Home
ಮೊಬೈಲ್

Redmi; ರೆಡ್‌ಮಿ 13 4G ಸ್ಮಾರ್ಟ್‌ಫೋನ್ ಲಾಂಚ್; ಬೆಲೆ ಎಷ್ಟು ? ಫೀಚರ್ಸ್‌ ಏನಿರಲಿವೆ ?

ತನ್ನ ವಿಭಿನ್ನ ಫೀಚರ್ಸ್‌ ಮೂಲಕ ಗ್ರಾಹಕರ ಬಳಗವನ್ನೇ ಹೊಂದಿರುವ ರೆಡ್‌ಮಿ (Redmi) ಸಂಸ್ಥೆ ತನ್ನ ಗ್ರಾಹಕರಿಗಾಗಿ ಹೊಸ ಹೊಸ ವಿನ್ಯಾಸದ, ಅತ್ಯುತ್ತಮ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಜಾರಿಗೆ ತರುತ್ತಲೇ ಇರುವುದನ್ನು ಗಮನಿಸಬಹುದಾಗಿದೆ. ಬೆಲೆಗೆ ತಕ್ಕನಾದ ಪ್ರಾಡಕ್ಟ್‌ ಒದಗಿಸುವಲ್ಲಿಯೂ ರೆಡ್‌ಮಿ ಸಂಸ್ಥೆ ಯಶಸ್ವಿಯಾಗಿದೆ. ಇದೀಗ ರೆಡ್‌ಮಿ 13 4G (Redmi 13 4G) ಹೆಸರಿನ ನೂತನ ಸ್ಮಾರ್ಟ್‌ಫೋನ್‌ ಒಂದನ್ನು ಯುರೋಪಿಯನ್‌ ದೇಶಗಳಲ್ಲಿ ಲಾಂಚ್ ಮಾಡಿದೆ, ಹಾಗಿದ್ರೆ ಬನ್ನಿ ಈ ಮೊಬೈಲ್‌ನ ಫೀಚರ್ಸ್‌, ಬೆಲೆ ಸೇರಿದಂತೆ ಕ್ಯಾಮೆರಾ ವ್ಯವಸ್ಥೆ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ರೆಡ್‌ಮಿ 13 4G ಮೊಬೈಲ್‌ ಅನ್ನು ಆಯ್ದ ಯುರೋಪಿಯನ್ ದೇಶಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ವ್ಯವಸ್ಥೆ, IP53 ರೇಟಿಂಗ್‌, ಮೀಡಿಯಾಟೆಕ್ ಹೆಲಿಯೋ G91 (MediaTek Helio) ಅಲ್ಟ್ರಾ ಚಿಪ್‌ಸೆಟ್ ಮತ್ತು ವೇಗದ ಚಾರ್ಜರ್‌ ಬೆಂಬಲದೊಂದಿಗೆ 5,030mAh ಬ್ಯಾಟರಿ ಹೊಂದಿದೆ. ಫೋನ್ ಪ್ರಸ್ತುತ ಎರಡು RAM ಮತ್ತು ವಿವಿಧ ಸ್ಟೋರೇಜ್ ಕಾನ್ಫಿಗರೇಶನ್‌ಗಳು ಹಾಗೂ ಮೂರು ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಇನ್ನೂ ಈ ಹ್ಯಾಂಡ್‌ಸೆಟ್ ಭಾರತ ಅಥವಾ ಜಾಗತಿಕವಾಗಿ ಬಿಡುಗಡೆಯಾಗಲಿದೆಯೇ ಎಂಬುದನ್ನು ಕಂಪನಿ ಇನ್ನೂ ದೃಢಪಡಿಸಿಲ್ಲ.

Redmi; ರೆಡ್‌ಮಿ 13 4G ಸ್ಮಾರ್ಟ್‌ಫೋನ್ ಲಾಂಚ್

ರೆಡ್‌ಮಿ 13 4G (Redmi 13 4G) ಬೆಲೆ, ಲಭ್ಯತೆ: 6GB + 128GB ವೇರಿಯಂಟ್‌ EUR 179.99 ಅಂದರೆ ಸುಮಾರು 16,200 ರೂ. ನಿಂದ ಪ್ರಾರಂಭವಾಗಲಿದೆ, ಆದರೆ 8GB + 256GB ವೇರಿಯಂಟ್‌ನ ಬೆಲೆ EUR 199.99 ಅಂದರೆ ಸುಮಾರು ಸುಮಾರು 18,000 ರೂ. ಗಳು ಎಂದು ತಿಳಿದು ಬಂದಿದೆ. ಫೋನ್ ಅನ್ನು ಮೂರು ಬಣ್ಣಗಳಲ್ಲಿ ಲಭ್ಯವಿದ್ದು ಕಪ್ಪು, ನೀಲಿ ಮತ್ತು ಗುಲಾಬಿ ಬಣ್ಣಗಳಲ್ಲಿ ಲಭ್ಯವಿದೆ, ಈ ಫೋನ್ ಇದು ಆನ್‌ಲೈನ್ ನಲ್ಲಿ, ಚಿಲ್ಲರೆ ವ್ಯಾಪಾರಿಗಳ ಮೂಲಕ ಆಯ್ದ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಿದೆ.

ರೆಡ್‌ಮಿ 13 4G (Redmi 13 4G) ಫೀಚರ್ಸ್‌: ಈ ಸ್ಮಾರ್ಟ್‌ಫೋನ್‌ 6.79 ಇಂಚಿನ ಫುಲ್ HD+ (2,400 x 1,080 ಪಿಕ್ಸೆಲ್‌ಗಳ) IPS LCD ಸ್ಕ್ರೀನ್ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು TÜV ರೈನ್‌ಲ್ಯಾಂಡ್ ಲೋಲೈಟ್ ಮತ್ತು ಫ್ಲಿಕರ್ ಫ್ರೀ ಪ್ರಮಾಣೀಕರಣವನ್ನು ಹೊಂದಿದೆ. ಫೋನ್ 8GB ವರೆಗೆ ಮತ್ತು 256GB ವರೆಗಿನ ಆನ್‌ಬೋರ್ಡ್ ಸ್ಟೋರೇಜ್ ಹೊಂದಿದೆ. ಹಾಗೂ ಮೀಡಿಯಾಟೆಕ್ ಹೆಲಿಯೋ G91 ಅಲ್ಟ್ರಾ SoC ನಿಂದ ಚಾಲಿತವಾಗಿದೆ. ಮೈಕ್ರೋ SD ಕಾರ್ಡ್ ಮೂಲಕ 1TB ಸ್ಟೋರೆಜ್ ವರೆಗೆ ವಿಸ್ತರಿಸಬಹುದು. ಇದು ಆಂಡ್ರಾಯ್ಡ್‌ 14 ಆಧಾರಿತ HyperOS ನೊಂದಿಗೆ ರವಾನಿಸುತ್ತದೆ.

ಇದು 108 MP ಮುಖ್ಯ ಸೆನ್ಸಾರ್‌ ಕ್ಯಾಮರಾ, 2MP ಡೆಪ್ತ್ ಸೆನ್ಸಾರ್ ಮತ್ತು ಹಿಂಭಾಗದಲ್ಲಿ LED ಫ್ಲ್ಯಾಷ್ ಘಟಕ ಹೊಂದಿದೆ. ಮುಂಭಾಗದ ಕ್ಯಾಮೆರಾ 13 MP ಸೆನ್ಸಾರ್ ಹೊಂದಿದೆ. ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP53 ರೇಟಿಂಗ್‌ ಹೊಂದಿದೆ.

ರೆಡ್‌ಮಿ 13 4G (Redmi 13 4G): ಇದು 33W ವೈಯರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದ ಜೊತೆಗೆ 5,030mAh ಬ್ಯಾಟರಿ ಸೌಲಭ್ಯ ಹೊಂದಿದೆ. ಆದರೆ ಬಾಕ್ಸ್‌ ಜೊತೆಗೆ ಜಾರ್ಜರ್ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ. ಗ್ರಾಹಕರು ಪ್ರತ್ಯೇಕವಾಗಿ ಇದನ್ನು ಖರೀದಿಸಬೇಕಾಗುತ್ತದೆ. ಇದು Wi-Fi, 4G LTE, GPS, NFC, 5.3 ಬ್ಲೂಟೂತ್ ಮತ್ತು USB ಟೈಪ್ C ಟೈಪ್ ಸಂಪರ್ಕ ಹೊಂದಿದೆ.

Best Mobiles in India

English summary
A new smartphone called Redmi 13 4G has been launched in European countries, so let's know the features, price and camera system of this mobile in this article.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+