಯ್ಕೆ. Realme GT 8 Pro ಸಾಮಾನ್ಯ ಬಳಕೆದಾರರಿಗೆ ಸರಿಹೊಂದುತ್ತದೆ, ಆದರೆ ಪವರ್ ಯೂಸರ್‌ಗಳಿಗೆ ಉತ್ತಮ. ಒಟ್ಟಾರೆ ಸಾರಾಂಶವಾಗಿ, ಬ್ಯಾಟರಿಯ ಗಾತ್ರ ಒಂದೇ ಇರಬಹುದು, ಆದರೆ ನಿಜವಾದ ವ್ಯತ್ಯಾಸವನ್ನು ಸಾಫ್ಟ್‌ವೇರ್, ಆಪ್ಟಿಮೈಸೇಶನ್ ಮತ್ತು ಬಳಕೆದಾರ ಅನುಭವವೇ ನಿರ್ಧರಿಸುತ್ತದೆ. 2025ರ ಈ ಚಾಂಪಿಯನ್ ಪಟ್ಟಿಯಲ್ಲಿ OnePlus 15 ಸಂಪೂರ್ಣ ವಿಜೇತವಾಗಿ ಹೊರಹೊಮ್ಮಿದೆ.
ಆಧಾರ: 91mobiles


Click it and Unblock the Notifications








