Subscribe to Gizbot

ಬಜೆಟ್ ಬೆಲೆಯಲ್ಲಿ ಅತ್ಯುನ್ನತ ಫೋನ್ ಹೋನರ್ 5X

Written By:

ಹುವಾವೆ ಸಬ್ ಬ್ರ್ಯಾಂಡ್ ಹೋನರ್ ಭಾರತದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ, ಚೀನಾ ಮೂಲದ ಈ ಕಂಪೆನಿ ತನ್ನ ಫೋನ್ ವಿನ್ಯಾಸ, ಫೀಚರ್ ಮತ್ತು ಬೆಲೆಗೆ ಹೆಚ್ಚಿನ ಮಹತ್ವ ನೀಡಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಹೇಳಬಹುದು.

ಇತ್ತೀಚೆಗೆ ತಾನೇ ಕಂಪೆನಿ ಮಧ್ಯಮ ಕ್ರಮಾಂಕಿತ ಫೋನ್ ಆದ ಹೋನರ್ 5X ಬೆಲೆ ರೂ 12,999 ಅನ್ನು ತನ್ನ ಗೆಲುವಿಗೆ ಗರಿಯಾಗಿಸಿಕೊಂಡಿದೆ. ಕಳೆದ ವರ್ಷ ಬಿಡುಗಡೆಗೊಂಡ ಹೋನರ್ 4‍X ಸಕ್ಸೆಸರ್ ಆಗಿರುವ ಹೋನರ್ 5X ಅತ್ಯದ್ಭುತ ವಿಶೇಷತೆಗಳಿಂದ ಫೋನ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಚನೆ

#1

ಫೋನ್‌ನ ಮೇಲ್ಭಾಗ ಮತ್ತು ಕೆಳಭಾಗವನ್ನು ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದ್ದು, ನೋಡಿದ ಕೂಡಲೇ ಇದರ ವ್ಯತ್ಯಾಸವನ್ನು ಹುಡುಕಲು ಕಷ್ಟ. ಬಲಭಾಗದಲ್ಲಿ ಧ್ವನಿ ನಿಯಂತ್ರಣ ಬಟನ್‌ಗಳಿದ್ದು ಮೇಲ್ಭಾಗದಲ್ಲಿ ಹೆಡ್‌ಫೋನ್ ಜಾಕ್ ಅನ್ನು ನಿಮಗೆ ಕಾಣಬಹುದಾಗಿದೆ. ಕೆಳಭಾಗದಲ್ಲಿ ಸ್ಪೀಕರ್ ಮತ್ತು ಚಾರ್ಜಿಂಗ್ ಪೋರ್ಟ್ ಇದೆ. ಫೋನ್ ತೂಕ 158 ಗ್ರಾಮ್ ಆಗಿದ್ದು, ಎಲ್‌ಇಡಿ ನೋಟಿಫಿಕೇಶನ್ ಇದರಲ್ಲಿದೆ.

ಡಿಸ್‌ಪ್ಲೇ ಬ್ರೈಟ್‌ನೆಸ್

#2

5.5 ಇಂಚಿನ ಎಲ್‌ಸಿಡಿ ಪ್ಯಾನೆಲ್ ಅನ್ನು ಹೊಂದಿರುವ ಈ ಫೋನ್ 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ. ಇನ್ನು ಗುಣಮಟ್ಟವಂತೂ ಅತ್ಯುನ್ನತವಾಗಿದ್ದು ಬಣ್ಣಗಳು ವೈವಿಧ್ಯಮಯವಾಗಿದೆ.

ಕಾರ್ಯಕ್ಷಮತೆ

#3

ಹೋನರ್ 5X ಸ್ನ್ಯಾಪ್‌ಡ್ರ್ಯಾಗನ್ 615 ಪ್ರೊಸೆಸರ್‌ನೊಂದಿಗೆ ಬಂದಿದ್ದು ಅಡ್ರೆನೊ 405 ಜಿಪಿಯು ಮತ್ತು 2ಜಿಬಿ RAM ಡಿವೈಸ್‌ನಲ್ಲಿದೆ. ಕಾರ್ಯಕ್ಷಮತೆಯಲ್ಲಿ ಈ ಡಿವೈಸ್ ಎತ್ತಿದ ಕೈ ಎಂದೆನಿಸಿದೆ.

ಯುಎಸ್‌ಪಿ ಫಿಂಗರ್ ಪ್ರಿಂಟ್ ಸ್ಕ್ಯಾನರ್

#4

ಫೋನ್‌ನ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹಿಂಭಾಗದಲ್ಲಿದ್ದು ಹೆಚ್ಚು ಸುಧಾರಿತ ಅಂಶಗಳನ್ನು ಕಂಡುಕೊಂಡು ಹೋನರ್ ಫೋನ್‌ಗಳ ಶ್ರೇಣಿಗೆ ಸೇರಿಕೊಂಡಿದೆ. ಡಿವೈಸ್ ಅನ್‌ಲಾಕ್ ಮಾಡಲು ಫಿಂಗರ್ ಪ್ರಿಂಟ್ ಸಹಕಾರಿಯಾಗಿದ್ದು ಗೆಸ್ಚರ್ ಕಂಟ್ರೋಲ್ ಅನ್ನು ಇದು ನಡೆಸಲಿದೆ.

ಸ್ಮಾರ್ಟ್ ಸಾಫ್ಟ್‌ವೇರ್

#5

ಆಂಡ್ರಾಯ್ಡ್ 5.1.1 ಇದರಲ್ಲಿ ಚಾಲನೆಯಾಗುತ್ತಿದ್ದು ಸ್ಕಿನ್ಡ್ EMUI 3.1 ಫೋನ್‌ನಲ್ಲಿದೆ. ಹೋನರ್ 5X ಹೆಚ್ಚಿನ ಕಸ್ಟಮೈಸ್ಡ್ ಆಯ್ಕೆಗಳನ್ನು ನೀಡುತ್ತಿದ್ದು ಥೀಮ್ಸ್, ಅನಿಮೇಶನ್‌ಗಳನ್ನು ಇದರಲ್ಲಿ ಹೊಂದಿಸಿಕೊಳ್ಳಬಹುದಾಗಿದೆ. ಮಾರ್ಶ್ ಮಲ್ಲೊ ಅಪ್‌ಗ್ರೇಡ್ ಅನ್ನು ಡಿವೈಸ್ ಪಡೆದುಕೊಳ್ಳಲಿದೆ ಎಂಬುದಾಗಿ ಹುವಾವೆ ತಿಳಿಸಿದೆ.

ಕ್ಯಾಮೆರಾ

#6

ಹೋನರ್ 5X, 13 ಎಮ್‌ಪಿ ರಿಯರ್ ಕ್ಯಾಮೆರಾದೊಂದಿಗೆ ಬಂದಿದ್ದು, ಎಲ್‌ಇಡಿ ಫ್ಲ್ಯಾಶ್ ಅನ್ನು ಇದು ಒಳಗೊಂಡಿದೆ. ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದೆ. ಕಡಿಮೆ ಬೆಳಕಿನಲ್ಲೂ ಅತ್ಯುತ್ತಮ ಫೋಟೋಗಳನ್ನು ತೆಗೆಯುವ ಸಾಮರ್ಥ್ಯವನ್ನು ಹೋನರ್ 5X ಹೊಂದಿದೆ.

ಬ್ಯಾಟರಿ

#7

ಹೋನರ್ 5X, 3,000mAh ಬ್ಯಾಟರಿಯನ್ನು ಪಡೆದುಕೊಂಡಿದ್ದು EMUI ಬ್ಯಾಟರಿ ಸೇವರ್ ಆಯ್ಕೆಯನ್ನು ಇದು ಹೊಂದಿದೆ. ಹೆಚ್ಚುವರಿ ಗಂಟೆಗಳ ಬ್ಯಾಟರಿ ಶಕ್ತಿಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದ್ದು ಸ್ಮಾರ್ಟ್ ಮೋಡ್‌ನಲ್ಲೂ ಇದರ ಬಳಕೆಯನ್ನು ಮಾಡಬಹುದಾಗಿದೆ.

ಖರೀದಿ ಮಾಡಬೇಕೇ?

#8

ಯಾವುದೇ ಚಿಂತೆಗಳಿಲ್ಲದೆ, ಹೋನರ್ 5X ಅನ್ನು ನಿಮಗೆ ಖರೀದಿ ಮಾಡಬಹುದಾಗಿದ್ದು ಉತ್ತಮ ಮೆಟಲ್ ವಿನ್ಯಾಸ ಫಿಂಗರ್ ಪ್ರಿಂಟ್ ಸ್ಕ್ಯಾನರ್‌ನಿಂದ ನಿಮ್ಮ ಮನಸ್ಸನ್ನು ಕದಿಯುವಂತಿದೆ. ದೊಡ್ಡ ಸ್ಕ್ರೀನ್ ಅನ್ನು ಇದು ಪಡೆದುಕೊಂಡಿದ್ದು ಓಎಸ್ ಕೂಡ ಉತ್ತಮವಾಗಿದೆ ಮತ್ತು ಬ್ಯಾಟರಿ ದೀರ್ಘತೆ ಕೂಡ ಅತ್ಯುತ್ತಮವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Honor 5X, the successor of the last year launched Honor 4X, comes with significant specs upgrade and a very intelligent fingerprint scanner on board, especially when compared to other options at this price range.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot