Just In
- 5 min ago
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- 25 min ago
ಬೆಸ್ಟ್ ಕ್ಯಾಮೆರಾ ಫೋನ್ ಖರೀದಿಸಬೇಕೆ?..ಹಾಗಿದ್ರೆ, ಸ್ವಲ್ಪ ಕಾಯುವುದು ಉತ್ತಮ!
- 40 min ago
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ!
- 1 hr ago
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
Don't Miss
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- News
ಭಾರತ್ ಜೋಡೋ ಯಾತ್ರೆ: ಸಂಭ್ರಮಾಚರಣೆಯ ಉತ್ಸಾಹ ಕುಗ್ಗುವ ಸಾಧ್ಯತೆ
- Sports
BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Movies
'ಕ್ರಾಂತಿ' ₹100 ಕೋಟಿ ಕ್ಲಬ್ ಸೇರಿದ್ದು ಹೇಗೆ? ಥಿಯೇಟರ್ನಿಂದ ಎಷ್ಟು? ಟಿವಿ ರೈಟ್ಸ್ನಿಂದ ಎಷ್ಟು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
8GB RAM ಸ್ಮಾರ್ಟ್‌ಫೋನ್ ನಿಮಗ್ಯಾಕೆ ಬೇಕಾಗಿಲ್ಲ..!
6ಜಿಬಿ ಮೆಮೊರಿಯ ಸ್ಮಾರ್ಟ್ ಫೋನ್ ಗಳ ನಂತರ ಈಗ 8ಜಿಬಿ ಸ್ಮಾರ್ಟ್ ಫೋನ್ ಗಳ ಟ್ರೆಂಡ್ ಮಾರ್ಕೆಟ್ ನಲ್ಲಿ ನಿಧಾನವಾಗಿ ಆರಂಭವಾಗಲು ಪ್ರಾರಂಭವಾಗಿದ್ದು ಒನ್ ಪ್ಲಸ್ 6 ಮೊಟ್ಟ ಮೊದಲಿಗೆ 8ಜಿಬಿ ಮೆಮೊರಿ ಒಳಗೊಂಡಿದೆ, ಈಗ ಹಲವಾರು ಬ್ರ್ಯಾಂಡ್ ಗಳು 8ಜಿಬಿ ಮೆಮೊರಿಯ ಫೋನ್ ಗಳನ್ನು ಬಿಡುಗಡೆಗೊಳಿಸಲು ಉತ್ಸುಕವಾಗಿದೆ.

ಆದರೆ, 8ಜಿಬಿ ಮೆಮೊರಿಯನ್ನು ಸಮರ್ಥಿಸಿಕೊಳ್ಳಲು ಬ್ರ್ಯಾಂಡ್ ಗಳು 256 ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ನೀಡುತ್ತಿದೆ. ಹೀಗೆ ಅತೀ ಹೆಚ್ಚು ಮೆಮೊರಿ ಮತ್ತು ಅತೀ ಹೆಚ್ಚು ಸ್ಟೋರೇಜ್ ನ್ನು ಹೆಚ್ಚಿನ ಬಳಕೆದಾರರು ಬಿಟ್ಟುಬಿಡಬಹುದು. ಹೆಚ್ಚಿನ ಖರೀದಿದಾರರಿಗೆ ಈ ರೀತಿಯ ಅಧಿಕ ಸಂಖ್ಯೆಯು ಉತ್ತಮ ಎಂಬ ಭಾವನೆ ನೀಡುತ್ತದೆ. ಆದರೆ, ಇಷ್ಟು ದೊಡ್ಡ ಸಂಖ್ಯೆಯ ಫೋನ್ಗಳು ನಿಜಕ್ಕೂ ಅಗತ್ಯವಿರುತ್ತಾ? ಖಂಡಿತವಾಗಲೂ ಎಲ್ಲರಿಗೂ ಅಗತ್ಯವಿಲ್ಲ. ಅದಕ್ಕೆ 9 ಕಾರಣಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ.

1. ಸ್ಪೆಕ್-ಶೀಟ್ ಪ್ರಿಯರಿಗೆ ಕೇವಲ ಒಂದು ಶೋ
ಕಳೆದ ವರ್ಷ, 6ಜಿಬಿ ಮೆಮೊರಿಯ ಫೋನ್ ಗಳು ಬಳಕೆದಾರರ ಗಮನವನ್ನು ಸೆಳೆದಿತ್ತು ಮತ್ತು ಈ ವರ್ಷ 8ಜಿಬಿ ಮೆಮೊರಿ ಅದೇ ಕೆಲಸವನ್ನು ಮಾಡುತ್ತಿದೆ. ಪ್ರತಿಯೊಂದು ಸ್ಪಾರ್ಟ್ ಫೋನ್ ಉತ್ಸಾಹಿಗಳು ಹೊಸತೊಂದನ್ನು ಹೇಳಿ ಪ್ರದರ್ಶನ ಮಾಡುತ್ತಾರೆ. ಮತ್ತು ಅದನ್ನು ನಿಮಗೆ ಮಾರಾಟ ಮಾಡುವ ಒಂದು ಮಾರ್ಕೆಟಿಂಗ್ ತಂತ್ರಗಾರಿಕೆ ಇದಾಗಿದೆ.

2. ಸರಾಸರಿ ಫೋನ್ ಬಳಸುವವರಿಗೆ 8ಜಿಬಿ ಮೆಮೊರಿಯ ಸ್ಮಾರ್ಟ್ ಫೋನ್ ಅಗತ್ಯವಿಲ್ಲ
ನೀವು ನಿಮ್ಮ ಹೊಸ ಸ್ಮಾರ್ಟ್ ಫೋನ್ ನಿಂದ ಏನು ಮಾಡುತ್ತೀರಿ? ಒಂದು ವೇಳೆ ಈ ಪ್ರಶ್ನೆಗೆ ಉತ್ತರ ಮ್ಯೂಸಿಕ್, ಮೂವಿ, ಗೇಮ್, ಸಾಮಾಜಿಕ ಜಾಲತಾಣ ಮತ್ತು ಇಂಟರ್ನೆಟ್ ಬ್ರೌಸಿಂಗ್ ಆದರೆ ಖಂಡಿತ ನಿಮಗೆ 8ಜಿಬಿ ಫೋನಿನ ಅಗತ್ಯತೆ ಇಲ್ಲ.

3. ವಿಶ್ವದ ಅತ್ಯುತ್ತಮ ಫೋನ್ ಗಳು ಕಡಿಮೆ ಮೆಮೊರಿಯನ್ನು ಹೊಂದಿರುತ್ತದೆ.
ವಿಶ್ವದ ಅತ್ಯತ್ತಮ ಫೋನ್ ಗಳಾದ ಆಪಲ್ ಐಫೋನ್ ಎಕ್ಸ್, ಐಫೋನ್ 8 ಪ್ಲಸ್, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9+ ಮತ್ತು ಗೂಗಲ್ ಪಿಕ್ಸಲ್ ಫೋನ್ ಗಳು ಕಡಿಮೆ ಮೆಮೊರಿ ಹೊಂದಿದೆ. ಐಫೋನ್ 8 ಪ್ಲಸ್ 3ಜಿಬಿ ಮೆಮೊರಿ ಮತ್ತು ಸ್ಪೋರ್ಟ್ 4ಜಿಬಿ ಮೆಮೊರಿಯನ್ನಷ್ಟೇ ಒಳಗೊಂಡಿದೆ.

4. 8ಜಿಬಿ ಮೆಮೊರಿ ಅಂದರೆ ನಿಮ್ಮ ಫೋನ್ ವೇಗವಾಗಿರುತ್ತದೆ ಎಂದರ್ಥವಲ್ಲ
ಸಾಫ್ಟವೇರ್ ಗಳು ನಿಮ್ಮ ಸ್ಮಾರ್ಟ್ ಫೋನ್ ಸ್ಪೀಡ್ ಆಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಕೇವಲ ಮೆಮೊರಿಯ ಕಾರಣದಿಂದಾಗಿ ನಿಮ್ಮ ಫೋನ್ ವೇಗವಾಗಿ ಇರುವುದಿಲ್ಲ ಎಂಬುದು ನೆನಪಿರಲಿ.

5. ಹೆಚ್ಚಿನವರು 6ಜಿಬಿ ಮತ್ತು 8ಜಿಬಿ ಮೆಮೊರಿ ಫೋನ್ ನಡುವಿನ ವ್ಯತ್ಯಾಸ ತಿಳಿದಿರುವುದಿಲ್ಲ.
6ಜಿಬಿ ಮತ್ತು 8ಜಿಬಿ ಮೆಮೊರಿಯ ಸ್ಮಾರ್ಟ್ ಫೋನ್ ಗಳ ಪರ್ಫಾಮೆನ್ಸ್ ಮತ್ತು ವೇಗದ ವ್ಯತ್ಯಾಸವು ಖಂಡಿತ ಬಳಕೆ ಮಾಡಿದ ದಿನದಿಂದ ದಿನಕ್ಕೆ ತಿಳಿಯುತ್ತಾ ಹೋಗುತ್ತೆ.

6. ಹೆಚ್ಚಿನ ಆಂಡ್ರಾಯ್ಡ್ ಆಟಗಳು ಕಡಿಮೆ ಮೆಮೊರಿ ಬಳಸಿ ಆಡುವಂತವುಗಳೇ ಆಗಿವೆ
ಡೆವಲಪರ್ ಗಳು ಹೆಚ್ಚಿನ ಜನರು ತಮ್ಮ ಗೇಮ್ ಡೆವಲಪ್ ಮಾಡಬೇಕು ಎಂದು ಬಯಸುತ್ತಾರೆ. ಹಾಗಾಗಿ ಲಾಜಿಕ್ ಆಗಿ ಯೋಚನೆ ಮಾಡಿದಾಗ ಯಾವುದೇ ಗೇಮ್ ಗಳು ಕೂಡ ಅತೀ ಹೆಚ್ಚು ಮೆಮೊರಿಯನ್ನು ಬೇಡುವುದಿಲ್ಲ. ಕಡಿಮೆ ಮೆಮೊರಿಯಲ್ಲೇ ರನ್ ಆಗುವಂತೆ ಡಿಸೈನ್ ಮಾಡಲಾಗಿರುತ್ತದೆ.

7. ಆಂಡ್ರಾಯ್ಡ್ ನ ಯಾವುದೇ ಆಪ್ ಗೂ 8ಜಿಬಿ ಮೆಮೊರಿ ಬೇಕಿಲ್ಲ
ಗೇಮ್ ಮಾತ್ರವಲ್ಲ ಇದರ ಜೊತೆಗೆ, ಯಾವುದೇ ಆಪ್ ಅಥವಾ ಹಾರ್ಡ್ ವೇರ್ ಗಳು ಕೂಡ 8ಜಿಬಿ ಮೆಮೊರಿ ಬೇಡುವುದಿಲ್ಲ. AR ಮತ್ತು VR ಆಪ್ ಗಳು ಕೂಡ 4ಜಿಬಿ ಮೆಮೊರಿಯಲ್ಲಿ ಸುಲಭದಲ್ಲಿ ರನ್ ಆಗಿ ಬಿಡುತ್ತದೆ. ಜೊತೆಗೆ ಮಾಡ್ಯುಲರ್ ಹಾರ್ಡ್ ವೇರ್ ಗಳಾದ ಮೋಟೋಮೋಡ್ ಗೂ ಕೂಡ ಕಡಿಮೆ ಮೆಮೊರಿ ಅಂದರೆ 4ಜಿಬಿ ಮೆಮೊರಿ ಮಾತ್ರವೇ ಸಾಕಾಗುತ್ತದೆ.

8. 8ಜಿಬಿ ಮೆಮೊರಿ ಫೋನ್ ಗಳು ದುಬಾರಿ
8ಜಿಬಿ ಮೆಮೊರಿಯ ಫೋನ್ ಗಳು ಹೆಚ್ಚು ದುಬಾರಿಯಾಗಿದೆ. ಒಂದು ವೇಳೆ ನೀವು ಹೆಚ್ಚು ವೆಚ್ಚ ಮಾಡುತ್ತಿದ್ದೀರಾದರೆ, ಯಾಕಾಗಿ ಎಂಬುದನ್ನು ಯೋಚಿಸಿ. ಕಡಿಮೆ ಬೆಲೆಗೆ ನಿಮಗೆ ಸಾಕಾಗುವಷ್ಟು ಉತ್ತಮ ಫೋನ್ ಲಭ್ಯವಿರುವಾಗ ದುಬಾರಿ ವೆಚ್ಚ ಯಾಕೆ?

9. 8ಜಿಬಿ RAM ಫೋನ್ ಗಳು ಫ್ಯೂಚರ್ ಫ್ರೂಫ್ ಗಳಾಗಿರಬಹುದು ಆದರೆ ನಮ್ಮಲ್ಲಿ ಹೆಚ್ಚಿನವರು ಮೊಬೈಲ್ ಗಳನ್ನುಬದಲಾಯಿಸಿಯೇ ಬದಲಾಯಿಸುತ್ತೇವೆ
ನೀವು ಅಂದುಕೊಳ್ಳುತ್ತಿರಬಹುದು ಭವಿಷ್ಯದಲ್ಲಿ ದೊಡ್ಡ ಡೊಡ್ಡ ಗೇಮ್ ಮತ್ತು ಆಪ್ ಗಳು ಬಿಡುಗಡೆಗೊಳ್ಳುವ ಸಂದರ್ಬದಲ್ಲಿ ನಿಮ್ಮ ಬಳಿ 8ಜಿಬಿ ಮೆಮೊರಿಯ ಫೋನ್ ಇದ್ದರೆ ಅದು ನಿಮಗೆ ಉತ್ತಮ ಫ್ಯೂಚರ್ ಫ್ರೂಫ್ ಆಗಲಿದೆ ಎಂದು. ಆದರೆ ಯಾರೂ ಕೂಡ ಒಂದೇ ಫೋನನ್ನು ಹೆಚ್ಚು ವರ್ಷ ಇಟ್ಟುಕೊಂಡೇ ಇರುವುದಿಲ್ಲ, ಬದಲಾಯಿಸಿಯೇ ಬದಲಾಯಿಸುತ್ತಾರೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470