ಬಿಸಿನೆಸ್ ಕಾರ್ಡ್ ಸ್ಕ್ಯಾನ್ ಮಾಡುವ App

Posted By: Varun
ಬಿಸಿನೆಸ್ ಕಾರ್ಡ್ ಸ್ಕ್ಯಾನ್ ಮಾಡುವ App

ಬ್ಯುಸಿ ಇರುವ ಈ ದಿನಗಳಲ್ಲಿ ನಾವು ಹಲವಾರು ಜನರನ್ನು ಭೇಟಿ ಮಾಡುತ್ತೇವೆ, ಹಾಗಾಗಿ ಕಾಂಟಾಕ್ಟ್ ತಪ್ಪಿ ಹೋಗದೆ ಇರಲಿ ಅಂತ ಫೋನ್ ನಂಬರ್ ಅನ್ನು ತೆಗೆದುಕೊಳ್ಳುತ್ತೇವೆ. ಕೆಲವು ಬಾರಿ ಬಿಸಿನೆಸ್ ಕಾರ್ಡ್ ಕೂಡ ತೆಗೆದುಕೊಳ್ಳುತ್ತೇವೆ. ಆದರೆ ಕಾಲಾಂತರದಲ್ಲಿ ಎಲ್ಲೊ ಇಟ್ಟು ಮರೆತುಹೋಗುವ ಸಾಧ್ಯತೆ ಇರುತ್ತದೆ.

ಫೋನ್ ನಂಬರ್ ಇದ್ದರೂ ವ್ಯಕ್ತಿಗಳ ವಿಳಾಸ ಕಾರ್ಡ್ನಲ್ಲಿ ಇರುವುದರಿಂದ ಮತ್ತೆ ಅವರನ್ನು ಫೋನ್ ಮಾಡಿ ವಿಳಾಸ ಕೇಳುವುದು ಚೆನ್ನಾಗಿರುವುದಿಲ್ಲ. NFC ಹಾಗು ಬ್ಲೂಟೂತ್ ಇದ್ದರೂ ಕೂಡ ವಿಸಿಟಿಂಗ್ ಕಾರ್ಡ್ ಕೆಲವೊಮ್ಮೆ ಬೇಕಾಗುತ್ತದೆ. ಹಾಗಾಗಿ ಕಾರ್ಡ್ ಅನ್ನು ಜೋಪಾನವಾಗಿ ಇಟ್ಟುಕೊಂಡು ಕಂಪ್ಯೂಟರಿನಲ್ಲಿ ಫೀಡ್ ಮಾಡಿಕೊಳ್ಳಬೇಕು. ಆದರೆ ಇದು ರೇಜಿಗೆಯ ಕೆಲಸ. ಈಗ ಇದಕ್ಕೆಂದೆ ಸುಲಭವಾದ ಉಪಾಯವೊಂದಿದೆ.

ABBYY ಎನ್ನುವ ಆಂಡ್ರಾಯ್ಡ್ App ಅನ್ನು ನೀವು ಡೌನ್ಲೋಡ್ ಮಾಡಿಕೊಂಡರೆ ಸಾಕು. ನಿಮ್ಮ ಹತ್ತಿರ ಇರುವ ಬಿಸಿನೆಸ್ ಕಾರ್ಡ್ ಅನ್ನು 10 ಸೆಕೆಂಡ್ ಕೈ ಅಲ್ಲಿ ಇಟ್ಟುಕೊಂಡು ಕ್ಯಾಮರಾದಿಂದ ಫೋಟೋ ತೆಗೆದರೆ ಸಾಕು. ಈ ಆಪ್ ಅದೇ ಸ್ಕ್ಯಾನ್ ಮಾಡಿಕೊಂದು ಬಿಸಿನೆಸ್ ಕಾರ್ಡಿನ ಎಲ್ಲ ಮಾಹಿತಿಯನ್ನು ಗುರುತಿಸಿ ಫೋನಿನ ಅಡ್ರೆಸ್ ಬುಕ್ ಗೆ ಅಪ್ಡೇಟ್ ಮಾಡುತ್ತದೆ.

ಗೂಗಲ್ ಪ್ಲೇ ಅಲ್ಲಿ ಈ App ಅನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot