Home
ಮೊಬೈಲ್

ಕೆಂಪಾಯ್ತು, ಈಗ ಹಸಿರು ಮತ್ತು ಕೇಸರಿಯಲ್ಲಿ ಬರಲಿದೆ ಒನ್‌ಪ್ಲಸ್ 6..!

By Gizbot Bureau

ಕಾರು ಖರೀದಿಸುವಾಗ ಯಾವ ಬಣ್ಣದ ಕಾರ್ ತೆಗೆದುಕೊಂಡರೆ ನನಗೆ ಶ್ರೇಯಸ್ಸಾಗುತ್ತದೆ ಎಂದು ಜ್ಯೋತಿಷಿಗಳ ಬಳಿ ಕೇಳುವವರಿದ್ದಾರೆ. ಇನ್ನು ಮುಂದೆ ಬಹುಶ್ಯಃ ಮೊಬೈಲ್ ಖರೀದಿಸುವಾಗಲೂ ಯಾವ ಬಣ್ಣದ ಮೊಬೈಲ್ ಖರೀದಿಸಿದರೆ ಒಳ್ಳೆಯದು ಎಂದು ಕೇಳಿ ತಿಳಿದುಕೊಳ್ಳುವ ಕಾಲ ಸನ್ನಿಹಿತವಾಗಿದೆ.

ಮೊದಲೆಲ್ಲ ಕೇವಲ ಕಪ್ಪು ಬಣ್ಣಕ್ಕೆ ಸೀಮಿತಗೊಂಡಿದ್ದ ಮೊಬೈಲ್ ಗಳು ನಂತರ ಬಿಳಿ, ಬೂದು ಬಣ್ಣದಲ್ಲೂ ಬರಲು ಆರಂಭಿಸಿದವು. ತದ ನಂತರ ಮೊಬೈಲ್ ಕವರ್ ಎಂದು ಬಣ್ಣಬಣ್ಣವಾಗಿ , ಚಿತ್ರಗಳಿಂದ ತುಂಬಿ ತುಳುಕಿದವು. ಈಗ ನಿಮಗೆ ಬೇಕಾಗುವ ಬಣ್ಣದ ಕಲರ್ ನ ಮೊಬೈಲ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಡಲು ಸಿದ್ಧವಾಗುತ್ತಿದೆ.

ಕೆಂಪಾಯ್ತು, ಈಗ ಹಸಿರು ಮತ್ತು ಕೇಸರಿಯಲ್ಲಿ ಬರಲಿದೆ ಒನ್‌ಪ್ಲಸ್ 6..!

ಹೌದು ಇತ್ತೀಚೆಗಷ್ಟೇ ಕಡುಕೆಂಪು ಬಣ್ಣದ ಒನ್ ಪ್ಲಸ್ 6 ಮೊಬೈಲ್ ಮಾರುಕಟ್ಟೆ ಬಿಡುಗಡೆಗೊಂಡಿದೆ ಎಂಬ ಸುದ್ದಿಯನ್ನು ನಾವೇ ನಿಮಗೆ ತಿಳಿಸಿದ್ದೆವು. ಇದು ಒನ್ ಪ್ಲಸ್ 6 ನ ನಾಲ್ಕನೇ ಕಲರ್ ನ ಆಯ್ಕೆಯಾಗಿತ್ತು. ಒನ್ ಪ್ಲಸ್ 6 ಮಿರರ್ ಬ್ಲಾಕ್, ಸಿಲ್ಕ್ ವೈಟ್ ಮತ್ತು ಮಿಡ್ ನೈಟ್ ಬ್ಲಾಕ್ ಕಲರ್ ನ ಶ್ರೇಣಿಗಳಲ್ಲಿ ಲಭ್ಯವಿತ್ತು. ಈಗ ಬಂದಿರುವ ಮಾಹಿತಿಯ ಪ್ರಕಾರ ಚೀನಾದ ಈ ಸ್ಮಾರ್ಟ್ ಫೋನ್ ಕಂಪೆನಿ ಒನ್ ಪ್ಲಸ್ 6 ನ ಇನ್ನಷ್ಟು ಬಣ್ಣದ ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದೆಯಂತೆ.

ಮಾಹಿತಿಯ ಪ್ರಕಾರ ಒನ್ ಪ್ಲಸ್ 6 ಹಸಿರು ಮತ್ತು ಕೇಸರಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಜೊತೆಗೆ ನೇರಳೆ ಬಣ್ಣದ ಆಯ್ಕೆಯೂ ನಿಮಗೆ ಸಿಗಲಿದೆಯಂತೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಹುವಾಯಿ ಪಿ20 ಯಂತೆ ಗ್ರೇಡಿಯಂಟ್ ಕಲರ್ ನಲ್ಲೂ ಕೂಡ ಒನ್ ಪ್ಲಸ್ 6 ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂಬ ಗುಸುಗುಸು ಸುದ್ದಿಯೊಂದು ಗೆಜೆಟ್ ಮಾರುಕಟ್ಟೆಯಲ್ಲಿ ಹರಿದಾಡುತ್ತಿದೆ.

ಫೈಬರ್ ನಂತ ಲುಕ್ ಇರುವ ಇನ್ನೊಂದು ಕಲರ್ ಕೂಡ ಒನ್ ಪ್ಲಸ್ 6 ನಲ್ಲಿ ಬಿಡುಗಡೆಯಾಗಲಿದೆಯಂತೆ. ಪ್ರಾಥಮಿಕ ಹಂತದ ಒನ್ ಪ್ಲಸ್ 6 ಅಂದರೆ 6ಜಿಬಿ RAM ನಲ್ಲಿ ಈ ಎಲ್ಲಾ ಬಣ್ಣದ ವೇರಿಯಂಟ್ ನಿಮಗೆ ಲಭ್ಯವಾಗುವ ಸಾಧ್ಯತೆ ಇದೆ. ಮತ್ತು ಬೆಲೆ ಸರಿಸುಮಾರು 34,999 ರುಪಾಯಿ ಇರಬಹುದೆಂದು ಹೇಳಲಾಗುತ್ತಿದೆ .

ಕೆಂಪಾಯ್ತು, ಈಗ ಹಸಿರು ಮತ್ತು ಕೇಸರಿಯಲ್ಲಿ ಬರಲಿದೆ ಒನ್‌ಪ್ಲಸ್ 6..!

ಕೆಂಪು ಬಣ್ಣದ ಆವೃತ್ತಿಯನ್ನು ಹೊರತರುವುದಕ್ಕೆ ಕಂಪೆನಿಯು ಸಾಕಷ್ಟು ಶ್ರಮ ವಹಿಸಿದೆ ಮತ್ತು ಸಮಯ ತೆಗೆದುಕೊಂಡಿದೆ. ಅದೇ ರೀತಿ ಇತರೆ ಬಣ್ಣದ ವೇರಿಯಂಟ್ ಗಳಿಗೂ ಕೂಡ ಸಮಯದ ಅವಕಾಶವನ್ನು ಕಂಪೆನಿ ಕೇಳಬಹುದು. ಕೆಂಪು ಬಣ್ಣದ ಆವೃತ್ತಿಯು ಬಿಡುಗಡೆಯಾದಾಗ ಒನ್ ಪ್ಲಸ್ ನ ಸಿಓಇ ಪೆಟೆಲೂ ಅದನ್ನೇ ಹೇಳಿದ್ದರು.” ನಾನು ಸಹಜ ಕೆಂಪು ಬಣ್ಣದ ಬದಲಾಗಿ ಆಂಬರ್ ನಂತ ಕೆಂಪು ಬಣ್ಣದ ಲುಕ್ ಗಾಗಿ ಸುಮಾರು ತಿಂಗಳುಗಳ ಕಾಲ ಕೆಲಸ ಮಾಡಿದೆವು ಮತ್ತು ನಂತರ ಅದರಲ್ಲಿ ಯಶಸ್ಸು ಕಂಡೆವು” ಎಂದು ತಿಳಿಸಿದ್ದರು.

ಸರಿಯಾದ ಕೆಂಪು ಬಣ್ಣವನ್ನು ಒನ್ ಪ್ಲಸ್ 6 ಗೆ ಒದಗಿಸುವುದಕ್ಕಾಗಿ ಆಪ್ಟಿಕಲ್ ಕೋಟಿಂಗ್, ಇವ್ಯಾಪುರೇಟಿವ್ ಫಿಲ್ಮ್ ಮತ್ತು 6 ಪೆನಲ್ ಗಳ ಗ್ಲಾಸ್ ಗಳನ್ನು ಅದರಲ್ಲಿ ಬಳಸಲಾಗಿದೆ ಮತ್ತು ಅದನ್ನು ಇದುವರೆಗೂ ಯಾವ ಮೊಬೈಲ್ ಗೂ ಕೂಡ ಮಾಡಲಾಗಿಲ್ಲ. ಮತ್ತು ಅದರಲ್ಲಿರುವ ಆಂಟಿ – ಪ್ರತಿಫಲನ ಪದರವು ಫೋನಿನ ಕೆಳ ಪದರದವರೆಗೂ ತಲುಪುತ್ತದೆ ಹಾಗಾಗಿ ಫೋನ್ ಹೆಚ್ಚು ಉತ್ತಮವಾಗಿ ಕಾಣಿಸುತ್ತದೆ.

ಕೆಂಪಾಯ್ತು, ಈಗ ಹಸಿರು ಮತ್ತು ಕೇಸರಿಯಲ್ಲಿ ಬರಲಿದೆ ಒನ್‌ಪ್ಲಸ್ 6..!

ಜುಲೈ 16 ರಿಂದ ಒನ್ ಪ್ಲಸ್ 6 ನ ಕೆಂಪು ಆವೃತ್ತಿಯು ಮಾರಾಟಕ್ಕೆ ಲಭ್ಯವಾಗಲಿದ್ದು ಬೆಲೆ 39,999 ರುಪಾಯಿ ಆಗಿರಲಿದೆ. ಅಮೇಜಾನ್ ಇಂಡಿಯಾ ಮತ್ತು ಒನ್ ಪ್ಲಸ್ ನ ಅಧಿಕೃತ ವೆಬ್ ಸೈಟ್ ಗಳಿಂದ ಗ್ರಾಹಕರು ಇದನ್ನು ಖರೀದಿಸಬಹುದು.

Best Mobiles in India

English summary
After Red, OnePlus 6 may come in Green, Orange colours. o know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+