ವಾಟ್ಸಾಪ್ ಬಳಕೆದಾರರಿಗೆ ಏರ್‌ಟೆಲ್ ಬಂಪರ್ ಕೊಡುಗೆ

Written By:

ತ್ವರಿತ ಸಂದೇಶ ವಾಹಕ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ವಾಟ್ಸಾಪ್ ದಿನ ನಿತ್ಯ ಸುದ್ದಿಯಲ್ಲಿರುವ ಅಪ್ಲಿಕೇಶನ್. ಈಗೀಗ ಮೊಬೈಲ್ ಕೊಳ್ಳುವವರು ವಾಟ್ಸಾಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಉದ್ದೇಶದಿಂದಲೇ ಖರೀದಿಸುತ್ತಿದ್ದಾರೆ.

ಈ ತ್ವರಿತ ಸಂದೇಶ ವಾಹಕ ಈಗ ಎಲ್ಲರ ಅಚ್ಚುಮೆಚ್ಚಿನ ಸಂಗಾತಿಯಾಗಿದೆ. ಇದನ್ನು ಬಳಸುವವರು ತಿಂಗಳಿಗೆ ಬರೋಬ್ಬರಿ 500 ಮಿಲಿಯನ್ ಜನರಾಗಿದ್ದು ಇದರ ಪ್ರಸಿದ್ಧಿಯನ್ನು ಎತ್ತರಕ್ಕೆ ಏರಿಸಿದೆ. ಅಂದರೆ ಇತರ ಅಪ್ಲಿಕೇಶನ್‌ಗಳಾದ ಫೇಸ್‌ಬುಕ್ ಮೆಸೆಂಜರ್, ಚಾಟ್ ಆನ್, ಗೂಗಲ್ ಟಾಕ್ ಹೀಗೆ ಇತರ ಸಂದೇಶ ವಾಹಕಗಳಿಗೆ ತೀವ್ರ ಪೈಪೋಟಿಯನ್ನು ಒಡ್ಡಿದೆ.

ವಾಟ್ಸಾಪ್ ಬಳಕೆದಾರರಿಗೆ ಏರ್‌ಟೆಲ್ ಬಂಪರ್ ಕೊಡುಗೆ

ಇಂದಿನ ಲೇಖನದಲ್ಲಿ ಈ ಅಪ್ಲಿಕೇಶನ್‌ಗೆ ಟೆಲಿಕಾಮ್ ಆಪರೇಟರ್‌ಗಳು ವಿಶೇಷ ಸವಲತ್ತನ್ನು ಏರ್ಪಡಿಸಲಿದ್ದು ಇದರ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ವಾಟ್ಸಾಪ್ ಏರ್‌ಟೆಲ್‌ನೊಂದಿಗೆ ಕೈ ಜೋಡಿಸಿ ಬಳಕೆದಾರರಿಗಾಗಿ ವಿಶೇಷ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲಿದೆ. 200 ಎಂಬಿ ಯನ್ನು ವಾಟ್ಸಾಪ್ ಬಳಕೆಯಲ್ಲಿ ಏರ್‌ಟೆಲ್ ಹೆಚ್ಚಿಸಲಿದೆ.

ತಿಂಗಳಿಗೆ ನೀವು ಇದಕ್ಕೆ ವೆಚ್ಚ ಮಾಡಬೇಕಾಗಿರುವುದು ರೂ 36 ರಿಂದ 49 ರೂಪಾಯಿಗಳು ಮಾತ್ರ. ಇದು 2 ಜಿ ಹಾಗೂ 3ಜಿ ಬಳಕೆದಾರರಿಗೂ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ. ಇತರ ಟೆಲಿಕಾಂ ಆಪರೇಟರ್‌ಗಳೊಂದಿಗೂ ವಾಟ್ಸಾಪ್ ಒಪ್ಪಂದವನ್ನು ಮಾಡಿಕೊಂಡಿದ್ದು ಇದರಿಂದ ವಾಟ್ಸಾಪ್ ಬಳಸುವವರ ಸಂಖ್ಯೆ ಹೆಚ್ಚಲಿದೆ.

ಪ್ರತೀ ತಿಂಗಳು ಹೊಸ ಹೊಸ ನವೀಕರಣಗಳೊಂದಿಗೆ ನಿಮ್ಮ ಕೈ ಸೇರುತ್ತಿರುವ ವಾಟ್ಸಾಪ್ ಕಡಿಮೆ ಅಂತರ್ಜಾಲ ಸಂಪರ್ಕದಲ್ಲೂ ನಿಮ್ಮ ಕೈ ಸೇರಲಿದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot