ನಿಮ್ಮ ಸ್ಮಾರ್ಟ್‌ಫೋನ್ ಬಗ್ಗೆ ನಿಮಗೆಷ್ಟು ಗೊತ್ತು..?

By GizBot Bureau
|

ಸ್ಮಾರ್ಟ್ ಫೋನ್ ಗಳು ಈಗಿನ ಜಮಾನದಲ್ಲಿ ಪ್ರತಿಯೊಬ್ಬರೂ ತಾವು ಹೋದಲ್ಲಿ ಬಂದಲ್ಲಿ ಇಟ್ಟುಕೊಂಡೇ ಇರುತ್ತಾರೆ. ಅದರಲ್ಲಿ ನಿಮ್ಮ ಸರ್ವವೂ ಅಡಗಿರುವಂತಾಗಿದೆ .ಹೌದು ಅಷ್ಟರ ಮಟ್ಟಿಗೆ ಸ್ಮಾರ್ಟ್ ಫೋನ್ ನಮ್ಮ ದೈನಂದಿನ ಜೀವನದಲ್ಲಿ ಅಗತ್ಯವಸ್ತುವಾಗಿ ಪರಿಣಮಿಸಿದೆ. ದೊಡ್ಡ ದೊಡ್ಡ ಕೆಲಸಗಳು, ಗಂಭೀರ ಮತ್ತು ಕಠಿಣ ಕೆಲಸಗಳೂ ಕೂಡ ಸ್ಮಾರ್ಟ್ ಫೋನ್ ನಿಂದಾಗಿ ಈಗ ಸುಲಭವಾಗಿದೆ. ಘಂಟೆಗಳವರೆಗೆ ಮಾಡಬೇಕಾಗಿದ್ದ ಕೆಲಸಗಳು ಕ್ಷಣ ಮಾತ್ರದಲ್ಲೇ ಮುಗಿಸಿಬಿಡಬಹುದು.

ನಿಮ್ಮ ಸ್ಮಾರ್ಟ್‌ಫೋನ್ ಬಗ್ಗೆ ನಿಮಗೆಷ್ಟು ಗೊತ್ತು..?

ಸ್ಮಾರ್ಟ್ ಫೋನ್ ನಮ್ಮ ಕೆಲಸವನ್ನು ಸರಳಗೊಳಿಸಿದೆ ಎಂಬುದು ಎಷ್ಟು ನಿಜವೋ ಅದಕ್ಕಾಗಿ ನಾವು ಹಣವನ್ನು ವ್ಯಯಿಸಬೇಕು ಎಂಬುದೂ ಕೂಡ ಅಷ್ಟೇ ಸತ್ಯ. ಯಾವುದೋ ಒಂದು ಪ್ರಮುಖ ಕೆಲಸಕ್ಕೆ ನಿಮಗೆ ಆಪ್ ಗಳು ಬೇಕಾಗುತ್ತದೆ ಮತ್ತು ನೀವು ಆ ಆಪ್ ಗಳಿಗೆ ನಿಮ್ಮ ವಯಕ್ತಿಕ ಕೆಲವು ಮಾಹಿತಿಗಳನ್ನು ಒದಗಿಸುತ್ತೀರಿ.

ನಿಮ್ಮ ಸ್ಮಾರ್ಟ್ ಫೋನ್ ಆ ಮಾಹಿತಿಗಳನ್ನು ಕಲೆ ಹಾಕುತ್ತದೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ. ಪಾಸ್ ಕೋಡ್ ಗಳು, ಪಾಸ್ ವರ್ಡ್ ಗಳು ಮತ್ತು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಸೇವ್ ಆಗಿರುವ ಲೋಕೇಷನ್ ವಿವರಗಳು ಇತ್ಯಾದಿಗಳ ಬಗ್ಗೆ ನೀವು ಹೆಚ್ಚು ವಿಚಾರಗಳನ್ನು ತಿಳಿದಿರುವುದು ಬಹಳ ಮುಖ್ಯ.

