ಏಸರ್ ನಿಂದ ಎರಡು ನೂತನ ಲಿಕ್ವಿಡ್ ಸಿರೀಸ್ ಸ್ಮಾರ್ಟ್ ಫೋನ್

ಏಸರ್ ಪರಿಚಯಿಸಿರುವ ಲಿಕ್ವಿಡ್ ಸಿರೀಸ್ ಮೊಬೈಲ್ ಗಳ ಖ್ಯಾತಿ ಹೆಚ್ಚುತ್ತಿದೆ. ಅನೇಕ ಆಯ್ಕೆಗಳನ್ನು ಹೊಂದಿರುವ ಈ ಸಿರೀಸ್ ಮೊಬೈಲ್ ಗಳು ಕಡಿಮೆ ಬೆಲೆಯಲ್ಲಿ ಲಭ್ಯವಿರುವುದು ಇದರ ಖ್ಯಾತಿಗೆ ಇನ್ನೊಂದು ಕಾರಣವಿರಬಹುದು. ಇದೀಗ ಈ ಸರಣಿಗೆ ಏಸರ್ ಮತ್ತೆರಡು ಫೋನ್ ಗಳನ್ನು ಸೇರಿಸಿದೆ.
ಏಸರ್ C6 ಲಿಕ್ವಿಡ್ ಎಕ್ಸ್ ಪ್ರೆಸ್ ಎಂಬ ಮೊಬೈಲನ್ನು ಇತ್ತೀಚೆಗಷ್ಟೆ ಬಿಡುಗಡೆಗೊಳಿಸಿದೆ. ಏಸರ್ ಲಿಕ್ವಿಡ್ ಮಿನಿ E310 ಗಳು ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಾಗಿದೆ.
ಏಸರ್ ಲಿಕ್ವಿಡ್ ಮಿನಿ E310 ಮೊಬೈಲ್ 600 MHz ARM11 ಪ್ರೊಸೆಸರ್, ಕ್ವಾಲ್ಕಂ MSM 7227-1 ಚಿಪ್ ಸೆಟ್ ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಅಡೆರ್ನೊ 200 ಗ್ರಾಫಿಕ್ ಪ್ರೊಸೆಸರನ್ನೂ ಸಹ ಇದು ಪಡೆದುಕೊಂಡಿದೆ. ಏಸರ್ ಲಿಕ್ವಿಡ್ ಎಕ್ಸ್ ಪ್ರೆಸ್ ಮೊಬೈಲ್ 800 MHz ಪ್ರೊಸೆಸರ್ ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಏಸರ್ C6 ಲಿಕ್ವಿಡ್ ಎಕ್ಸ್ ಪ್ರೆಸ್ ಮತ್ತು ಏಸರ್ ಲಿಕ್ವಿಡ್ ಮಿನಿ E310 ಎರಡೂ ಕೂಡ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿದೆ.
ಏಸರ್ C6 ಲಿಕ್ವಿಡ್ ಎಕ್ಸ್ ಪ್ರೆಸ್ ಮೊಬೈಲ್:
* 115 ಎಂಎಂ x 60.8 ಎಂಎಂ x 13. 4 ಎಂಎಂ ಸುತ್ತಳತೆ
* 135 ಗ್ರಾಂ ತೂಕ
* 2,56,000 ಬಣ್ಣ ಬೆಂಬಲಿತ TFT ಟಚ್ ಸ್ಕ್ರೀನ್ ಡಿಸ್ಪ್ಲೇ
* 3.5 ಇಂಚಿನ ಡಿಸ್ಪ್ಲೇ, 320 x 480 ಪಿಕ್ಸಲ್ ರೆಸೊಲ್ಯೂಷನ್
* 5 ಮೆಗಾ ಪಿಕ್ಸಲ್ ಕ್ಯಾಮೆರಾ, 2592 x 1944 ಪಿಕ್ಸಲ್ ರೆಸೊಲ್ಯೂಷನ್
* ಜಿಯೋ ಟ್ಯಾಗಿಂಗ್ ಸೌಲಭ್ಯ
* 32 ಜಿಬಿ ವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್ ಸ್ಲಾಟ್
* ಬ್ಲೂಟೂಥ್, ವೈ-ಫೈ, USB ಸಂಪರ್ಕ
ಏಸರ್ ಲಿಕ್ವಿಡ್ ಮಿನಿ E310 ಮೊಬೈಲ್ ವಿಶೇಷತೆ:
* 110.4 ಎಂಎಂ x 57.5 ಎಂಎಂ x 13 ಎಂಎಂ ಸುತ್ತಳತೆ
* 108 ಗ್ರಾಂ ತೂಕ
* 2,56,000 ಬಣ್ಣ ಬೆಂಬಲಿತ TFT ಟಚ್ ಸ್ಕ್ರೀನ್ ಡಿಸ್ಪ್ಲೇ
* 3.2 ಇಂಚಿನ ಡಿಸ್ಪ್ಲೇ, 320 x 480 ಪಿಕ್ಸಲ್ ರೆಸೊಲ್ಯೂಷನ್
* 5 ಮೆಗಾ ಪಿಕ್ಸಲ್ ಕ್ಯಾಮೆರಾ, 2592 x 1944 ಪಿಕ್ಸಲ್ ರೆಸೊಲ್ಯೂಷನ್
* ಜಿಯೋ ಟ್ಯಾಗಿಂಗ್ ಸೌಲಭ್ಯ
* 512 ಎಂಬಿ ಆಂತರಿಕ ಮೆಮೊರಿ, 512 ಎಂಬಿ ಸಿಸ್ಟಮ್ ಮೆಮೊರಿ
* 32 ಜಿಬಿ ವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್ ಸ್ಲಾಟ್
* ಬ್ಲೂಟೂಥ್, ವೈ-ಫೈ, USB ಸಂಪರ್ಕ
ಎರಡೂ ಫೋನ್ ಗಳಲ್ಲಿಯೂ ಮಲ್ಟಿ ಟಚ್ ಸೌಲಭ್ಯ ನೀಡಿದ್ದು, ಮನರಂಜನೆಗೆ ಅನೇಕ ಆಯ್ಕೆಗಳಿವೆ. ಎರಡರಲ್ಲೂ ಅಕ್ಸೆಲೆರೊಮೀಟರ್ ಸೆನ್ಸಾರ್, ಟಚ್ ಸೆನ್ಸಿಟಿವ್ ಇದೆ. ಏಸರ್ C6 ಲಿಕ್ವಿಡ್ ಎಕ್ಸ್ ಪ್ರೆಸ್ ಮತ್ತು ಏಸರ್ ಲಿಕ್ವಿಡ್ ಮಿನಿ E310 20,000 ರು ಮತ್ತು 11,000 ರು ಗಳಲ್ಲಿ ದೊರೆಯಲಿದೆ.


Click it and Unblock the Notifications