ಏರ್‌ಟೆಲ್‌ನಿಂದ 169 ರೂ.ಗೆ ಅನ್‌ಲಿಮಿಟೆಡ್ ಕರೆ ಮತ್ತು ಡೇಟಾ ಆಫರ್!..ಮತ್ತೆರಡು ಫೋನ್ ರಿಲೀಸ್!!
ಏರ್‌ಟೆಲ್ ಮತ್ತು ಭಾರತೀಯ ಮೊಬೈಲ್ ತಯಾರಿಕ ಸಂಸ್ಥೆ ಕಾರ್ಬನ್ ಕಂಪೆನಿಗಳು ಹೊಸದಾಗಿ ಎರಡು ಮೊಬೈಲ್‌ಗಳನ್ನು ಪರಿಚಯಿಸಿದ್ದು, ಎ1 ಇಂಡಿಯನ್ ಮತ್ತು ಎ41 ಪವರ್ ಎಂಬ ಎರಡು ಕಡಿಮೆ ಬೆಲೆಯ 4G ಸ್ಮಾರ್ಟ್‌ಫೋನ್‌ಗಳೂ ಇದೀಗ ಮಾರುಕಟ್ಟೆಗೆ ಕಾಲಿಟ್ಟಿವೆ.!
ಜಿಯೋಗೆ ಸೆಡ್ಡುಹೊಡೆಯುವ ನಿಟ್ಟಿನಲ್ಲಿ ಏರ್‌ಟೆಲ್ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿರುವ ಸುದ್ದಿ ಈಗಾಗಲೇ ಎಲ್ಲರಿಗೂ ತಿಳಿದಿದೆ ಎನ್ನಬಹುದು.! ಇದರ ಬೆನ್ನಲ್ಲಿಯೇ ಗ್ರಾಹಕರ ಪೂರ್ಣ ವಿಶ್ವಾಸವನ್ನು ಗಳಿಸಿಕೊಳ್ಳಲು ಏರ್‌ಟೆಲ್ ಮತ್ತೆರಡು ಸ್ಮಾರ್ಟ್‌ಫೋನ್‌ಗಳನ್ನು ತನ್ನ ಸೇವೆಯ ಅಡಿಯಲ್ಲಿ ನೀಡುತ್ತಿದೆ.!!
'ಮೇರಾ ಪೆಹ್ಲಾ ಸ್ಮಾರ್ಟ್‌ಫೋನ್' ಗುರಿಯೊಂದಿಗೆ ಏರ್‌ಟೆಲ್ ಮತ್ತು ಭಾರತೀಯ ಮೊಬೈಲ್ ತಯಾರಿಕ ಸಂಸ್ಥೆ ಕಾರ್ಬನ್ ಕಂಪೆನಿಗಳು ಹೊಸದಾಗಿ ಎರಡು ಮೊಬೈಲ್‌ಗಳನ್ನು ಪರಿಚಯಿಸಿದ್ದು, ಎ1 ಇಂಡಿಯನ್ ಮತ್ತು ಎ41 ಪವರ್ ಎಂಬ ಎರಡು ಕಡಿಮೆ ಬೆಲೆಯ 4G ಸ್ಮಾರ್ಟ್‌ಫೋನ್‌ಗಳೂ ಇದೀಗ ಮಾರುಕಟ್ಟೆಗೆ ಕಾಲಿಟ್ಟಿವೆ.!!
ಎ1 ಇಂಡಿಯನ್ 4ಜಿ ಸ್ಮಾರ್ಟ್‌ಫೋನ್ ನೈಜ ಬೆಲೆ 4,390 ರೂ.ಗಳಾಗಿದ್ದರೆ, ಗ್ರಾಹಕರಿಗೆ 1799 ರೂ.ಗಳ ಬೆಲೆಯಲ್ಲಿ ದೊರಕಲಿದೆ. ಮತ್ತು ಹಾಗೆಯೇ ಎ41 ಪವರ್ 4ಜಿ ಸ್ಮಾರ್ಟ್‌ಫೋನ್ ನೈಜ ಬೆಲೆ 4290 ರೂ.ಗಳಾದರೆ ಕೇವಲ 1849 ರೂ.ಗಳಿಗೆ ಸಿಗಲಿದೆ ಎಂದು ಏರ್‌ಟೆಲ್ ತಿಳಿಸಿದೆ. ಹಾಗಾದರೆ, ಈ ಆಫರ್ ಏನು? ಫೋನ್ ಫೀಚರ್ಸ್ ಏನಿವೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡೌನ್ ಪೇಮೆಂಟ್ ಮಾಡಿ ಮೊಬೈಲ್ ಪಡೆಯಿರಿ.!!
ಎ1 ಇಂಡಿಯನ್ ಹಾಗೂ ಎ41 ಪವರ್ 4ಜಿ ಸ್ಮಾರ್ಟ್‌ಫೋನ್‌ಗಳಿಗಾಗಿ ಗ್ರಾಹಕರು ಕ್ರಮವಾಗಿ 3299ರೂ. ಹಾಗೂ 3,349 ರೂ.ಗಳನ್ನು ಡೌನ್ ಪೇಮೆಂಟ್ ಮಾಡಿ ಖರೀದಿಸಬೇಕಿದೆ. ಬಳಿಕ 36 ತಿಂಗಳುಗಳ ಕಾಲ ನಿರಂತರ ಏರ್‌ಟೆಲ್ ರಿಚಾರ್ಜ್ ಮಾಡಿಸಿದರೆ 1500 ರೂ.ಗಳ ಹಣ ವಾಪಸ್ ಬರಲಿದೆ.!!

ಎಷ್ಟು ರೀಚಾರ್ಜ್ ಮಾಡಿಸಬೇಕು?
ಈ ಎರಡು 4ಜಿ ಸ್ಮಾರ್ಟ್‌ಫೋನ್‌ಗಳಿಗೆ ಏರ್‌ಟೆಲ್ 169 ರೂ.ಗಳ ವಿಶೇಷ ಆಫರ್ ಒದಗಿಸುತ್ತಿದ್ದು, ಗ್ರಾಹಕರು ಮಾಸಿಕ 169 ರೂಪಾಯಿಗಳನ್ನು ರೀಚಾರ್ಜ್ ಮಾಡಿಸಬೇಕು. ಈ ರೀಚಾರ್ಜ್‌ಗೆ ಅನಿಯಮಿತ ಡೇಟಾ ಹಾಗೂ ಕರೆ ಸೇವೆಗಳು ಲಭ್ಯವಾಗಲಿದೆ. ಆದರೆ, ಪ್ರತಿದಿನ ಸ್ಪೀಡ್ ಡೇಟಾ ಲಿಮಿಟ್ 500MBಗಳಾಗಿದ್ದು, ನಂತರ ಕಡಿಮೆ ವೇಗದಲ್ಲಿ ಇಂಟರ್‌ನೆಟ್ ಇರಲಿದೆ.!!

1500 ರೂ.ಗಳ ಹಣ ವಾಪಸ್ ಬರುವುದು ಯಾವಾಗ?
ಮೊಬೈಲ್ ಖರೀದಿಸಿದ ನಂತರ ಪ್ರತಿ ತಿಂಗಳು 169 ರೂ. ರೀಚಾರ್ಜ್ ಮಾಡಿಸಿದರೆ 18 ತಿಂಗಳುಗಳ ಬಳಿಕ ಗ್ರಾಹಕರಿಗೆ 500 ರೂ. ರಿಫಂಡ್ ಆಗಲಿದೆ. ನಂತರ 36 ತಿಂಗಳ ಬಳಿಕ 1000 ರೂ.ಗಳ ಪೂರ್ಣ ಹಣ ರಿಫಂಡ್ ಆಗಲಿದೆ. ಈ ಎರಡೂ ಮೊತ್ತ ಸೇರಿ ಗ್ರಾಹಕರು ಒಟ್ಟು 1500 ರೂ.ಗಳ ಉಳಿತಾಯ ಮಾಡಬಹುದಾಗಿದೆ.!!

ಫೋನ್ ಫೀಚರ್ಸ್ ಏನು?
ಎ1 ಇಂಡಿಯನ್ ಹಾಗೂ ಎ41 ಪವರ್ 4ಜಿ 4 ಇಂಚ್ ಸ್ಕ್ರೀನ್ ಹೊಂದಿದ್ದು, 1.1GHz ಕ್ವಾಡ್ ಕೋರ್ ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 7.0 ನೌಗಾಟ್ ಫೋನ್ ಮೂಲಕ ಕಾರ್ಯನಿರ್ವಹಣೆ ನೀಡಲಿವೆ. 3.2MP ರಿಯರ್ ಮತ್ತು 2MP ಫ್ರಂಟ್ ಕ್ಯಾಮೆರಾ ಹಾಗೂ 1GB RAM ಮತ್ತು 8GB ಮೆಮೊರಿ ಫೋನ್‌ನಲ್ಲಿ ಲಭ್ಯವಿದೆ.~!!

ಫೋನ್ ವಿಶೇಷತೆಗಳು ಏನು?
ಕಡಿಮೆ ಬೆಲೆಗೆ ಉತ್ತಮ ಫೀಚರ್ಸ್‌ಗಳನ್ನು ಏರ್‌ಟೆಲ್ ಮತ್ತು ಕಾರ್ಬನ್ ಕಂಪೆನಿಗಳು ತಂದಿವೆ ಎನ್ನಬಹುದಾಗಿದ್ದು, ಆಂಡ್ರಾಯ್ಡ್ 7.0 ನೌಗಾಟ್ ಮೂಲಕ ಕಾರ್ಯನಿರ್ವಹಣೆ ನೀಡುವ ಈ ಫೋನ್ ಮೈ ಏರ್‌ಟೆಲ್ , ಏರ್‌ಟೆಲ್ ಟಿವಿ, ವಿಂಕ್ ಮ್ಯೂಸಿಕ್ ಇತ್ಯಾದಿ ಪ್ರಿ ಲೋಡೆಡ್ ಆಪ್‌ಗಳನ್ನು ನೀಡಿದೆ.!!


Click it and Unblock the Notifications