ಲೋಕೇಷನ್ ಹಿಸ್ಟರಿ 

ಲೋಕೇಷನ್ ಹಿಸ್ಟರಿ 

ಐಫೋನ್ ಮತ್ತು ಆಂಡ್ರಾಯ್ಡ್ ಫೋನ್ ಎರಡೂ ಕೂಡ ಇಂಟರ್ನಲ್ ಟ್ರ್ಯಾಕಿಂಗ್ ಡಿವೈಸ್ ಗಳನ್ನು ಒಳಗೊಂಡಿರುತ್ತದೆ ಮ್ತು ಇದು ನಿಮ್ಮ ಸ್ಥಳದ ವಿವರವನ್ನು ಪ್ರತಿ ಕ್ಷಣವೂ ಕಲೆಹಾಕುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಒಂದು ವೇಳೆ ನಿಮ್ಮ ಸ್ಥಳದ ಸೇವೆಯು ಸ್ವಿಚ್ ಆನ್ ಆಗಿದ್ದರೆ, ನೀವು ಸಂಚರಿಸಿದ ಸ್ಥಳದ ಪ್ರತಿಯೊಂದು ವಿವರದ ದೊಡ್ಡ ಪಟ್ಟಿಯೇ ಅಲ್ಲಿರುತ್ತದೆ. ಇದನ್ನು ಸ್ವಿಚ್ ಆಫ್ ಮಾಡಲಾಗುತ್ತದೆ ಯಾಕೆಂದರೆ ಈ ಹೆಚ್ಚು ಬ್ಯಾಟರಿಯನ್ನು ಪಡೆದು ಬ್ಯಾಟರಿ ಲೈಫ್ ನ್ನು ಕಡಿಮೆಗೊಳಿಸುತ್ತದೆ.

ಸಿರಿ

ಸಿರಿ

ಸಾಫ್ಟವೇರ್ ಲೈಸೆನ್ಸ್ ಅಗ್ರಿಮೆಂಟ್ ಹೇಳುವಂತೆ ಆಪಲ್ ಸಿರಿಯಿಂದ ಸಂಗ್ರಹಿಸುವ ಮಾಹಿತಿಯು ಬಳಕೆದಾರರನ್ನು ಹೆಚ್ಚು ಅರ್ಥೈಸಿಕೊಳ್ಳಲು ಮತ್ತು ನೀವು ಏನನ್ನು ಬಯಸುತ್ತೀರಿ ಎಂದು ತಿಳಿದುಕೊಳ್ಳುವ ಉದ್ದೇಶದಿಂದ ಸಂಗ್ರಹಿಸಲಾಗುತ್ತದೆ. ನೀವು ಸಂಗ್ರಹಿಸುವ ಮಾಹಿತಿಯು ಅನಾಮಧೇಯತೆಯನ್ನು ಖಚಿತಪಡಿಸಲು ನಿಮ್ಮ ಆಪಲ್ ಖಾತೆಯ ಬದಲಿಗೆ ಯಾದೃಚ್ಛಿಕ ID ಅಂದರೆ ರ್ಯಾಂಡಮ್ ಐಡಿಯೊಂದಿಗೆ ನಿಮ್ಮ ಫೋನ್ ಗೆ ಸಂಪರ್ಕಗೊಂಡಿರುತ್ತದೆ.

 ಪರ್ಸನಲ್ ಐಡಿಗಳು 

ಪರ್ಸನಲ್ ಐಡಿಗಳು 

ಪರ್ಸನಲ್ ಐಡೆಂಟಿಫಿಕೇಷನ್ ಇನ್ಫರ್ಮೇಷನ್ (ಪಾಸ್ ಕೋಡ್) ಅಂದರೆ ವಯಕ್ತಿಕ ಗುರುತಿನ ಮಾಹಿತಿಗಳನ್ನು ನಾವು ಚೀನಾ ಮೂಲದ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಒನ್ ಪ್ಲಸ್ ಗಳಲ್ಲಿ ಗಮನಿಸಬಹುದು.ಬಳಕೆದಾರರ ಅನುಭವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇದನ್ನು ಸಂಗ್ರಹಿಸಲಾಗುತ್ತದೆ ಎಂಬ ಕಾರಣವನ್ನು ಕಂಪೆನಿ ನೀಡುತ್ತದೆ. ಆದರೆ ಇದೊಂದು ರೀತಿಯಲ್ಲಿ ನಿಮ್ಮ ವಯಕ್ತಿಕ ಮಾಹಿತಿಯನ್ನು ಕದಿಯುವಿಕೆಯ ತಂತ್ರವೆಂಬಂತೆ ಭಾಸವಾಗುತ್ತದೆ.

ಪಾಸ್ ವರ್ಡ್ಸ್ 

ಪಾಸ್ ವರ್ಡ್ಸ್ 

ಆಪ್ ಅಥವಾ ವೆಬ್ ಸೈಟ್ ಗೆ ನೀವು ನಿಮ್ಮ ಸ್ಮಾರ್ಟ್ ಫೋನ್ ಬಳಸಿ ಲಾಗಿನ್ ಆದಾಗ ಪಾಸ್ ವರ್ಡ್ ಸೇವ್ ಮಾಡಲು ನೀವು ಎಸ್ ಎಂದು ಉತ್ತರಿಸಿದ್ದೇ ಆದಲ್ಲಿ ಈ ಕೆಲಸ ಬಹಳ ಸುಲಭವಾಗಿ ಆಗುತ್ತದೆ.

ಮೆಸೇಜ್ ಗಳು 

ಮೆಸೇಜ್ ಗಳು 

ಐಫೋನ್ ಗಳಲ್ಲಿ ನೀವು ನಿಮ್ಮ ಮೆಸೇಜ್ ಗಳನ್ನು ಡಿಲೀಟ್ ಮಾಡಿದ್ದರೂ ಕೂಡ ಆ ಮೆಸೇಜ್ ಗಳು ಆಪಲ್ ನಲ್ಲಿ ಭದ್ರವಾಗಿ ಇರುತ್ತದೆ. ಹೌದು ಅವನು/ಅವಳು ಕಳುಹಿಸಿದ ಮತ್ತು ಪಡೆದಿರುವ ಟೆಕ್ಸ್ಟ್ ಮೆಸೇಜ್ ಗಳನ್ನು ಆಪಲ್ ಸಂಸ್ಥೆ ಎನ್ಕ್ರಿಪ್ಟೆಡ್ ಮಾಡಿ ಕೆಲವು ಸಮಯಗಳವರೆಗೆ ಸೇವ್ ಮಾಡಿ ಇಟ್ಟಿರುತ್ತದೆ. ಅದನ್ನು ಸಂಪೂರ್ಣವಾಗಿ ಡಿಲೀಟ್ ಮಾಡುವ ಮುನ್ನ ಆ ಮೆಸೇಜ್ ಗಳನ್ನು ಸಂಪೂರ್ಣವಾಗಿ ಓದಲಾಗಿದೆ ಮತ್ತು ಮುಂದೆ ಆ ಮೆಸೇಜಿನ ಅಗತ್ಯವಿಲ್ಲ ಎಂಬುದನ್ನು ಐಫೋನ್ ನಲ್ಲಿ ಖಾತ್ರಿ ಪಡಿಸಿಕೊಳ್ಳಲಾಗುತ್ತದೆ ಮತ್ತು ಎಷ್ಟು ಸಮಯದ ವರೆಗೆ ಸೇವ್ ಮಾಡಿ ಇಟ್ಟಿರಲಾಗುತ್ತದೆ ಎಂಬುದನ್ನು ಯಾರಿಗೂ ತಿಳಿಸಲಾಗುವುದಿಲ್ಲ.

ಗೂಗಲ್ ಮಾಡಿದ ಎಲ್ಲಾ ವಿವರಗಳು 

ಗೂಗಲ್ ಮಾಡಿದ ಎಲ್ಲಾ ವಿವರಗಳು 

ನೀವು ಗೂಗಲ್ ಲಾಗಿನ್ ಬಳಸಿ ನಿಮ್ಮ ಆಂಡ್ರಾಯ್ಡ್ ಗೆ ಲಾಗಿನ್ ಆದ ಕ್ಷಣದಿಂದ, ನಿಮ್ಮ ಫೋನ್ ಎಲ್ಲಾ ಗೂಗಲ್ ಅಕೌಂಟ್ ಗಳಿಗೂ ಸ್ವಯಂಚಾಲಿತವಾಗಿ ಲಿಂಕ್ ಆಗಿ ಬಿಡುತ್ತದೆ. ನಿಮ್ಮ ಫೋನ್ ನಿರ್ವಹಿಸುವ ಎಲ್ಲಾ ಕೆಲಸಗಳ ಮಾಹಿತಿಯನ್ನು ಗೂಗಲ್ ನಿಂದ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದರಲ್ಲಿ ನಿಮ್ಮ ಕರೆಗಳ ವಿವರ, ಕರೆಗಳ ಸಮಯ, ನಿಮ್ಮ ಸ್ಥಳ, ಇತ್ಯಾದಿ ಹಲವು ಮಾಹಿತಿಗಳು ಒಳಗೊಂಡಿರುತ್ತದೆ.

ನೀವು ಯಾವ ಸ್ಪೀಡ್ ನಲ್ಲಿ ಟ್ರಾವೆಲ್ ಮಾಡುತ್ತೀರಿ ಎಂಬ ವಿವರ 

ನೀವು ಯಾವ ಸ್ಪೀಡ್ ನಲ್ಲಿ ಟ್ರಾವೆಲ್ ಮಾಡುತ್ತೀರಿ ಎಂಬ ವಿವರ 

ನೀವು ಮ್ಯಾಪ್ ನ್ನು ನೇವಿಗೇಷನ್ ಗಾಗಿ ಬಳಸಿದ್ದೇ ಆದಲ್ಲಿ ನೀವು ಹುಡುಕಾಡಿದ ಜಾಗವನ್ನು ತಲುಪಲು ಇಂತಿಷ್ಟು ಸಮಯ ಬೇಕಾಗುತ್ತದೆ ಎಂಬ ಮಾಹಿತಿಯು ನಿಮಗೆ ತೋರಿಸಲಾಗುತ್ತದೆ. ಐಫೋನ್ ಕೇವಲ ನಿಮ್ಮ ಲೋಕೇಷನ್ ನ್ನು ಮಾತ್ರ ಟ್ರ್ಯಾಕ್ ಮಾಡುವುದಿಲ್ಲ. ಬದಲಾಗಿ ನೀವು ಯಾವ ಸಮಯಕ್ಕೆ ಯಾವ ಜಾಗವನ್ನು ಬಿಟ್ಟು ಹೊರಟಿರಿ ಮತ್ತು ಮತ್ತೊಂದು ಜಾಗವನ್ನು ಯಾವ ಸಮಯಕ್ಕೆ ತಲುಪಿದ್ದೀರಿ ಎಂಬುದನ್ನು ಕಲೆ ಹಾಕುತ್ತದೆ. ಅಂದರೆ ನೀವು ಟ್ರಾವೆಲ್ ಮಾಡಿದ ಸ್ಪೀಡ್ ನ ವಿವರ ಸಿಗುತ್ತದೆ.

ನೀವು ಆಪ್ ಗಳಲ್ಲಿ ಒದಗಿಸುವ ಎಲ್ಲಾ ಮಾಹಿತಿಗಳು 

ನೀವು ಆಪ್ ಗಳಲ್ಲಿ ಒದಗಿಸುವ ಎಲ್ಲಾ ಮಾಹಿತಿಗಳು 

ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಕೂಡ ಅದೆಷ್ಟೋ ಆಪ್ ಗಳಿವೆ ಅವುಗಳು ನಿಮ್ಮ ಬಗೆಗಿನ ಹಲವಾರು ಡಾಟಾಗಳನ್ನು ಸಂಗ್ರಹಿಸಿ ಬಿಡುತ್ತದೆ. ನೀವು ಆಪ್ ಗಳಲ್ಲಿ ನೀಡಲಾಗುವ ಮಾಹಿತಿಗಳನ್ನು ರಿಸ್ಟ್ರಿಕ್ಟ್ ಮಾಡುವ ಅಧಿಕಾರವನ್ನು ಪಡೆದಿರುತ್ತೀರಿ.ಆದರೆ ಹೀಗೆ ಮಾಡುವುದರಿಂದಾಗಿ ಆಪ್ ಮೇಲಿನ ನಿಮ್ಮ ಹಿಡಿತವು ಕಡಿಮೆಯಾಗಬಹುದು. ಆಪ್ ನ ಎಲ್ಲಾ ಸೌಕರ್ಯವನ್ನು ನೀವು ಬಳಸಲು ಅಸಾಧ್ಯವಾಗಬಹುದು.

Best Mobiles in India

English summary
8 common things your smartphone knows about you. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X