Subscribe to Gizbot

ಗೆಶ್ಚರ್ ಕಂಟ್ರೋಲ್ ಸ್ಮಾರ್ಟ್ ಫೋನ್

Posted By:
ಗೆಶ್ಚರ್ ಕಂಟ್ರೋಲ್ ಸ್ಮಾರ್ಟ್ ಫೋನ್

ತಂತ್ರಜ್ಞಾನದ ಹೊಸ ಆವಿಷ್ಕಾರಗಳಿಂದ ಅತ್ಯಾಧುನಿಕವಾದ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಬರುತ್ತಿವೆ. ಅವುಗಳಲ್ಲಿ ಒಂದಾದ ಗೆಶ್ಚರ್ ಕಂಟ್ರೋಲ್ ಸ್ಮಾರ್ಟ್ ಫೋನ್ ಸಧ್ಯದಲ್ಲಿಯೆ ಅಂದರೆ 2012ರಲ್ಲಿ ಮಾರುಕಟ್ಟೆಯಲ್ಲಿ ರಾರಾಜಿಸಲಿದೆ. ಈ ಮೊಬೈಲ್ ಅನ್ನು XTR3D ಎಂಬ ಚಿಕ್ಕ ಕಂಪನಿ ತಯಾರಿಸಿದೆ.

ಈ ಕಂಪನಿ ಮೈಕ್ರೊಸಾಫ್ಟ್ ಕೈನಾಟಿಕ್ ನಿಂದ ಸ್ಪೂರ್ತಿಗೊಂಡು ಈ ಮೊಬೈಲ್ ಫೋನ್ ತಯಾರಿಸಿದೆ. ಇದರಲ್ಲಿ ಗೇಮ್ ಅನ್ನು ವಾಯ್ಸ್ ಬಳಸಿ ಕಂಟ್ರೋಲ್ ಮಾಡಬಹುದು. ಇದು 50cms ವರೆಗೆ ಅನ್ವಯವಾಗುತ್ತದೆ. ಕೈನಾಟಿಕ್ ನಿಂದ ಈ ಮೊಬೈಲ್ ಅನ್ನು ಬೇರ್ಪಡಿಸಿರುವ ಅಂಶವೆಂದರೆ ಕೈನಾಟಿಕ್ ಅನ್ನು ಟಿವಿಯಲ್ಲಿ ಮಾತ್ರ ಬಳಸಬಹುದು. ಆದರೆ XTR3D ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ ಗಳಲ್ಲಿ ಬಳಸಲಾಗುವುದು.

XTR3Dಯಲ್ಲಿ 2D ಕ್ಯಾಮೆರಾ ಇದ್ದು ಇದರಿಂದ 3ಜಿ ಇಮೇಜ್ ಪಡೆಯಬಹುದಾಗಿದೆ. XTR3D ತಂತ್ರಜ್ಞಾನ ಸಾಫ್ಟ್ ವೇರ್ ಗಳನ್ನು ಡೌನ್ ಲೋಡ್ ಮಾಡಬಹುದಾಗಿದೆ. ಇದರ ಸಾಫ್ಟ ವೇರ್ ಬಳಸಿ ವರ್ಚ್ಯುಯಲ್ ಸ್ವೈಪ್,ಝೂಮ್ ಇನ್ ಮತ್ತು ಝೂಮ್ ಔಟ್ ಕೂಡ ಮಾಡಬಹುದು.

ಈ ಗೆಶ್ಚರ್ ಕಂಡ್ರೋಲ್ ಮೊಬೈಲ್ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಎಷ್ಟರ ಮಟ್ಟಿಗೆ ಸೆಳೆಯಲಿದೆ ಎನ್ನವುದನ್ನು ಕಾಯಬೇಕಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot