Subscribe to Gizbot

ಆನ್‌ಲೈನ್‌ನಲ್ಲಿ ಎ110 ಕ್ಯಾನ್ವಾಸ್‌ 2 ರೂ.9,999 ದರದಲ್ಲಿ ಲಭ್ಯ

Posted By: Vijeth

ಆನ್‌ಲೈನ್‌ನಲ್ಲಿ ಎ110 ಕ್ಯಾನ್ವಾಸ್‌ 2 ರೂ.9,999 ದರದಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್‌ ಎ110 ಸೂಪರ್‌ಫೋನ್ ಕ್ಯಾನ್ವಾಸ್‌ 2 ಫಾಬ್ಲೆಟ್‌ ರೂ. 9,999 ದರದಲ್ಲಿ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸಂಸ್ಥೆಯು ಈಗಾಗಲೆ ನೂತನ ಟ್ಯಾಬ್ಲೆಟ್‌ನ ಪ್ರೀ ಆರ್ಡರ್‌ ಆರಂಭಿಸಿದ್ದು ಗ್ರಾಹಕರು ಸಹೋಲಿಕ್‌ ಹಾಗೂ ಸ್ನಾಪ್‌ಡೀಲ್‌ನಂತಹ ಆನ್‌ಲೈನ್‌ ರಿಟೇಲ್‌ಸ್ಟೋರ್‌ನಲ್ಲಿ ರೂ.9,999 ದರದಲ್ಲಿ ಖರೀದಿಸ ಬಹುದಾಗಿದೆ. ಅಂದಹಾಗೆ ನೂತನ ಫಾಬ್ಲೆಟ್‌ ಬ್ಲಾಕ್‌ ಹಾಗೂ ವೈಟ್‌ ಬಣ್ಣಗಳಲ್ಲಿ ಲಭ್ಯವಿದೆ.

ಅಂದಹಾಗೆ ಮೈಕ್ರೋಮ್ಯಾಕ್ಸ್‌ನ ನೂತನ ಫಾಬ್ಲೆಟ್‌ನ ಫೀಚರ್ಸ್‌ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ.

ಗಾತ್ರ ಹಾಗೂ ಸುತ್ತಳತೆ: 17 x 76.5 x 9.7 mm ಸುತ್ತಳತೆ ಹೊಂದಿರುವ ನೂತನ ಫಾಬ್ಲೆಟ್‌ನ ತೂಕದ ಕುರಿತಾಗಿ ಸಂಸ್ಥೆ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.

ದರ್ಶಕ: 5 ಇಂಚಿನ ಟಚ್‌ಸ್ಕ್ರೀನ್‌ ದರ್ಶಕ ಹಾಗೂ 480 x 800 ಪಿಕ್ಸೆಲ್ಸ್‌ ಒಳಗೊಂಡಿದೆ.

ಪ್ರೊಸೆಸರ್‌: ಸೂಪರ್‌ಫೋನ್‌ A110 ಕ್ಯಾನ್ವಾಸ್‌ 2 ನಲ್ಲಿ 1GHz ಡ್ಯುಯೆಲ್‌ ಕೋರ್ ಪ್ರೊಸೆಸರ್ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಫಾಬ್ಲೆಟ್‌ನಲ್ಲಿ ಆಂಡ್ರಾಯ್ಡ್‌ 4.0 ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ ನೀಡಲಾಗಿದೆ.

ಕ್ಯಾಮೆರಾ: ಈ ವಿಚಾರದಲ್ಲಿ 8MP ನ ಹಿಂಬದಿಯ ಕ್ಯಾಮೆರಾ ಹಾಗೂ ಮುಂಬದಿಯ 0.3MP ನಕ್ಯಾಮೆರಾದಿಂದ ಕೂಡಿದೆ.

ಸ್ಟೋರೇಜ್‌: ಕ್ಯಾನ್ವಾಸ್‌ 2 A110 ನಲ್ಲಿ 4GB ಆಂತರಿಕ ಸ್ಟೋರೇಜ್‌, 512MB ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32GBವರೆಗೆ ಮೆಮೊರಿ ವಿಸ್ತರಿಸಬಹುದಾಗಿದೆ.

ಕನೆಕ್ಟಿವಿಟಿ: 3ಜಿ, ಬ್ಲೂಟೂತ್‌, ಜಿಪಿಎಸ್‌, ಎGPS, USB 2.0 ಹಾಗೂ ವೈ-ಫೈ ಫೀಚರ್ಸ್‌ನಿಂದ ಕೂಡಿದೆ.

ಬ್ಯಾಟರಿ: ಕ್ಯಾನ್ವಾಸ್‌ 2 ನಲ್ಲಿ 2,000 mAh Li-ion ಬ್ಯಾಟರಿ ಇದ್ದು 5 ಗಂಟೆಗಳ ಟಾಕ್‌ಟೌಮ್‌ 180 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ.

ಬೆಲೆ: ಖರೀದಿಸುವುದಾದರೆ ಕ್ಯಾನ್ವಾಸ್‌ 2 ಸೂಪರ್‌ಫೋನ್‌ A110 ರೂ. 9,999 ದರದಲ್ಲಿ ಪ್ರೀ ಆರ್ಡ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

Read In English...

ದೀಪಾವಳಿಗೆ ಬರಲಿರುವ ಆಕರ್ಷಕ ಗ್ಯಾಡ್ಜೆಟ್‌ಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot