ಕೈಗೆಟುಕುವ ದರದಲ್ಲಿ '5ಜಿ ಫೋನ್'!..ಮತ್ತೆ ಕಮಾಲ್ ಮಾಡಲಿದೆಯಾ ನೋಕಿಯಾ?

|

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನಿಧಾನಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿರುವ ನೋಕಿಯಾ ವಿಶೇಷ ಸುದ್ದಿಯೊಂದನ್ನು ನೀಡಿದೆ. ನೋಕಿಯಾ ಪೋನ್‌ಗಳ ತಯಾರಿ ಮತ್ತು ಮಾರಾಟ ಮಾಡುತ್ತಿರುವ ಹೆಚ್ಎಂಡಿ ಗ್ಲೋಬಲ್, ಮುಂದಿನ ವರ್ಷದಲ್ಲಿ ಕೈಗೆಟುಕುವ ದರದಲ್ಲಿ 'ನೋಕಿಯಾ 5ಜಿ' ಪೋನ್ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ನೋಕಿಯಾದ ಭವಿಷ್ಯದ 5ಜಿ ಫೋನ್‌ಗಳು ಪ್ರಸ್ತುತ 5G ಫೋನ್‌ಗಳಿಗಿಂತ ಅರ್ಧದಷ್ಟು ಕಡಿಮೆ ಬೆಲೆಯನ್ನು ಹೊಂದಿರಲಿದೆ ಎಂದು ಕಂಪೆನಿ ತಿಳಿಸಿದೆ.

ಕೈಗೆಟುಕುವ ದರದಲ್ಲಿ '5ಜಿ ಫೋನ್'!..ಮತ್ತೆ ಕಮಾಲ್ ಮಾಡಲಿದೆಯಾ ನೋಕಿಯಾ?

ಹೌದು, ಎಚ್‌ಎಂಡಿ ಗ್ಲೋಬಲ್ ಕೈಗೆಟುಕುವ 5ಜಿ ಫೋನ್‌ಗಳನ್ನು ಮಾರುಕಟ್ಟೆಗೆ ತರಲು ಬಯಸುವ ಬ್ರಾಂಡ್‌ಗಳಲ್ಲಿ ಒಂದಾಗಿದ್ದು, ಕೈಗೆಟುಕುವ ದರದಲ್ಲಿ '5ಜಿ' ಪೋನ್ ತರಲು ತಯಾರಾಗಿದೆ. ಈ ಬಗ್ಗೆ ಎಚ್‌ಎಂಡಿ ಕಂಪೆನಿಯ ಮುಖ್ಯ ಉತ್ಪನ್ನ ಅಧಿಕಾರಿ ಜುಹೋ ಸರ್ವಿಕಾಸ್ ಅವರು 2020ರ ವೇಳೆಗೆ ಕಡಿಮೆ ಬೆಲೆಯಲ್ಲಿ 5 ಜಿ ಫೋನ್‌ಗಳನ್ನು ತರುವ ಬಗ್ಗೆ ಮಾಹಿತಿ ಹೊರಹಾಕಿದ್ದಾರೆ. ಇದಕ್ಕಾಗಿ ಒಂದು ಅತ್ಯುತ್ತಮ ಅವಕಾಶಕ್ಕಾಗಿ ಎದುರು ನೋಡುತ್ತಿರುವುದಾಗಿ ಜುಹೋ ಅವರು ತಿಳಿಸಿದ್ದಾರೆ.

ಡಿಜಿಟಲ್ ಟ್ರೆಂಡ್‌ಗಳಿಗೆ ನೀಡಿದ ಸಂದರ್ಶನದಲ್ಲಿ ಜುಹೋ ಸರ್ವಿಕಾಸ್ ಅವರೇ ಹೇಳುವಂತೆ, '5ಜಿ ಸ್ಮಾರ್ಟ್‌ಪೋನ್ ಅನ್ನು ಕೈಗೆಟುಕುವ ದರದಲ್ಲಿ ಮಾರುಕಟ್ಟೆಗೆ ತರಲು ಒಂದು ಉತ್ತಮ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇವೆ. ಅತೀ ಕಡಿಮೆ ದರದಲ್ಲಿ ಮಾರುಕಟ್ಟೆಗೆ ಉತ್ಪನ್ನಗಳನ್ನು ಒದಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ'. ಇಂದು ನೀವು 5ಜಿ ಹೊಂದಿರುವ ಬೆಲೆಯ ಅರ್ಧದಷ್ಟು ದರದಲ್ಲಿ ನಮ್ಮನ್ನು ನೋಡಲು ನಾನು ಇಷ್ಟಪಡುತ್ತೇನೆ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕೈಗೆಟುಕುವ ದರದಲ್ಲಿ '5ಜಿ ಫೋನ್'!..ಮತ್ತೆ ಕಮಾಲ್ ಮಾಡಲಿದೆಯಾ ನೋಕಿಯಾ?

ಯುಎಸ್ ನಂತಹ ಮಾರುಕಟ್ಟೆಗಳಲ್ಲಿ ಸ್ಯಾಮ್ಸಂಗ್ ಮತ್ತು ಎಲ್ಜಿಯಂತಹ ಬ್ರಾಂಡ್‌ಗಳಿಂದ ಪ್ರಸ್ತುತ ಇರುವ ಜನಪ್ರಿಯ 5ಜಿ ಫೋನ್‌ಗಳು ಸರಿಸುಮಾರು 1,000 ಡಾಲರ್ (ಅಂದಾಜು 70,000 ರೂ.) ಬೆಲೆಗಳನ್ನು ಹೊಂದಿವೆ. ಕೈಗೆಟುಕುವ ಫ್ಲ್ಯಾಗ್‌ಶಿಪ್‌ಗಳನ್ನು ತಯಾರಿಸುತ್ತಿರುವ ಒನ್‌ಪ್ಲಸ್ 7 ಪ್ರೊ 5ಜಿ ಸಹ ಯುರೋ 800 ರಿಂದ ಯುರೋ 900 ರವರೆಗೆ ಖರ್ಚಾಗುತ್ತದೆ (ಅಂದಾಜು 63,000 ರಿಂದ 70,000 ರೂ.). ಆದ್ದರಿಂದ ಎಚ್‌ಎಂಡಿ ಗ್ಲೋಬಲ್ 5 ಜಿ ಫ್ಲ್ಯಾಗ್‌ಶಿಪ್ ಫೋನ್ ಆಸಕ್ತಿ ಮೂಡಿಸಿದೆ.

ನೀವು ಗೂಗಲ್ ಪೇ ಅಥವ ಫೋನ್ ಪೇ ಬಳಸುತ್ತಿದ್ದರೆ ತಪ್ಪದೇ ಒಮ್ಮೆ ಓದಿ!ನೀವು ಗೂಗಲ್ ಪೇ ಅಥವ ಫೋನ್ ಪೇ ಬಳಸುತ್ತಿದ್ದರೆ ತಪ್ಪದೇ ಒಮ್ಮೆ ಓದಿ!

ಮುಂದಿನ ವರ್ಷ ಭಾರತದಲ್ಲಿ 5 ಜಿ ಸೇವೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಹೆಚ್ಎಂಡಿ ಗ್ಲೋಬಲ್ ಈ ವರ್ಷಾಂತ್ಯದಲ್ಲಿ ಎರಡು 5ಜಿ ಸ್ಮಾರ್ಟ್ ಪೋನ್ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ . ಒಂದು ಸ್ಮಾರ್ಟ್ ಫೋನ್ ನಲ್ಲಿ, 5 ಜಿ ಸೇವೆಯನ್ನು ಸಕ್ರಿಯಗೊಳಿಸಲು ಸ್ನ್ಯಾಪ್ ಡ್ರ್ಯಾಗನ್ 855 SoC ಜೊತೆಗೆ X ಮೋಡೆಮ್ ಅನ್ನು ವಿಲೀನಗೊಳಿಸಲಾಗಿದೆ. ಮತ್ತೊಂದರಲ್ಲಿ ಹೆಚ್ಚು ಮಧ್ಯಮ ಶ್ರೇಣಿಯ ಸ್ನ್ಯಾಪ್ ಡ್ರ್ಯಾಗನ್ 700 ಸೀರಿಸ್ ನ ಚಿಪ್ ಅನ್ನು ಅಳವಡಿಸಲಾಗಿದೆ ಎಂದು ಮಾಧ್ಯಮದ ವರದಿಯಿಂದ ತಿಳಿದುಬಂದಿದೆ.

Best Mobiles in India

English summary
5G services are expected to begin in India next year, so it is possible to see HMD's 5G Nokia phone come to the Indian market in 2020.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X