5,999 ರೂ.ಗೆ 6,000mAh ಬ್ಯಾಟರಿ, 120Hz ಡಿಸ್‌ಪ್ಲೆ, 50MP ಕ್ಯಾಮೆರಾ ಫೋನ್!
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ತಮ ಎನಿಸುವಂತಹ ಮತ್ತೊಂದು ಸ್ಮಾರ್ಟ್‌ಫೋನ್ ಭರ್ಜರಿಯಾಗಿ ಎಂಟ್ರಿ ನೀಡಿದೆ. ರಿಯಲ್‌ಮಿ ಕಂಪೆನಿಯ ಮಾಜಿ ಕಾರ್ಯನಿರ್ವಾಹಕ ಮಾಧವ್ ಶೇಠ್ ಅವರು ಸ್ಥಾಪಿಸಿರುವ NxtQuantum Shift Technologies ಸಂಸ್ಥೆಯು Ai+ Pulse 2 ಎಂಬ ಹೊಸ ಸ್ಮಾರ್ಟ್‌ಫೋನ್ ಅನ್ನು ಸೋಮವಾರ ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಈ ಫೋನ್ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ, 120Hz ಡಿಸ್ಪ್ಲೇ ಮತ್ತು 50MP ಕ್ಯಾಮೆರಾ ಮುಂತಾದ ವೈಶಿಷ್ಟ್ಯಗಳೊಂದಿಗೆ ಕೇವಲ 5,999 ರೂ.ಗಳ ಆರಂಭಿಕ ಬೆಲೆಯಲ್ಲಿ ಪರಿಚಯಗೊಂಡಿದೆ.
Ai+ Pulse 2: ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
ಮೊದಲೇ ಹೇಳಿದಂತೆ, ದೇಶದಲ್ಲಿ Ai+ Pulse 2 ಫೋನ್‌ನ ಮೂಲ ಮಾದರಿ 4GB RAM ಮತ್ತು 64GB ಸ್ಟೋರೇಜ್‌ನೊಂದಿಗೆ 5,999 ರೂ.ಗೆ ಬಿಡುಗಡೆಯಾಗಿದೆ. ಇದರ 6GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಮೇಲ್ದರ್ಜೆಯ ಮಾದರಿಯ ಬೆಲೆ 7,999 ರೂ. ಗಳಾಗಿವೆ. ಈ ಫೋನ್ ಮಾರ್ಚ್ 11 ರಂದು ಮಧ್ಯಾಹ್ನ 12 ಗಂಟೆಗೆ ಮೂಲಕ ಮಾರಾಟಕ್ಕೆ ಬರಲಿದೆ. ಕಪ್ಪು, ನೀಲಿ, ಹಸಿರು, ಗುಲಾಬಿ ಮತ್ತು ನೇರಳೆ ಸೇರಿದಂತೆ ಐದು ಬಣ್ಣಗಳ ಆಯ್ಕೆಯಲ್ಲಿ ಫೋನ್ ಲಭ್ಯವಾಗಲಿದೆ. ಗಮನಿಸುವುದಾದರೆ, ಈ ಬೆಲೆಗಳು ಮೊದಲ ಒಂದು ದಿನದ ವಿಶೇಷ ಆಫರ್‌ನ ಭಾಗವಾಗಿದೆ ಎಂದು ಕಂಪೆನಿಯು ತಿಳಿಸಿದೆ.

Ai+ Pulse 2: ಪ್ರಮುಖ ವೈಶಿಷ್ಟ್ಯಗಳು
Ai+ Pulse 2 ಫೋನಿನಲ್ಲಿ 6.75-ಇಂಚಿನ HD+ (720x1,600 ಪಿಕ್ಸೆಲ್‌ಗಳು) ಡಿಸ್‌ಪ್ಲೆ ನೀಡಲಾಗಿದೆ. ಇದು 120Hz ವರೆಗೆ ರಿಫ್ರೆಶ್ ರೇಟ್ ನೀಡುತ್ತದೆ. ಇಷ್ಟು ಕಡಿಮೆ ಬೆಲೆಯಲ್ಲಿ 120Hz ವರೆಗಿನ ರಿಫ್ರೆಶ್ ರೇಟ್ (ಹೆಚ್ಚಿನ ರಿಫ್ರೆಶ್ ರೇಟ್ ಇರುವುದರಿಂದ ಸ್ಕ್ರೋಲಿಂಗ್ ಮತ್ತು ಗೇಮಿಂಗ್ ವೇಳೆ ಸ್ಮೂತ್ ಅನುಭವ ಸಿಗುತ್ತದೆ) ಗಮನಾರ್ಹ ಎನ್ನಬಹುದು. ಇನ್ನು ಈ ಡಿಸ್‌ಪ್ಲೆಯು ವಾಟರ್ ಡ್ರಾಪ್-ಶೈಲಿಯ ನಾಚ್ ಶೈಲಿಯಲ್ಲಿ ಗಮನಸೆಳೆಯುತ್ತಿದೆ. ಹಾಗೂ ಈ ಫೋನ್ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP64 ರೇಟಿಂಗ್ ಅನ್ನು ಸಹ ಹೊಂದಿದೆ.
ಕಾರ್ಯಕ್ಷಮತೆ ವಿಭಾಗದಲ್ಲಿ, Ai+ Pulse 2 ಸ್ಮಾರ್ಟ್‌ಫೋನ್ nxtQ OS ಮೇಲೆ ಕಾರ್ಯನಿರ್ವಹಿಸುತ್ತದೆ, ಇದು ಆಧಾರಿತವಾಗಿದೆ. ಫೋನ್‌ಗೆ ಆಕ್ಟಾ-ಕೋರ್ Unisoc T7250 ಪ್ರೊಸೆಸರ್ ನೀಡಲಾಗಿದೆ. 12nm ತಂತ್ರಜ್ಞಾನದಲ್ಲಿ ನಿರ್ಮಿತ ಈ ಚಿಪ್ 1.8GHz ಗರಿಷ್ಠ ವೇಗ ನೀಡುತ್ತದೆ. AnTuTu ಬೆಂಚ್‌ಮಾರ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಈ ಫೋನ್ 2,70,000 ಕ್ಕೂ ಹೆಚ್ಚು ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಕಂಪನಿ ಹೇಳಿದೆ. ಸಾಮಾನ್ಯ ಬಳಕೆ, ಸಾಮಾಜಿಕ ಜಾಲತಾಣಗಳು ಮತ್ತು ಲೈಟ್ ಗೇಮಿಂಗ್‌ಗೆ ಇದು ಸಮರ್ಪಕ ಪ್ರದರ್ಶನ ನೀಡಲಿದೆ.

ಕ್ಯಾಮೆರಾ ವಿಭಾಗದಲ್ಲಿ,Ai+ Pulse 2 ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಇನ್ನೊಂದು ಸಹಾಯಕ ಸೆನ್ಸರ್ ಸೇರಿವೆ. LED ಫ್ಲ್ಯಾಶ್ ಸಹ ನೀಡಲಾಗಿದೆ. ಸೆಲ್ಫಿ ಮತ್ತು ವೀಡಿಯೋ ಕಾಲ್‌ಗಳಿಗೆ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯ.ಬಜೆಟ್ ಬೆಲೆಯಲ್ಲಿ ಉತ್ತಮ ಫೋಟೋಗ್ರಫಿ ಅನುಭವ ನೀಡುವ ಪ್ರಯತ್ನ ಕಂಪನಿಯಿಂದ ಮಾಡಲಾಗಿದೆ.ಬ್ಯಾಟರಿ ವಿಭಾಗದಲ್ಲಿ, Ai+ Pulse 2 ನಲ್ಲಿ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ನೀಡಲಾಗಿದ್ದು, ಇದು 10W ವೈರ್ಡ್ ಚಾರ್ಜಿಂಗ್ ಬೆಂಬಲಿಸುತ್ತದೆ.
ಸಂಪರ್ಕ ಆಯ್ಕೆಗಳಲ್ಲಿ, ಈ ಫೋನ್ 4G LTE, Bluetooth 5.0, Wi-Fi, USB Type-C ಪೋರ್ಟ್, 3.5mm ಆಡಿಯೋ ಜ್ಯಾಕ್ ಮತ್ತು GPS ಸೇರಿವೆ. ಆನ್‌ಬೋರ್ಡ್ ಸಂವೇದಕಗಳ ಪಟ್ಟಿಯಲ್ಲಿ ಅಕ್ಸೆಲೆರೊಮೀಟರ್, ಪ್ರಾಕ್ಸಿಮಿಟಿ ಸೆನ್ಸರ್, ಲೈಟ್ ಸೆನ್ಸರ್ ಇದ್ದರೆ, ಭದ್ರತೆಗಾಗಿ ಫಿಂಗರ್‌ಪ್ರಿಂಟ್ ಸೆನ್ಸರ್ ಇದೆ. ಒಟ್ಟಾರೆಯಾಗಿ, ಕಡಿಮೆ ಬೆಲೆಯಲ್ಲಿ ದೊಡ್ಡ ಡಿಸ್ಪ್ಲೇ, ಹೆಚ್ಚು ಬ್ಯಾಟರಿ ಸಾಮರ್ಥ್ಯ ಮತ್ತು ಸರಾಸರಿ ಕ್ಯಾಮೆರಾ ಬೇಕಿರುವ ವಿದ್ಯಾರ್ಥಿಗಳು ಹಾಗೂ ಪ್ರಥಮ ಬಾರಿಗೆ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ Ai+ Pulse 2 ಒಳ್ಳೆಯ ಆಯ್ಕೆಯಾಗಬಹುದು. ಈ ವಿಶೇಷ ಆಫರ್ ಬೆಲೆಯಲ್ಲಿ ಖರೀದಿಸುವವರಿಗೆ ಇದು ಇನ್ನಷ್ಟು ಆಕರ್ಷಕ ಡೀಲ್ ಆಗಬಹುದು.


Click it and Unblock the Notifications