ಸ್ಯಾಮ್ ಸಂಗ್ ಗೆಲಾಕ್ಸಿ 2012ರ ರಾಕ್ ಸ್ಟಾರ್ ಆಗಲಿದೆಯೆ?

Posted By:
ಸ್ಯಾಮ್ ಸಂಗ್ ಗೆಲಾಕ್ಸಿ 2012ರ ರಾಕ್ ಸ್ಟಾರ್ ಆಗಲಿದೆಯೆ?
ಮೊಬೈಲ್ ಹ್ಯಾಂಡ್ ಸೆಟ್ ಗಳ ಸಾಲಿನಲ್ಲಿ ಸ್ಯಾಮ್ ಸಂಗ್ ಗೆಲಾಕ್ಸಿ ಅತ್ಯಂತ ಜನಪ್ರಿಯತೆಯನ್ನು ಗಳಿಸಿರುವ ಮೊಬೈಲ್ ಆಗಿದೆ. ಅದರಲ್ಲೂ ಸ್ಯಾಮ್ ಸಂಗ್ ಗೆಲಾಕ್ಸಿ S2 ಮತ್ತು ಇತರ ಗೆಲಾಕ್ಸಿ ಸರಣಿಗಳು 2011ರಲ್ಲಿ ಉತ್ತಮ ಮಾರುಕಟ್ಟೆಯನ್ನು ಪಡೆದುಕೊಂಡಿದೆ. ಗೆಲಾಕ್ಸಿ ಸರಣಿ ಮೊಬೈಲ್ ಗಳನ್ನು ಹೊರತು ಪಡಿಸಿ ಗೆಲಾಕ್ಸಿ W I8150 ಮೊಬೈಲ್ ತನ್ನ ಸ್ಟೈಲಿಷ್ ಲುಕ್ ಮತ್ತು ಗುಣಮಟ್ಟದಿಂದ ಮಾರುಕಟ್ಟೆಯಲ್ಲಿ ಇದರ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ.

ಈ ಗೆಲಾಕ್ಸಿ ಸ್ಟೈಲಿಷ್ ಮೊಬೈಲ್ ನಲ್ಲಿ ಈ ಕೆಳಗಿನ ಮುಖ್ಯ ಗುಣಲಕ್ಷಣಗಳನ್ನು ಕಾಣಬಹುದು.

* 3.7 ಇಂಚಿನ WVGA LCD ಡಿಸ್ ಪ್ಲೇ

* ಗೆಲಾಕ್ಸಿ S ಸರಣಿ ಮೊಬೈಲ್ ಗಿಂತ ಬಳಕೆಯಲ್ಲಿ ಸುಲಭವಾಗಿದೆ.

*ಕ್ವಾಲ್ ಕಮ್ MSM8255T ಚಿಪ್ ಸೆಟ್

*ಆಂಡ್ರೆನೊ 205 GPU ಜೊತೆ 1.4 GHz ಸ್ನ್ಯಾಪ್ ಡ್ರ್ಯಾಗನ್ ಪ್ರೊಸೆಸರ್

* 1 GB ROM ಮತ್ತು 512 MB RAM

* ಮೈಕ್ರೊ SD ಕಾರ್ಡ್ ಸಪೋರ್ಟ್ ಮತ್ತು ವಿಸ್ತರಿಸಬಹುದಾದ ಮೆಮೊರಿ ಸಾಮರ್ಥ್ಯ 32 GB

* 2GB ಇಂಟರ್ನಲ್ ಮೆಮೊರಿ

* 5 ಮೆಗಾ ಪಿಕ್ಸಲ್ LED ಫ್ಲಾಷ್ ಕ್ಯಾಮೆರಾ ಮತ್ತು ಗುಣಮಟ್ಟದ 720p ವೀಡಿಯೊ ರೆಕಾರ್ಡ್ ಮಾಡುವ ಸಾಮರ್ಥ್ಯ

* ಇದರ ಸೆಕಂಡರಿ VGA ಕ್ಯಾಮೆರಾದಲ್ಲಿ ವೀಡಿಯೊ ಕಾನ್ಫರೆನ್ಸ್ ಅನ್ನು ಸಪೋರ್ಟ್ ಮಾಡಬಹುದು

* ಆಂಡ್ರಾಯ್ಡ್ v2.3.5 ಜಿಂಜರ್ ಬರ್ಡ್ ಆಪರೇಟಿಂಗ್ ಸಿಸ್ಟಮ್

* ಉತ್ತಮವಾದ ವೀಡಿಯೊ ತೆಗಯಬಹುದು

* ವೈಫೈ 802.11 b/g/n, ಹಾಟ್ ಸ್ಪಾಟ್ ಮತ್ತು DLNA ಸಂಪರ್ಕ

* A2DP ಇರುವ v3.0 ಬ್ಲೂಟೂಥ್

* 3.5mm ಸ್ಟ್ಯಾಂಡರ್ಡ್ ಆಡಿಯೊ ಜಾಕ್

*ಆಫೀಸ್ ಡಾಕ್ಯುಮೆಂಟ್ ಎಡಿಟರ್

*DivX/XviD/x264 ವೀಡಿಯೊ ಫಾರ್ಮೇಟ್ ಸಪೋರ್ಟ್

* ಅತ್ಯುತ್ತಮವಾದ ಶಬ್ದದ ಗುಣಮಟ್ಟ

* 110 ಗ್ರಾಂ ತೂಕ

ಇಷ್ಟೆಲ್ಲಾ ಉತ್ತಮ ಗುಣಮಟ್ಟವನ್ನು ಹೊಂದಿರುವ ಈ ಮೊಬೈಲ್ ನಲ್ಲಿ ಕೆಲವು ಅನಾನುಕೂಲವನ್ನು ಕೂಡ ಕಾಣಬಹುದು.

* ಪ್ಲಾಸ್ಟಿಕ್ ಬಳಸಿ ತಯಾರಿಸಿರುವುದರಿಂದ ಹೆಚ್ಚಿನ ಕಾಲ ಬಾಳಿಕೆ ಬರುವುದಿಲ್ಲ.

* 2 GB ಸ್ಟೋರೇಜ್ ನಲ್ಲಿ ಬಳಕೆದಾರರಿಗೆ ಬಳಸಲು ಇರುವ ಸ್ಟೋರೇಜ್ 1.7 GB ಮಾತ್ರ

* ಮೆಮೊರಿ ಕಾರ್ಡ್ ಅನ್ನು ಪ್ರತ್ಯೇಕವಾಗಿ ಕೊಳ್ಳಬೇಕು.

* ಶಟರ್ ಕೀ ಕೂಡ ಕಡಿಮೆ ಇದೆ.

ಇದರ ಇಮೇಜ್ ಗುಣಮಟ್ಟ ಕಡಿಮೆ ಇದ್ದರೂ ಕೂಡ ಇದೊಂದು ಉತ್ತಮ ಗೂಣಮಟ್ಟದ ಮೊಬೈಲ್ ಆಗಿದೆ ಎಂದು ಇದನ್ನು ವಿಮರ್ಶೆ ಮಾಡಿದ GSM ಅರೆನಾ ಈ ಮೊಬೈಲ್ ಗೆ 8/10 ಮಾರ್ಕ್ಸ್ ನೀಡಿದೆ. ಈ ಮೊಬೈಲ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಬೆಲೆ ರು. 20, 000 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot