ಸಖತ್ ಸ್ಮಾರ್ಟ್ ಫೋನ್ ಬೇಕೆಂದರೆ ಇದನ್ನು ಖರೀದಿಸಿ

Posted By: Staff
ಸಖತ್ ಸ್ಮಾರ್ಟ್ ಫೋನ್ ಬೇಕೆಂದರೆ ಇದನ್ನು ಖರೀದಿಸಿ

ಗುಣಮಟ್ಟದ ಲ್ಯಾಪ್ ಟಾಪ್ ತಯಾರಿಕೆಯಲ್ಲಿ ಹೆಸರು ಗಳಿಸಿರುವ ಏಸರ್ ಕಂಪನಿ ಇದೀಗ ಮೊಬೈಲ್ ಮತ್ತು ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಮುಂಬರುವ ಸೂಚನೆ ನೀಡಿದೆ. ಏಸರ್ ಅಲೆಗ್ರೊ M310 ಎಂಬ ವಿಶೇಷ ಸ್ಮಾರ್ಟ್ ಪೋನ್ ಬಿಡುಗಡೆಗೊಳಿಸಲು ಕಂಪನಿ ಮುಂದಾಗಿದೆ.

ಏಸರ್ ಅಲೆಗ್ರೊ M310 ಸ್ಮಾರ್ಟ್ ಪೋನ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ನಿರೀಕ್ಷೆಯಿದ್ದು, ಆಧುನಿಕ ತಂತ್ರಜ್ಞಾನ ಮತ್ತು ಬಳಕೆಗೆ ಅನುಕೂಲವಾಗುವ ಆಯ್ಕೆಗಳನ್ನು ನೀಡಲಿದೆ ಎಂದು ಕಂಪನಿ ತಿಳಿಸಿದೆ. ಮೈಕ್ರೊ ವಿಂಡೋಸ್ ಫೋನ್ 7.5 ಮ್ಯಾಂಗೊ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಮೊಬೈಲ್ ನಲ್ಲಿ 1 GHZ ಕ್ವಾಲ್ಕಂ MSM8255 ಸ್ನ್ಯಾಪ್ ಡ್ರಾಗನ್ ಪ್ರೊಸೆಸರ್ ಮತ್ತು ಗ್ರಾಫಿಕ್ ಗೆಂದು ಅಡೆರ್ನೊ 205 ಜಿಪಿಯು ನೀಡಲಾಗಿದೆ.

ಏಸರ್ ಅಲೆಗ್ರೊ M310 ಸ್ಮಾರ್ಟ್ ಪೋನ್ ವಿಶೇಷತೆ:

*  126 ಗ್ರಾಂ ತೂಕ

* 116 x 59 x 13 ಎಂಎಂ ಸುತ್ತಳತೆ

* 3.6 ಇಂಚಿನ TFT ಟಚ್ ಸ್ಕ್ರೀನ್ ಡಿಸ್ಪ್ಲೇ

* 480 x 800 ಪಿಕ್ಸಲ್ ರೆಸೊಲ್ಯೂಷನ್

* 720p ಹೈ ಡೆಫನಿಶನ್ ವಿಡಿಯೋ ರೆಕಾರ್ಡಿಂಗ್

* 5 ಮೆಗಾ ಪಿಕ್ಸಲ್ ಕ್ಯಾಮೆರಾ , ಆಟೊ ಫೋಕಸ್, LED ಫ್ಲಾಶ್

* 2592 x1944 ಪಿಕ್ಸಲ್ ಕ್ಯಾಮೆರಾ ರೆಸೊಲ್ಯೂಷನ್

* GPRS/ EDGE/ 3ಜಿ ಬೆಂಬಲಿತ

* 802.11 b/ g/ n ವೈ-ಫೈ, ಬ್ಲೂಟೂಥ್ ಸಂಪರ್ಕ

* HTML ಬ್ರೌಸರ್, A-GPS ಸೌಲಭ್ಯ

* 8ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯ

* 3.5 ಎಂಎಂ ಆಡಿಯೋ ಜ್ಯಾಕ್

ಏಸರ್ ಮೊಬೈಲ್ MP3, WAV, WMA, eAAC+ ಆಡಿಯೋ ಫಾರ್ಮೆಟ್ ಮತ್ತು MP4, WMV ವಿಡಿಯೋ ಫಾರ್ಮೆಟ್ ಗಳನ್ನು ಬೆಂಬಲಿಸುತ್ತದೆ. ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿರುವ ಈ ಈ ಸ್ಮಾರ್ಟ್ ಫೋನಿನಲ್ಲಿ HDMI ಇನ್ ಪುಟ್ ಪೋರ್ಟ್ ನೀಡಲಾಗಿದೆ. ಜೊತೆಗೆ ಯು ಟ್ಯೂಬ್ ಆಯ್ಕೆಯೂ ಇದೆ. ಫೇಸ್ ಬುಕ್ ಮತ್ತು ಟ್ವಿಟರ್ ನಂತಹ ಸಾಮಾಜಿಕ ತಾಣಗಳೂ ಕೂಡ ಲಭ್ಯವಿದೆ.

ಅಕ್ಸೆಲೆರೋ ಮೀಟರ್, ಪ್ರಾಕ್ಸಿಮಿಟಿ ಮತ್ತು ಕಾಂಪಾಸ್ ಸೆನ್ಸಾರ್ ಗಳನ್ನು ಮೊಬೈಲ್ ಒಳಗೊಂಡಿದೆ. ಈ ಸ್ಮಾರ್ಟ್ ಫೋನ್ 1300 mAh ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದ್ದು, 6 ಗಂಟೆ ಟಾಕ್ ಟೈಂ ನೀಡುತ್ತದೆ. ಈ ಏಸರ್ ಅಲೆಗ್ರೊ M310 ಬೆಲೆ 20,000 ರುಗೂ ಹೆಚ್ಚು ಎಂದು ನಿರೀಕ್ಷಿಸಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot