OnePlus Turbo 6 ಸರಣಿ: ಬಿಡುಗಡೆಗೂ ಮುನ್ನವೇ ವೈಶಿಷ್ಟ್ಯಗಳು ಬಹಿರಂಗ!
9,000mAh ಬ್ಯಾಟರಿ, 165Hz/144Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಹೊಂದಿರುವ OnePlus Turbo 6 ಸರಣಿಯು ಶೀಘ್ರದಲ್ಲೇ ಚೀನಾದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಜನವರಿ 8 ರಂದು ಗುರುವಾರ ಲಾಂಚ್ ಆಗಲಿರುವ ಈ ಸರಣಿಯಲ್ಲಿ OnePlus Turbo 6 ಮತ್ತು OnePlus Turbo 6V ಎಂಬ ಎರಡು ಮಾದರಿ ಫೋನ್‌ಗಳು ಇರಲಿವೆ ಎಂಬ ಸುದ್ದಿ ಇತ್ತೀಚಿಗಷ್ಟೇ ಹೊರಬಿದ್ದಿತ್ತು. ಇದೀಗ ಬಿಡುಗಡೆಗೂ ಮುನ್ನವೇ ಕಂಪನಿಯು ಹಲವು ಪ್ರಮುಖ ವೈಶಿಷ್ಟ್ಯಗಳನ್ನು ದೃಢಪಡಿಸಿದ್ದು, OnePlus Turbo 6 ಸರಣಿ ಫೋನ್‌ಗಳ ಫೀಚರ್ಸ್ ಕುರಿತಂತೆ ಬಹುತೇಕ ಮಾಹಿತಿ ದೊರೆತಿದೆ.!
OnePlus Turbo 6 ಸರಣಿ: ಪ್ರಮುಖ ವೈಶಿಷ್ಟ್ಯಗಳು.
ಹೊಸ OnePlus Turbo 6 ಸರಣಿಯ ಪ್ರಮುಖ ಆಕರ್ಷಣೆ ಎಂದರೆ ದೊಡ್ಡ ಬ್ಯಾಟರಿ ಮತ್ತು ಹೈ-ಪರ್ಫಾರ್ಮೆನ್ಸ್ ಹಾರ್ಡ್‌ವೇರ್. OnePlus Turbo 6 ಮಾದರಿ ಫ್ಲ್ಯಾಗ್‌ಶಿಪ್ ಮಟ್ಟದ Snapdragon 8 ಸರಣಿ ಪ್ರೊಸೆಸರ್ ಪಡೆಯಲಿದ್ದರೆ, Turbo 6V ಮಾದರಿಯಲ್ಲಿ Snapdragon 7s Gen 4 ಚಿಪ್‌ಸೆಟ್ ಬಳಸಲಾಗಿದೆ. ಎರಡೂ ಫೋನ್‌ಗಳು ಮೂರು ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದ್ದು, 9,000mAh ಬ್ಯಾಟರಿ ಎರಡೂ ಮಾದರಿಗಳಲ್ಲೂ ಲಭ್ಯವಿರುತ್ತದೆ.

OnePlus Turbo 6: ಹೈ-ಎಂಡ್ ಡಿಸ್‌ಪ್ಲೇ ಅನುಭವ
OnePlus Turbo 6 ನಲ್ಲಿ BOE ನಿರ್ಮಿತ ವಿಶೇಷ "Oriental Screen" ಡಿಸ್‌ಪ್ಲೇ ನೀಡಲಾಗಿದ್ದು, ಇದು 165Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಈ ಪರದೆ 100% DCI-P3 ಕಲರ್ ಗ್ಯಾಮಟ್, 1.07 ಬಿಲಿಯನ್ ಬಣ್ಣಗಳು ಮತ್ತು ಗರಿಷ್ಠ 1,800 ನಿಟ್ಸ್ ಬ್ರೈಟ್‌ನೆಸ್ ಒದಗಿಸುತ್ತದೆ. ಜೊತೆಗೆ ProXDR ಮತ್ತು HDR Vivid ತಂತ್ರಜ್ಞಾನಗಳ ಬೆಂಬಲವೂ ಇದೆ. ಡಿಸ್‌ಪ್ಲೇ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಲು Display P3 Lite ಚಿಪ್ ಬಳಸಲಾಗಿದೆ.
ಕಣ್ಣಿನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು Bright Eye Protection ತಂತ್ರಜ್ಞಾನವನ್ನು ಸೇರಿಸಲಾಗಿದೆ. ಹೊರಾಂಗಣದಲ್ಲಿ ಸ್ಪಷ್ಟ ವೀಕ್ಷಣೆಗೆ Sunlight Display, ಚಳಿಯ ಸಮಯದಲ್ಲೂ ಸ್ಪರ್ಶ ಪ್ರತಿಕ್ರಿಯೆ ಉತ್ತಮವಾಗಿರಲು Glove Touch ಮತ್ತು ತೇವಾಂಶದ ನಡುವೆಯೂ ಫೋನ್ ಬಳಸಲು Rain Touch ವೈಶಿಷ್ಟ್ಯಗಳು ಈ ಮಾದರಿಯಲ್ಲಿವೆ. ಇದಲ್ಲದೆ, IP66, IP68, IP69 ಮತ್ತು IP69K ರೇಟಿಂಗ್‌ಗಳೊಂದಿಗೆ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ.

OnePlus Turbo 6V: ಗೇಮಿಂಗ್ ಮತ್ತು ಕಾರ್ಯಕ್ಷಮತೆ
ಇತ್ತ OnePlus Turbo 6V ಮಾದರಿಯಲ್ಲಿ 144Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ನೀಡಲಾಗಿದೆ. Qualcomm ನ Snapdragon 7s Gen 4 ಪ್ರೊಸೆಸರ್ ಈ ಫೋನ್‌ಗೆ ಶಕ್ತಿ ನೀಡಲಿದ್ದು, 4nm ತಂತ್ರಜ್ಞಾನದಲ್ಲಿ ನಿರ್ಮಿತವಾಗಿರುವ ಈ ಚಿಪ್ 2.7GHz ಗರಿಷ್ಠ ವೇಗವನ್ನು ನೀಡುತ್ತದೆ. ಸಾಫ್ಟ್‌ವೇರ್ ದೃಷ್ಟಿಯಿಂದ ಇದು Android 16 ಆಧಾರಿತ ColorOS 16 ಜೊತೆ ಬರುತ್ತದೆ.
ಗೇಮರ್‌ಗಳನ್ನು ಗಮನದಲ್ಲಿಟ್ಟುಕೊಂಡು, Turbo 6V ಮಾದರಿಯಲ್ಲಿ 360 ಡಿಗ್ರಿ Surround Gaming Antenna System, Glacier Cooling System ಮತ್ತು Lingxi Touch Chip ಅನ್ನು ಸೇರಿಸಲಾಗಿದೆ. ಜೊತೆಗೆ ಆರು ಅಕ್ಷಗಳ ಜೈರೋಸ್ಕೋಪ್ ನೀಡಲಾಗಿದ್ದು, ಗೇಮಿಂಗ್ ಮತ್ತು ಮೋಷನ್ ಆಧಾರಿತ ಅಪ್ಲಿಕೇಶನ್‌ಗಳಲ್ಲಿ ನಿಖರ ಅನುಭವ ನೀಡಲಿದೆ.
ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್
OnePlus Turbo 6 ಸರಣಿಯ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಬ್ಯಾಟರಿ ಸಾಮರ್ಥ್ಯ. OnePlus Turbo 6 ಮತ್ತು OnePlus Turbo 6V ಎರಡೂ ಫೋನ್‌ಗಳಲ್ಲಿ 9,000mAh ಬ್ಯಾಟರಿ ನೀಡಲಾಗಿದೆ. Turbo 6V ಮಾದರಿಯಲ್ಲಿ 80W ವೇಗದ ವೈರ್‌ಡ್ ಚಾರ್ಜಿಂಗ್ ಹಾಗೂ 27W ರಿವರ್ಸ್ ವೈರ್‌ಡ್ ಚಾರ್ಜಿಂಗ್ ಬೆಂಬಲವನ್ನು ಕಂಪನಿ ಖಚಿತಪಡಿಸಿದೆ, ಇನ್ನು ಈ ಫೋನ್‌ಗಳು ಈಗಾಗಲೇ ಚೀನಾದಲ್ಲಿ ಆನ್‌ಲೈನ್ ಸ್ಟೋರ್ ಮೂಲಕ ಪ್ರೀ-ಆರ್ಡರ್‌ಗೆ ಲಭ್ಯವಾಗಿವೆ.
OnePlus Turbo 6 ಸರಣಿ ದೊಡ್ಡ ಬ್ಯಾಟರಿ, ಹೈ-ರಿಫ್ರೆಶ್ ರೇಟ್ ಡಿಸ್‌ಪ್ಲೇ ಮತ್ತು ಶಕ್ತಿಶಾಲಿ ಪ್ರೊಸೆಸರ್‌ಗಳ ಸಂಯೋಜನೆಯೊಂದಿಗೆ ಚೀನಾದ ಮಾರುಕಟ್ಟೆಯಲ್ಲಿ ಭಾರೀ ಸ್ಪರ್ಧೆ ನೀಡುವ ಸಾಧ್ಯತೆ ಇದೆ. ಜನವರಿ 8ರಂದು ನಡೆಯುವ ಅಧಿಕೃತ ಲಾಂಚ್ ಬಳಿಕ, ಈ ಫೋನ್‌ಗಳ ಜಾಗತಿಕ ಬಿಡುಗಡೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ. ಈ ಕುರಿತಂತೆ ಆನ್‌ಟೈಮ್ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಕನ್ನಡ ಗಿಜ್‌ಬಾಟ್‌ನಲ್ಲಿ ಟ್ಯೂನ್ ಆಗಿರಿ.


Click it and Unblock the Notifications








